ನ್ಯೂಯಾರ್ಕ್‍ನಲ್ಲಿರುವ `ಇಟ್ಸಿ’ ಕಂಪನಿಯಿಂದ ಶ್ರೀ ಮಹಾಕಾಳಿಮಾತೆಯ ಅವಮಾನಆಕ್ರೋಶಗೊಂಡ ಹಿಂದೂಗಳಿಂದ ಖಂಡನೆ : ಕ್ಷಮೆ ಯಾಚಿಸುವಂತೆ ಕಂಪನಿಗೆ ಆಗ್ರಹ |
ಹಿಂದೂಗಳಲ್ಲಿ ಒಗ್ಗಟ್ಟಿಲ್ಲದ್ದರಿಂದಲೇ ಯಾರು ಬೇಕಾದರೂ ಹಿಂದೂ ಧರ್ಮದ ಅವಮಾನ ಮಾಡುತ್ತಾರೆ. ಆದ್ದರಿಂದ ಹಿಂದೂಗಳು ಸಂಘಟಿತರಾಗಿ ಯಾರೂ ಹಿಂದೂ ಧರ್ಮವನ್ನು ಅವಮಾನಿಸಲು ಧೈರ್ಯ ಮಾಡಲಾರರು ಈ ರೀತಿಯಲ್ಲಿ ತಮ್ಮ ವರ್ಚಸ್ಸನ್ನು ನಿರ್ಮಿಸಬೇಕಾಗಿದೆ ! -ಸಂಪಾದಕರು
ನೇವಾಡಾ (ಅಮೇರಿಕಾ) – ಬ್ರೂಕ್ಲಿನ್ (ನ್ಯೂಯಾರ್ಕ್) ಇಲ್ಲಿಯ ‘ಇಟ್ಸಿ’ ಈ ಆನ್‍ಲೈನ್ ವಸ್ತುಗಳ ಮಾರಾಟ ಮಾಡುವ ಕಂಪನಿಯು ಆಹಾರಧಾನ್ಯಗಳ ಜಾಹೀರಾತು ನೀಡುವ ಟೀ-ಶರ್ಟ್ ಮೇಲೆ ಶ್ರೀ ಮಹಾಕಾಳಿಮಾತೆಯ ಚಿತ್ರ ಮುದ್ರಿಸಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಅವಮಾನಿಸಿದ್ದಾರೆ. ‘ವ್ಯಾಪಾರ ವಿಷಯವಾಗಿ ಸ್ವಾರ್ಥ ಸಾಧಿಸಲು ಹಿಂದೂ ದೇವತೆಗಳನ್ನು ಉಪಯೋಗಿಸುವುದು ಅಯೋಗ್ಯವಾಗಿದೆ. ‘ಇಟ್ಸಿ’ ಕಂಪನಿಯ ಟಿ-ಶರ್ಟ್‍ಅನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಕ್ಕಾಗಿ ಬಹಿರಂಗವಾಗಿ ಕ್ಷಮೆ ಕೇಳಬೇಕು, ಎಂದು ಅಮೇರಿಕಾದಲ್ಲಿ ಆಕ್ರೋಶಗೊಂಡ ಧರ್ಮಾಭಿಮಾನಿ ಹಿಂದೂಗಳು ಒತ್ತಾಯಿಸಿದ್ದಾರೆ. (ಹಿಂದೂ ದೇವತೆಗಳನ್ನು ಅವಮಾನಿಸುವ ‘ಇಟ್ಸಿ’ ಕಂಪನಿಯ ವಿರುದ್ಧ ಧ್ವನಿಯೆತ್ತಿದ ಅಮೇರಿಕಾದಲ್ಲಿ ಜಾಗೃತ ಹಿಂದೂಗಳಿಗೆ ಅಭಿನಂದನೆಗಳು ! ಅಮೇರಿಕಾದ ಹಿಂದೂಗಳಿಂದ ಕಲಿಯಬೇಕಾಗಿದೆ ! – ಸಂಪಾದಕರು)
#UpsetHindus seek #ApologyFromEtsyForDesecratingGoddessKalihttps://t.co/6OG9kKS0iy
— Rajan Zed (@rajanzed) November 9, 2021
ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು |