ಅಮೇರಿಕಾವು ಭಾರತದ ಮೇಲೆ ಹೇರಿದ ತೆರಿಗೆ ಶುಲ್ಕ; ಅಮೇರಿಕನ್ ಸಂಸದ ರಾಜಾ ಕೃಷ್ಣಮೂರ್ತಿಯವರಿಂದ ವಿರೋಧ !

ಅಮೇರಿಕಾವು ಭಾರತದ ಮೇಲೆ ಶೇ. 27 ರಷ್ಟು ಸುಂಕ ವಿಧಿಸಿದ ಪ್ರಕರಣ

ವಾಷಿಂಗ್ಟನ್ – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಅಮೇರಿಕಕ್ಕೆ ರಫ್ತು ಮಾಡುವ ಸರಕು ಮತ್ತು ಸೇವೆಗಳ ಮೇಲೆ ಶೇ.27 ರಷ್ಟು ಸುಂಕ ವಿಧಿಸಿದ್ದಾರೆ. ಅಮೇರಿಕದಲ್ಲಿರುವ ಭಾರತೀಯ ಮೂಲದ ಡೆಮಾಕ್ರಟಿಕ್ ಪಕ್ಷದ ಸಂಸದರಾದ ರಾಜಾ ಕೃಷ್ಣಮೂರ್ತಿಯವರು ಇದನ್ನು ಖಂಡಿಸಿದ್ದಾರೆ. ಚೀನಾದ ಮಿಲಿಟರಿ ಮತ್ತು ಆರ್ಥಿಕ ಆಕ್ರಮಣವನ್ನು ಎದುರಿಸಲು ಭಾರತ-ಅಮೇರಿಕದ ಪಾಲುದಾರಿಕೆಯು ಅತ್ಯಗತ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಒಪ್ಪಂದವು ಅಮೇರಿಕ-ಭಾರತ ಸಂಬಂಧಗಳ ಮೇಲೆ ಅನಗತ್ಯ ಒತ್ತಡವನ್ನುಂಟುಮಾಡಬಹುದು ಎಂದು ರಾಜಾ ಕೃಷ್ಣಮೂರ್ತಿಯವರು ಹೇಳಿದರು.

ಕೃಷ್ಣಮೂರ್ತಿಯವರು ಮುಂದುವರಿದು,

1. ಟ್ರಂಪ್‌ರವರು ಭಾರತದ ಮೇಲೆ ಹೇರಿರುವ ಸುಂಕವು ದಾರಿತಪ್ಪಿಸುವುದಲ್ಲದೆ, ಅಮೇರಿಕದ ಆರ್ಥಿಕ, ರಾಜತಾಂತ್ರಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೂ ಹಾನಿಕಾರಕವಾಗಿದೆ.

2. ಅಮೇರಿಕ ಮತ್ತು ಭಾರತದ ನಡುವಿನ ಸ್ನೇಹವು ಬಲವಾಗಿದೆ; ಆದರೆ ಹೊಸ ತೆರಿಗೆಗಳಿಂದ ಅಮೇರಿಕನ್ ಕುಟುಂಬಗಳ ಖರ್ಚು ಹೆಚ್ಚಾಗಬಹುದು. ಇದರಿಂದ ಅಮೇರಿಕ ಮತ್ತು ಭಾರತೀಯ ವ್ಯವಹಾರಗಳ ಮೇಲೆ ಹೆಚ್ಚುವರಿ ಹೊರೆ ಬೀಳಬಹುದು.

3. ಆದುದರಿಂದ, ಟ್ರಂಪ್ ರವರು ಭಾರತದ ಮೇಲೆ ವಿಧಿಸಿರುವ ಸುಂಕವನ್ನು ಹಿಂಪಡೆಯಬೇಕು, ಎಂದಿದ್ದಾರೆ.