ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಲು `ಇಸ್ಕಾನ’ನಿಂದ 150 ದೇಶಗಳಲ್ಲಿ 700 ದೇವಾಲಯಗಳ ಬಳಿ ಆಂದೋಲನ !

ಟ್ವಿಟರ್ ನಲ್ಲಿ #SaveBangladeshiHindus ಎಂಬ ಹ್ಯಾಶಟ್ಯಾಗ್‍ನ ಟ್ರೆಂಡ ವಿಶ್ವದಲ್ಲೇ 5 ನೇ ಸ್ತಾನದಲ್ಲಿ!

ಇಸ್ಕಾನ್ ಮಾಡುತ್ತಿರುವ ಖಂಡನೆಯು ಶ್ಲಾಘನೀಯವಾಗಿದ್ದರೂ ಕೂಡ ಮತಾಂಧರಿಗೆ ಭೀತಿ ಮೂಡಿಸಲು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಭಾರತವು ಇದಕ್ಕಾಗಿ ಮುಂದಾಳತ್ವ ವಹಿಸಬೇಕೆಂದು ಎಲ್ಲಾ ಹಿಂದೂಗಳಿಗೆ ಅನಿಸುತ್ತದೆ ! -ಸಂಪಾದಕರು 

ನವ ದೆಹಲಿ – ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ಅಕ್ಟೋಬರ 23 ರಂದು `ಇಸ್ಕಾನ’ (ಇಂಟರನ್ಯಾಶನಲ ಸೊಸಾಯಟೀ ಫಾರ ಕೃಷ್ಣಾ ಕಾನ್ಶಿಯಸನೆಸ) ಈ ಸಂಸ್ಥೆಯು 150 ದೇಶಗಳಲ್ಲಿರುವ ತನ್ನ 700 ದೇವಾಲಯಗಳಲಿ ಆಂದೋಲನ ನಡೆಸಿತು. ಈ ಸಮಯದಲ್ಲಿ ಮತಾಂಧರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು.

ಈ ಬಗ್ಗೆ ಇಸ್ಕಾನನ ವಕ್ತಾರರು ಹಾಗೂ ಉಪಾಧ್ಯಕ್ಷರಾದ ಶ್ರೀ. ರಾಧಾ ರಮಣದಾಸರವರು ಹಿಂದೂಗಳಿಗೆ ಕರೆ ನೀಡುತ್ತಾ, “ಜಾಗತಿಕ ಸಮುದಾಯವು ಬಾಂಗ್ಲಾದೇಶದಲ್ಲಿನ ಹಿಂದೂ ಬಾಂಧವರ ಮೇಲಾಗುವ ಅತ್ಯಾಚಾರಗಳನ್ನು ಯಾವಾಗಲೂ ನಿರ್ಲಕ್ಷ ಮಾಡಿದೆ. ಹಿಂದೂಗಳ ಮೇಲಾಗುವ ದಾಳಿಯ ಬಗ್ಗೆ ವಿಶ್ವ ಮಟ್ಟದಲ್ಲಿ ಜಾಗೃತಿ ಮೂಡಿಸಲು ಜಪಾನ್‍ನ ರಾಜಧಾನಿ ಟೊಕಿಯೋದಿಂದ ಕೆನಡಾದ ರಾಜಧಾನಿ ಟೊರಂಟೋವರೆಗಿನ 700 ಸ್ಥಳಗಳಲ್ಲಿ ನಾವು `ಜಾಗತಿಕ ಕೀರ್ತನ ಆಂದೋಲನ’ ಮಾಡುವವರಿದ್ದೇವೆ. ಹಿಂದೂಗಳು ತಮ್ಮ ಸಮೀಪದ ಆಂದೋಲನ ಸ್ಥಳಕ್ಕೆ ಹೋಗಿ ಹಿಂದೂಗಳ ಮೇಲಾಗುವ ಅತ್ಯಾಚಾರಗಳ ಬಗ್ಗೆ ನಿಷೇಧವನ್ನು ನೋಂದಾಯಿಸಿರಿ.” ಎಂದು ಹೇಳಿದರು.

1. ಈ ಆಂದೋಲನಕ್ಕೆ ಟ್ವಿಟರ್‍ನಿಂದ ಸ್ವಯಂ ಪ್ರೇರಣೆಯಿಂದ ಅಭಿಪ್ರಾಯ ಲಭಿಸಿದೆ. #SaveBangladeshiHindus ಎಂಬ ‘ಹ್ಯಾಶಟ್ಯಾಗ’ಗೆ (ಒಂದೇ ವಿಷಯದ ಬಗ್ಗೆ ನಡೆಯುವ ಚರ್ಚೆ) ವಿಶ್ವ ಮಟ್ಟದಲ್ಲಿ ಹಿಂದುತ್ವನಿಷ್ಠರು ಈ ವಿಷಯದ ಬಗ್ಗೆ ‘ಟ್ರೆಂಡ್’ (ಚರ್ಚೆಯಲ್ಲಿರುವ ವಿಷಯ) ನಡೆಸಿ ಜಾಗೃತಿ ಮೂಡಿಸಿದರು. ಈ ಹ್ಯಾಶಟ್ಯಾಗ ವಿಶ್ವದ `ಟ್ರೆಂಡ್ಸ’ನಲ್ಲಿ 5 ನೇ ಸ್ಥಾನಕ್ಕೆ ತಲುಪಿತು, ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಗಂಟೆಗಳ ಕಾಲ ಮಂಚೂಣಿಯಲ್ಲಿತ್ತು. ಈ ಹ್ಯಾಶಟ್ಯಾಗ್ ಅನ್ನು ಬಳಸಿ 4 ಲಕ್ಷ 70 ಸಾವಿರಕ್ಕಿಂತಲೂ ಹೆಚ್ಚು ಹಿಂದುತ್ವನಿಷ್ಠರು ಟ್ವೀಟ್ಸ್ ಮಾಡಿದ್ದಾರೆ.

2. ಅನೇಕ ಹಿಂದುತ್ವನಿಷ್ಠ ಸಂಘಟನೆಗಳ ವಕ್ತಾರರು, ಕಾರ್ಯಕರ್ತರು, ಹಾಗೂ ನ್ಯಾಯವಾದಿಗಳು ಸೇರಿದಂತೆ ವಿವಿಧ ಹೆಸರಾಂತ ಹಿಂದೂ ಧರ್ಮಪ್ರೇಮಿಗಳು ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸಾವಿರಾರು ಹಿಂದೂಗಳು ಅವರ ಕೈಯಲ್ಲಿ ಬಾಂಗ್ಲಾದೇಶಿ ಹಿಂದೂಗಳ ರಕ್ಷಿಸುವಂತೆ ‘ಪ್ಲಕಾರ್ಡ್’ (ಹಸ್ತಫಲಕ) ಹಿಡಿದುಕೊಂಡಿರುವ ಛಾಯಾಚಿತ್ರ ಟ್ವಿಟರನಲ್ಲಿ ಪ್ರಸಾರ ಮಾಡಿದ್ದಾರೆ.

ಇಸ್ಕಾನ್‍ನ `ಜಾಗತಿಕ ಕೀರ್ತನ ಆಂದೋಲನ’ಕ್ಕೆ ನಮ್ಮ ಬೆಂಬಲ ! – ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಈ ವಿಷಯದ ಬಗ್ಗೆ ತಮ್ಮ ವೀಡಿಯೋ ಅನ್ನು ಟ್ವಿಟ್ ಮಾಡಿ, `ಬಾಂಗ್ಲಾದೇಶದಲ್ಲಿರುವ ದೇವಾಲಯಗಳು, ಹಾಗೂ ಹಿಂದೂಗಳ ಮೇಲೆ ವಿಶೇಷವಾಗಿ ಇಸ್ಕಾನ್‍ನ ಸಾಧುಗಳ ಮೇಲೆ ದಾಳಿ ನಡೆಸಿರುವುದು ಅಸಹ್ಯಕರವಾಗಿದ್ದು ಅದಕ್ಕೆ ಧಿಕ್ಕಾರವಾಗಲೇ ಬೇಕು. ಇಸ್ಕಾನ್‍ನ `ಜಾಗತಿಕ ಕೀರ್ತನ ಆಂದೋಲನ’ಕ್ಕೆ ಸನಾತನ ಸಂಸ್ಥೆಯ ಬೆಂಬಲವಿದ್ದು ನಾನು ಜಾಗತಿಕ ಸಮುದಾಯಕ್ಕೆ ಬಾಂಗ್ಲಾದೇಶಿ ಹಿಂದೂಗಳ ದುಃಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮ ಯೋಗದಾನ ನೀಡಬೇಕೆಂದು ಕರೆ ನೀಡುತ್ತಿದ್ದೇನೆ.” ಎಂದು ಹೇಳಿದರು.

‘ಸನಾತನ ಪ್ರಭಾತ’ನ  SanatanPrabhat.org ಜಾಲತಾಣದಲ್ಲಿ ಪ್ರಾಮುಖ್ಯವಾಗಿ ಪ್ರಕಾಶನ !

ಕಳೆದ 15 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಎಲ್ಲಾ ಘಟನೆಗಳನ್ನೂ ದೈನಿಕ ‘ಸನಾತನ ಪ್ರಭಾತ’, ಹಾಗೂ ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳ ಜಾಲತಾಣದಲ್ಲಿ ಪ್ರಾಮುಖ್ಯವಾಗಿ ಪ್ರಸಿದ್ಧಿ ನೀಡಲಾಯಿತು. ಜಾಲತಾಣದಲ್ಲಿನ ಮುಂದಿನ ಲಿಂಕ್‍ನಲ್ಲಿ ತಾವು ಈ ಎಲ್ಲಾ ವಾರ್ತೆಗಳನ್ನು ಓದಬಹುದು.

ಕನ್ನಡ : https://sanatanprabhat.org/kannada/tag/attacks-on-hindus-in-bangladesh-in-october-2021

ಮರಾಠಿ : https://sanatanprabhat.org/marathi/tag/attacks-on-hindus-in-bangladesh-in-october-2021

ಹಿಂದಿ : https://sanatanprabhat.org/hindi/tag/attacks-on-hindus-in-bangladesh-in-october-2021

ಆಂಗ್ಲ : https://sanatanprabhat.org/english/tag/attacks-on-hindus-in-bangladesh-in-october-2021