ಕೇರಳದಲ್ಲಿ ನಡೆದ ಮೊಪಲಾ ಹಿಂಸಾಚಾರ ಇದು ‘ಜಿಹಾದ್’ ವೇ ಆಗಿತ್ತು! – ನ್ಯಾಯವಾದಿ ಕೃಷ್ಣ ರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಇವುಗಳಿಗಾಗಿ ಹಿಂದೂ ಜನಜಾಗೃತಿ ಸಮಿತಿ

‘ಮೊಪಲಾ ಹಿಂಸಾಚಾರ : ಹಿಂದೂ ನರಸಂಹಾರಕ್ಕೆ ೧೦೦ ವರ್ಷ!’ ಈ ಕುರಿತು ‘ಆನ್‌ಲೈನ್ನಲ್ಲಿ ವಿಶೇಷ ಸಂವಾದ

ನ್ಯಾಯವಾದಿ ಕೃಷ್ಣ ರಾಜ

‘೧೯೨೧ ರಲ್ಲಾದ ಮೊಪಲಾ ಹಿಂಸಾಚಾರದ ಹಿನ್ನೆಲೆಯು ಮೊದಲ ಮಹಾಯುದ್ಧದ ಕಾಲದಿಂದಲೂ ಇದೆ. ಈ ಹಿಂಸಾಚಾರದಲ್ಲಿ ಸರಕಾರಿ ನೌಕರರು, ಪೊಲೀಸರು ಮತ್ತು ಆಗಿನ ಬ್ರಿಟಿಷ್ ಸೈನಿಕರ ಮೇಲೆ ದಾಳಿ ಮಾಡಲಾಯಿತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಸಂಹಾರ ಮಾಡಲಾಯಿತು. ಈ ಹಿಂಸಾಚಾರವು ಸುಮಾರು ಆರು ತಿಂಗಳ ಕಾಲ ನಡೆಯಿತು. ಜಿಹಾದಿಗಳು ಇದು ನಮ್ಮ ಚಳುವಳಿಯಾಗಿದೆ ಎಂದು ಹೇಳಿ ಇದು ತಮ್ಮ ಗೆಲುವು ಎಂದು ಘೋಷಿಸಿದರು; ಆದರೆ ಇದು ಚಳುವಳಿಯಾಗಿರಲಿಲ್ಲ, ಅದು ‘ಹಿಂದೂಗಳ ನರಸಂಹಾರ’ವೇ ಆಗಿತ್ತು. ಮೋಹನ ದಾಸ ಗಾಂಧಿ ಇವರು ‘ಮೊಪಲಾ ಹಿಂಸಾಚಾರ’ದಲ್ಲಿ ಮುಸಲ್ಮಾನರು ಹಿಂದೂಗಳನ್ನು ಹಿಂಸಿಸಿದರು; ಆದರೆ ‘ಹಿಂದೂ-ಮುಸಲ್ಮಾನ ಐಕ್ಯತೆಗಾಗಿ ಹಿಂದೂಗಳು ಈ ದೌರ್ಜನ್ಯವನ್ನು ಸಹಿಸಬೇಕು’ ಎಂಬಂತಹ ಅನೇಕ ಆಘಾತಕಾರಿ ಹೇಳಿಕೆಗಳನ್ನು ನೀಡಿದರು. ಮೊಪಲಾ ಹಿಂಸಾಚಾರವು ‘ಜಿಹಾದ್ನ ಒಂದು ಅಂಗವೇ ಆಗಿತ್ತು, ವಾಸ್ತವದಲ್ಲಿ ಗಲಭೆಕೋರರು ಕೂಡ ಇದನ್ನು ‘ಜಿಹಾದ್’ ಎಂದು ಒಪ್ಪಿಕೊಂಡಿದ್ದರು, ಎಂದು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಕೃಷ್ಣ ರಾಜ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಮೊಪಲಾ ಹಿಂಸಾಚಾರ : ಹಿಂದೂ ನರಸಂಹಾರದ ೧೦೦ ವರ್ಷ ! ಈ ವಿಶೇಷ ‘ಆನ್‌ಲೈನ್ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ಈ ಸಂವಾದದಲ್ಲಿ ‘ದ ಧರ್ಮ ಡಿಸ್ಪೆಚ್’ನ ಸಂಸ್ಥಾಪಕ-ಸಂಪಾದಕರು ಮತ್ತು ಲೇಖಕರಾದ ಶ್ರೀ. ಸಂದೀಪ ಬಾಲಕೃಷ್ಣ, ಅನ್ನಪೂರ್ಣ ಫೌಂಡೆಶನ್‌ನ ಅಧ್ಯಕ್ಷ ಶ್ರೀ. ಬಿನಿಲ ಸೋಮಸುಂದರಂ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮುಂತಾದವರು ಪಾಲ್ಗೊಂಡಿದ್ದರು. ಈ ವಿಶೇಷ ಸಂವಾದವನ್ನು ೨ ಸಾವಿರದ ೭೩೩ ಜನರು ವೀಕ್ಷಿಸಿದರು.

ಪ್ರತಿಕಾರ ಮಾಡಿದರೆ ಹಿಂದೂಗಳಿಗೆ ಭಯೋತ್ಪಾದಕರು ಎನ್ನಲಾಗುತ್ತದೆ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

. ನಮ್ಮ ದೇಶದಲ್ಲಿ ಸುಳ್ಳು ಪ್ರಚಾರವನ್ನು ಮಾಡುವ ಪ್ರಯತ್ನವಾಗುತ್ತಿದೆ. ಗೋಧ್ರಾ ಮತ್ತು ಮುಂಬಯಿಯಲ್ಲಿ ಮಾತ್ರ ಗಲಭೆಗಳು ನಡೆದವು ಎಂದು ಹೇಳಲಾಗುತ್ತದೆ. ಹಿಂದೂಗಳು ಯಾವಾಗ ದಾಳಿಯನ್ನು ವಿರೋಧಿಸುತ್ತಾರೆ, ಆಗ ಅವರನ್ನು ‘ಭಯೋತ್ಪಾದಕರು’ ಎಂದು ಹೇಳಲಾಗುತ್ತದೆ.

. ವಿದೇಶಿ ಇತಿಹಾಸಕಾರ ಸ್ಟೆಫನ್ ಡೇಲ್ ಇವರು ‘ಮೊಪಲಾ ಹಿಂಸಾಚಾರವು ಒಂದು ‘ಜಿಹಾದ್ ಆಗಿತ್ತು ಎಂದು ಬರೆದಿದ್ದಾರೆ. ಡಾ. ಅಂಬೇಡಕರರು ಸಹ ‘ಪಾಕಿಸ್ತಾನ ಓರ್ (or) ಪಾರ್ಟಿಶನ ಆಫ್ ಇಂಡಿಯಾ ಈ ಪುಸ್ತಕದಲ್ಲಿ ಮುಸಲ್ಮಾನರೇ ಮೊಪಲಾದಲ್ಲಿ ಹಿಂಸಾಚಾರವನ್ನು ನಡೆಸಿದ್ದರು ಎಂದು ಬರೆದಿದ್ದಾರೆ. ೧೯೨೦ ರಲ್ಲಿ ಖಿಲಾಫತ್ ಸಮಿತಿಯನ್ನು ಮೊದಲು ಕೇರಳದ ಮಲಬಾರನಲ್ಲಿ ಸ್ಥಾಪಿಸಲಾಯಿತು ಎಂದೂ ಸಹ ಅವರು ಹೇಳಿದ್ದರು. ಬ್ರಿಟಿಷ್ ಕಾಲದ ಜಿಲ್ಲಾಧಿಕಾರಿ ಸಿ. ಗೋಪಾಲನ್ ನಾಯರ್ ಇವರೂ ಕೂಡಾ ತಮ್ಮ ಪ್ರಾಥಮಿಕ ವರದಿಯಲ್ಲಿ ಮೊಪಲಾ ಹಿಂಸಾ ಚಾರದ ಬಗ್ಗೆ ಉಲ್ಲೇಖಿಸಿದ್ದಾರೆ.

. ಹೀಗಿರುವಾಗ ‘ಮೊಪಲಾ ಹಿಂಸಾಚಾರದ ಇತಿಹಾಸವನ್ನು ಮರೆಮಾಚುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಇದರಿಂದ ಹಿಂದೂ ಸಮಾಜವು ಇನ್ನೂ ಭ್ರಮೆಯಲ್ಲಿ ಉಳಿಯುತ್ತದೆ. ಹಿಂದೂಗಳು ಎಚ್ಚರದಿಂದ ಹಾಗೂ ಜಾಗರೂಕರಾಗಿರಬೇಕು.

ಮೊಪಲಾ ನರಸಂಹಾರವೆಂದರೆ ಇಸ್ಲಾಮಿ ಆಡಳಿತ ಸ್ಥಾಪಿಸಲು ಮತಾಂಧರ ಒಂದು ಪ್ರಯತ್ನ! – ಶ್ರೀ. ಬಿನಿಲ ಸೋಮಸುಂದರಂ, ಅಧ್ಯಕ್ಷರು, ಅನ್ನಪೂರ್ಣ ಫೌಂಡೆಶನ್, ಕೇರಳ

. ‘ಮೊಪಲಾ ನರಸಂಹಾರದಲ್ಲಿ ಬಹಿರಂಗವಾಗಿ ಹಿಂದೂಗಳ ಮೇಲೆ ದೌರ್ಜನ್ಯ ಮಾಡಲಾಯಿತು. ಇಸ್ಲಾಮಿ ಆಡಳಿತವನ್ನು ಸ್ಥಾಪಿಸಲು ಈ ಗಲಭೆಯನ್ನು ನಡೆಸಲಾಗಿತ್ತು.

. ಮೊಪಲಾ ಗಲಭೆಗೆ ೧೦೦ ವರ್ಷ ಪೂರ್ಣವಾಗಿರುವ ನಿಮಿತ್ತ ಕೇರಳದಲ್ಲಿನ ಹಿಂದೂಗಳು ಈ ಗಲಭೆಯಲ್ಲಿ ಪ್ರಾಣ ಕಳೆದುಕೊಂಡ ತಮ್ಮ ಪೂರ್ವಜರ ಶ್ರಾದ್ಧ ಮಾಡಿದರು. ಅದೇ ರೀತಿ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.

. ೨೦೧೮ ರಿಂದ ಶಬರಿಮಲೈ ಆಂದೋಲನ ದಿಂದ ಕೇರಳದಲ್ಲಿರುವ ಹಿಂದೂ ಸಮಾಜವು ಈಗ ಯಾವುದೇ ರಾಜಕೀಯ ಗುಂಪು ಅಥವಾ ಇತರ ಯಾವುದೇ ಬೆಂಬಲವಿಲ್ಲದೆಯೇ ಜಾಗೃತಗೊಂಡಿದೆ.

ಮೊಪಲಾ ಇದು ಕೇವಲ ಗಲಭೆಯಲ್ಲ ಹಿಂದೂಗಳ ನಿಯೋಜನಾಬದ್ಧ ಸಾಮೂಹಿಕ ಹತ್ಯಾಕಾಂಡ – ಶ್ರೀ. ಸಂದೀಪ ಬಾಲಕೃಷ್ಣ, ಲೇಖಕರು ಮತ್ತು ಸಂಸ್ಥಾಪಕ-ಸಂಪಾದಕರು, ‘ದ ಧರ್ಮ ಡಿಸ್ಪೆಚ್’

ಶ್ರೀ. ಸಂದೀಪ ಬಾಲಕೃಷ್ಣ

. ಖಿಲಾಫತ್ ಚಳುವಳಿಯ ಹೆಸರಿನಲ್ಲಿ ಅಲಿ ಸಹೋದರರು ಬ್ರಿಟಿಷರ ವಿರುದ್ಧ ‘ಜಿಹಾದ್ಗೆ ಕರೆ ನೀಡಿ ಮುಸಲ್ಮಾನರನ್ನು ಒಟ್ಟು ಗೂಡಿಸಿದರು. ಬ್ರಿಟಿಷರು ಅಲಿ ಸಹೋದರರನ್ನು ವಶಕ್ಕೆ ಪಡೆದ ನಂತರ ಮೊಪಲಾ ಮುಸಲ್ಮಾನರು ಭೀಕರ ನರಸಂಹಾರ ನಡೆಸಿದರು.

. ಈ ಮೊಪಲಾಗಳು ಕೇವಲ ಹಿಂಸಾಚಾರ ಮಾತ್ರವಲ್ಲ ಬದಲಾಗಿ ಆಯೋಜನಾಬದ್ಧ ರೀತಿಯಲ್ಲಿ ಹಿಂದೂಗಳ ಸಾಮೂಹಿಕ ಹತ್ಯಾಕಾಂಡವನ್ನೇ ನಡೆಸಿದರು.

. ಈ ಹಿಂಸಾಚಾರದಲ್ಲಿ ಮುಸಲ್ಮಾನ ಮಹಿಳೆಯರೂ ಕೂಡಾ ಭಾಗಿಯಾಗಿದ್ದರು. ದುಃಖದ ಅಂಶವೆಂದರೆ ಮೊಪಲಾದ ನರಸಂಹಾರವನ್ನು ‘ಮುಸಲ್ಮಾನರು ಬ್ರಿಟಿಷರ ವಿರುದ್ಧ ಹಮ್ಮಿಕೊಂಡಿದ್ದ ಚಳುವಳಿ ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ ಮತ್ತು ಕೇರಳದ ಪಠ್ಯಪುಸ್ತಕಗಳಲ್ಲಿ ಅದೇ ಕಲಿಸಲಾಯಿತು; ಆದರೆ ಈಗ ನೈಜ ವಾಸ್ತವವು ಬೆಳಕಿಗೆ ಬರುತ್ತಿದೆ. ಎಂದು ಹೇಳಿದರು.