ಭಾರತದಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳೊಂದಿಗೆ ಮಲತಾಯಿಯಂತೆ ವರ್ತಿಸಲಾಗುತ್ತದೆ. ಹಿಂದೂಗಳ ದೇವಸ್ಥಾನಗಳನ್ನು ಕಬಳಿಸುವುದು, ಮತಾಂತರ, ಲವ್ ಜಿಹಾದ್ ಇವುಗಳಂತಹ ಆಘಾತಗಳನ್ನು ಹಿಂದೂಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ಸಹಿಸುತ್ತಿದ್ದಾರೆ. ದೇಶದ ಸಂವಿಧಾನವು ನೀಡಿದ ಸ್ವಾತಂತ್ರ್ಯವನ್ನು ಬಳಸಿ ಹಿಂದೂಗಳು ಇದರ ವಿರುದ್ಧ ಹೋರಾಡುತ್ತಿದ್ದಾರೆ; ಆದರೆ ಈ ಕಾನೂನುಮಾರ್ಗಕ್ಕೂ ‘ತಾಲಿಬಾನಿ’ ಎಂದು ನಿರ್ಧರಿಸುವ ವೈಚಾರಿಕ ಭಯೋತ್ಪಾದಕರು ಹಿಂದೂಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಸ್ತರದಲ್ಲಿಯೂ ಹಿಂದೂಹಿತಕ್ಕೆ ಸಂಬಂಧಿಸಿದಂತೆ ನೇತೃತ್ವವನ್ನು ಪಡೆಯಲು ಹಿಂದೂಗಳು ವಿಮುಖರಾಗಿ ಉಳಿದಿದ್ದಾರೆ. ಇಂತಹ ಸ್ಥಿತಿಯಲ್ಲಿ ಹಿಂದೂಗಳಿಗೆ ಏಕೈಕ ಭರವಸೆಯು ನ್ಯಾಯಾಂಗದ ತೀರ್ಪುಗಳ ಮೂಲಕವೇ ಸಿಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಹಾಗೆಯೇ ಕೆಲವು ವರ್ಷಗಳ ಹಿಂದೆಯೂ ಚೆನ್ನೈ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಇವು ದೇವಸ್ಥಾನಗಳ ಬಗ್ಗೆ ನೀಡಿದ ಹಿಂದೂಹಿತದ ತೀರ್ಪು ಹಿಂದೂಗಳಿಗಾಗಿ ಆಶಾದಾಯಕವಾಗಿತ್ತು.
ಸಂವಿಧಾನದ ನಿಜವಾದ ವಿರೋಧಕರು ಯಾರು ?
‘ದೇವಸ್ಥಾನಗಳ ಭೂಮಿಯನ್ನು ಕಬಳಿಸುವವರಿಗೆ ‘ಗೂಂಡಾ’ ಕಾನೂನಿನ ಅಂತರ್ಗತ ಅವರ ಕೈಗಳಿಗೆ ಬೇಡಿ ಹಾಕಿ, ಹಾಗೆಯೇ ತನಿಖೆ ಮಾಡುವಾಗ ಯಾವುದೇ ಸಂಕೋಚವಿಟ್ಟು ಕೊಳ್ಳಬೇಡಿ’, ಎಂಬ ಆದೇಶವನ್ನು ಚೆನ್ನೈ ಉಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ನೀಡಿದೆ. ಇದರೊಂದಿಗೆ ದೇವಸ್ಥಾನಗಳ ಧನವನ್ನು ದುರುಪಯೋಗಿಸುವುದು, ಇದು ಸಹ ಅಪರಾಧವೇ ಆಗಿದೆ ಎಂದು ನ್ಯಾಯಾಲಯವು ಹೇಳಿದೆ. ಇಲ್ಲಿ ಖೇದದ ಅಂಶವೆಂದರೆ, ಅಪರಾಧಿಗಳ ತನಿಖೆ ಮಾಡುವ ಜವಾಬ್ದಾರಿ ಯಾರ ಮೇಲಿದೆಯೋ, ಅವರೇ ದೇವಸ್ಥಾನದಲ್ಲಿ ಅಯೋಗ್ಯ ಆಡಳಿತಗಳ ರುವಾರಿಯಾಗಿದ್ದಾರೆ. ಸರಕಾರಿಕರಣಗೊಂಡ ದೇಶದ ಹೆಚ್ಚಿನ ಎಲ್ಲ ದೇವಸ್ಥಾನಗಳಲ್ಲಿ ಇದೇ ಸ್ಥಿತಿ ಇದೆ. ಸರಕಾರೀಕರಣಗೊಂಡ ಅನೇಕ ದೇವಸ್ಥಾನಗಳಲ್ಲಿ ಭೂಮಿ ಮತ್ತು ಸಂಪತ್ತಿನ ಅಪಹರಣವಾಗಿದೆ; ಆದರೆ ಅದರ ವಿರುದ್ಧ ಯಾವುದೇ ರಾಜ್ಯ ಸರಕಾರವು ತನಿಖೆ ಮಾಡಿರುವುದು ಕಂಡು ಬರುತ್ತಿಲ್ಲ. ತಮಿಳುನಾಡಿನ ದೇವಸ್ಥಾನಗಳ ೪೭ ಸಾವಿರ ಎಕರೆ ಭೂಮಿಯು ನಾಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನದಂತಹ ಸಮಿತಿಯಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಹಗರಣವಾಗಿದ್ದು ದೇವಸ್ಥಾನಗಳ ಸಾವಿರಾರು ಎಕರೆ ಭೂಮಿಯು ನಾಪತ್ತೆಯಾಗಿದೆ. ಶಂಕರಪುರ (ಮಧ್ಯಪ್ರದೇಶ)ದಲ್ಲಿನ ಸರಕಾರೀಕರಣವಾದ ಶ್ರೀ ಚಾರಭುಜಾ ನಾರಾಯಣ ದೇವಸ್ಥಾನದ ಅರ್ಚಕರ ಮಕ್ಕಳು ದೇವಸ್ಥಾನದ ಭೂಮಿಯನ್ನು ತಮ್ಮತಮ್ಮಲ್ಲೇ ಮಾರಾಟ ಮಾಡಿದರು. ತಮಿಳುನಾಡಿನ ಸುಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನ ಎಂದು ತಿಳಿದಿರುವ ಪಳನಿ ದೇವಸ್ಥಾನದಲ್ಲಿಯೂ ಭೂಮಿಯ ಕಬಳಿಕೆ ಆಯಿತು.
ಇಂತಹ ಘಟನೆಗಳಲ್ಲಿ ನ್ಯಾಯವನ್ನು ದೊರಕಿಸಿಕೊಳ್ಳಲು ಹಿಂದುತ್ವನಿಷ್ಠರಿಗೇ ನೇತೃತ್ವ ವಹಿಸಬೇಕಾಗುತ್ತದೆ. ಕೆಲವು ತಿಂಗಳುಗಳ ಹಿಂದೆ ಮಧುರೈ (ತಮಿಳುನಾಡು)ನಲ್ಲಿ ಪೊಲೀಸರು ಶ್ರೀರಾಮ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ಅನುಮತಿಯನ್ನು ನೀಡಲು ನಿರಾಕರಿಸಿದ್ದರು. ‘ಒಂದು ಕಡೆಗೆ ಕೊರೊನಾದ ಹಿನ್ನೆಲೆಯಲ್ಲಿ ‘ಮಾಲ್, ಚಲನಚಿತ್ರಮಂದಿರಗಳು ಮುಂತಾದವುಗಳನ್ನು ನಡೆಸಲು ಸರಕಾರವು ಅನುಮತಿ ನೀಡುತ್ತಿರುವಾಗ ಶ್ರೀರಾಮ ಮಂದಿರದ ಜನಜಾಗೃತಿಯ ಬಗೆಗಿನ ಅಭಿಯಾನವನ್ನು ಹಮ್ಮಿಕೊಳ್ಳಲು ಮಾತ್ರ ಅನುಮತಿಯನ್ನು ಏಕೆ ನಿರಾಕರಿಸಲಾಗುತ್ತದೆ ?, ಈ ಹಿಂದೂಗಳ ಯೋಗ್ಯ ಪ್ರಶ್ನೆಗೆ ಚೆನ್ನೈ ಉಚ್ಚ ನ್ಯಾಯಾಲಯವು ನ್ಯಾಯ ನೀಡಿತು ಮತ್ತು ಕೊರೊನಾಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲು ಹೇಳಿ ಅಭಿಯಾನಕ್ಕೆ ಅನುಮತಿ ನೀಡಿತು. ನ್ಯಾಯಾಲಯವು ಸಂವಿಧಾನದ ಮೂರ್ತರೂಪವಾಗಿರುತ್ತದೆ. ಸಂವಿಧಾನವನ್ನು ಎದುರಿಟ್ಟುಕೊಂಡು ಕಾನೂನು-ಸುವ್ಯವಸ್ಥೆಯ ಪ್ರಮಾಣವನ್ನು ಸ್ವೀಕರಿಸುವ ಪೊಲೀಸರು ಮತ್ತು ಆಡಳಿತ ಇವುಗಳ ಹಿಂದೂವಿರೋಧಿ ಅಂಶವು ನ್ಯಾಯಾಲಯದ ಇಂತಹ ತೀರ್ಪುಗಳಿಂದಾಗಿ ಬೆಳಕಿಗೆ ಬರುತ್ತದೆ. ಇದು ಕೇವಲ ಪ್ರಾತಿನಿಧಿಕ ಉದಾಹರಣೆಯಾಗಿದೆ. ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಹಾಗೆಯೇ ಅನೇಕ ಬಾರಿ ಪೊಲೀಸರು ಮತ್ತು ಆಡಳಿತ ಹಿಂದೂ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಅನ್ಯಾಯಕರ ನಿಲುವನ್ನು ತೆಗೆದುಕೊಳ್ಳುತ್ತವೆ. ಆದುದರಿಂದ ಹಿಂದೂಗಳಿಗೆ ತಮ್ಮ ಶ್ರದ್ಧಾಸ್ಥಾನಗಳ ರಕ್ಷಣೆಗಾಗಿ ತಾವೇ ಸ್ವತಃ ಪ್ರಯತ್ನಿಸಬೇಕಾಗುತ್ತದೆ. ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ‘ಧರ್ಮಸೇನಾ ಈ ಸಂಘಟನೆಯ ಉಪಾಧ್ಯಕ್ಷ ಕೆ. ಸುರೇಶ ಇವರು ಕನ್ಯಾಕುಮಾರಿಯ ಆದಿಕೇಶವ ದೇವಸ್ಥಾನದಲ್ಲಿ ಪೂಜೆಯ ಬಗ್ಗೆ ಚೆನ್ನೈ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆ ಬಗೆಗಿನ ಆಲಿಕೆಯ ಸಮಯದಲ್ಲಿ ಚೆನ್ನೈ ಉಚ್ಚ ನ್ಯಾಯಾಲಯವು ತಮಿಳುನಾಡು ಸರಕಾರದ ಧಾರ್ಮಿಕ ವ್ಯವಸ್ಥಾಪನಾ ವಿಭಾಗಕ್ಕೆ ‘ಹಿಂದೂಗಳ ದೇವಸ್ಥಾನಗಳು ಪೂಜೆ-ಅರ್ಚನೆಗಳಿಗಾಗಿ ಬಳಕೆಯಾಗುತ್ತಿಲ್ಲ, ಬದಲಾಗಿ ಅಲ್ಲಿ ಶಾಪಿಂಗ್ ಸೆಂಟರ್‌ಗಳು ನಿರ್ಮಾಣವಾಗಿವೆ, ಎಂಬ ಶಬ್ದಗಳಲ್ಲಿ ಆಲಿಕೆಯನ್ನು ನೀಡಿತು. ಹಾಗೆಯೇ ‘ದೇವಸ್ಥಾನದಲ್ಲಿನ ಧಾರ್ಮಿಕ ಪರಂಪರೆಯೂ ಯೋಗ್ಯ ಪದ್ಧತಿಯಲ್ಲಿ ನಡೆಯುತ್ತಿಲ್ಲ, ಎಂಬ ದಯನೀಯ ಸ್ಥಿತಿಯನ್ನೂ ಬೊಟ್ಟು ಮಾಡಿ ತೋರಿಸಿತು. ಚೆನ್ನೈ ಉಚ್ಚ ನ್ಯಾಯಾಲಯವು ನೀಡಿದ ಈ ಹೇಳಿಕೆಗಳು ಮಹತ್ವಪೂರ್ಣವಾಗಿವೆ. ಸರ್ವೋಚ್ಚ ನ್ಯಾಯಾಲಯವು ೧೯೭೨ ನೇ ಇಸವಿಯಲ್ಲಿ ‘ಶೋಶಾಮಲ್ ವಿರುದ್ಧ ತಮಿಳುನಾಡು ಸರಕಾರ ಈ ಪ್ರಕರಣದಲ್ಲಿ ‘ದೇವಸ್ಥಾನಗಳಲ್ಲಿ ಅರ್ಚಕರನ್ನು ನೇಮಿಸುವಲ್ಲಿ, ಹಾಗೆಯೇ ದೇವಸ್ಥಾನಗಳ ಧಾರ್ಮಿಕ ವಿಷಯಗಳಲ್ಲಿ ಸರಕಾರವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸರಕಾರವು ‘ಸೆಕ್ಯುಲರ್ ಆಗಿದೆ, ಎಂಬ ಸ್ಪಷ್ಟವಾಗಿ ತೀರ್ಪು ನೀಡಿತು. ೨೦೧೬ ನೇ ಇಸವಿಯಲ್ಲಿಯೂ ಸರ್ವೋಚ್ಚ ನ್ಯಾಯಾಲಯವು ಇದೇ ಭಾಗವನ್ನು ಪುನಃ ಸ್ಪಷ್ಟಪಡಿಸಿತು. ಹೀಗಿರುವಾಗ ಮಹಾರಾಷ್ಟ್ರ ಇರಲಿ ಅಥವಾ ತಮಿಳುನಾಡಿನಲ್ಲಿರಲಿ, ಸರಕಾರವು ಅರ್ಚಕರ ನೇಮಕದಲ್ಲಿ ಹಸ್ತಕ್ಷೇಪ ಏಕೆ ಮಾಡುತ್ತದೆ ? ಬ್ರಾಹ್ಮಣೇತರ ಅಥವಾ ಮಹಿಳಾ ಅರ್ಚಕರನ್ನು ನೇಮಿಸುವುದು ಇವುಗಳಂತಹ ಹಿಂದೂವಿರೋಧಿ ನಿರ್ಣಯವನ್ನು ಹೇಗೆ ಮತ್ತು ಏಕೆ ತೆಗೆದುಕೊಳ್ಳುತ್ತದೆ ? ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುವುದಿಲ್ಲವೇ ? ‘ದೇವಸ್ಥಾನಗಳನ್ನು ನಡೆಸುವುದು, ಇದು ಸೆಕ್ಯುಲರ್ ಸರಕಾರದ ಕೆಲಸವಲ್ಲ ಅವುಗಳನ್ನು ಭಕ್ತರ ವಶಕ್ಕೆ ಒಪ್ಪಿಸಬೇಕು, ಎಂಬ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ೨೦೧೪ ನೇ ಇಸವಿಯಲ್ಲಿ ನೀಡಿತ್ತು. ಆದರೂ ಇಲ್ಲಿಯವರೆಗೆ ೪ ಲಕ್ಷಗಳಿಗಿಂತ ಹೆಚ್ಚುದೇವಸ್ಥಾನಗಳು ಸರಕಾರದ ವಶದಲ್ಲಿವೆ. ಇದು ಕೇವಲ ನ್ಯಾಯಾಂಗದ ನಿರ್ಣಯಗಳ ಉಲ್ಲಂಘನೆಯೇ ಎನ್ನಬಹುದಾಗಿದೆ. ಸ್ವಲ್ಪದರಲ್ಲಿ ದೇವಸ್ಥಾನಗಳ ಸರಕಾರೀಕರಣವನ್ನೇ ಕಾನೂನುಬಾಹಿರವೆನ್ನಬಹುದು.
ನ್ಯಾಯಾಂಗ ಹೋರಾಟದ ಆಧಾರ !
ದೇವಸ್ಥಾನಗಳ ಸಂದರ್ಭದಲ್ಲಿ ಹಿಂದೂಗಳ ನ್ಯಾಯ ಮತ್ತು ಸಂವಿಧಾನದತ್ತ ನಿಲುವು ಇದ್ದರೂ ಹಿಂದೂಗಳ ಮೇಲೆ ಅನ್ಯಾಯವಾಗುತ್ತಿದೆ. ಇದಕ್ಕೆ ಸಂವಿಧಾನದ ಸೇವಕರೆಂದೆನಿಸಿಕೊಳ್ಳುವ ಪೊಲೀಸರು, ಆಡಳಿತ ಮತ್ತು ಸರಕಾರಿಕರಣದ ನಿರ್ಣಯವು ಕಾರಣವಾಗಿದೆ. ಈ ಸ್ಥಿತಿಯಲ್ಲಿ ಕೇವಲ ನ್ಯಾಯಾಂಗದ ಹೋರಾಟದ ಮಾರ್ಗವೊಂದೇ ಹಿಂದೂಗಳಿಗಾಗಿ ತೆರೆದಿದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಗಮನದಲ್ಲಿಟ್ಟು ಮತ್ತು ಸಂವಿಧಾನದ ಚೌಕಟ್ಟಿನಲ್ಲಿದ್ದು ನ್ಯಾಯಾಲಯವು ಶ್ರೀರಾಮದೇವಸ್ಥಾನದ ವಿಷಯದಲ್ಲಿ ತೀರ್ಪು ನೀಡಿತು. ಹಿಂದೂಗಳಿಗೆ ಇಂತಹ ನ್ಯಾಯವೇ ಅಪೇಕ್ಷಿತವಿದೆ. ಸದ್ಯ ‘ಪ್ಲೆಸಸ್ ಆಫ್ ವರ್ಶಿಪ್ನಂತಹ ಕಾನೂನುಗಳಿಂದ ಹಿಂದೂಗಳ ದೇವಸ್ಥಾನಗಳ ಮೇಲೆ ಕಟ್ಟಲಾದ ಮಸೀದಿಗಳನ್ನು ತೆರವು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಾಚೀನ ದೇವಸ್ಥಾನಗಳಂತೆ ಹಿಂದೂಗಳ ಗೌರವಾಸ್ಪದ ಸ್ವತ್ತನ್ನು ಪುನಃ ಹಿಂಪಡೆದುಕೊಳ್ಳಲು ಹಿಂದೂಗಳಿಗೆ ನ್ಯಾಯಾಲಯದಿಂದ ಆಶಾಭಾವನೆ ಇದೆ. ದೇವಸ್ಥಾನಗಳು ಭಕ್ತರ ವಶಕ್ಕೆ ಬರಲು ನ್ಯಾಯಾಲಯವು ಹಿಂದೂಗಳಿಗಾಗಿ ಆಶಾದಾಯಕ ಆಲಯ(ಮನೆ)ವಾಗಿದೆ. ಆದುದರಿಂದ ಈ ಆಲಯದ ಬಾಗಿಲುಗಳನ್ನು ತಟ್ಟುವ ಹಿಂದೂಗಳು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.