‘ವೈಚಾರಿಕ ತಾಲಿಬಾನಿಗಳ ಸಂಘದ್ವೇಷ !

ತುಲನೆ ಮಾಡುವುದು ಮನುಷ್ಯನ ಸ್ವಭಾವವಾಗಿದೆ. ಅದು ವೈಯಕ್ತಿಕ ಸ್ತರದಲ್ಲಿ ಇದ್ದರೆ ಪರವಾಗಿಲ್ಲ. ಅದರಿಂದ ಇತರರಿಗೆ ಯಾವುದೇ ತೊಂದರೆ ಆಗುವುದಿಲ್ಲ; ಆದರೆ ಯಾವಾಗ ಸಾಮಾಜಿಕ ಸ್ತರದಲ್ಲಿ ಇಂತಹ ತುಲನೆ ಆಗುತ್ತದೋ, ಆಗ ಮಾತ್ರ ಎಲ್ಲರಿಗೂ ವಿಚಾರ ಮಾಡಲು ಉತ್ತೇಜಿಸುತ್ತದೆ. ವಾಸ್ತವದಲ್ಲಿ ೨ ದೇಶಗಳಲ್ಲಿನ ವ್ಯವಸ್ಥೆ, ಸಾಮಾಜಿಕ ಪ್ರವಾಹ ಇವುಗಳ ತುಲನೆಯಿಂದ ಅಲ್ಲಿನ ಪರಿಸ್ಥಿತಿಯ ಮೌಲ್ಯಮಾಪನವಾಗುತ್ತದೆ. ಇದು ದೇಶದ ಪ್ರಗತಿಗೆ ಪೂರಕವೂ ಆಗಿರುತ್ತದೆ; ಆದರೆ ಸೇಡುಬುದ್ಧಿ ಅಥವಾ ಕೇವಲ ದ್ವೇಷಕ್ಕಾಗಿ ತುಲನೆ ಮಾಡುವವರು ಕೆಲವರಿರುತ್ತಾರೆ. ಒಂದು ವೇಳೆ, ಇಂತಹ ತುಲನೆಯಲ್ಲಿ ರಾಷ್ಟ್ರಘಾತಕ ವಿಚಾರವಿದ್ದರೆ, ರಾಷ್ಟ್ರದ ನಾಗರಿಕರೆಂದು ಹೇಳಿಕೊಳ್ಳುವ ಎಲ್ಲರಿಗೂ ಅದು ಸಂಬಂಧಪಡುತ್ತದೆ. ಇಷ್ಟೇ ಅಲ್ಲದೇ, ಇಂತಹ ವಿಚಾರಸರಣಿಯನ್ನು ನಾಶ ಮಾಡಲು ಪ್ರಯತ್ನಿಸುವುದು ರಾಷ್ಟ್ರದ ನಾಗರಿಕರ ಕರ್ತವ್ಯವೂ ಆಗಿದೆ. ದುರ್ದೈವದಿಂದ ಭಾರತದಲ್ಲಿ ಇಂತಹ ರಾಷ್ಟ್ರಘಾತಕ ವಿಚಾರಸರಣಿಯ ಅನೇಕ ವ್ಯಕ್ತಿಗಳಿದ್ದಾರೆ. ‘ಹಿಂದೂದ್ವೇಷ’ವು ಅವರ ವಿಚಾರಸರಣಿಯ ಮೂಲವಾಗಿದೆ. ‘ಜಗತ್ತಿನಲ್ಲಿಒಂದು ವೇಳೆ ಎಲ್ಲಿಯಾದರೂ ಅಲ್ಲೋಲಕಲ್ಲೋಲವಾದರೆ ಆ ಘಟನೆಗೆ ಭಾರತದಲ್ಲಿನ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ ಇಲ್ಲಸಲ್ಲದ ನಂಟು ಕಲ್ಪಿಸುವುದು, ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ನಿರಾಧಾರ ಆರೋಪ ಹೊರಿಸುವುದು’, ಇಂತಹ ಉದ್ಯೋಗವನ್ನು ಆ ವ್ಯಕ್ತಿಗಳು ಮಾಡುತ್ತಿರುತ್ತಾರೆ. ಆದರೆ ಗೋಮುಖವ್ಯಾಘ್ರದಂತಿರುವ ಇಂತಹ ವ್ಯಕ್ತಿಗಳು ಸಮಾಜದಲ್ಲಿ ಯಾವ ರೀತಿಯಲ್ಲಿ ಜೀವಿಸುತ್ತಾರೆಂದರೆ ಅವರ ವರ್ತನೆ ಮತ್ತು ಮಾತು ಜಾತ್ಯತೀತ ಮತ್ತು ಆಧುನಿಕವೆನಿಸಬೇಕು ! ಈ ಮುಖವಾಡದಿಂದಾಗಿ ಅವರ ಹಿಂದೂದ್ವೇಷ ಆ ಮೂಲಕ ರಾಷ್ಟ್ರದ್ವೇಷವು ಮುಚ್ಚಲ್ಪಡುತ್ತದೆ; ಆದರೆ ಆ ಮುಖವಾಡವನ್ನು ಆಗಾಗ ಕಳಚುವುದು ಅತ್ಯಾವಶ್ಯಕವಾಗಿದೆ. ಈ ಸರಣಿಯಲ್ಲಿ ಸಂಗೀತಕಾರರು ಮತ್ತು ಲೇಖಕರಾದ ಜಾವೇದ ಅಖ್ತರ ಇವರು ಸಹ ಒಬ್ಬರಾಗಿದ್ದಾರೆ.

ಇತ್ತೀಚೆಗಷ್ಟೇ ಅಖ್ತರ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವುಗಳನ್ನು ‘ತಾಲಿಬಾನಿ ಪ್ರವೃತ್ತಿ’ಯವರು, ಎಂದು ಸಂಬೋಧಿಸಿದ್ದಾರೆ. ‘ಯಾವ ರೀತಿ ತಾಲಿಬಾನಿ ಮುಸಲ್ಮಾನರು ರಾಷ್ಟ್ರವನ್ನು ನಿರ್ಮಿಸಲು ಕ್ರೂರ ಪ್ರಯತ್ನವನ್ನು ಮಾಡುತ್ತಿರುವರೋ, ಅದೇ ಪದ್ಧತಿಯಲ್ಲಿ ಭಾರತದಲ್ಲಿ ಕೆಲವು ಜನರು ‘ಹಿಂದೂ ರಾಷ್ಟ್ರ’ದ ಸಂಕಲ್ಪನೆಯನ್ನು ಮಂಡಿಸುತ್ತಿದ್ದಾರೆ’, ಎಂಬ ರೀತಿಯಲ್ಲಿ ಅಖ್ತರ ಇವರು ತುಲನೆ ಮಾಡಿದ್ದಾರೆ. ಸಹಜವಾಗಿ ಈ ಹೇಳಿಕೆಯು ಹಿಂದೂದ್ವೇಷದ ದರ್ಪವನ್ನು ತೋರಿಸುತ್ತದೆ.

ಸಂಘದ ರಾಷ್ಟ್ರೋದ್ಧಾರಕ ಕಾರ್ಯ !

ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ೯ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ರಾಷ್ಟ್ರೋದ್ಧಾರದ ಕಾರ್ಯವನ್ನು ಮಾಡುತ್ತಿದೆ. ಅನೇಕ ಸಂಘಪ್ರಚಾರಕರು ಪೂರ್ಣವೇಳೆ ಕಾರ್ಯನಿರತರಾಗಿದ್ದು ಸಮಾಜದಲ್ಲಿ ರಾಷ್ಟ್ರ-ಧರ್ಮಪ್ರೇಮದ ಜ್ಯೋತಿಯನ್ನು ಪ್ರಜ್ವಲಿಸುವಂತೆ ಮಾಡಿದರು. ನಿರಂತರ ರಾಷ್ಟ್ರಕಾರ್ಯವನ್ನು ಮಾಡಲು ಅನೇಕ ಸ್ವಯಂಸೇವಕರು ಅವಿವಾಹಿತರಾಗಿ ಉಳಿದು ಅವರು ಜೀವನಪರ್ಯಂತ ರಾಷ್ಟ್ರಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇಂದು ಈಶಾನ್ಯಕಡೆಗಿನ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವಾಗುತ್ತಿದೆ. ಇಂತಹ ಭಯಾನಕ ಸ್ಥಿತಿಯಲ್ಲಿಯೂ ಅಲ್ಲಿ ಹಿಂದೂಗಳು ಇನ್ನೂ ಉಳಿದಿದ್ದಾರೆಂದರೆ ಅದರ ಬಹುತಾಂಶ ಶ್ರೇಯಸ್ಸು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಲ್ಲುತ್ತದೆ. ಸಂಘಪ್ರಚಾರಕರು ಈ ರಾಜ್ಯಗಳಲ್ಲಿ ತಳಮಟ್ಟದ ವರೆಗೆ ಹೋಗಿ ಅಲ್ಲಿನ ಮತಾಂತರವನ್ನು ತಡೆಗಟ್ಟಿದರು. ಸ್ವಾತಂತ್ರ್ಯದ ನಂತರ ಸಂಘದ ಕಾರ್ಯಕರ್ತರು ಮತಾಂಧರ ಅತ್ಯಾಚಾರಗಳಿಂದ ಹಿಂದೂಗಳನ್ನು ರಕ್ಷಿಸಿದರು. ಧರ್ಮರಕ್ಷಣೆಗಾಗಿ ಮಾಡಿದ ಕಾರ್ಯಕ್ಕೆ ‘ಭಯೋತ್ಪಾದನಾ ಕಾರ್ಯ’ ಎಂದು ಹೇಗೆ ಹೇಳಬಹುದು ? ಸಂಘವನ್ನು ತಾಲಿಬಾನಿಗಳೊಂದಿಗೆ ತುಲನೆ ಮಾಡುವವರು ಇದರ ಉತ್ತರವನ್ನು ನೀಡಬೇಕು. ಸ್ವಬಾಂಧವರ ರಕ್ಷಣೆಗಾಗಿ ಹೆಣಗಾಡುವುದಕ್ಕೆ ‘ಭಯೋತ್ಪಾದನಾ ಕಾರ್ಯ’ ಎಂದು ಹೇಳುವುದೇ ನಿಜವಾದ ವೈಚಾರಿಕ ಭಯೋತ್ಪಾದನೆಯಾಗಿದೆ. ಸಂಘದ ಸ್ವಯಂಸೇವಕರು ಹಿಂದುಳಿದ ಜಾತಿಯ ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಅವರ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು, ಹಾಗೆಯೇ ಅವರ ವಿವಾಹವನ್ನೂ ಮಾಡಿಸಿಕೊಟ್ಟರು. ಹಿಂದುಳಿದ ಜಾತಿಯ ಮಕ್ಕಳನ್ನು ಹತ್ತಿರ ಕುಳ್ಳಿರಿಸಿಕೊಂಡು ಅವರೊಂದಿಗೆ ಭೋಜನ ಮಾಡುವುದು, ಇವುಗಳಂತಹ ಕೃತಿಗಳಿಂದ ಸಂಘದ ಕಾರ್ಯಕರ್ತರು ಜಾತಿಭೇದವನ್ನು ಅಳಿಸಿ ಹಾಕಲು ಪ್ರಯತ್ನಿಸಿದರು. ಆರ್ಥಿಕ, ಸಾಮಾಜಿಕ, ರೋಗಿಗಳ ಸೇವೆ ಇಂತಹ ಅನೇಕ ಕ್ಷೇತ್ರಗಳಲ್ಲಿ ಸಂಘದ ಶಾಖೆಗಳು ಕಾರ್ಯನಿರತವಾಗಿವೆ. ಶಿಸ್ತುಬದ್ಧತೆ, ತ್ಯಾಗ, ಪ್ರಾಮಾಣಿಕತನ ಮತ್ತು ನಿಸ್ವಾರ್ಥ ಈ ಗುಣಗಳಿಂದ ಸಂಘದ ಕಾರ್ಯವು ಕರ್ಮಯೋಗದ ಉದಾಹರಣೆಯಾಗಿದೆ. ಸ್ವಾರ್ಥಾಂಧತೆ ತುಂಬಿಕೊಂಡ ಕಾಲದಲ್ಲಿ ಸಂಘದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯನಿರತರಾಗಿದ್ದಾರೆ. ದೇಶದಲ್ಲಿ ಸಾಮ್ಯವಾದ, ಜಾತ್ಯತೀತತೆಯು ವೃದ್ಧಿಯಾಗುತ್ತಿರುವಾಗ ಸಂಘವು ನಿರ್ಮಲ ಮತ್ತು ಪ್ರಖರ ರಾಷ್ಟ್ರವಾದವನ್ನು ಸುರಕ್ಷಿತ ವಾಗಿಟ್ಟಿತು. ದ್ವೇಷದ ಮುಸುಕನ್ನು ಹೊದ್ದವರಿಗೆ ಅದು ಹೇಗೆ ತಿಳಿಯುತ್ತದೆ ? ಈ ರಾಷ್ಟ್ರೋದ್ಧಾರದ ಕಾರ್ಯವನ್ನು ಕೇವಲ ರಾಷ್ಟ್ರಪ್ರೇಮಿಗಳೇ ತಿಳಿಯಬಲ್ಲರು, ಎಂಬುದು ಅಷ್ಟೇ ನಿಜವಾಗಿದೆ !

ರಾಷ್ಟ್ರಘಾತಕ ಪ್ರವೃತ್ತಿಯ ಹೆಡೆಮುರಿಕಟ್ಟಿ !

ಸದ್ಯ ಅಫ್ಘಾನಿಸ್ತಾನದಲ್ಲಿ ಕೋಲಾಹಲ ಮಾಡುತ್ತಿರುವ ತಾಲಿಬಾನಿಗಳಿಗೆ ಕ್ರೂರತೆಯ ಕರಾಳ ಇತಿಹಾಸವಿದೆ. ತಾನಿಬಾನಿಗಳ ಅತ್ಯಾಚಾರಕ್ಕೆ ಎಣೆಯೇ ಇಲ್ಲ. ಶವಗಳ ಮೇಲೆ ಬಲಾತ್ಕಾರ ಮಾಡುವುದು, ಮನುಷ್ಯರನ್ನು ತೂಗಾಡಿಸಿ ಕೆಳಗೆ ಬೆಂಕಿ ಹಚ್ಚಿ ಅವರನ್ನು ಬೇಯಿಸುವುದು, ಕೈ-ಕಾಲುಗಳನ್ನು ಕತ್ತರಿಸುವುದು ಇಂತಹ ಪಶುಗಳಿಗೂ ನಾಚಿಸುವಂತಹ ಕೃತ್ಯ ಮಾಡುವುದು ತಾಲಿಬಾನಿಗಳ ಪ್ರವೃತ್ತಿಯಾಗಿದೆ. ಈ ಬಗ್ಗೆ ಹೇಳುವಾಗ ಅಖ್ತರ ಇವರಿಗೆ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ ತುಲನೆ ಮಾಡುವ ಆಧಾರವನ್ನು ಏಕೆ ಪಡೆಯಬೇಕಾಗುತ್ತಿದೆ ? ಅವರು ಬಹಿರಂಗವಾಗಿ ಏಕೆ ಖಂಡಿಸುತ್ತಿಲ್ಲ ? ಇದರಿಂದ ‘ಅಖ್ತರ ಇವರಿಗೆ ನಿಜವಾಗಿಯೂ ತಾಲಿಬಾನಿಗಳನ್ನು ಖಂಡಿಸಲಿಕ್ಕಿದೆಯೇ ?’ ಎಂಬ ಪ್ರಶ್ನೆಯೇ ಉದ್ಭವಿಸುತ್ತದೆ. ಒಂದು ವೇಳೆ ಹಿಂದುತ್ವನಿಷ್ಠರು ತಾಲಿಬಾನಿಗಳಾಗಿದ್ದರೆ, ಅಖ್ತರ ಇವರು ಈ ರೀತಿ ಮಾತನಾಡುವ ಧೈರ್ಯವನ್ನು ತೋರಿಸುತ್ತಿದ್ದರೇ ? ತಲೆಬುಡ ಇಲ್ಲದೇ ಅಖ್ತರ ಹಿಂದೂದ್ವೇಷಿ ಹೇಳಿಕೆಗಳನ್ನು ನೀಡಲು ಧೈರ್ಯ ತೋರಿಸುತ್ತಾರೆ, ಇದರಿಂದಲೇ ಇವರ ಹೇಳಿಕೆ ಮತ್ತು ವಸ್ತುಸ್ಥಿತಿ ಇವುಗಳಲ್ಲಿ ಆಕಾಶಪಾತಾಳದಷ್ಟು ವ್ಯತ್ಯಾಸವಿದೆ, ಎಂದು ಗಮನಕ್ಕೆ ಬರುತ್ತದೆ. ಅಖ್ತರ ಇವರ ಹೇಳಿಕೆಯ ನಂತರ ಜನಪ್ರತಿನಿಧಿಗಳು ಅವರನ್ನು ಖಂಡಿಸಿದ್ದಾರೆ. ಭಾಜಪದ ಶಾಸಕರಾದ ರಾಮ ಕದಮ ಇವರು ‘ಜಾವೇದ ಅಖ್ತರ ಇವರ ಒಂದೂ ಚಲನಚಿತ್ರ ಪ್ರದರ್ಶಿತಗೊಳ್ಳಲು ಬಿಡುವುದಿಲ್ಲ’, ಎಂಬ ಎಚ್ಚರಿಕೆಯನ್ನು ನೀಡಿದ್ದರೆ ಶಾಸಕ ನೀತೇಶ ರಾಣೆ ಇವರು ‘ಯಾವ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಿರುವರೋ, ಅಲ್ಲಿ ಅಖ್ತರರಂತಹ ಜನರು ಹಿಂದೂ ರಾಷ್ಟ್ರವನ್ನು ವಿರೋಧಿಸಿದರು. ನಾವು ಅವರ ಹಾಡುಗಳನ್ನು, ಚಲನಚಿತ್ರಗಳನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತೇವೆ ಮತ್ತು ಅವರ ಕುಟುಂಬದವರನ್ನು ಸುರಕ್ಷಿತವಾಗಿಡುವ ಬಗ್ಗೆ ನಿಶ್ಚಿತಪಡಿಸುತ್ತೇವೆ. ನಾವು ಹಾವಿಗೆ ಹಾಲುಣಿಸುತ್ತಿದ್ದೇವೆಯೇ ?’ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ನಿಜವಾಗಿಯೂ ಎಲ್ಲ ಜನಪ್ರತಿನಿಧಿಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಮುಂದೆ ಬಂದು ಈಗ ಕೃತಿಶೀಲವಾಗಿ ಖಂಡಿಸಬೇಕು. ಅಖ್ತರ ಇವರ ಚಲನಚಿತ್ರ ಮತ್ತು ಹಾಡುಗಳನ್ನು ಬಹಿಷ್ಕರಿಸಬೇಕು. ಅಖ್ತರರ ಹೇಳಿಕೆ ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರವಾಗಿರದೇ ಅದು ಒಂದು ಪ್ರವೃತ್ತಿಯಾಗಿದೆ. ಈ ಪ್ರವೃತ್ತಿಯ ಬೆಂಬಲಿಗರು ದೇಶದಲ್ಲಿ ನಡುನಡುವೆ ತಲೆಯೆತ್ತುತ್ತಿರುತ್ತಾರೆ. ಇಂತಹವರಿಂದ ದೇಶಕ್ಕೆ ಅಪಾಯವಿದೆ. ಆದುದರಿಂದ ಸರಕಾರವು ಈ ಪ್ರವೃತ್ತಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ಜನಪ್ರತಿನಿಧಿಗಳು ಖಂಡಿಸುತ್ತಿರುವಾಗಲೇ ಮಹಾರಾಷ್ಟ್ರದ ಗೃಹನಿರ್ಮಾಣ ಮಂತ್ರಿ ಜಿತೇಂದ್ರ ಆವ್ಹಾಡ ಇವರು ಮಾತ್ರ ‘ಪ್ರತಿಯೊಬ್ಬರಿಗೆ ವೈಚಾರಿಕ ಸ್ವಾತಂತ್ರ್ಯವಿದೆ’, ಎಂಬ ಹೇಳಿಕೆ ನೀಡಿ ಅಖ್ತರರನ್ನು ಸಮರ್ಥನೆ ಮಾಡಿದ್ದಾರೆ. ಇದೇ ಆ ‘ಅಖ್ತರ ಪ್ರವೃತ್ತಿ’ಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನುಸುಳಿದ ಈ ವಿಚಾರಸರಣಿಯನ್ನು ಈಗ ಕೊನೆಗೊಳಿಸಬೇಕು !