ನೇಪಾಲ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಭಾರತದಾದ್ಯಂತ ಹಿಂದುತ್ವನಿಷ್ಠರ ಸಹಭಾಗ !
ಸೆಪ್ಟೆಂಬರ್ 10 ರಿಂದ 12 ರವರೆಗೆ ಅಮೆರಿಕಾದಲ್ಲಿ ನಡೆದ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಜಾಗತಿಕ ಮಟ್ಟದಲ್ಲಿ ಹಿಂದುತ್ವವನ್ನು ಕಿತ್ತೆಸೆಯುವುದು) ಈ ಪರಿಷತ್ತಿನಲ್ಲಿ ಎಡ ಮತ್ತು ಮತಾಂಧ ಸಿದ್ಧಾಂತದ ವಕ್ತಾರರು ಹಿಂದೂ ಧರ್ಮದ ವಿರುದ್ಧ ಸೈದ್ಧಾಂತಿಕ ಭಯೋತ್ಪಾದನೆ ಮತ್ತು ದ್ವೇಷವನ್ನು ಪಸರಿಸಿದರು. ಹಿಂದುತ್ವದ ವಿರುದ್ಧ ಪಿತೂರಿಯ ಅಂಗವಾಗಿ ಪ್ರಸಾರ ಮಾಡಲಾಗುತ್ತಿರುವ ದ್ವೇಷವನ್ನು ತಡೆಯಲು ಹಿಂದುತ್ವನಿಷ್ಠರು ಸಂಘಟಿತವಾಗಿ ಪ್ರಯತ್ನಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ‘ಹಿಂದುತ್ವ ರಕ್ಷಾ ಬೈಠಕ್’ಅನ್ನು ಆಯೋಜಿಸಿತ್ತು. ಸಮಿತಿಯು ವತಿಯಿಂದ ಪ್ರತಿ ವರ್ಷ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜಿಸಲಾಗುತ್ತದೆ, ಈ ಅಧಿವೇಶನದ ಒಂದು ಭಾಗವಾಗಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿಂದುತ್ವದ ವಿರುದ್ಧ ಆಗುವ ಪ್ರತಿಯೊಂದು ಸಂಚನ್ನು ಕೂಡಲೇ ಹಾಗೂ ಎಲ್ಲ ಸ್ತರಗಳಲ್ಲಿ ವಿರೋಧಿಸಬೇಕು, ಎಂದು ಚಿಂತಕರು, ಲೇಖಕರು, ಹಿಂದುತ್ವನಿಷ್ಠ ಸಂಘಟನೆಗಳ ಮುಖಂಡರು, ಮುಂತಾದವರು ಸರ್ವಾನುಮತಿಯಿಂದ ನಿರ್ಧರಿಸಿ ಮುಂದಿನ ಸಂಘಟಿತ ಕಾರ್ಯದ ದಿಕ್ಕನ್ನೂ ನಿರ್ಧರಿಸಲಾಯಿತು. ಸೆಪ್ಟೆಂಬರ್ 13 ರಂದು ರಾತ್ರಿ 8.30 ಕ್ಕೆ ‘ಗೂಗಲ್ ಮೀಟ್’ನ ಮಾಧ್ಯಮದಿಂದ ನಡೆದ ‘ಹಿಂದುತ್ವ ರಕ್ಷಾ ಬೈಠಕ್’ಗೆ ಭಾರತಾದ್ಯಂತ ವಿವಿಧ ರಾಜ್ಯದ ಹಾಗೆಯೇ ನೇಪಾಲ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಿಂದ 60 ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಗಟನೆಗಳ ಮುಖಂಡರು, ಸಂತರು, ನ್ಯಾಯವಾದಿಗಳು, ಚಿಂತಕರು ಮತ್ತು ಲೇಖಕರು ಭಾಗವಹಿಸಿದ್ದರು.
ಈ ಸಭೆಯಲ್ಲಿ, ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಹಿಂದೂ ವಿರೋಧಿ ಪರಿಷದ್‌ಗೆ ಸಹಾಯ ಮಾಡುವವರು, ಅದರ ಪ್ರಾಯೋಜಕರು, ಆಯೋಜಕರು, ವಕ್ತಾರರು ಮತ್ತು ಬೆಂಬಲಿಸುವ ಸಂಸ್ಥೆಗಳ ವಿರುದ್ಧ ಮುಂದಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಇದರಲ್ಲಿ ಪ್ರಪಂಚದಾದ್ಯಂತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆಗಳು; ಪೊಲೀಸರಲ್ಲಿ ದೂರುಗಳನ್ನು ನೀಡುವುದು; ಸ್ಥಳೀಯ ಶಾಸಕರು-ಸಂಸದರು, ಕೇಂದ್ರ ಸಚಿವರು, ವಿದೇಶಾಂಗ ಸಚಿವರು, ರಾಷ್ಟ್ರಪತಿಗಳು ಮುಂತಾದವರನ್ನು ಭೇಟಿ ಮಾಡಿ ಮನವಿಯನ್ನು ನೀಡುವುದು; ಹಿಂದುತ್ವದ ಮೇಲೆ ಮಾಡಿದ ಆರೋಪಗಳನ್ನು ಸೈದ್ಧಾಂತಿಕವಾಗಿ ಖಂಡಿಸುವುದು; ವಿದೇಶದಲ್ಲಿರುವ ಹಿಂದೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಅಮೇರಿಕಾದ ರಾಯಭಾರ ಕಚೇರಿಗೆ ಪತ್ರ ಕಳುಹಿಸುವುದು; ‘ಸೋಶಲ ಮೀಡಿಯಾ’ದ ಮಾಧ್ಯಮದಿಂದ ಇಂತಹ ಕಾನ್ಫರೆನ್ಸ್‌ಗಳನ್ನು ವಿರೋಧಿಸುವುದು ಇತ್ಯಾದಿ ಕೃತಿಗಳನ್ನು ಮಾಡುವಂತೆ ಸರ್ವಾನುಮತಿಯಿಂದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಸಭೆಯಲ್ಲಿ ನೇಪಾಲದ ಮಾಜಿ ರಾಜಗುರು ಶ್ರೀ. ಮಾಧವ್ ಭಟ್ಟರಾಯ, ಶ್ರೀಲಂಕಾದ ‘ಶಿವ ಸೇನಾಯಿ’ಯ ಅಧ್ಯಕ್ಷ ಎಮ್. ಸಚ್ಚಿತಾನಂದನ್, ‘ಬಾಂಗ್ಲಾದೇಶ ಮೈನಾರಟಿ ವಾಚ್’ನ ಅಧ್ಯಕ್ಷ ನ್ಯಾಯವಾದಿ (ಪೂ.) ರವೀಂದ್ರ ಘೋಷ್, ‘ಶದಾನಿ ದರಬಾರ’ನ ಡಾ. (ಪೂ.) ಯುಧಿಷ್ಠಿರಲಾಲಜಿ ಮಹಾರಾಜ, ಪಶ್ಚಿಮ ಬಂಗಾಲದ ‘ಶಾಸ್ತ್ರಧರ್ಮ ಪ್ರಚಾರ ಸಭಾ’ದ (ಪೂ.) ಶಿವನಾರಾಯಣ ಸೇನ್, ‘ಶ್ರೀರಾಮ ಸೇನೆ’ಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್, ‘ರೂಟ್ಸ್ ಇನ್ ಕಾಶ್ಮೀರ್’ನ ಶ್ರೀ. ಸುಶೀಲ್ ಪಂಡಿತ್, ‘ಶಿವಸೇನೆ’ಯ ತಮಿಳುನಾಡು ರಾಜ್ಯ ಪ್ರಮುಖರಾದ ಶ್ರೀ. ರಾಧಾಕೃಷ್ಣನ್, ಜಾರ್ಖಂಡ್‌ನ ‘ತರುಣ ಹಿಂದೂ’ನ ಡಾ. ನೀಲ್ ಮಾಧವ್ ದಾಸ್, ‘ಯೂತ್ ಫಾರ್ ಪನೂನ್ ಕಾಶ್ಮೀರ’ದ ಶ್ರೀ. ರಾಹುಲ್ ಕೌಲ್, ’ವಾರಕರಿ ಪಾಯಿಕ್ ಸಂಘ’ದ ಹ.ಭ.ಪ. ರಾಮಕೃಷ್ಣ ವೀರ್ ಮಹಾರಾಜ್, ‘ಲಷ್ಕರ್-ಎ-ಹಿಂದ್’ನ ಅಧ್ಯಕ್ಷ ಶ್ರೀ. ಈಶ್ವರಪ್ರಸಾದ್ ಖಂಡೇಲವಾಲ್, ಕೇರಳದ ‘ಅನ್ನಪೂರ್ಣಾ ಫೌಂಡೇಶನ್’ನ ಶ್ರೀ. ಬಿನಿಲ್ ಸೋಮಸುಂದರಂ, ಬಿಹಾರನ ಜ್ಯೋತಿಷಿ ಆಚಾರ್ಯ ಅಶೋಕ್ ಕುಮಾರ್, ರಾಜಸ್ಥಾನದ ದೀಪಕ್ ಗೋಸ್ವಾಮಿ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂರ್ವೋತ್ತರ ಭಾರತ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಇವರು ಸಭೆಯ ಉದ್ದೇಶವನ್ನು ವಿವರಿಸಿದರು, ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಈ ಸಭೆಯ ಪ್ರಸ್ತಾವನೆ ನೀಡುತ್ತಾ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಇದರ ವಿರುದ್ಧ ಇಲ್ಲಿಯವರೆಗೆ ಮಾಡಲಾದ ಹೋರಾಟದ ಬಗ್ಗೆ ಉಪಸ್ಥಿತರಿಗೆ ತಿಳಿಸಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ ರಾಜಹಂಸ ಇವರು ಈ ಸಭೆಯ ಸೂತ್ರ ಸಂಚಲನೆ ಮಾಡಿದರು.
ಈ ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಮುಕ್ತಾಯದ ಮಾರ್ಗದರ್ಶನವನ್ನು ಮಾಡುತ್ತಾ, ೯/೧೧ ಈ ದಿನದಂದು ಅಮೇರಿಕಾದಲ್ಲಿ ಭಯೋತ್ಪಾದಕರ ಆಕ್ರಮಣವಾದ ನಂತರ ಎಲ್ಲರೂ ಮುಸಲ್ಮಾನರ ಕಡೆಗೆ ಸಂಶಯದ ದೃಷ್ಟಿಯಿಂದ ನೋಡತೊಡಗಿದರು. ಅದೇ ದೃಷ್ಟಿಯನ್ನು ಹಿಂದೂಗಳ ಬಗ್ಗೆ ನಿರ್ಮಾಣ ಮಾಡಲು ಈ ಹಿಂದೂ ವಿರೋಧಿ ಪರಿಷದ್‌ಅನ್ನು ನಡೆಸಲಾಯಿತು. ಆದುದರಿಂದ ಹಿಂದೂಗಳು ಸತರ್ಕರಾಗಬೇಕು. ಅದಕ್ಕೆ ವೈಚಾರಿಕ ಮತ್ತು ಬೌದ್ಧಿಕ ಸ್ತರದಲ್ಲಿ ಅಧ್ಯಯನಪೂರ್ಣ ಉತ್ತರವನ್ನು ನೀಡಬೇಕು. ಈಶ್ವರೀ ಕಾರ್ಯಕ್ಕೆ ಆಶೀರ್ವಾದ ಮತ್ತು ಯಶಸ್ಸು ಪ್ರಾಪ್ತವಾಗಿಯೇ ಆಗುತ್ತದೆ, ನಾವು ಕೇವಲ ಕೃತಿಯನ್ನು ಮಾಡಬೇಕಾಗಿದೆ’, ಎಂದು ಹೇಳಿದರು.
ಈ ಸಭೆಯಲ್ಲಿ ಮಾತನಾಡುತ್ತಾ ಝಾರಖಂಡದ ‘ತರುಣ ಹಿಂದೂ’ವಿನ ಸಂಸ್ಥಾಪಕರಾದ ಶ್ರೀ. ನೀಲ ಮಾಧವ ದಾಸ ಇವರು, ಈ ಹಿಂದೂ ವಿರೋಧಿ ಪರಿಷದ್‌ನ ಹಿಂದೆ ಮುಖ್ಯವಾಗಿ ಕ್ರೈಸ್ತ ಮಿಶನರಿಗಳು ಕಾರ್ಯ ಮಾಡುತ್ತಿದ್ದು ಹಿಂದುತ್ವವನ್ನು ಮುಗಿಸಲು ಕಮ್ಯುನಿಷ್ಟ ಮತ್ತು ಮೂಲಭುತವಾದಿ ಮುಸಲ್ಮಾನರು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಿಸಬೇಕು’, ಕರೆ ಹೇಳಿದರು. ಹಿರಿಯ ವಿಚಾರವಂತ ಮತ್ತು ‘ರುಟ್ಸ್ ಇನ್ ಕಶ್ಮೀರ’ನ ಶ್ರೀ. ಸುಶೀಲ ಪಂಡಿತ ಇವರು, ಯಾವ ಹಿಂದೂಗಳಿಗೆ ಈ ಪರಿಷದ್‌ನ ಬಗ್ಗೆ ಸತ್ಯ ಮಾಹಿತಿ ಇಲ್ಲವೋ, ಅವರು ಅವರ ದುಷ್ಪ್ರಚಾರಕ್ಕೆ ಬಲಿ ಬೀಳಬಹುದು. ಇದಕ್ಕಾಗಿ ನಾವು ಹಿಂದೂಗಳಿಗೆ ಸತ್ಯವನ್ನು ಹೇಳಿ ಎಚ್ಚರಿಸಿಬೇಕು. ಹಿಂದೆ ಪ್ರಸಾರಮಾಧ್ಯಮಗಳು ಸಂಪೂರ್ಣವಾಗಿ ವಿರೋಧಕರ ವಶದಲ್ಲಿದ್ದವು. ಈಗ ಪರಿಸ್ಥಿತಿಯು ಪೂರ್ಣ ಬದಲಾಗಿದೆ. ಆದುದರಿಂದ ಹಿಂದೂ ಧರ್ಮ, ಸಂಸ್ಕೃತಿ, ಜೀವನಶೈಲಿ ಇವುಗಳ ಬಗ್ಗೆ ಹಿಂದೂಗಳಿಗೆ ಶಿಕ್ಷಣ ನೀಡಬೇಕು. ವಿರೋಧಕರ ಆರೋಪಗಳಿಗೆ ಸಾಕ್ಷಿ, ತರ್ಕ ಮತ್ತು ಅಧ್ಯಯನ ಇವುಗಳ ಮಾಧ್ಯಮದಿಂದ ಖಂಡತುಂಡಾಗಿ ಉತ್ತರಗಳನ್ನು ನೀಡಬೇಕು’, ಎಂದು ಹೇಳಿದರು.