Mumtaz Hotel Protest: ತಿರುಪತಿ ದೇವಸ್ಥಾನದ ಬಳಿ ‘ಮುಮ್ತಾಜ್ ಹೋಟೆಲ್’ ನಿರ್ಮಾಣ ವಿರೋಧಿಸಿ ಹಿಂದೂಗಳಿಂದ ಪ್ರತಿಭಟನೆ !

  • ಸರಕಾರ ಭೂಮಿಯನ್ನು ಹಿಂಪಡೆದರೂ ನಿರ್ಮಾಣ ಕಾರ್ಯ ಮುಂದುವರಿದಿದೆ

  • ಕೂಡಲೇ ಕಾಮಗಾರಿ ನಿಲ್ಲಿಸಲು ಆಗ್ರಹ

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ಶ್ರೀ ವೆಂಕಟೇಶ್ವರ ಪ್ರಾಣಿ ಉದ್ಯಾನವನದ ಬಳಿ ನಿರ್ಮಿಸುತ್ತಿರುವ ಮುಮ್ತಾಜ್ ಹೋಟೆಲ್ ನಿರ್ಮಾಣವನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಹಿಂದೂ ಚೈತನ್ಯ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳು ಡಿಸೆಂಬರ್ 3 ರಂದು ಪ್ರತಿಭಟನೆ ನಡೆಸಿವೆ. ಟಾಟಾನಗರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಣದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಹೋಟೆಲ್ ಗೆ ನೀಡಿದ್ದ ಜಮೀನಿನ ಗುತ್ತಿಗೆಯನ್ನು ಸರಕಾರ ರದ್ದುಪಡಿಸಿದ್ದರೂ ಇಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

1. ಆಂದೋಲನದಲ್ಲಿ ಭಾಗವಹಿಸಿದ ಸ್ವಾಮಿ ಶ್ರೀನಿವಾಸಾನಂದ ಅವರು ಅಲಿಪಿರಿ ಬಳಿಯ ಭೂಮಿಯನ್ನು ಹಿಂಪಡೆಯುವ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ನಿರ್ಧಾರವನ್ನು ಸ್ವಾಗತಿಸಿದರು; ಆದರೆ ಇನ್ನೂ ಮುಮ್ತಾಜ್ ಹೋಟೆಲ್ ನಿರ್ಮಾಣವಾಗುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

2. ಅಲಿಪಿರಿ ಬಳಿ 20 ಎಕರೆ ಜಾಗದಲ್ಲಿ ಹೋಟೆಲ್ ನಿರ್ಮಿಸಲು ನೀಡಿರುವ ಹಂಚಿಕೆಯನ್ನು ರಾಜ್ಯ ಸರಕಾರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಮಂಡಳಿಯು ನವೆಂಬರ್ 19, 2024 ರಂದು ಠರಾವನ್ನು ಅಂಗೀಕರಿಸಿತ್ತು. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿತ್ತು.

3. 2021 ರಲ್ಲಿ, ಅಂದಿನ ವೈಎಸ್ಆರ್ ಕಾಂಗ್ರೆಸ್ ಸರಕಾರವು ಪ್ರವಾಸೋದ್ಯಮ ಮತ್ತು ಉದ್ಯೋಗವನ್ನು ಹೆಚ್ಚಿಸಲು ತಿರುಪತಿಯಲ್ಲಿ ಪ್ರವಾಸೋದ್ಯಮ ಯೋಜನೆಯನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿತ್ತು. ಮುಮ್ತಾಜ್ ಹೋಟೆಲ್ ಯೋಜನೆಯು 20 ಎಕರೆಗಳಲ್ಲಿ 100 ಅತ್ಯಾಧುನಿಕ ಬಂಗಲೆಗಳನ್ನು ಹೊಂದಿದ್ದು, ಸರಕಾರದ ಆದೇಶದಂತೆ 250 ಕೋಟಿ ರೂಪಾಯಿಗಳ ಆರಂಭಿಕ ಹೂಡಿಕೆ ಯೋಜನೆಯಾಗಿದೆ.