ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಜನರಿಗಾಗಿ ಏನೂ ಮಾಡದವರನ್ನು ಆಡಳಿತಗಾರರೆಂದು ಚುನಾವಣೆಯಲ್ಲಿ ಆರಿಸುವ ಜನತೆಯೇ ಸದ್ಯದ ಸ್ಥಿತಿಗೆ ಕಾರಣರಾಗಿದ್ದಾರೆ

‘ಎಲ್ಲ ಪಕ್ಷದ ಆಡಳಿತಗಾರರು ಜನರಿಗೆ ಸಾಧನೆಯನ್ನು ಕಲಿಸಿ ಸಾತ್ತ್ವಿಕರನ್ನಾಗಿಸಿದರೆ ಸಮಾಜದಲ್ಲಿ ಅಪರಾಧಗಳಾಗುತ್ತಿರಲಿಲ್ಲ ಹಾಗೂ ಅಪರಾಧಿಗಳಿಗಾಗಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು, ಎಲ್ಲೆಡೆ ‘ಸಿ.ಸಿ.ಟಿವಿ’ ಕ್ಯಾಮೆರಾ ಅಳವಡಿಸಲು, ನ್ಯಾಯಾಲಯದ ಸಂಖ್ಯೆಯನ್ನು ಹೆಚ್ಚಿಸಬೇಕು ಮುಂತಾದವುಗಳಿಗಾಗಿ ಅನಾವಶ್ಯಕ ಖರ್ಚು ಮಾಡಬೇಕಾಗುತ್ತಿರಲಿಲ್ಲ. ಏನನ್ನೂ ಮಾಡದವರನ್ನು ಆಡಳಿತಗಾರರೆಂದು ಆರಿಸುವ ಜನರೇ ಇದಕ್ಕೆ ಕಾರಣರಾಗಿದ್ದಾರೆ. ಅವರನ್ನೇ ಶಿಕ್ಷಿಸಬೇಕು.

ಕಲಿಯುಗದಲ್ಲಿ ಸಮಷ್ಟಿ ಸಾಧನೆ ಮಾಡುವುದರ ಮಹತ್ವ

‘ಕಲಿಯುಗದ ಹಿಂದಿನ ಯುಗಗಳಲ್ಲಿ ರಾಜರು ಜನರ ರಕ್ಷಣೆ ಮಾಡುತ್ತಿದ್ದರು. ಹಾಗಾಗಿ ಪ್ರಜೆಗಳು ವ್ಯಷ್ಟಿ ಸಾಧನೆ ಮಾಡುತ್ತಿದ್ದರು. ಈಗಿನ ವಿಶೇಷವಾಗಿ ಸ್ವಾತಂತ್ರ್ಯದ ನಂತರದ ಆಡಳಿತಗಾರರು ಜನರ ರಕ್ಷಣೆ ಮಾಡದ ಕಾರಣ ಎಲ್ಲರೂ ಸಮಷ್ಟಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ’.

‘ಧರ್ಮರಕ್ಷಣೆಯನ್ನು ಮಾಡಿದರೆ ಸ್ವತಃದ ರಕ್ಷಣೆಯಾಗುತ್ತದೆ ಇದನ್ನು ಗಮನದಲ್ಲಿಡಿ’.

‘ರಾಜಕಾರಣಿಗಳು ಅವರ ಚುನಾವಣಾ ಕ್ಷೇತ್ರ ಅಥವಾ ಬೇರೆ ಎಲ್ಲೆಡೆ ಹೋಗುತ್ತಾರೆ ಆಗ ಎಲ್ಲೆಡೆ ತಮ್ಮ ಹೆಸರು ಬರಬೇಕೆಂಬ ಉದ್ದೇಶವಿರುತ್ತದೆ. ತದ್ವಿರುದ್ಧ ಸಂತರು ಅಧ್ಯಾತ್ಮಿಕ ವಿಷಯದ ಜಿಜ್ಞಾಸು ಹಾಗೂ ಸಾಧಕರಿಗೆ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುವುದಕ್ಕಾಗಿ ಎಲ್ಲೆಡೆ ಹೋಗುತ್ತಾರೆ’.

‘ಎಲ್ಲಿ ಒಂದು ಆಕಳಿನ ರಕ್ಷಣೆಗಾಗಿ ಪ್ರಾಣವನ್ನು ತ್ಯಾಗ ಮಾಡುತ್ತಿದ್ದ ಹಿಂದೂಗಳ ಪೂರ್ವಜರು ಮತ್ತು ಎಲ್ಲಿ ಲಕ್ಷಗಟ್ಟಲೆ ಆಕಳುಗಳನ್ನು ಕಸಾಯಿಖಾನೆಗೆ ಕಳುಹಿಸುವ ಇಂದಿನ ಹಿಂದೂಗಳು !’

‘ಭಾರತದ ದುರವಸ್ಥೆಗೆ ಸ್ವಾತಂತ್ರ್ಯದಿಂದ ಇದುವರೆಗೆ ಏನೂ ಮಾಡದಿರುವವರೇ ಜವಾಬ್ದಾರರಾಗಿದ್ದಾರೆ. ಅವರಿಗೆ ಈಶ್ವರನು ಖಂಡಿತವಾಗಿಯೂ ತಕ್ಕ ಶಿಕ್ಷೆ ವಿಧಿಸುವನು’.

‘ಮೂರನೇ ಮಹಾಯುದ್ಧದಲ್ಲಿ ಜೀವಂತ ಉಳಿಯಲು ಯಾರು ಅರ್ಹರಾಗಿರುವರೋ ಅವರನ್ನೇ ದೇವರು ಜೀವಂತವಾಗಿಡುವನು, ಇತರರನ್ನು ಅಲ್ಲ; ಆದುದರಿಂದ ‘ಯಾರು ಜೀವಂತರಾಗಿರುವರು ಹಾಗೂ ಯಾರು ಇಲ್ಲ ?’, ಎಂಬ ವಿಚಾರ ಮಾಡಬಾರದು’.

ಡಾಕ್ಟರಲ್ಲದವನು ರೋಗಿಗೆ ಚಿಕಿತ್ಸೆ ನೀಡುವಂತೆ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಪ್ರೇಮವಿಲ್ಲದ ಜನರಿಗೆ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಪ್ರೇಮವಿಲ್ಲದ ರಾಜಕೀಯ ಪಕ್ಷಗಳನ್ನು ಆರಿಸುವ ಅಧಿಕಾರ ನೀಡಿದುದರಿಂದ ಎಲ್ಲ ಕ್ಷೇತ್ರಗಳಲ್ಲಿ ದೇಶದ ಸ್ಥಿತಿಯು ದಯನೀಯವಾಗಿದೆ.

ಸಂತರ ಶ್ರೇಷ್ಠತೆ

‘ಡಾಕ್ಟರ್, ವಕೀಲ, ಲೆಕ್ಕಪರೀಕ್ಷಕರು, ಜ್ಯೋತಿಷಿಗಳು, ಪೊಲೀಸ್, ಸ್ನೇಹಿತರು, ಸಂಬಂಧಿಕರು ಮುಂತಾದವರು ವಿವಿಧ ಕ್ಷೇತ್ರಗಳ ತಜ್ಞರು ಏನನ್ನು ಮಾಡಲಾರರೋ ಅದೆಲ್ಲವನ್ನು ಸಂತರು ಮಾಡಬಲ್ಲರು’.

– (ಪರಾತ್ಪರ ಗುರು) ಡಾ. ಆಠವಲೆ