ಮಾನವನು ಭಾರತದಲ್ಲಿ ಜನ್ಮತಾಳಿದ ವಿದ್ವಾಂಸರಿಂದ ಸದಾಚಾರವನ್ನು ಕಲಿಯುವುದು ಆವಶ್ಯಕ !

ಭಾರತದ ಸ್ವಾತಂತ್ರ್ಯವು ವೇದಗಳನ್ನು ಆಧಾರಿಸಿದೆ. ಆದುದರಿಂದ ಈ ವಿಷಯದ ಮೇಲೆ ಆಳವಾದ ಅಧ್ಯಯನವನ್ನು ಮಾಡಿ, ಶಾಸ್ತ್ರಾರ್ಥವನ್ನು ಮಾಡಿ ಹೊಸ ಶೋಧವನ್ನು ಮಾಡುವುದು ಆವಶ್ಯಕವಾಗಿದೆ. ಮನುಸ್ಮೃತಿಯ ಎರಡನೇ ಅಧ್ಯಾಯದ ಇಪ್ಪತ್ತನೆಯ ಶ್ಲೋಕದಲ್ಲಿ ಮುಂದಿನಂತೆ ಸ್ಪಷ್ಟವಾಗಿ  ಹೇಳಲಾಗಿದೆ.

ಎತದ್ ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |

ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥ್ವಿವ್ಯಾಂ ಸರ್ವಮಾನವಾಃ ||

– ಮನುಸ್ಮೃತಿ, ಅಧ್ಯಾಯ ೨ ಶ್ಲೋಕ ೨೦

ಅರ್ಥ : ಈ ಭಾರತ ದೇಶದಲ್ಲಿ ಜನಿಸಿದ ಚರಿತ್ರಸಂಪನ್ನ ಮತ್ತು ವಿದ್ವಾಂಸರಿಂದ ಪೃಥ್ವಿಯ ಮೇಲಿನ ಎಲ್ಲ ಮಾನವರು ಸದಾಚಾರ ಮತ್ತು ಸದ್ವರ್ತನೆಯ ಪಾಠ ಕಲಿಯಬೇಕು. – ಮಾಸಿಕ ಗೀತಾ ಸ್ವಾಧ್ಯಾಯ)