”ಕು. ಗುರುದಾಸ ಗೌಡನು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ್ದು ಅವನ ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟಿದೆ’, ಎಂದು ೨೦೧೯ ನೇ ಇಸ್ವಿಯಲ್ಲಿ ಘೋಷಿಸಲಾಗಿತ್ತು. ೨೦೨೪ ನೇ ಇಸವಿಯಲ್ಲಿ ಅವನ ಆಧ್ಯಾತ್ಮಿಕ ಮಟ್ಟ ಶೇ. ೫೮ ರಷ್ಟಾಯಿತು. ಪಾಲಕರು ನೀಡಿದ ಯೋಗ್ಯ ಸಂಸ್ಕಾರಗಳು, ಸಾಧನೆಯ ಅವನ ತಳಮಳ ಮತ್ತು ಅವನಲ್ಲಿನ ಭಾವದಿಂದಾಗಿ ಈಗ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ.” – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೭.೧೦.೨೦೨೪) |
೧. ‘ಚಿ. ಗುರುದಾಸನು ಸತತ ಹಸನ್ಮುಖಿ ಮತ್ತು ಉತ್ಸಾಹದಿಂದಿರುತ್ತಾನೆ.
೨. ಗುರುದಾಸನು ಪ್ರತಿಯೊಬ್ಬರೊಂದಿಗೆ ಬೇಗ ಹೊಂದಿಕೊಳ್ಳುತ್ತಾನೆ. ಅವನು ಸಾಧಕರು ಮತ್ತು ಅತಿಥಿಗಳೊಂದಿಗೆ ತಾನಾಗಿ ಮಾತನಾಡುತ್ತಾನೆ ಮತ್ತು ಸಹಾಯ ಮಾಡುತ್ತಾನೆ.
೩. ಸೇವಾಭಾವ
ಅವನು ‘ಸೇವಾಕೇಂದ್ರದಲ್ಲಿ ಶಿಬಿರವಿದ್ದರೆ, ಅವನು ಸಾಧಕರ ನಿವಾಸದ ವ್ಯವಸ್ಥೆ ಮಾಡುವುದು, ವಾಹನದಲ್ಲಿನ ಸಾಹಿತ್ಯಗಳನ್ನು ಇಳಿಸಿಕೊಳ್ಳುವುದು, ವಾಹನ ಮತ್ತು ಆಶ್ರಮದ ಸ್ವಚ್ಛತೆಯನ್ನು ಮಾಡುವುದು’, ಇಂತಹ ಸೇವೆ ಮಾಡಲು ಸಹಾಯ ಮಾಡುತ್ತಾನೆ. ಅವನು ‘ಸೇವೆಯನ್ನು ಪರಿಪೂರ್ಣ ಹೇಗೆ ಮಾಡಬೇಕು ?’, ಎಂಬ ಚಿಂತನೆ ಮಾಡುತ್ತಾನೆ ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಾನೆ. ಸೇವಾಕೇಂದ್ರದಲ್ಲಿ ಯಾವುದಾದರೂ ಯಂತ್ರ ಹಾಳಾದರೆ, ಗುರುದಾಸನು ಮುಂದಾಳತ್ವವನ್ನು ವಹಿಸಿ ಅದನ್ನು ದುರಸ್ತಿ ಮಾಡಲು ಪ್ರಯತ್ನಿಸುತ್ತಾನೆ.
೪. ತಪ್ಪುಗಳ ಬಗ್ಗೆ ಸಂವೇದನಾಶೀಲತೆ
ಗುರುದಾಸನಿಗೆ ಯಾರಾದರೂ ಅವನ ತಪ್ಪು ಹೇಳಿದರೆ, ಅವನು ಅದನ್ನು ತಕ್ಷಣ ಸ್ವೀಕರಿಸುತ್ತಾನೆ. ಗುರುದಾಸನ ತಮ್ಮನಾದ ಚರಣದಾಸ (ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟು, ವಯಸ್ಸು ೧೦ ವರ್ಷ)ನಿಂದ ಏನಾದರೂ ತಪ್ಪಾದರೆ, ಗುರುದಾಸನು ತಕ್ಷಣ ಅವನಿಗೆ ಅವನ ತಪ್ಪು ಹೇಳುತ್ತಾನೆ.
೫. ಗುರುಗಳ ಮತ್ತು ಸಂತರ ಬಗೆಗಿನ ಭಾವ
ಯಾರಾದರೂ ಗುರುಗಳ ಶ್ರೇಷ್ಠತೆ ಬಗ್ಗೆ ಹೇಳುತ್ತಿದ್ದರೆ, ಗುರುದಾಸನ ಭಾವಜಾಗೃತಿಯಾಗುತ್ತದೆ. ಒಮ್ಮೆ ಗುರುದಾಸನ ಹುಟ್ಟುಹಬ್ಬದಂದು ಪೂ. ರಮಾನಂದಣ್ಣ (ಗುರುದಾಸನ ತಂದೆ ಪೂ. ರಮಾನಂದ ಗೌಡ, ಸನಾತನದ ೭೫ ನೇ ಸಂತರು, ವಯಸ್ಸು ೪೭ ವರ್ಷ) ಇವರು ಪೂ. ರಾಧಾ ಪ್ರಭು (ಸನಾತನದ ೪೪ ನೇ ಸಂತರು, ವಯಸ್ಸು ೮೭ ವರ್ಷ) ಇವರಿಗೆ ‘ಗುರುಗಳು ನಮ್ಮ ಕಾಳಜಿಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ?’, ಎಂದು ಹೇಳುತ್ತಿದ್ದರು. ಆಗ ಗುರುದಾಸನಿಗೆ ತುಂಬಾ ಭಾವಜಾಗೃತಿಯಾಗುತ್ತಿತ್ತು. ಅವನು ನಮಸ್ಕಾರದ ಮುದ್ರೆಯಲ್ಲಿ ನಿಂತು ಸಂತರೊಂದಿಗೆ ಮಾತನಾಡುತ್ತಿದ್ದನು.’
– ಸೌ. ಮಂಜುಳಾ ರಮಾನಂದ ಗೌಡ (ಕು. ಗುರುದಾಸ ಇವನ ತಾಯಿ, ೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೭ ರಷ್ಟು, ವಯಸ್ಸು ೪೩ ವರ್ಷ), ಮಂಗಳೂರು. (೮.೬.೨೦೨೩)