ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ದೈವೀ (ಸಾತ್ತ್ವಿಕ) ಮಕ್ಕಳು ಅಂದರೆ ಮುಂಬರುವ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಸನ್ನಿಧಿ ಶೆಣೈ ಇವಳು ಈ ಪೀಳಿಗೆಯಲ್ಲಿ ಒಬ್ಬಳಾಗಿದ್ದಾಳೆ !
ಕು. ಸನ್ನಿಧಿ ಹರೀಶ ಶಣೈ ಇವಳ ಅಜ್ಜಿ (ತಾಯಿಯ ತಾಯಿ) ಶ್ರೀಮತಿ ಸುಧಾ ಕೆ. ಕಾಮತ ಇವರಿಗೆ ಅರಿವಾದ ಸನ್ನಿಧಿಯ ಗುಣವೈಶಿಷ್ಟ್ಯಗಳನ್ನು ಮುಂದೆ ಕೊಡಲಾಗಿದೆ.
೧. ಧರ್ಮಾಚರಣೆಯ ಆಸಕ್ತಿ ಇರುವುದು
ಸನ್ನಿಧಿಗೆ ದೇವರ ಪೂಜೆ ಮಾಡುವುದು, ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರಿಗೆ ಪ್ರಾರ್ಥನೆ ಮಾಡುವುದು ಇತ್ಯಾದಿ ಕೃತಿಗಳನ್ನು ಮಾಡಲು ಇಷ್ಟವಾಗುತ್ತದೆ. ಅವಳಿಗೆ ಸಾತ್ತ್ವಿಕ ಉಡುಪುಗಳನ್ನು ಧರಿಸಲೂ ಇಷ್ಟವಾಗುತ್ತದೆ.
೨. ಎಲ್ಲರೊಂದಿಗೆ ಹೊಂದಿಕೊಂಡು ಇರುವುದು
ಮೊದಲು ಸನ್ನಿಧಿಯು ಒಬ್ಬಳೇ ಇರುತ್ತಿದ್ದಳು. ಅವಳು ಯಾರೊಂದಿಗೂ ಹೊಂದಿಕೊಳ್ಳುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಮಾತ್ರ ಅವಳಿಗೆ ಎಲ್ಲರೂ ಇಷ್ಟವಾಗುತ್ತಿದ್ದಾರೆ. ಅವಳಿಗೆ ‘ಎಲ್ಲರೂ ಮನೆಗೆ ಬರಬೇಕು ಮತ್ತು ಅವರು ಮನೆಯಲ್ಲಿ ಇರಬೇಕು’, ಎಂದೆನಿಸುತ್ತದೆ.
೩. ಸಾಧನೆಯ ಅಂಶಗಳನ್ನು ತತ್ಪರತೆಯಿಂದ ಕೃತಿಯಲ್ಲಿ ತರುವುದು
ಅ. ಸನ್ನಿಧಿಯ ಸೋದರಮಾವ (ತಾಯಿಯ ಸಹೋದರ) ಶ್ರೀ. ಗಣೇಶ ಕಾಮತ ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುತ್ತಾರೆ. ಅವರು ಶಿವಮೊಗ್ಗಕ್ಕೆ ಬಂದಾಗ, ಮಕ್ಕಳಿಗೆ ಧರ್ಮಾಚರಣೆ, ನೀತಿಕಥೆಗಳು ಮುಂತಾದವುಗಳ ಬಗ್ಗೆ ಹೇಳುತ್ತಾರೆ. ಸನ್ನಿಧಿಯು ಅವುಗಳನ್ನು ಕೇಳಿಕೊಂಡು ಅವುಗಳಂತೆ ಕೃತಿಗಳನ್ನು ಮಾಡುತ್ತಾಳೆ.
ಆ. ಸನ್ನಿಧಿಯು ಬಾಲಸಂಸ್ಕಾರ ವರ್ಗಕ್ಕೆ ಹೋಗುತ್ತಾಳೆ. ಅಲ್ಲಿ ‘ಕುಂಕುಮವನ್ನು ಹಚ್ಚುವ ಮಹತ್ವ, ದೇವಸ್ಥಾನಕ್ಕೆ ಹೋದಾಗ ಮೊದಲನೇ ಮೆಟ್ಟಲಿಗೆ ನಮಸ್ಕಾರ ಏಕೆ ಮಾಡಬೇಕು ?’, ಎಂಬ ವಿಷಯಗಳನ್ನು ಹೇಳಲಾಗುತ್ತದೆ. ಸನ್ನಿಧಿಯು ಈ ಎಲ್ಲ ವಿಷಯಗಳನ್ನು ಪಾಲಿಸುತ್ತಾಳೆ.
ಇ. ಎರಡು ವಾರಗಳ ಹಿಂದೆ ಸನ್ನಿಧಿಗೆ, ‘ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಅದರಿಂದ ತೊಂದರೆಯಾಗುತ್ತದೆ’ ಎಂಬ ವಿಷಯವನ್ನು ಹೇಳಿದ್ದರು. ಅದನ್ನು ಅವಳು ಕೇಳಿದಳು, ತಕ್ಷಣ ಅವಳು ಇತರರಿಗೂ ಹೇಳಲು ಪ್ರಯತ್ನಿಸಿದಳು.
೪. ಶ್ರೀಕೃಷ್ಣನ ಧಾರಾವಾಹಿಯನ್ನು ನೋಡುವಾಗ ತಾನು ‘ರಾಧಾ’ ಆಗುವುದು !
ಸನ್ನಿಧಿಯು ದೂರಚಿತ್ರವಾಹಿನಿಯಲ್ಲಿ ‘ರಾಧಾ-ಕೃಷ್ಣ’ ಧಾರಾವಾಹಿಯನ್ನು ನೋಡಿ ತಾನು ರಾಧೆಯಂತೆ ಉಡುಪುಗಳನ್ನು ಧರಿಸುತ್ತಾಳೆ ಮತ್ತು ಹಾಡನ್ನೂ ಹೇಳುತ್ತಾಳೆ. ಒಮ್ಮೆ ಧಾರಾವಾಹಿಯಲ್ಲಿ ಕೃಷ್ಣನಿಗೆ ನೋವಾಗುತ್ತಿರುವುದನ್ನು ನೋಡಿ ಅವಳು ಅತ್ತಳು.
೫. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗೆಗಿನ ಭಾವ
ಸನ್ನಿಧಿಯ ಮನಸ್ಸಿನಲ್ಲಿ ಗುರುದೇವರ ಬಗ್ಗೆ ತುಂಬಾ ಪ್ರೀತಿ ಇದೆ. ಒಮ್ಮೆ ಅವಳು, ”ನೀನು ನನಗೆ ಗುರುದೇವರನ್ನು ಕೇವಲ ಛಾಯಾಚಿತ್ರದಲ್ಲಿಯೇ ತೋರಿಸಿದೆ. ನೀನು ನನಗೆ ಪ್ರತ್ಯಕ್ಷ ಗುರುದೇವರ ದರ್ಶನವನ್ನು ಯಾವಾಗ ಮಾಡಿಸುವೆ ?” ಎಂದು ಕೇಳಿದಳು. ಆಗ ನಾನು ಅವಳಿಗೆ, ”ನಾವು ಒಮ್ಮೆ ಗೋವಾದಲ್ಲಿನ ರಾಮನಾಥಿ ಆಶ್ರಮಕ್ಕೆ ಹೋಗೋಣ. ಆಗ ನಾನು ನಿನಗೆ ಗುರುದೇವರನ್ನು ಪ್ರತ್ಯಕ್ಷ ತೋರಿಸುವೆನು” ಎಂದು ಹೇಳಿದೆನು.
೬. ಸನ್ನಿಧಿಯಿಂದ ಏನಾದರೂ ತಪ್ಪಾದರೆ ಅವಳು ತಕ್ಷಣ ಕ್ಷಮೆಯಾಚನೆ ಮಾಡುತ್ತಾಳೆ.
– ಶ್ರೀಮತಿ ಸುಧಾ ಕೆ. ಕಾಮತ (ತಾಯಿಯ ತಾಯಿ), ಶಿವಮೊಗ್ಗ, ಕರ್ನಾಟಕ. (೧೭.೫.೨೦೨೪)