ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂಬರುವ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಹರಿಕೃಷ್ಣ ನಾಗರಾಜ ಈ ಪೀಳಿಗೆಯಲ್ಲಿ ಒಬ್ಬನಾಗಿದ್ದಾನೆ
‘ಕು. ಹರಿಕೃಷ್ಣ ನಾಗರಾಜ ಇವನು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದು ಅವನ ಆಧ್ಯಾತ್ಮಿಕ ಮಟ್ಟ ಶೇ. ೫೧ ರಷ್ಟಿದೆ’, ಎಂದು ೨೦೧೬ ರಲ್ಲಿ ಘೋಷಿಸಲಾಗಿತ್ತು. ೨೦೨೪ ರಲ್ಲಿ ಅವನ ಆಧ್ಯಾತ್ಮಿಕ ಮಟ್ಟ ಶೇ. ೫೫ ರಷ್ಟು ಆಗಿದೆ. ಅವನ ಮೇಲೆ ಪಾಲಕರು ಮಾಡಿದ ಯೋಗ್ಯ ಸಂಸ್ಕಾರ, ಅವನ ಸಾಧನೆಯ ತಳಮಳ ಮತ್ತು ಅವನಲ್ಲಿನ ಭಾವದಿಂದಾಗಿ ಈಗ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೩.೭.೨೦೨೪) |
೧. ಕಲಿಯುವ ವೃತ್ತಿ
‘ಹರಿಕೃಷ್ಣನು ಹೊಸ ವಿಷಯ ಕಲಿಯುವಾಗ ಎದುರಿರುವ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಮನೆಯಲ್ಲಿ ಯಾವುದಾದರೊಂದು ಹೊಸ ವಸ್ತು (ಉದಾ. ವಾಹನ)ವನ್ನು ತಂದರೆ ಅವನು ಅದರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುತ್ತಾನೆ.
೨. ಪ್ರೇಮಭಾವ
ಸಾಧಕರನ್ನು ನೋಡಿದಾಗ ಅವನಿಗೆ ಬಹಳ ಆನಂದವಾಗುತ್ತದೆ. ಸಾಧಕರಿಗೆ ಏನನ್ನಾದರೂ ಕೊಡಬೇಕು ಎಂದು ಅವನು ಬಯಸುತ್ತಾನೆ. ಅವನು ಇತರರಿಗೆ ಸಹಾಯ ಮಾಡುತ್ತಾನೆ. ಅವನು ತನ್ನ ವಸ್ತುಗಳನ್ನು ಇತರರಿಗೆ ನೀಡುತ್ತಾನೆ.
೩. ವಿವೇಕವೃತ್ತಿ
ಅವನು ಊರಿಗೆ ಹೋಗುವಾಗ ಅವನ ಜೊತೆಗೆ ತಾಯಿ-ತಂದೆ ಬರಲೇಬೇಕು ಎಂಬ ಹಠ ಇರುವುದಿಲ್ಲ. ಅವನು ಎಲ್ಲರೊಂದಿಗೆ ಆನಂದದಿಂದ ಬೆರೆತುಕೊಳ್ಳುತ್ತಾನೆ.
೪. ಧರ್ಮಾಚರಣೆಯ ಒಲವು
ಅವನು ಪ್ರತಿದಿನ ಹಣೆಗೆ ತಿಲಕ ಇಟ್ಟುಕೊಂಡು ಶಾಲೆಗೆ ಹೋಗುತ್ತಾನೆ. ಅವನು ಪ್ರತಿದಿನ ದೇವರ ಪೂಜೆ ಮಾಡುತ್ತಾನೆ. ಅವನು ಮನೆಯಲ್ಲಿ ತಂದೆಯವರ ಜೊತೆಗೆ ಅಗ್ನಿಹೋತ್ರ ಮಾಡುತ್ತಾನೆ.
೫. ವ್ಯಷ್ಟಿ ಸಾಧನೆಯ ಪ್ರಯತ್ನ
ಅವನು ನಾಮಜಪವನ್ನು ಭಾವಪೂರ್ಣವಾಗಿ ಮಾಡಲು ಪ್ರಯತ್ನಿಸುತ್ತಾನೆ. ಅವನು ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸುತ್ತಾನೆ. ಅವನು ಅಧ್ಯಯನ ಮಾಡುವ ಮೊದಲು ಪ್ರಾರ್ಥನೆ ಮಾಡುತ್ತಾನೆ ಮತ್ತು ಕೊನೆಗೆ ಕೃತಜ್ಞತೆಯನ್ನು ವ್ಯಕ್ತ ಮಾಡುತ್ತಾನೆ.
೬. ತಪ್ಪುಗಳ ಬಗ್ಗೆ ಸಂವೇದನಾಶೀಲ
ಅವನು ತತ್ಪರತೆಯಿಂದ ತಪ್ಪುಗಳನ್ನು ಸ್ವೀಕರಿಸುತ್ತಾನೆ. ಅವನಿಂದ ಏನಾದರೂ ತಪ್ಪುಗಳಾದರೆ ಅವನು ಕ್ಷಮೆ ಯಾಚನೆ ಮಾಡುತ್ತಾನೆ. ಅವನು ಕೆಲವೊಮ್ಮೆ ಪ್ರಾಯಶ್ಚಿತ್ತ ತೆಗೆದುಕೊಳ್ಳುತ್ತಾನೆ. ನನ್ನಿಂದ ತಪ್ಪುಗಳಾದರೆ ಅವನು ನನಗೆ ಆ ಬಗ್ಗೆ ಹೇಳುತ್ತಾನೆ.
೭. ಸಂತರ ಬಗ್ಗೆ ಗೌರವಭಾವ
ಒಂದು ಸಲ ಅವನು ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತರು, ವಯಸ್ಸು ೪೮ ವರ್ಷಗಳು) ಇವರನ್ನು ಭೇಟಿಯಾದನು. ಅವನು ಅವರಿಂದ ‘ತಪ್ಪುಗಳನ್ನು ಹೇಗೆ ಬರೆಯಬೇಕು ?’, ಎಂಬುದನ್ನು ಕಲಿತುಕೊಂಡನು. ಅನಂತರ ಅವನು ತಪ್ಪುಗಳನ್ನು ಬರೆಯಲು ಆರಂಭಿಸಿದನು. ಅವನಿಗೆ ತನ್ನ ಸಾಧನೆಯನ್ನು ಹೆಚ್ಚಿಸಬೇಕೆಂದು ಅರಿವಾಯಿತು.
ಒಂದು ಸಲ ಅವನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರನ್ನು ಭೇಟಿಯಾದನು. ಆಗ ಅವನಿಗೆ ಬಹಳ ಭಾವಜಾಗೃತಿಯಾಯಿತು. ಆ ಬಗ್ಗೆ ಅವನು ನಮಗೆ ಸಂಚಾರವಾಣಿ ಕರೆ ಮಾಡಿ ಹೇಳಿದನು. ಅನಂತರ ಅವನು ನಾಮಜಪ ಮಾಡು ವುದು ಮತ್ತು ಭಾವಜಾಗೃತಿಯ ಪ್ರಯತ್ನವನ್ನು ಹೆಚ್ಚಿಸಿದನು.
೮. ಗುರುಗಳ ಬಗ್ಗೆ ಭಾವ
ಅವನಿಗೆ ಗುರುಗಳ ಬಗ್ಗೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ) ಮಾಹಿತಿ ಹೇಳಿದಾಗ ಅವನ ಭಾವಜಾಗೃತವಾಗುತ್ತದೆ ಮತ್ತು ಅವನ ಕಣ್ಣುಗಳಲ್ಲಿ ಭಾವಾಶ್ರುಗಳು ಬರುತ್ತವೆ.
ಅವನು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ನಡುನಡುವೆ ನೋಡುತ್ತಿರುತ್ತಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ಸಮಯದಲ್ಲಿ ಅವರ ದರ್ಶನವಾದಾಗ ಹರಿಕೃಷ್ಣನಿಗೆ ಬಹಳ ಆನಂದವಾಗಿತ್ತು. ಅವನಿಗೆ ಬಹಳ ಭಾವಜಾಗೃತಿಯಾಗಿತ್ತು. ಅವನು, ‘ಗುರುದೇವರನ್ನು ನೋಡಿ ನಾನು ಧನ್ಯನಾದೆನು’, ಎಂದು ಹೇಳಿದನು.
– ಸೌ. ಅಶ್ವಿನಿ ನಾಗರಾಜ (ಕು. ಹರಿಕೃಷ್ಣನ ತಾಯಿ), ಬೆಂಗಳೂರು. (೨೦.೫.೨೦೨೪)