ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ದೈವೀ (ಸಾತ್ತ್ವಿಕ) ಮಕ್ಕಳು ಅಂದರೆ ಮುಂಬರುವ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಸುರಭಿ ಕಾಮತ ಇವಳು ಈ ಪೀಳಿಗೆಯಲ್ಲಿ ಒಬ್ಬಳಾಗಿದ್ದಾಳೆ !
ಶಿವಮೊಗ್ಗದ ಕು. ಸುರಭಿ ಕಾಮತ (ವಯಸ್ಸು ೮ ವರ್ಷ) ಇವಳ ಬಗ್ಗೆ ಅವಳ ಅಜ್ಜಿ ಸೌ. ಪ್ರಭಾ ರಾಜಾರಾಮ ಕಾಮತ (ಆಧ್ಯಾತ್ಮಿಕ ಮಟ್ಟ ಶೇ. ೬೯, ವಯಸ್ಸು ೬೯ ವರ್ಷ) ಮತ್ತು ಅವಳ ದೊಡ್ಡಪ್ಪ ಶ್ರೀ. ಗಣೇಶ ಕಾಮತ ಇವರಿಗೆ ಅರಿವಾದ ಸುರಭಿಯ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
೧. ಜನಿಸಿದ ನಂತರ
೧ ಅ. ಸುರಭಿಯು ಜನಿಸಿದ ನಂತರ ಬಂದ ಅನುಭೂತಿ : ‘ಮಗು ಜನಿಸಿದ ನಂತರ ಅವಳನ್ನು ನನ್ನ ಬಳಿ ಕೊಟ್ಟರು. ಆಗ ನನ್ನ ನಾಮಜಪವು ತನ್ನಿಂದತಾನೇ ಪ್ರಾರಂಭವಾಯಿತು. ನಾನು ಅವಳ ಹತ್ತಿರ ಹೋದಾಗ ನನ್ನ ನಾಮಜಪ ಪ್ರಾರಂಭವಾಗುತ್ತದೆ.
೧ ಆ. ‘ಸುರಭಿ ಅಳುವುದು ತುಂಬಾ ಕಡಿಮೆ ಇತ್ತು.’ – ಸೌ. ಪ್ರಭಾ ಕಾಮತ (ಕು. ಸುರಭಿಯ ಅಜ್ಜಿ, ತಂದೆಯ ತಾಯಿ)
೨. ವಯಸ್ಸು – ೨ ರಿಂದ ೭ ವರ್ಷ
೨ ಅ. ಬಾಲಸಂಸ್ಕಾರವರ್ಗದಲ್ಲಿ ಹೇಳಿದ ಅಂಶಗಳನ್ನು ತಕ್ಷಣ ಕೃತಿಯಲ್ಲಿ ತರುವುದು : ‘ಸುರಭಿಯು ಬಾಲಸಂಸ್ಕಾರ ವರ್ಗದಲ್ಲಿ ಹೇಳಿದ ಅಂಶಗಳನ್ನು ತಕ್ಷಣ ಕೃತಿಯಲ್ಲಿ ತರುತ್ತಾಳೆ. ಅವಳು ಪ್ರತಿದಿನ ಬೆಳಗ್ಗೆ ಎದ್ದ ನಂತರ ಕರದರ್ಶನ ಮಾಡುವುದು, ರಾತ್ರಿ ಮಲಗುವಾಗ ಶ್ಲೋಕಗಳನ್ನು ಹೇಳುವುದು, ಪ್ರಸಾದ ಮತ್ತು ಮಹಾಪ್ರಸಾದವನ್ನು ಸೇವಿಸುವಾಗ ಪ್ರಾರ್ಥನೆ ಮಾಡುವುದು, ಹಾಗೆಯೇ ಅಧ್ಯಯನ ಮಾಡುವ ಮೊದಲು ಪ್ರಾರ್ಥನೆ ಮಾಡುವುದು ಇತ್ಯಾದಿ ಕೃತಿಗಳನ್ನು ಮಾಡುತ್ತಾಳೆ.
೨ ಆ. ಕೇಳುವ ವೃತ್ತಿ ಇರುವುದು
೧. ನಾನು ಸುರಭಿಗೆ ‘ನೀನು ಮಹಾಪ್ರಸಾದವನ್ನು ಸೇವಿಸುತ್ತಿರುವಾಗ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನೋಡಬೇಡ’, ಎಂದು ಹೇಳಿದೆ. ಆಗ ಅವಳು ಅದನ್ನು ತಕ್ಷಣ ಒಪ್ಪಿದಳು.
– ಶ್ರೀ. ಗಣೇಶ ಕಾಮತ (ದೊಡ್ಡಪ್ಪ), ಸನಾತನ ಆಶ್ರಮ, ರಾಮನಾಥಿ, ಗೋವಾ.
೩. ಭಜನೆಗಳನ್ನು ಕೇಳುವ ಆಸಕ್ತಿ
‘ಸುರಭಿಗೆ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳು ತುಂಬಾ ಇಷ್ಟವಾಗುತ್ತವೆ. ರಾತ್ರಿ ಮಲಗುವ ಮೊದಲು ಅವಳು ಭಜನೆಗಳನ್ನು ಹಾಕಲು ಹೇಳುತ್ತಾಳೆ. ಅವಳು ನನ್ನ ಬಳಿ ‘ನನಗೆ ನಿದ್ದೆ ಬಂದಿದ್ದರೂ, ಭಜನೆಗಳನ್ನು ನಿಲ್ಲಿಸಬೇಡ’, ಎಂದು ಹೇಳುತ್ತಾಳೆ.
೪. ಗುರುಗಳ ಬಗೆಗಿನ ಭಾವ
ಅ. ಸುರಭಿಯ ಕನಸಿನಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧-೨ ಬಾರಿ ಬಂದಿದ್ದರು. ಈ ಬಗ್ಗೆ ಅವಳು ನಮಗೆ ಅತ್ಯಂತ ಆನಂದದಿಂದ ಹೇಳಿದಳು.
ಆ. ಅವಳು ಆಟವಾಡುವಾಗ ‘ಗುರುದೇವರೊಂದಿಗೆ ಅವಳ ಅನುಸಂಧಾನವಿರುತ್ತದೆ’, ಇದು ಅವಳ ಮಾತುಗಳಿಂದ ಗಮನಕ್ಕೆ ಬರುತ್ತದೆ. ಅವಳಿಗೆ ದೇವರ ಬಗ್ಗೆ ಅಥವಾ ಗುರುದೇವರ ಬಗ್ಗೆ ಏನು ಹೇಳಿದರೂ ಅವಳ ಕಣ್ಣುಗಳಿಂದ ಭಾವಾಶ್ರು ಸುರಿಯುತ್ತವೆ.
೫. ಕು. ಸುರಭಿಯ ಸ್ವಭಾವದೋಷಗಳು
‘ಸಿಟ್ಟು ಬರುವುದು’ ಮತ್ತು ‘ತನಗೆ ಮಹತ್ವ ಸಿಗಬೇಕು’, ಎಂದು ಅನಿಸುವುದು.’
– ಸೌ. ಪ್ರಭಾ ಕಾಮತ (ಕು. ಸುರಭಿಯ ಅಜ್ಜಿ (ತಂದೆಯ ತಾಯಿ), ಆಧ್ಯಾತ್ಮಿಕ ಮಟ್ಟ ಶೇ. ೬೯, ವಯಸ್ಸು ೬೯ ವರ್ಷ), ಶಿವಮೊಗ್ಗ. (೨೮.೫.೨೦೨೪)