ನಿಯಮಿತ ವ್ಯಾಯಮ, ಯೋಗಾಸನ ಹಾಗೂ ಪ್ರಾಣಾಯಾಮ ಮಾಡಿದರೆ ರೋಗ ನಿರೋಧಕ ಕ್ಷಮತೆ ಹೆಚ್ಚಾಗುತ್ತದೆ ! – ಡಾ. ಭೂಪೇಶ ಶರ್ಮಾ, ವೈದ್ಯಕೀಯ ತಜ್ಞ, ಹರಿಯಾಣ

ಕೊರೊನಾ ಸೋಂಕು ರೋಗದಲ್ಲಿ ಆಯುರ್ವೇದದಲ್ಲಿನ ಅಂಶಗಳನ್ನು ನಮ್ಮ ದಿನಚರ್ಯದಲ್ಲಿ ಯೋಗ್ಯ ರೀತಿಯಲ್ಲಿ ಉಪಯೋಗಿಸಿದರೆ ಶಾರೀರಿಕ ಹಾಗೂ ಮಾನಸಿಕ ಬಲ ಸಿಗುತ್ತದೆ. ನಿಯಮಿತ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಮತ್ತು ಜೀರ್ಣಶಕ್ತಿ ಹೆಚ್ಚಿಸುವ ಪ್ರಯತ್ನವನ್ನು ಮಾಡಿದರೆ ಶ್ವಾಸಕೋಶಗಳ (ಲಂಗ್ಸ) ಕಾರ್ಯಕ್ಷಮತೆ ಹಾಗೂ ಮನುಷ್ಯನ ರೋಗನಿರೋಧಕ ಕ್ಷಮತೆ ಹೆಚ್ಚಾಗಲು ಸಹಾಯವಾಗುತ್ತದೆ. ಕೊರೊನಾದಿಂದ ಆಗುವ ಪ್ರಾಣಘಾತಕ ಪರಿಸ್ಥಿತಿಯನ್ನು ಬದಲಾಯಿಸಲು ಆಹಾರದೊಂದಿಗೆ ಶರೀರದಲ್ಲಿ ಹೋಗುವ ವಿಷಯುಕ್ತ ಪದಾರ್ಥಗಳನ್ನು ತಡೆಯಬೇಕು. ಸ್ನಾನದ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಬೇಕು (ಅಭ್ಯಂಗ) ಇದರಿಂದ ಶ್ವಾಸಕೋಶಗಳಲ್ಲಿನ ದೌರ್ಬಲ್ಯ ಕಡಿಮೆಯಾಗಲು ಸಹಾಯವಾಗುತ್ತದೆ ಹಾಗೆಯೇ ಊಟದಲ್ಲಿ ನಿಯಮಿತ ಶುದ್ಧ ತುಪ್ಪ ಹಾಗೂ ಎಣ್ಣೆಯನ್ನು ಸೇವಿಸಬೇಕು ಇದರಿಂದ ವಾಯುತತ್ತ್ವ ಸಮತೋಲನದಲ್ಲಿದ್ದು ಶರೀರದಲ್ಲಿನ ಆಕ್ಸಿಜನ್‌ನ ಮಟ್ಟವು ಸಮತೋಲನವಾಗಿರುತ್ತದೆ.