ಯೋಗಾಭ್ಯಾಸ ಇಸ್ಲಾಂ ವಿರುದ್ಧ ಅಲ್ಲ ! – ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈ

ಸೌದಿ ಅರೇಬಿಯಾದ ಮೊದಲ ಯೋಗ ಶಿಕ್ಷಕಿ ಹಾಗೂ ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈಯವರ ಹೇಳಿಕೆ !

ರಿಯಾಧ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದ ಜನರಿಗೆ, ಯೋಗಾಭ್ಯಾಸ ಇಸ್ಲಾಂಗೆ ವಿರುದ್ಧವಲ್ಲ ಎಂದು ತಿಳಿದುಕೊಳ್ಳುವ ಆವಶ್ಯಕತೆ ಇದೆ. ಸೌದಿ ಅರೇಬಿಯಾದಲ್ಲಿ ಯೋಗಕ್ಕೆ ವಿರೋಧವಿರಲಿಲ್ಲ, ಬದಲಾಗಿ ಹೊರಗಿನ ಕೆಲವು ಪ್ರತಿರೋಧವನ್ನು ಎದುರಿಸಬೇಕಾಯಿತು. ನಮ್ಮ ಜೀವನವನ್ನು ಸುಧಾರಿಸಲು ಯಾವುದೇ ತತ್ವಜ್ಞಾನವನ್ನು ಅಭ್ಯಾಸ ಮಾಡುವುದು ಮತ್ತು ಕಲಿಯುವುದರಲ್ಲಿ ತಪ್ಪೇನೂ ಇಲ್ಲ. ಅಂದರೆ ವೈದಿಕ ತತ್ವಜ್ಞಾನ ಮತ್ತು ಯೋಗ ಇದು ವೇದಗಳ ಹಿನ್ನೆಲೆಯಿಂದ ಬಂದಿವೆ. ಇದು ನಿಜವಾಗಿಯೂ ಪ್ರಾಚೀನ ಮತ್ತು ಮಾನವೀಯತೆಗೆ ಲಾಭದಾಯಕವಾಗಿದೆಯೆಂದು ಸೌದಿ ಅರೇಬಿಯಾದ ಮೊದಲ ಪ್ರಮಾಣೀಕೃತ ಯೋಗ ಶಿಕ್ಷಕಿ ಮತ್ತು ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಮೊದಲ ಅರಬ ಮಹಿಳೆ ನೋಫ ಮಾರವೈ ಹೇಳಿದರು.

ಮಾರವೈ ಮಾತು ಮುಂದುವರೆಸಿ,

1. ಡಾಕ್ಟರರು ನನ್ನ ತಂದೆ-ತಾಯಿಯವರಿಗೆ ಅನಾರೋಗ್ಯದ ಕಾರಣದಿಂದ ನಿಮ್ಮ ಮಗಳು ಬದುಕುವುದಿಲ್ಲ ಎಂದು ಹೇಳಿದಾಗ, ನಾನು ರಿಯಾಧನಲ್ಲಿ ಮನೆಯಲ್ಲಿದ್ದು ಯೋಗ ಕಲಿತೆ ಮತ್ತು ಅದರಿಂದ ನನ್ನ ಜೀವನ ನಿಜವಾಗಿಯೂ ಬದಲಾಯಿತು.

2. ಸೌದಿ ಅರೇಬಿಯಾದ ಜನರು ಏಳು ವರ್ಷಗಳ ಹಿಂದೆ ಯಾವುದೇ ಹಿಂಜರಿಕೆಯಿಲ್ಲದೆ ಯೋಗವನ್ನು ಸ್ವೀಕರಿಸಿದ್ದರು. ಈಗ ಈ ಪ್ರಾಚೀನ ಭಾರತೀಯ ವ್ಯವಸ್ಥೆಯು ದೇಶದಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಅದರಲ್ಲಿ ಮಹಿಳೆಯರ ಪ್ರಾಬಲ್ಯವಿದೆ.

3. ಇಂದು ಸೌದಿ ಅರೇಬಿಯಾದ ಮಹಿಳೆಯರು ಯೋಗಾಭ್ಯಾಸ ಮಾಡುತ್ತಾರೆ. ಈ ಜನೇವರಿಯಲ್ಲಿ ಮಕ್ಕಾದಲ್ಲಿ ಅಲ್-ವಾಹದಾ ಕ್ಲಬ ಮತ್ತು ಸೌದಿ ಯೋಗ ಸಮಿತಿಯು ಆಯೋಜಿಸಿದ್ದ ಎರಡನೇ ಸೌದಿ ಓಪನ್ ಯೋಗ ಸ್ಪರ್ಧೆಯಲ್ಲಿ 56 ಹುಡುಗಿಯರು ಮತ್ತು 10 ಹುಡುಗರು ಭಾಗವಹಿಸಿದ್ದರು.

4. ಸೌದಿ ಜನರಿಗೆ ತಮ್ಮ ಧರ್ಮ ತಿಳಿದಿದೆ. ಅವರು ವಿಭಿನ್ನ ಸಂಸ್ಕೃತಿಗಳ ಬಗ್ಗೆ ಕಲಿಯಲು ಮತ್ತು ವಿವಾದಾತ್ಮಕವಲ್ಲದ ವಿಷಯಗಳನ್ನು ಅವಲಂಬಿಸಲು ಅವರು ಹಿಂದೆ ಮುಂದೆ ನೋಡುವುದಿಲ್ಲ. ಆರೋಗ್ಯಕ್ಕೆ ಒಳ್ಳೆಯದಾಗಿರುವ ಯಾವುದೇ ವಿಷಯವನ್ನು ಸ್ವೀಕರಿಸಲು ಅವರಿಗೆ ಆಸಕ್ತಿ ಇದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸೌದಿ ನಾಗರಿಕರು ಸೇರಿದಂತೆ 10 ಸಾವಿರ ಜನರು ಭಾಗವಹಿಸಿದ್ದರು.

ಮಾರವೈ ಪರಿಚಯ

ಮಾರವೈಯವರಿಗೆ 17 ನೇ ವಯಸ್ಸಿನಲ್ಲಿ ‘ಮ್ಲುಪಸ ಎರಿಥೆಮಾಟೋಸಸ್’ ಈ ಸ್ವಯಂ ನಿರೋಧಕ ಕಾಯಿಲೆ ಕಂಡು ಬಂದಿತು ಮತ್ತು ಇಲ್ಲಿಂದಲೇ ಅವರ ಯೋಗ ಪ್ರವಾಸ ಪ್ರಾರಂಭವಾಯಿತು. ಅವರು ರಿಯಾಧನಲ್ಲಿ ಮನೆಯಲ್ಲಿದ್ದು ಯೋಗವನ್ನು ಕಲಿತರು. ನಂತರ ಅವರು ಯೋಗವನ್ನು ಕಲಿಯಲು ಭಾರತಕ್ಕೆ ಬರಲು ನಿರ್ಣಯಿಸಿದರು ಮತ್ತು 2008 ರಲ್ಲಿ ಅವರು ಯೋಗ ಮತ್ತು ಆಯುರ್ವೇದದ ಅಭ್ಯಾಸ ಮಾಡಲು ಭಾರತಕ್ಕೆ ಬಂದರು. ಮಾರವೈಯವರು ಸ್ವತಃ ಸೌದಿ ಅರೇಬಿಯಾದಲ್ಲಿ 2017ರಲ್ಲಿ ಯೋಗಾಸನವನ್ನು ಕಲಿಸಲು ಪ್ರಾರಂಭಿಸಿದರು. 2018ರಲ್ಲಿ ಭಾರತ ಸರಕಾರವು ಅವರಿಗೆ `ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2021 ರಲ್ಲಿ ಸ್ಥಾಪಿಸಲಾದ ಸೌದಿ ಯೋಗ ಸಮಿತಿಯ ಮುಖ್ಯಸ್ಥರಾಗಿದ್ದು, ಅವರು ‘ಅರಬ್ ಯೋಗ ಫೌಂಡೇಶನ್’ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ.

 

ಸಂಪಾದಕೀಯ ನಿಲುವು

ಭಾರತದಲ್ಲಿ ಯೋಗಾಭ್ಯಾಸವನ್ನು ವಿರೋಧಿಸುತ್ತಿರುವ ಮತಾಂಧ ಮುಸ್ಲಿಮರಿಗೆ ತಪರಾಕಿ ! ಈ ಬಗ್ಗೆ ಅವರು ಏನಾದರೂ ಹೇಳುವರೆ ?