ಪ್ರತಿವರ್ಷ ಕೊರೊನಾದ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಬಹುದು! – ಅಮೇರಿಕಾದ ಶ್ವೇತಭವನದ ಮುಖ್ಯ ಸಲಹಾಗಾರ ಡಾ. ಫೌಚಿ

ಡಾ. ಫೌಚಿ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಶ್ವೇತಭವನದ ಮುಖ್ಯ ಸಲಹಾಗಾರ ಡಾ. ಫೌಚಿ ಇವರು ‘ಕೊರೊನಾ ವಿಷಾಣುವಿನ ಪ್ರಾಬಲ್ಯವು ಹೆಚ್ಚಾಗುತ್ತಾ ಹೋಗುತ್ತಿದೆ. ಹಾಗಾಗಿ ಅನಿಶ್ಚಿತ ಕಾಲದವರೆಗೆ ಪ್ರತಿವರ್ಷ ಕೊರೊನಾದ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಬಹುದು’ ಎಂದು ಹೇಳಿದ್ದಾರೆ. ‘ಜನರು ನಿಯಮಿತವಾಗಿ ವರ್ಷದಲ್ಲಿ ಒಂದು ಬಾರಿ ಹೇಗೆ ಫ್ಲೂಗೆ ಚುಚ್ಚುಮದ್ದನ್ನು ನೀಡಲಾಗುತ್ತಿತ್ತೋ ಹಾಗೆ ಕೊರೊನಾದ ಚುಚ್ಚುಮದ್ದು ಸಹ ನೀಡಬೇಕಾಗಬಹುದು’, ಎಂದು ಫೌಚಿಯವರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಕೊರೊನಾ ವಿರೋಧಿ ಚುಚ್ಚುಮದ್ದನ್ನ ಎರಡು ಬಾರಿ ತೆಗೆದುಕೊಂಡಿರುವ ಜನರಿಗೆ ‘ಬೂಸ್ಟರ್’ ಡೋಸ ಕೊಡುವ ಅವಶ್ಯಕತೆ ಇದೆಯಾ ಎಂದು ಕೇಳಿದಾಗ ಡಾ. ಫೌಚಿಯವರು, ನನಗೆ ಇದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ. ಸಂಶೋಧನೆ ಮುಂದುವರಿಸುವುದು ಇದು ಒಂದೇ ಪರ್ಯಾಯವಾಗಿದೆ. ಆದರೂ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವ ನಾಗರಿಕರಿಗೆ ಈ ಬೂಸ್ಟರ್ ಡೋಸ್ ನೀಡಲಾಗುವುದು. ಸದ್ಯಕ್ಕೆ ಬೂಸ್ಟರ್ ಡೋಸ್ ಕೊಡುವ ಅವಶ್ಯಕತೆ ನಮಗೆ ಕಾಣುತ್ತಿಲ್ಲ ಎಂದು ಹೇಳಿದರು.