ಸಾಧನೆಯನ್ನು ಮಾಡುವ ಕುಟುಂಬಗಳಲ್ಲಿಯೇ ಸಾಧಕರಂತೆ ನಿಜವಾದ ಕುಟುಂಬಭಾವನೆಯು ನಿರ್ಮಾಣವಾಗುವುದು !

ಪರಾತ್ಪರ ಗುರು ಡಾ. ಆಠವಲೆ

‘ಅವಿಭಕ್ತ-ಕುಟುಂಬ ಪದ್ಧತಿಯಲ್ಲಿ ವ್ಯಕ್ತಿಯು ಸಾತ್ತ್ವಿಕನಾಗಿದ್ದರೆ, ಮಾತ್ರ ಒಟ್ಟಿಗೆ ಇರುವುದರಿಂದ ಅವರಿಗೆ ಆಶ್ರಮದಲ್ಲಿದ್ದಂತೆ ಸಮಷ್ಟಿಯ ಲಾಭವಾಗುತ್ತದೆ; ಆದರೆ ಈಗಿನ ಕಾಲದಲ್ಲಿ ಇಂತಹ ಕುಟುಂಬ ನೋಡಲು ಸಿಗುವುದು ಅಪರೂಪವಾಗಿದೆ. ತಾಯಿ, ತಂದೆ, ಮಗ, ಸೊಸೆ ಹೀಗೆ ನಾಲ್ಕು ವ್ಯಕ್ತಿಗಳ ಚಿಕ್ಕ ಕುಟುಂಬವಿದ್ದರೂ, ನಾಲ್ಕು ಜನರ ನಾಲ್ಕು ಅಭಿಪ್ರಾಯಗಳಿರುತ್ತವೆ. ಎಲ್ಲರೂ ಸಾಧನೆಯನ್ನು ಮಾಡತೊಡಗಿದರೆ ಅವರಲ್ಲಿ ಆಶ್ರಮದಲ್ಲಿನ ಸಾಧಕರಂತೆ ನಿಜವಾದ ಕುಟುಂಬಭಾವನೆಯು ನಿರ್ಮಾಣವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ.