ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ 

ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ಉಪಾಯವನ್ನು ಹುಡುಕುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

ಸಂಚಿಕೆ ೨೬/೨ ರಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ‘ಸಮಷ್ಟಿ ಸೇವೆಯನ್ನು ಮಾಡುತ್ತಿರುವ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಯಿಂದ ಬಂದ ಅಡಚಣೆಗಳನ್ನು ದೂರಗೊಳಿಸುವುದು’, ಬೇರೆ ಬೇರೆ ದೇಶಗಳಿಗೆ ಅಥವಾ ಪ್ರದೇಶಗಳಿಗೆ ಹೋಗಿ ಅಧ್ಯಾತ್ಮ ಪ್ರಸಾರ ಮಾಡುವ ಪ್ರಸಾರ ಸೇವಕರ ಅಡಚಣೆಗಳನ್ನು ದೂರಗೊಳಿಸುವುದು, ‘ಇಂಟರ್‌ನೆಟ್‌’(ಅಂತರ್ಜಾಲ) ಮೂಲಕ ಅಧ್ಯಾತ್ಮಪ್ರಸಾರ ಮಾಡಲು ಬರುವ ಅಡಚಣೆಗಳನ್ನು ದೂರ ಮಾಡುವುದು, ಆಶ್ರಮದ ಭೂಮಿಯಲ್ಲಿ ಬಾವಿ ಅಥವಾ ಕೊಳವೆಬಾವಿ ನಿರ್ಮಿಸಲು ಯೋಗ್ಯ ಸ್ಥಾನವನ್ನು ಹುಡುಕುವುದು ಇವುಗಳ ಬಗೆಗಿನ ಅಂಶಗಳನ್ನು ಓದಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.                                       (ಭಾಗ ೩)

ಕಲ್ಪನಾತೀತ ಹಾಗೂ ಅಪ್ರತಿಮ ಲೇಖನವನ್ನು ಬರೆಯುವ ಸದ್ಗುರು ಡಾ. ಮುಕುಲ ಗಾಡಗೀಳ 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸದ್ಗುರು ಡಾ. ಮುಕುಲ ಗಾಡಗೀಳರ ಈ ಲೇಖನವನ್ನು ಓದಿ ನಾನು ಆಶ್ಚರ್ಯಚಕಿತನಾದೆ ! ಇದರಲ್ಲಿರುವ ಜ್ಞಾನ ಜಗತ್ತಿನಲ್ಲಿ ಯಾರಲ್ಲಿಯೂ ಇರಲಿಕ್ಕಿಲ್ಲ ! ಭಾರತೀಯ ಸಂಗೀತದಲ್ಲಿನ ದೊಡ್ಡ ದೊಡ್ಡ ಸಂಗೀತತಜ್ಞರಿಗೂ ಈ ಲೇಖನವನ್ನು ಓದಿ ಆಶ್ಚರ್ಯವೆನಿಸಬಹುದು ! ‘ಸದ್ಗುರು ಡಾ. ಮುಕುಲ ಗಾಡಗೀಳರು ಈ ಜ್ಞಾನವನ್ನು ಜಗತ್ತಿನಾದ್ಯಂತದ ಜಿಜ್ಞಾಸು ಸಾಧಕರಿಗೆ ಕಲಿಸಿ ಉಪಾಯ ಮಾಡಲು ಅವರಂತಹ ಅನೇಕ ಜನರನ್ನು ತಯಾರಿಸಬೇಕು. ಅದರಿಂದ ಜಗತ್ತಿನಾದ್ಯಂತ ಸಂಗೀತದಿಂದ ಗುಣಮುಖರಾಗುವ ಸಾಧಕರಿಗೆ ಉಪಾಯ ಉಪಲಬ್ಧವಾಗಬಹುದು’, ಎಂದು ನಾನು ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ

೧೦. ಸಾಧಕರಿಗೆ ತಮ್ಮ ವಾಸ್ತು ಅಥವಾ ಭೂಮಿಯನ್ನು ಮಾರಾಟ ಮಾಡುವಾಗ ಅಥವಾ ಹೊಸತಾಗಿ ಖರೀದಿಸುವಾಗ ಆಧ್ಯಾತ್ಮಿಕ ಸ್ತರದ ಉಪಾಯವನ್ನು ನೀಡಿ ಸಹಾಯ ಮಾಡುವುದು

ಸಾಧಕರ ಸಾಧನೆ ಚೆನ್ನಾಗಿ ಆಗಬೇಕೆನ್ನುವ ದೃಷ್ಟಿಯಿಂದ ಅವರು ವಾಸಿಸುವ ವಾಸ್ತುವನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕಾಗುತ್ತದೆ. ಇದರಲ್ಲಿ ಕೆಟ್ಟ ಶಕ್ತಿಗಳು ಅಡಚಣೆಯನ್ನುಂಟು ಮಾಡಿ ಆ ವಾಸ್ತುವನ್ನು  (ಅಥವಾ ಭೂಮಿಯನ್ನು) ಮಾರಾಟ ಮಾಡಲು ಬಿಡುವುದಿಲ್ಲ. ಇದಕ್ಕೆ ಉಪಾಯವೆಂದು ನಾನು ಮುದ್ರೆ, ನ್ಯಾಸ, ನಾಮಜಪ ಮತ್ತು ಉಪಾಯಗಳ ಅವಧಿಯನ್ನು ಹೇಳುತ್ತೇನೆ, ಅದೇ ರೀತಿ ಮಂಡಲದಲ್ಲಿಯೂ ಇದನ್ನು ಬರೆಯಲು ಹೇಳುತ್ತೇನೆ. ಸಾಧಕರಿಗೆ ಈ ಉಪಾಯಗಳಿಂದ ಲಾಭವಾಗುತ್ತಿರುವುದು ಕಂಡುಬರುತ್ತಿದೆ.

೧೧. ಸೂಕ್ಷ್ಮ ಪರೀಕ್ಷಣೆ ಮಾಡುವುದು

೧೧ ಅ. ನಾಮಜಪಗಳ ಪ್ರಯೋಗ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ದೇವತೆಗಳ ನಾಮಜಪಗಳನ್ನು ಧ್ವನಿಮುದ್ರಿಸಲಾಗಿದೆ. ಅವುಗಳಲ್ಲಿನ ಯಾವುದಾದರೂ ನಾಮಜಪದ ಪ್ರಯೋಗ ಮಾಡುವಾಗ ‘ಆ ನಾಮಜಪವನ್ನು ೨೦ ನಿಮಿಷ ಕೇಳಿ ಯಾವ ಅನುಭೂತಿ ಬರುತ್ತದೆ ?’, ಎಂಬುದನ್ನು ಉಪಸ್ಥಿತರಿಗೆ ಬರೆದುಕೊಡಲು ಹೇಳುತ್ತೇನೆ. ಈ ಪರೀಕ್ಷಣೆಯಲ್ಲಿ ನನಗೆ ಈ ಮುಂದಿನ ವಿಷಯ ಅರಿವಾಗುತ್ತದೆ.

೧. ಚಂದ್ರನಾಡಿ, ಸೂರ್ಯನಾಡಿ ಮತ್ತು ಸುಷುಮ್ನಾನಾಡಿಗಳಲ್ಲಿ ಯಾವ ನಾಡಿ ನಾಮಜಪದಿಂದ ಕಾರ್ಯನಿರತವಾಗುತ್ತದೆ.

೨. ಶರೀರದ ಯಾವ ಚಕ್ರದ ಮೇಲೆ ನಾಮಜಪದ ಸ್ಪಂದನಗಳು ಅರಿವಾಗುತ್ತವೆ

೩. ತಾರಕ ಮತ್ತು ಮಾರಕಗಳಲ್ಲಿ ಯಾವ ಶಕ್ತಿ ಅರಿವಾಗುತ್ತದೆ

೪. ಸಗುಣ ಹಾಗೂ ನಿರ್ಗುಣ ಇವುಗಳಲ್ಲಿ ದೇವತೆಯ ಯಾವ ಸ್ವರೂಪ ಅರಿವಾಗುತ್ತದೆ

೫. ಶರೀರದಲ್ಲಿ ಯಾವ ರೀತಿಯ ಪರಿಣಾಮದ ಅರಿವಾಗುತ್ತದೆ

ಈ ರೀತಿ ನಾಮಜಪದ ವಿಷಯದಲ್ಲಿ ಸಂಶೋಧನೆ ಮಾಡಬಹುದು.

೧೧ ಆ. ಯಜ್ಞದ ಪರಿಣಾಮವನ್ನು ತಿಳಿದುಕೊಳ್ಳುವುದು : ರಾಮನಾಥಿ ಆಶ್ರಮದಲ್ಲಿ ಇಂದಿನ ವರೆಗೆ ೪೦೦ ಕ್ಕಿಂತಲೂ ಹೆಚ್ಚು ಯಜ್ಞಗಳಾಗಿವೆ. ಈ ಯಜ್ಞಗಳು ವಿವಿಧ ಫಲಪ್ರಾಪ್ತಿಗಾಗಿ ಹಾಗೂ ಆ ಫಲಪ್ರಾಪ್ತಿಗನುಸಾರ ವಿವಿಧ ದೇವತೆಗಳಿಗೆ ಸಂಬಂಧಿಸಿದ್ದವು. ನನಗೆ ಪ್ರತಿಯೊಂದು ಯಜ್ಞದಿಂದ ಒಂದಲ್ಲ ಒಂದು ವಿಷಯ ಕಲಿಯಲು ಸಿಕ್ಕಿತು.

೧. ಯಜ್ಞದ ಅವಧಿಯಲ್ಲಿ ಆಹುತಿಯ ಆರಂಭದಿಂದ ಅದು ಪೂರ್ಣಾಹುತಿಯ ವರೆಗೆ ಶಕ್ತಿ, ಭಾವ, ಚೈತನ್ಯ, ಆನಂದ ಹಾಗೂ ಶಾಂತಿ ಇವುಗಳಲ್ಲಿ ಬೇರೆ ಬೇರೆ ಸ್ಪಂದನಗಳು ಅನುಭವಿಸಲು ಸಿಗುತ್ತವೆ ಮತ್ತು ಅವುಗಳ ಕಾರ್ಯಕಾರಣಭಾವವೂ ತಿಳಿಯುತ್ತದೆ. ಸ್ಪಂದನಗಳ ಪ್ರಯಾಣ ಶಕ್ತಿಯಿಂದ ಶಾಂತಿ, ಹೀಗಿರುತ್ತದೆ.

೨. ಯಜ್ಞದಲ್ಲಿ ಕೆಲವೊಮ್ಮೆ ಆಕರ್ಷಣ ಶಕ್ತಿಯ ಅರಿವಾಗುತ್ತದೆ, ಮತ್ತು ಕೆಲವೊಮ್ಮೆ ಪ್ರಕ್ಷೇಪಣ ಶಕ್ತಿ, ಕೆಲವೊಮ್ಮೆ ತಾರಕ ಶಕ್ತಿ ಮತ್ತು ಕೆಲವೊಮ್ಮೆ ಮಾರಕ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಅರಿವಾಗುತ್ತದೆ. ಯಜ್ಞದ ಉದ್ದೇಶಕ್ಕನುಸಾರ ಅದು ಬದಲಾಗುತ್ತದೆ.

೩. ಯಜ್ಞದಿಂದ ಕೆಲವೊಮ್ಮೆ ಜೀವದ ದೇಹದ, ಕೆಲವೊಮ್ಮೆ ಜೀವದ ಸುತ್ತಲಿನ ವಾತಾವರಣದ ಮತ್ತು ಕೆಲವೊಮ್ಮೆ ಎರಡೂ ಶುದ್ಧಿಯಾಗುತ್ತವೆ.

೪. ಯಜ್ಞದಿಂದ ವಿವಿಧ ಪರಿಣಾಮವಾಗುತ್ತಿದೆ ಎಂದರಿವಾಯಿತು, ಉದಾ. ಯಜ್ಞವು ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪೂರಕವಾಗಿರುವುದು, ಕೆಲವೊಮ್ಮೆ ಅದು ಸಾಧನೆಗೆ ವೇಗ ನೀಡುವಂತಹದ್ದಾಗಿರುವುದು, ಕೆಲವೊಮ್ಮೆ ಸಾಧಕರ ಅನಿಷ್ಟ ಶಕ್ತಿಗಳ ತೊಂದರೆ ದೂರ ಮಾಡುವಂತಹದ್ದಾಗಿರುತ್ತದೆ ಕೆಲವೊಮ್ಮೆ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳ ನಿರ್ಮೂಲನೆ ಮಾಡುವಂತಹದ್ದಾಗಿರುತ್ತದೆ ಇತ್ಯಾದಿ.

೫. ಯಜ್ಞದಲ್ಲಿನ ಜ್ವಾಲೆಯ ಬಣ್ಣ ಕೆಲವೊಮ್ಮೆ ಹಳದಿ, ಕೆಲವೊಮ್ಮೆ ಬಂಗಾರದ ಬಣ್ಣ ಅಥವಾ ಕೆಂಪಾಗಿರುತ್ತದೆ. ಯಜ್ಞದ ಜ್ವಾಲೆಯ ಬಣ್ಣ ಯಜ್ಞದ ಉದ್ದೇಶ ಮತ್ತು ಯಜ್ಞದಿಂದ ಪ್ರಕ್ಷೇಪಣೆಯಾಗುವ ತಾರಕ ಅಥವಾ ಮಾರಕ ಶಕ್ತಿಯನ್ನು ಅವಲಂಬಿಸಿರುತ್ತದೆ.

೬. ಕೆಲವೊಮ್ಮೆ ಯಜ್ಞದ ಮೇಲಾಗುವ ಅನಿಷ್ಟ ಶಕ್ತಿಗಳ ಆಕ್ರಮಣವನ್ನು ದೂರ ಮಾಡಲು ನಾಮಜಪಾದಿ ಉಪಾಯವನ್ನೂ ಮಾಡಬೇಕಾಗುತ್ತದೆ. ಅನಿಷ್ಟ ಶಕ್ತಿಗಳು ಕೆಲವೊಮ್ಮೆ ಪಾತಾಳದಿಂದ, ಕೆಲವೊಮ್ಮೆ ಮೇಲಿನಿಂದ, ಇನ್ನು ಕೆಲವೊಮ್ಮೆ ಯಾವುದಾದರೂ ದಿಕ್ಕಿನಿಂದ ಆಕ್ರಮಣ ಮಾಡುತ್ತವೆ.

೧೧ ಇ. ಸಂಗೀತದ ಪ್ರಯೋಗಗಳ ಸಮಯದಲ್ಲಿ ಸೂಕ್ಷ್ಮ ಪರೀಕ್ಷಣೆ ಮಾಡುವುದು : ಸಂಗೀತದ ಪ್ರಯೋಗಗಳಲ್ಲಿ ಗಾಯನ, ವಾದನ ಮತ್ತು ನೃತ್ಯದ ಪ್ರಯೋಗವನ್ನು ಮಾಡಲಾಗುತ್ತದೆ. ‘ಆಧ್ಯಾತ್ಮಿಕ ಸ್ತರದಲ್ಲಿ ಈ ಕಲೆಗಳಿಂದ ಹೇಗೆ ಪರಿಣಾಮವಾಗುತ್ತದೆ ?’, ಎಂಬುದರ ಅಭ್ಯಾಸ ಮಾಡಲು ಈ ಪ್ರಯೋಗ ಮಾಡಲಾಗುತ್ತದೆ. ಆಗ ನನ್ನಿಂದ ಈ ಮುಂದಿನ ದೃಷ್ಟಿಯಲ್ಲಿ ಪರೀಕ್ಷಣೆ ಆಯಿತು.

೧. ಸಂಗೀತದಲ್ಲಿನ ವಿಶಿಷ್ಟ ರಾಗಗಳ ಮೂಲಕ ವಿಶಿಷ್ಟ ದೇವತೆಗಳ ತತ್ತ್ವ ನಮಗೆ ಸಿಗುತ್ತದೆ, ಎಂಬುದು ಅರಿವಾಯಿತು.

೨. ಪ್ರತಿಯೊಂದು ರಾಗ ಇದು ವಿಶಿಷ್ಟ ಕುಂಡಲಿನಿಚಕ್ರದ ಮೇಲೆ ಪರಿಣಾಮ ಬೀರುತ್ತದೆ, ಎಂಬುದೂ ತಿಳಿಯಿತು.

೩. ಪ್ರತಿಯೊಂದು ರಾಗದಲ್ಲಿ ತಾರಕ ಮತ್ತು ಮಾರಕ ಶಕ್ತಿ ವಿಶಿಷ್ಟ ಪ್ರಮಾಣದಲ್ಲಿ ಇರುತ್ತವೆ. ಅದಕ್ಕನುಸಾರ ಆ ರಾಗ ತಾರಕಪ್ರಧಾನ ಅಥವಾ ಮಾರಕಪ್ರಧಾನ ಶಕ್ತಿಯದ್ದಾಗಿರುತ್ತದೆ.

೪. ಪ್ರತಿಯೊಂದು ರಾಗದಲ್ಲಿ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಈ ಸ್ಪಂದನಗಳು ವಿಶಿಷ್ಟ ಪ್ರಮಾಣದಲ್ಲಿರುತ್ತವೆ.

೫. ರಾಗದಲ್ಲಿನ ತಾರಕ ಅಥವಾ ಮಾರಕ ಶಕ್ತಿಯ ಪ್ರಾಧಾನ್ಯತೆಗನುಸಾರ ಹಾಗೂ ರಾಗದಿಂದ ಪ್ರಕ್ಷೇಪಣೆಯಾಗುವ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಇವುಗಳಲ್ಲಿ ಯಾವುದಾದರೊಂದು ಪ್ರಧಾನ ಸ್ಪಂದನಗಳಿಗನುಸಾರ ಆ ರಾಗ ದಿನದ ೪ ಪ್ರಹರ ಮತ್ತು ರಾತ್ರಿಯ ೪ ಪ್ರಹರ ಇವುಗಳಲ್ಲಿ ಯಾವ ಪ್ರಹರದಲ್ಲಿ ಹಾಡುವುದು ಯೋಗ್ಯವಾಗಿದೆ, ಎಂಬುದು ನಿರ್ಧರಿಸಲ್ಪಟ್ಟಿರುತ್ತದೆ, ಇದು ಸಹ ಶೋಧವಾಯಿತು.

೬. ಸಂಗೀತದಲ್ಲಿನ ಯಾವುದಾದರೂ ರಾಗ ಯಾವುದಾದರೊಂದು ಶಾರೀರಿಕ ಅಥವಾ ಮಾನಸಿಕ ಅನಾರೋಗ್ಯವನ್ನು ಗುಣಪಡಿಸಲು ಉಪಯೋಗವಾಗುತ್ತದೆ. ಆ ರಾಗದ ಮೂಲಕ ಆ ಅನಾರೋಗ್ಯ ದೂರವಾಗುವಾಗ ಎಂತಹ ಪ್ರಕ್ರಿಯೆ ನಡೆಯುತ್ತದೆ, ಎಂಬುದು ಸೂಕ್ಷ್ಮ ಪರೀಕ್ಷಣೆಯ ಮೂಲಕ ತಿಳಿಯುತ್ತದೆ.

೭. ಭರತನಾಟ್ಯಮ್‌ನಲ್ಲಿ ಬಳಸುವ ಉಡುಗೆಯನ್ನು ಧರಿಸಿ ಮಾಡಿದ ಭರತನಾಟ್ಯಮ್‌ ಮತ್ತು ಸೀರೆ ಉಟ್ಟುಕೊಂಡು ಮಾಡುವ ಭರತನಾಟ್ಯಮ್‌ ಇವುಗಳಲ್ಲಿ ಆಗುವ ಪರಿಣಾಮವನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು.

೮. ಸಾತ್ತ್ವಿಕ ಹಾಗೂ ಲಯಬದ್ಧ ನೃತ್ಯದಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳ ಅಭ್ಯಾಸ ಮಾಡಲು ಸಾಧ್ಯವಾಯಿತು.

೯. ನೃತ್ಯದ ವಿವಿಧ ಮುದ್ರೆಯಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳ ಅಭ್ಯಾಸ ಮಾಡಲು ಸಾಧ್ಯವಾಯಿತು.

೧೦. ‘ಸಾಧನೆಯಲ್ಲಿ ಆಧ್ಯಾತ್ಮಿಕ ಮಟ್ಟದ ಸಂಗೀತ, ವಾದನ ಮತ್ತು ನೃತ್ಯ ಇವುಗಳಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳ ಮೇಲೆ ಹಾಗೂ ಅನಿಷ್ಟ ಶಕ್ತಿಗಳ ತೊಂದರೆಯಿರುವವರ ಮೇಲೆ ಹೇಗೆ ಪರಿಣಾಮವಾಗುತ್ತದೆ ?’, ಎಂಬುದನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು.

೧೧ ಈ. ಸಾತ್ತ್ವಿಕ ಹಾಗೂ ಅಸಾತ್ವಿಕ ವಸ್ತು, ನೀರು ಮತ್ತು ಪಕ್ಷಿಗಳ ಮೇಲೆ ಪ್ರಯೋಗ : ಈ ಪ್ರಯೋಗದಿಂದ ‘ಸಾತ್ತ್ವಿಕ ಹಾಗೂ ಅಸಾತ್ತ್ವಿಕ ಘಟಕಗಳನ್ನು ಹೇಗೆ ಗುರುತಿಸುವುದು ?’, ಎಂಬದು ಕಲಿಯಲು ಸಿಕ್ಕಿತು. ಅವುಗಳಿಂದ ನಮ್ಮ ಮೇಲೆ ಎಂತಹ ಪರಿಣಾಮವಾಗುತ್ತದೆ, ಯಾವ ಚಕ್ರದ ಮೇಲೆ ಆಗುತ್ತದೆ, ಅದು ಎಷ್ಟು ಸಮಯ ಉಳಿಯುತ್ತದೆ, ಅಸಾತ್ತ್ವಿಕ ಘಟಕಗಳ ಪರಿಣಾಮ ನಮ್ಮ ಮೇಲಾಗದಂತೆ ಯಾವ ನಾಮಜಪ, ಮುದ್ರೆ ಮತ್ತು ನ್ಯಾಸ ಮಾಡಬೇಕು ಇತ್ಯಾದಿ ಕಲಿಯಲು ಸಿಕ್ಕಿತು.

೧೧ ಉ. ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳನ್ನು ದೂರ ಮಾಡಲು ಆಧ್ಯಾತ್ಮಿಕ ಸ್ತರದ ಉಪಾಯ ಹೇಳುವುದು : ಯಾವುದಾದರೊಂದು ವಾಸ್ತುವಿನಲ್ಲಿ ನಿರ್ಮಾಣವಾಗಿರುವ ತೊಂದರೆದಾಯಕ ಸ್ಪಂದನಗಳು ಎಲ್ಲಿಂದ ಬರುತ್ತಿವೆ, ಅವು ವಾಸ್ತುವಿನ ಅಸಾತ್ತ್ವಿಕ ರಚನೆಯಿಂದಾಗಿ ಬರುತ್ತಿವೆಯೋ ಅಥವಾ ಅನಿಷ್ಟ ಶಕ್ತಿಗಳ ತೊಂದರೆಯಿಂದಾಗಿ ಬರುತ್ತಿವೆ, ಹಾಗೂ ಅವುಗಳನ್ನು ದೂರ ಮಾಡಲು ಏನು ಉಪಾಯ ಮಾಡಬೇಕು, ಎಂಬುದನ್ನು ಗುರುತಿಸಲು ನಾನು ಕಲಿತೆನು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಲೇ ನನಗೆ ಈ ಎಲ್ಲ ಸೇವೆಗಳನ್ನು ಮಾಡಲು ಸಾಧ್ಯವಾಗುತ್ತಿದೆ. ವಿಚಾರ, ಬುದ್ಧಿ, ಶಕ್ತಿ ಹೀಗೆ ಎಲ್ಲವನ್ನೂ ಅವರೆ ನೀಡುತ್ತಾರೆ ಹಾಗೂ ಅವರೆ ಆ ಸೇವೆಗಳನ್ನು ನನ್ನಿಂದ ಮಾಡಿಸಿಕೊಳ್ಳುತ್ತಾರೆ. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.’            (ಮುಗಿಯಿತು)

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌ಡಿ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೪.೨೦೨೪)