ಪಂಚಜ್ಞಾನೆಂದ್ರಿಯಗಳು ಮೂಗು (ವಾಸನೆಯನ್ನು), ನಾಲಿಗೆ (ರುಚಿ), ಕಣ್ಣು (ದೃಶ್ಯ), ತ್ವಚೆ (ಸ್ಪರ್ಶ) ಹಾಗೂ ಕಿವಿ (ಕೇಳುವ) ಅನುಭವವನ್ನು ಪಡೆಯುತ್ತದೆ. ಆದರೆ ಅದರಿಂದ ಸಿಗುವ ಸುಖ-ದುಃಖವು ಮನಸ್ಸಿಗೆ ಆಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ
ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದಿದ್ದರಿಂದ ಯಾವುದೇ ಸಾಧನಾಮಾರ್ಗದಲ್ಲಿ ಸಾಧನೆಯನ್ನು ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಆದರೆ ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಅದನ್ನು ಮೊದಲು ದೂರ ಮಾಡಬೇಕಾಗುತ್ತದೆ, ಅನಂತರವೇ ಸಾಧನೆ ಮಾಡಬಹುದು. – (ಪರಾತ್ಪರ ಗುರು) ಡಾ. ಆಠವಲೆ
ಸಾಧಕ ಹಾಗೂ ಸಾಧಕಿಯರಿಗೆ ತವರುಮನೆ-ಮಾವನಮನೆ ಇಲ್ಲದಿರುವುದು
ಸನಾತನದ ವಿವಾಹಿತ ಸಾಧಕ-ಸಾಧಕಿಯರು ಎಲ್ಲವನ್ನು ತ್ಯಾಗ ಮಾಡಿ ಸಾಧನೆಯನ್ನು ಮಾಡುತ್ತಿರುತ್ತಾರೆ. ಅದುದರಿಂದ ಅವರಿಗೆ ಸನ್ಮಾನ, ಅಧಿಕಾರ ಎಂದು ಏನು ಉಳಿಯುವುದಿಲ್ಲ. ಪೂರ್ಣವೇಳೆ ಅಧ್ಯಾತ್ಮಪ್ರಸಾರ ಮಾಡುವ ಮನೆಯವರಲ್ಲಿ ಸಾಧಕ-ಗಂಡ ಸೇವೆಗಾಗಿ ಹೋದರೂ ಸಾಧಕಿಯು ಮನೆಯ ಎಲ್ಲ ಕೆಲಸಗಳನ್ನು ಕರ್ತವ್ಯ ಭಾವನೆಯಿಂದ ಮಾಡುತ್ತಾಳೆ. ಅವಳಿಗೆ ಮಾವನಮನೆ-ತವರುಮನೆಯೆಂದು ಏನೂ ಉಳಿಯುವುದಿಲ್ಲ. ಅವರಿಗೆ ಪ್ರತಿಯೊಂದು ಕರ್ಮವನ್ನು ಮಾಡುವಾಗ ಸಾಧನೆ ಮಾಡುವುದು ಈ ಭಾಗವೊಂದೇ ಉಳಿಯುತ್ತದೆ. ಇದೇ ವಿಷಯವು ಪೂರ್ಣವೇಳೆಯ ಸಾಧಕರಿಗೂ ಅನ್ವಯಿಸುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ