ನಾಮಜಪ ಮತ್ತು ಸ್ವಭಾವದೋಷ ನಿರ್ಮೂಲನೆಗಳಿಂದ ಆನಂದಪ್ರಾಪ್ತಿಯಾಗುತ್ತದೆ !
‘ನಿರಂತರವಾಗಿ ಸರ್ವೋಚ್ಚ (ಯಾವುದನ್ನು ಆನಂದ ಹೇಳುತ್ತೇವೆ) ಸುಖವನ್ನು ಅನುಭವಿಸುವ ಸೆಳೆತವು ಮಾನವನ ಪ್ರತಿಯೊಂದು ಕೃತಿಯ ಹಿಂದಿನ ಪ್ರೇರಣೆಯಾಗಿರುತ್ತದೆ. ಹೀಗಿರುವಾಗಲೂ ಇಡೀ ಮನುಕುಲ ಯಾವುದಕ್ಕಾಗಿ ಹಾತೊರೆಯುತ್ತಿದೆಯೋ, ಆ ‘ಆನಂದಪ್ರಾಪ್ತಿ ವಿಷಯದ ಬಗ್ಗೆ ಇಂದಿನ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಯಾವುದೇ ರೀತಿಯ ಶಿಕ್ಷಣವನ್ನು ನೀಡುವುದಿಲ್ಲ. ನಾಮಜಪ ಮತ್ತು ಸ್ವಭಾವದೋಷ-ಅಹಂ ನಿರ್ಮೂಲನೆ ಈ ಅಂಶಗಳನ್ನು ಅಂಗೀಕರಿಸಿದರೆ, ಸರ್ವೋಚ್ಚ ಮತ್ತು ಶಾಶ್ವತವಾಗಿ ಉಳಿಯಬಲ್ಲ ಸುಖ, ಅಂದರೆ ಆನಂದಪ್ರಾಪ್ತಿಯಾಗುತ್ತದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪೂ. (ಸೌ.) ಭಾವನಾ ಶಿಂದೆ ಇವರು ಪ್ರತಿಪಾದಿಸಿದರು. ಅವರು ‘ಥರ್ಡ ವರ್ಲ್ಡ ಕಾನ್ಫರೆನ್ಸ್ ಆನ್ ಚಿಲ್ಡ್ರನ್ ಆಂಡ್ ಯೂಥ 2021 (CCY 2021) : ದಿ ವರ್ಚ್ಯುವಲ್ ಕಾನ್ಫರೆನ್ಸ್’ ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ ‘ದಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್‌ಮೆಂಟ್ (TIIKM) ಶ್ರೀಲಂಕಾ’ ಇದರ ವತಿಯಿಂದ ಆಯೋಜಿಸಲಾಗಿತ್ತು. ಪೂ. (ಸೌ.) ಭಾವನಾ ಶಿಂದೆ ಇವರು ಈ ಪರಿಷತ್ತಿನಲ್ಲಿ ‘ಒತ್ತಡಯುಕ್ತ ಜಗತ್ತಿನಲ್ಲಿ ಆನಂದ ಪಡೆಯುವ ಉಪಾಯ’ ಈ ಸಂಶೋಧನೆಯ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಡಾ. (ಸೌ.) ನಂದಿನಿ ಸಾಮಂತ ಇವರು ಸಹಲೇಖಕಿಯಾಗಿದ್ದಾರೆ.
ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಷತ್ತುಗಳಲ್ಲಿ ಮಂಡಿಸಿದ 76 ನೇ ಮಂಡಣೆಯಾಗಿದೆ. ಈ ಮೊದಲು ವಿಶ್ವವಿದ್ಯಾಲಯವು ೧೫ ರಾಷ್ಟ್ರೀಯ ಮತ್ತು 60 ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದೆ. ಇವುಗಳಲ್ಲಿ 5 ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ವಿಶ್ವವಿದ್ಯಾಲಯಕ್ಕೆ ‘ಸರ್ವೋತ್ಕೃಷ್ಠ ಶೋಧಪ್ರಬಂಧ’ ಪ್ರಶಸ್ತಿ ಲಭಿಸಿದೆ.
ಪೂ. (ಸೌ.) ಭಾವನಾ ಶಿಂದೆಯವರು ಇವರು ಮಾತು ಮುಂದುವರಿಸುತ್ತಾ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ನಾವು ದುಃಖವನ್ನು ಅನುಭವಿಸುತ್ತೇವೆ. ನಮ್ಮ ಜೀವನದ ಸಮಸ್ಯೆಗಳಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ 3 ಮೂಲಭೂತ ಕಾರಣಗಳಿರುತ್ತವೆ; ಜೀವನದಲ್ಲಿ ಎದುರಾಗುವ ಶೇ. 50 ಕ್ಕಿಂತ ಹೆಚ್ಚು ಸಮಸ್ಯೆಗಳಿಗೆ ಆಧ್ಯಾತ್ಮಿಕ ಕಾರಣಗಳಿರುತ್ತದೆ. ಆದರೆ ಅವುಗಳು ಶಾರೀರಿಕ ಅಥವಾ ಮಾನಸಿಕ ಸಮಸ್ಯೆಗಳ ಸ್ವರೂಪದಲ್ಲಿ ಪ್ರಕಟಗೊಳ್ಳಬಹುದು. ಪ್ರಾರಬ್ಧ, ಪೂರ್ವಜರ ಅತೃಪ್ತ ಲಿಂಗದೇಹ ಮತ್ತು ಸೂಕ್ಷ್ಮದಲ್ಲಿರುವ ಕೆಟ್ಟ ಶಕ್ತಿಗಳು, ಈ 3 ಪ್ರಮುಖ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಯಾವಾಗ ಯಾವುದೇ ಒಂದು ಸಮಸ್ಯೆಯ ಮೂಲಭೂತ ಕಾರಣ ಆಧ್ಯಾತ್ಮಿಕವಾಗಿರುತ್ತದೆಯೋ, ಆಗ ಅದರ ಆಧ್ಯಾತ್ಮಿಕ ಉಪಾಯ ಯೋಜನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಆಧ್ಯಾತ್ಮಿಕ ಉಪಾಯಗಳಿಂದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿಯೂ ಸಹಾಯಕವಾಗುತ್ತದೆ, ವಿಶೇಷವಾಗಿ ಈ ಸಮಸ್ಯೆಗಳ ಮೂಲ ಕಾರಣ ಆಧ್ಯಾತ್ಮಿಕವಿರುತ್ತದೆ’, ಎಂದರು.
ಕೊನೆಯಲ್ಲಿಪೂ. (ಸೌ.) ಭಾವನಾ ಶಿಂದೆಯವರು ಆನಂದಪ್ರಾಪ್ತಿಗಾಗಿ ತಿಳಿಸಿರುವ ಪ್ರಮುಖ ಪ್ರಯತ್ನಗಳು:
೧. ನಾಮಜಪ : ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮಕ್ಕನುಸಾರ ತಿಳಿಸಿರುವ ನಾಮಜಪವನ್ನು ಮಾಡಬಹುದು. ಇಂದಿನ ಕಾಲಕ್ಕನುಸಾರ ‘ಓಂ ನಮೋ ಭಗವತೇ ವಾಸುದೇವಾಯ|, ಇದೊಂದು ಅತ್ಯಂತ ಉಪಯುಕ್ತ ನಾಮಜಪವಾಗಿದೆ.
ಪೂ. (ಸೌ.) ಭಾವನಾ ಶಿಂದೆಯವರು ನಾಮಜಪದ ಸಕಾರಾತ್ಮಕ ಪರಿಣಾಮದ ಅಳತೆಯನ್ನು ಮಾಡಲು ಕೈಕೊಂಡ ಒಂದು ಪ್ರಯೋಗದ ಕುರಿತು ಮಾಹಿತಿಯನ್ನು ನೀಡಿದರು. ‘ಜಿ.ಡಿ.ವಿ. ಬಾಯೊವೆಲ ಈ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ವ್ಯಕ್ತಿಯ ಕುಂಡಲಿನಿ ಚಕ್ರಗಳ ಅಳತೆಯನ್ನು ಮಾಡಲಾಗಿದೆ. ಈ ಪ್ರಯೋಗದಲ್ಲಿ ಒಬ್ಬ ವ್ಯಕ್ತಿಯ ಕುಂಡಲಿನಿ ಚಕ್ರಗಳು ಕೇವಲ 40 ನಿಮಿಷ ‘ಓಂ ನಮೋ ಭಗವತೇ ವಾಸುದೇವಾಯ| ಈ ನಾಮಜಪವನ್ನು ಮಾಡಿದ ಬಳಿಕ ಮಧ್ಯಭಾಗದಲ್ಲಿ ಒಂದು ರೇಖೆಯಲ್ಲಿ ಬಂದಿರುವುದು ಕಂಡು ಬಂದಿತು. ಕುಂಡಲಿನಿ ಚಕ್ರಗಳ ಈ ಸ್ಥಿತಿ ಆ ವ್ಯಕ್ತಿಯ ಒಳ್ಳೆಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ತೋರಿಸುತ್ತದೆ.
೨. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ: ಮನಸ್ಸಿನ ಸ್ವಭಾವದೋಷಗಳ ಸಂಸ್ಕಾರವನ್ನು ನಾಶಗೊಳಿಸಲು ಪರಾತ್ಪರ ಗುರು ಡಾ ಆಠವಲೆಯವರು ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಕೈಕೊಂಡ ಒಂದು ಸಮೀಕ್ಷೆಯಲ್ಲಿ 50 ವ್ಯಕ್ತಿಗಳು ಭಾಗವಹಿಸಿದ್ದರು. ಅದರಲ್ಲಿ ಶೇ. 90 ರಷ್ಟು ಉದ್ಯೋಗಿಗಳಾಗಿದ್ದರು. ಅವರು ಇದರ ಬಗ್ಗೆ ಹೇಳುತ್ತಾ, ಈ ಸ್ವಭಾವದೋಷಗಳನ್ನು ಶೇ. 50 ರಿಂದ 80 ರಷ್ಟು ಕಡಿಮೆ ಮಾಡಲು ತಗುಲಿದ ಸರ್ವೇಸಾಧಾರಣ ಕಾಲಾವಧಿ 2 ವರ್ಷ 5 ತಿಂಗಳು ಆಗಿತ್ತು. ಸಂಬಂಧಗಳು ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗಿರುವುದನ್ನು ಎಲ್ಲರೂ ಅನುಭವಿಸಿದ್ದರೂ, ಸಂಬಂಧದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸುಧಾರಣೆಯಾಯಿತು, ಎಂದು ಶೇ. 73 ರಷ್ಟು ವ್ಯಕ್ತಿಗಳು ತಿಳಿಸಿದರು ಹಾಗೂ ಕಾರ್ಯಕ್ಷಮತೆ ಬಹಳಷ್ಟು ಪ್ರಮಾಣದಲ್ಲಿ ಸುಧಾರಣೆ ಆಯಿತು ಎಂದು ಶೇ. 77 ರಷ್ಟು ವ್ಯಕ್ತಿಗಳು ಹೇಳಿದರು.