ಸಾಧಕರಿಗೆ ಮಹತ್ವದ ಸೂಚನೆ
‘ಸದ್ಯ ಸಾಧಕರು ತಮಗಾಗುವ ತೊಂದರೆಗಳನ್ನು ದೂರಗೊಳಿಸಲು ಪ್ರತಿದಿನ ಪ್ರಾಣಶಕ್ತಿವಹನ ಉಪಾಯ ಪದ್ಧತಿಗನುಸಾರ ನಾಮಜಪ ಹುಡುಕುತ್ತಾರೆ ಹಾಗೂ ಅದಕ್ಕನುಸಾರ ನಾಮಜಪ ಮಾಡುತ್ತಾರೆ. ಸಾಧಕರಿಗೆ ‘ಪ್ರಾಣಶಕ್ತಿವಹನ ಉಪಾಯಪದ್ಧತಿಯ ಮೂಲಕ ನಾಮಜಪವನ್ನು ಹುಡುಕಲು ಸಾಧ್ಯವಾಗಬೇಕು ಹಾಗೂ ಅವರಿಗೆ ಅದರ ಅಭ್ಯಾಸವಾಗಬೇಕು, ಎಂಬ ದೃಷ್ಟಿಯಿಂದ ‘ಪ್ರತಿದಿನ ನಾಮಜಪ ಹುಡುಕಬೇಕು’, ಎಂದು ಹೇಳಲಾಗಿತ್ತು. ಈಗ ಬಹಳಷ್ಟು ಸಾಧಕರಿಗೆ ಈ ಉಪಾಯಪದ್ಧತಿ ಸರಿಯಾಗಿ ತಿಳಿದಿರುವುದರಿಂದ ಇನ್ನು ಮುಂದೆ ಪ್ರಾಣಶಕ್ತಿವಹನ ಉಪಾಯಪದ್ಧತಿಯ ಮೂಲಕ ಪ್ರತಿದಿನ ನಾಮಜಪ ಹುಡುಕುವ ಅವಶ್ಯಕತೆಯಿಲ್ಲ. ಅಂದರೆ ಒಮ್ಮೆ ‘ಕಾಯಿಲೆ ಏನೆಂಬುದು ತಿಳಿದಾಗ ಅದಕ್ಕನುಸಾರ ನಾವು ಔಷಧಿ ತೆಗೆದುಕೊಳ್ಳುತ್ತೇವೆ. ನಾವು ಪ್ರತಿದಿನ ಕಾಯಿಲೆಯ ತಪಾಸಣೆ ಮಾಡುವುದಿಲ್ಲ. ಅದೇ ರೀತಿ ಇದು ಕೂಡ ಆಗಿದೆ. ಆದ್ದರಿಂದ ಈ ಮುಂದಿನ ಅಂಶಗಳನ್ನು ಗಮನಿಸಬೇಕು.
೧. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಹಾಗೂ ಮಂದ ತೊಂದರೆ ಇರುವ ಸಾಧಕರು
ಇವರು ಒಮ್ಮೆ ಪ್ರಾಣಶಕ್ತಿವಹನ ಉಪಾಯದ ಮೂಲಕ ಉಪಾಯ ಹುಡುಕಿದಾಗ ಅವರಿಗೆ ಸಾಮಾನ್ಯವಾಗಿ ೧೫ ದಿನಗಳವರೆಗೆ ಒಂದೇ ನಾಮಜಪ ಬರುತ್ತದೆ. ಆದ್ದರಿಂದ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಹಾಗೂ ಮಧ್ಯಮ ತೊಂದರೆ ಇರುವ ಸಾಧಕರು ಒಮ್ಮೆ ಉಪಾಯ ಪದ್ಧತಿಯ ಮೂಲಕ ಉಪಾಯ ವನ್ನು ಹುಡುಕಬೇಕು ಹಾಗೂ ಮುಂದಿನ ೧೫ ದಿನ ಅದೇ ಉಪಾಯ ಮಾಡಬೇಕು.
೨. ಮಧ್ಯಮ ಮತ್ತು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು
ಯಾವಾಗ ‘ತೊಂದರೆಯ ತೀವ್ರತೆ ಹೆಚ್ಚಾಗುತ್ತ್ತಿದೆ’, ಎಂದು ಅನಿಸುತ್ತದೆಯೋ, ಆಗ ಪ್ರಾಣಶಕ್ತಿವಹನ ಉಪಾಯ ಪದ್ಧತಿಯ ಮೂಲಕ ಉಪಾಯವನ್ನು ಪುನಃ ಹುಡುಕ ಬೇಕು. ತೊಂದರೆಯ ತೀವ್ರತೆ ಹೆಚ್ಚಾಗುತ್ತಿಲ್ಲವೆಂದು ಅನಿಸಿದರೆ, ೧೫ ದಿನಗಳಿಗೊಮ್ಮೆ ಉಪಾಯ ವನ್ನು ಹುಡುಕಿ ಅದನ್ನೇ ಮುಂದಿನ ೧೫ ದಿನ ಮಾಡಬೇಕು.
ಟಿಪ್ಪಣಿ
೧. ತೀವ್ರ ತೊಂದರೆ ಇರುವ ಕೆಲವು ಸಾಧಕರಿಗೆ ‘ತನ್ನ ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ’, ಎಂದು ಅರಿವಾಗುವುದಿಲ್ಲ. ಅಂತಹ ಸಾಧಕರು ತಮಗೆ ಉಪಾಯವನ್ನು ಹೇಳಲು ನೇಮಿಸಲಾದ ಸಾಧಕರಲ್ಲಿ ವಿಚಾರಿಸಿ ಅವರು ನೀಡಿದ ಪ್ರಾಣಶಕ್ತಿವಹನ ಉಪಾಯಪದ್ಧತಿಯಿಂದ ಉಪಾಯ ಮಾಡಬೇಕು.
೨. ಈ ಸೂಚನೆ ಕೇವಲ ಪ್ರಾಣಶಕ್ತಿವಹನ ಉಪಾಯ ಪದ್ಧತಿಗೆ ಅನ್ವಯವಾಗುತ್ತದೆ. ಅದರ ಹೊರತು ಈ ಹಿಂದೆ ಹೇಳಿರುವ ಆಧ್ಯಾತ್ಮಿಕ ಉಪಾಯಗಳು, ವಿವಿಧ ಪದ್ಧತಿಯಲ್ಲಿ ಆವರಣ ತೆಗೆಯುವುದು ಇತ್ಯಾದಿ ಉಪಾಯಗಳನ್ನು ಮೊದಲಿನಂತೆಯೇ ಪ್ರತಿದಿನ ಮುಂದುವರಿಸಬೇಕು.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಸನಾತನ ಆಶ್ರಮ ಗೋವಾ.
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. |