‘ಸನಾತನ ಸಂಸ್ಥೆಯ ರಾಷ್ಟ್ರ-ಧರ್ಮ ಕಾರ್ಯದ ಅಂತರ್ಗತ ವಿವಿಧ ಸೇವೆಗಳಿಗಾಗಿ ಗಣಕೀಯ ಆಧುನಿಕ ತಂತ್ರಜ್ಞಾವನ್ನು ಬಳಸಲಾಗುತ್ತದೆ. ಸದ್ಯ ಗಣಕಯಂತ್ರಗಳ ನಿರ್ವಹಣೆ, ಹಾಗೆಯೇ ದುರುಸ್ತಿ ಮಾಡಲು ಸಾಧಕಸಂಖ್ಯೆ ಕಡಿಮೆ ಬೀಳುತ್ತಿರುವುದರಿಂದ ತುರ್ತಾಗಿ ಸಾಧಕರ ಆವಶ್ಯಕತೆಯಿದೆ. ಈ ಸೇವೆಯಲ್ಲಿ ಸನಾತನದ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಪಾಲ್ಗೊಳ್ಳಲು ಸುವರ್ಣಾವಕಾಶವಿದೆ.
ಈ ಗಣಕೀಯ ಸೇವೆಗಳ ಸ್ವರೂಪ ಮುಂದಿನಂತಿವೆ.
೧. ‘ಟೆಕ್ನಿಕಲ್’ ಮತ್ತು ‘ನಾನ್‌ಟೆಕ್ನಿಕಲ್’ ಗಣಕೀಯ ಸೇವೆಗಳ ಸ್ವರೂಪ
ಅ. ಗಣಕಯಂತ್ರಗಳಲ್ಲಿ Windows OS, ಹಾಗೆಯೇ ಇತರ Software ‘ಇನ್‌ಸ್ಟಾಲ್’ ಮಾಡುವುದು
ಆ. ಹಾಳಾದ ಗಣಕಯಂತ್ರಗಳ ಮತ್ತು ಸಂಚಾರಿಗಣಕಯಂತ್ರ (‘ಲ್ಯಾಪ್‌ಟಾಪ್’)ಗಳ ದುರುಸ್ತಿ ಮಾಡುವುದು
ಇ. A4 ಪ್ರಿಂಟರ್, ಫೊಟೋಕಾಪಿ (ಜೆರಾಕ್ಸ್) ಮಶಿನ್, ಟೆಲಿಫೋನ್, ಮೌಸ್, ಮೊಡೆಮ್, ವೈ-ಫೈ ರೌಟರ್, ಪಾವರ್ ಆಡಾಪ್ಟರ್, ಯುಪಿಎಸ್ (600VA/1KVA) ಮುಂತಾದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ದುರುಸ್ತಿ ಮಾಡುವುದು
ಈ. ನೆಟ್‌ವರ್ಕ ಕೆಬಲಿಂಗ್ ಮಾಡುವುದು (ಇದರ ಅಡಿಯಲ್ಲಿ Cable pulling, Punching, Crimping ಮಾಡುವುದು ಮುಂತಾದ ಸೇವೆಗಳಿರುತ್ತವೆ.) ಇದಕ್ಕಾಗಿ ‘ನೆಟ್‌ವರ್ಕಿಂಗ್’ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳ ಸಂದರ್ಭದ ಜ್ಞಾನವಿರಬೇಕು.
ಉ. ಗಣಕಯಂತ್ರಗಳ, ಹಾಗೆಯೇ ಇತರ ವಸ್ತುಗಳ ಚಲನವಲನಗಳನ್ನು ನೋಡುವುದು, ಅವುಗಳ ನೋಂದಣಿ ಮಾಡಿ ಅವುಗಳನ್ನು ಪರಿಶೀಲಿಸುವುದು (ಈ ಸೇವೆಗಳಿಗಾಗಿ ಕೇವಲ ಗಣಕಯಂತ್ರಗಳನ್ನು ನಿರ್ವಹಿಸುವ ಜ್ಞಾನವಿರುವುದು ಆವಶ್ಯಕವಿದೆ.)
ಗಣಕಯಂತ್ರಗಳ ದುರುಸ್ತಿಯ ಸಂದರ್ಭದಲ್ಲಿ ಜ್ಞಾನ ಅಥವಾ ಅನುಭವವಿರುವ ಸಾಧಕರು ಕೆಲವು ದಿನಗಳಿಗಾಗಿ ಅಥವಾ ಪೂರ್ಣವೇಳೆ ಆಶ್ರಮದಲ್ಲಿದ್ದು ಈ ಸೇವೆಯನ್ನು ಮಾಡಬಹುದು, ಅವರು ಜಿಲ್ಲಾಸೇವಕರ ಮಾಧ್ಯಮದಿಂದ ಸಂಪರ್ಕಿಸಬೇಕು. ಈ ಸೇವೆಗಳನ್ನು ಕಲಿತುಕೊಂಡು ಅದನ್ನು ಮಾಡಲು ಇಚ್ಛಿಸುವವರಿಗಾಗಿ ತರಬೇತಿಯ ಆಯೋಜನೆಯನ್ನು ಮಾಡಲಾಗುವುದು !’
ಮೇಲಿನ ಸೇವೆಯನ್ನು ಮಾಡಲು ಇಚ್ಛಿಸುವವರು ಜಿಲ್ಲಾಸೇವಕರ ಮಾಧ್ಯಮದಿಂದ ಮುಂದಿನ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು ಸೌ. ಭಾಗ್ಯಶ್ರೀ ಸಾವಂತ ಇವರ ಹೆಸರಿನಲ್ಲಿ [email protected] ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ (೨೮.೧೧.೨೦೨೪)