ರಾಜದಂಡದ ಅಂಕುಶ ಇಲ್ಲದಿರುವುದರಿಂದ ಸಮಾಜದ ಸ್ಥಿತಿ ಅರಾಜಕತೆಯಿಂದ ಕೂಡಿದೆ !

ಗುರುದೇವ ಡಾ. ಕಾಟೇಸ್ವಾಮೀಜಿ

ಮನುಷ್ಯನು ಮೂಲದಲ್ಲಿಯೇ ಮತ್ತು ಸ್ವಭಾವದಿಂದಲೂ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡತೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ, ಅವನು ಯಾವುದೇ ಬಂಧನಗಳು ಇಲ್ಲದವನಾಗಲು ಸಮಯ ತಾಗುವುದಿಲ್ಲ. ಇಂತಹ ಮನುಷ್ಯನನ್ನು ನಿಯಂತ್ರಿಸುವುದು ಧರ್ಮದ ಹಾಗೂ ದಂಡದ ಕರ್ತವ್ಯವಾಗಿದೆ. ಒಂದು ವೇಳೆ ರಾಜದಂಡವು ತನ್ನ ಈ ಕಾರ್ಯವನ್ನು ಮಾಡದಿದ್ದರೆ ಸಮಾಜದಲ್ಲಿ ಮಾತ್ಸ್ಯ ನ್ಯಾಯ (ದೊಡ್ಡ ಮೀನು ಸಣ್ಣ ಮೀನನ್ನು ನುಂಗುತ್ತದೆ)ವು ಹೆಚ್ಚಾಗುತ್ತದೆ.

– ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೬.೧.೨೦೧೧)