ವೃದ್ಧಾಶ್ರಮದಲ್ಲಿ ತಂದೆ-ತಾಯಿಯರನ್ನು ಇಡುವುದು ಅತ್ಯಂತ ನಾಚಿಕೆಗೇಡಿನ ಸಂಗತಿ
ಭಾರತೀಯ ಸಂಸ್ಕೃತಿಯಲ್ಲಿ ಎಂದಿಗೂ ವೃದ್ಧಾಶ್ರಮಗಳಿರಲಿಲ್ಲ. ಅದು ಪಾಶ್ಚಾತ್ಯರ ಸಂಸ್ಕೃತಿಯ ಅಂಧಾನುಕರಣೆಯಾಗಿದೆ. ಇದು ತಂದೆ ತಾಯಿಯರ ಬಗ್ಗೆ ಕೃತಜ್ಞತೆ ಬದಲು ದ್ವೇಷವನ್ನು ತೋರಿಸುತ್ತದೆ.
ದೇವರ ಕೃಪೆಯ ಮಹತ್ವ
ದೇವರ ಕೃಪೆಯನ್ನು ಅನುಭವಿಸಿದ ನಂತರ ಸಮಾಜದಲ್ಲಿ ಯಾರಾದರೂ ಪ್ರಶಂಸಿಸಿದರು ಅದರ ಮೌಲ್ಯವು ಶೂನ್ಯವೆನಿಸುತ್ತದೆ
ಈಶ್ವರಪ್ರಾಪ್ತಿಗಾಗಿ ಆಯುಷ್ಯವನ್ನು ನೀಡಬೇಡವೇ ?
ಕೆಲಸದಲ್ಲಿ ಸ್ವಲ್ಪ ಸಂಬಳ ಸಿಗಬೇಕೆಂದು ೭-೮ ಗಂಟೆ ಕೆಲಸ ಮಾಡಬೇಕಾಗುತ್ತದೆ. ಹೀಗಿರುವಾಗ ಸರ್ವಜ್ಞ, ಸರ್ವವ್ಯಾಪಿ ಹಾಗೂ ಸರ್ವ ಸಾಮರ್ಥ್ಯವಿರುವ ಈಶ್ವರನ ಪ್ರಾಪ್ತಿಗಾಗಿ ಆಯುಷ್ಯವನ್ನು ನೀಡಬೇಡವೇ ?
ಎಲ್ಲಿ ವಿಜ್ಞಾನಿಗಳು ಮತ್ತು ಎಲ್ಲಿ ಋಷಿಮುನಿಗಳು !
ಎಲ್ಲಿ ಪರಗ್ರಹಗಳಿಗೆ ಹೋಗುವ ಯಾನವನ್ನು ಕಂಡುಹಿಡಿದಾಗ ವಿಜ್ಞಾನದ ಪ್ರಶಂಸೆ ಮಾಡುವ ಬುದ್ಧಿಜೀವಿಗಳು ಮತ್ತು ಎಲ್ಲಿ ಸೂಕ್ಷ್ಮದೇಹದಿಂದ ವಿಶ್ವದಲ್ಲಿ ಮಾತ್ರವಲ್ಲ ಸಪ್ತಲೋಕ ಹಾಗೂ ಸಪ್ತಪಾತಾಳಗಳಲ್ಲಿಯೂ ಕ್ಷಣಾರ್ಧದಲ್ಲಿ ಸೂಕ್ಷ್ಮದಿಂದ ಹೋಗಬಲ್ಲ ಋಷಿಮುನಿಗಳು. – (ಪರಾತ್ಪರ ಗುರು) ಡಾ. ಆಠವಲೆ