
ಫೋಂಡಾ (ಗೋವಾ) – ಹಿಮಾಚಲ ಪ್ರದೇಶದ ಸಾಧುಪುಲ, ಶಿಮ್ಲಾದ ವಿವೇಕಾನಂದ ವಿದ್ಯಾನಿಕೇತನ ವಿದ್ಯಾಲಯದ ವಿದ್ಯಾರ್ಥಿಗಳು ಫೆಬ್ರವರಿ 6, 2025 ರಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಶಿಕ್ಷಕರೂ ಅವರೊಂದಿಗೆ ಇದ್ದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಮತ್ತು ಸೌ. ಶ್ವೇತಾ ಶಾನ್ ಕ್ಲಾರ್ಕ್ ಅವರು ‘ವಿಶ್ವವಿದ್ಯಾನಿಲಯದ ವತಿಯಿಂದ ನಡೆಸಲಾಗುವ ಸೂಕ್ಷ್ಮ ಮಟ್ಟದ ಸಂಶೋಧನೆ ಮತ್ತು ಜೀವನದಲ್ಲಿ ಸಾಧನೆಯ ಮಹತ್ವದ’ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಕೈಕೊಳ್ಳಲಾಗಿರುವ ಸಂಶೋಧನೆಯನ್ನು ಆಧರಿಸಿದ ಕೆಲವು ವೀಡಿಯೊಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಶಾಲೆಯ ಶಿಕ್ಷಕ ರವಿ ಮೆಹತಾ, ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯಕ್ಕೆ ಧನ್ಯವಾದ ಅರ್ಪಿಸಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸನಾತನ ಆಶ್ರಮಕ್ಕೂ ಸದ್ಭಾವನಾ ಭೇಟಿ
ವಿವೇಕಾನಂದ ವಿದ್ಯಾನಿಕೇತನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಫೆಬ್ರವರಿ 6, 2025 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೂ ಸದ್ಭಾವನಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸನಾತನ ಸಾಧಕರು ರಾಷ್ಟ್ರ ಮತ್ತು ಧರ್ಮ ವಿಷಯಗಳ ಕುರಿತು, ಹಾಗೆಯೇ ಆಧ್ಯಾತ್ಮಿಕ ಸಂಶೋಧನೆಯ ವಿಷಯದ ಕಾರ್ಯಗಳ ಮಾಹಿತಿಯನ್ನು ನೀಡಿದರು. ಆಶ್ರಮವನ್ನು ನೋಡಿದ ಬಳಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಶಿಕ್ಷಕ ರವಿ ಮೆಹತಾ ಅವರು ಆಶ್ರಮದ ಕಾರ್ಯ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕವಾಗಿದೆಯೆಂದು ಹೇಳಿದರು. ಸೂಕ್ಷ್ಮ ಜಗತ್ತಿನ ವಿಷಯದ ಪ್ರದರ್ಶನವನ್ನು ನೋಡಿ ಅವರು ಈ ಪ್ರದರ್ಶನವು ಜೀವನದ ಆಚರಣೆ ಮತ್ತು ಜೀವನ ಅಧ್ಯಾತ್ಮಕ್ಕಾಗಿ ಸಂಕಲ್ಪದ ಪ್ರತಿಬಿಂಬವಾಗಿದೆ. ಈ ವಿಷಯವು ನಮ್ಮ ಸಂಸ್ಥೆಯನ್ನು ಮುಂದಕ್ಕೆ ಒಯ್ಯಲು ಶಕ್ತಿಯನ್ನು ನೀಡುವಂತಹದ್ದಾಗಿದೆ’, ಎಂದು ಹೇಳಿದರು.