೧. ಚೀನಾದ ಕು. ಲೀ ಮುಝೀ ಇವಳು ಭಾರತೀಯ ಶಾಸ್ತ್ರೀಯ ನೃತ್ಯ ’ಭರತನಾಟ್ಯಮ್’ ಕಲಿತು ಅದನ್ನು ಚೀನಾದ ವೀಕ್ಷಕರ ಮುಂದೆ ಪ್ರಸ್ತುತ ಪಡಿಸುವುದು

೧೬.೮.೨೦೨೪ ರ ಒಂದು ದಿನಪತ್ರಿಕೆಯಲ್ಲಿ ನಾನು ಒಂದು ವಾರ್ತೆಯನ್ನು ಓದಿದೆ. ’ಚೀನಾದ ೧೩ ವರ್ಷದ ಕು. ಲೀ. ಮುಝೀ ಇವಳು ಭಾರತೀಯ ಶಾಸ್ತ್ರೀಯ ನೃತ್ಯ ’ಭರತನಾಟ್ಯಮ್’ ಕಲಿತು ಚೀನಾದಲ್ಲಿ ಅನೇಕ ವೀಕ್ಷಕರ ಮುಂದೆ ’ಅರಂಗೇಟ್ರಮ್’ (ಟಿಪ್ಪಣಿ ೧) ಪ್ರಸ್ತುತಪಡಿಸಿದಳು !’, ಇದು ಆ ವಾರ್ತೆಯ ಶೀರ್ಷಿಕೆಯಾಗಿತ್ತು. ಅವಳ ಅರಂಗೇಟ್ರಮ್‌ಗಾಗಿ ಸುಪ್ರಸಿದ್ಧ ನೃತ್ಯಗುರು ಲೀಲಾ ಸ್ಯಮ್ಸನ್ ಇವರು ಸ್ವತಃ ’ನಟ್ಟುವಾಂಗಮ್’ (ಟಿಪ್ಪಣಿ ೨) ಮಾಡಿದರು. ಚೀನಾದಲ್ಲಿ ಮೊದಲ ಬಾರಿ ಇಂತಹ ಅರಂಗೇಟ್ರಮ್ ನಡೆಯಿತು.
ಟಿಪ್ಪಣಿ : ೧ – ’ಅರಂಗೇಟ್ರಮ್’ ಎಂದರೆ ಹಲವಾರು ವರ್ಷ ನೃತ್ಯ ಕಲಿತ ನಂತರ ನೃತ್ಯಗುರುಗಳ ಮುಂದೆ ರಂಗಮಂಟಪದ ಮೇಲೆ ಮೊದಲನೆ ಬಾರಿ ಅದನ್ನು ಪ್ರವೇಶಪಡಿಸುವುದು.
ಟಿಪ್ಪಣಿ ೨ – ’ನಟ್ಟುವಾಂಗಮ್’ ಎಂದರೆ ನೃತ್ಯರಚನೆಯ ತಾಳಬದ್ಧತೆ (ಸಂಗೀತ) ’ತಾಳಮ್’ (ಟಿಪ್ಪಣಿ ೩), ಈ ವಾದ್ಯದಲ್ಲಿ ಬಾರಿಸುವುದು.
ಟಿಪ್ಪಣಿ ೩ – ತಾಳದಂತಹ ಒಂದು ವಾದ್ಯ
೨. ’ಭರತನಾಟ್ಯಮ್’ ನೃತ್ಯದ ವಿಷಯದಲ್ಲಿ ಕು. ಲೀ ಮುಝೀ ಇವಳು ವ್ಯಕ್ತಪಡಿಸಿದ ಮನೋಗತ !
೧೩ ವರ್ಷದ ಕು. ಲೀ ಮುಝೀ ಅವಳ ಒಂದು ಸಂದರ್ಶನದಲ್ಲಿ ’ಭರತನಾಟ್ಯಮ್’ ನೃತ್ಯದ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಹೇಳಿದಳು, ”ನಾನು ಈ ನೃತ್ಯವನ್ನು ಪ್ರೀತಿಸುತ್ತೇನೆ. ನನಗೆ ಇದರಲ್ಲಿ ಆಸಕ್ತಿ ಇದ್ದು ನಾನು ಅದನ್ನು ಪ್ರತಿದಿನ ಮಾಡುತ್ತೇನೆ. ’ಭರತನಾಟ್ಯಮ್’ ನೃತ್ಯ ನನಗೆ ಕೇವಲ ಒಂದು ಸುಂದರ ಕಲೆಯಾಗಿರದೆ, ಅದು ಭಾರತೀಯ ಸಂಸ್ಕೃತಿಯ ಪ್ರತ್ಯಕ್ಷ ಸ್ವರೂಪವಾಗಿದೆ. ಈ ಕಲೆಯಿಂದ ನನಗೆ ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.” (ಕು. ಲೀ ಮುಝೀ ಇವಳ ಈ ಮಾತಿನಿಂದ ಅವಳಿಗೆ ಕಲೆಯ ಬಗ್ಗೆ ಇರುವ ನಿಷ್ಠೆ ಮತ್ತು ಪ್ರೀತಿ ಎದ್ದು ಕಾಣಿಸುತ್ತದೆ, ಅದೇ ರೀತಿ ಅವಳಲ್ಲಿ ಭಾರತೀಯ ಕಲೆಯ ಬಗ್ಗೆ ಇರುವ ಅಭಿಮಾನವೂ ಅರಿವಾಗುತ್ತದೆ.’ – ಸಂಕಲನಕಾರರು)
೩. ಭಾರತೀಯ ಕಲೆಯನ್ನು ಕಲಿಯುವ ಚೀನಾದ ಕು. ಲೀ ಮುಝೀ ಮತ್ತು ಪಾಶ್ಚಾತ್ಯ ಸಂಸ್ಕೃತಿ ಮತ್ತು ಸಂಗೀತದ ಅಂಧಾನುಕರಣೆ ಮಾಡುವ ಭಾರತೀಯರು !

’೧೩ ವರ್ಷದ ಈ ಭಾರತೀಯೇತರ ಹುಡುಗಿ ಭಾರತೀಯ ಶಾಸ್ತ್ರೀಯ ನೃತ್ಯದ ವಿಷಯದಲ್ಲಿ ಈ ರೀತಿ ಉದ್ಗರಿಸುವುದು’, ಭಾರತೀಯರಿಗೆ ಪ್ರಶಂಸಾರ್ಹ ವಾಗಿದೆ; ಆದರೆ ಇನ್ನೊಂದು ರೀತಿಯಲ್ಲಿ ವಿಚಾರ ಮಾಡಿ ದರೆ ಭಾರತದ ಇಂದಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿ ಮತ್ತು ಸಂಗೀತದ ಅಂಧಾನುಕರಣೆ ಮಾಡುತ್ತಿದೆ. ಶಾಸ್ತ್ರೀಯ ಪದ್ಧತಿಯನ್ನು ಜಪಿಸುವ ಜನರು ಕಡಿಮೆಯಿದ್ದಾರೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪಾಶ್ಚಾತ್ಯ ಪಾಪ್ ಸಂಗೀತವನ್ನು ಮಿಶ್ರಣ ಮಾಡಿ ಅಸಾತ್ತ್ವಿಕ ಸಂಗೀತ ತಯಾರಿಸುವ ಮತ್ತು ವಿಡಂಬನಾತ್ಮಕ ನೃತ್ಯ ಮಾಡುವವರ ಪ್ರಮಾಣ ಹೆಚ್ಚಾಗಿದೆ.ಭಾರತದ ಮಕ್ಕಳಿಗೆ ತಮ್ಮ ಸಂಸ್ಕೃತಿ ಮತ್ತು ಶಿಕ್ಷಕರ ವಿಷಯದಲ್ಲಿ ಗೌರವವೆನಿಸುವುದಿಲ್ಲ.
ಭಾರತೀಯ ಮಕ್ಕಳಿಗೆ ನಮ್ಮ ಸಂಸ್ಕ್ರತಿ ಮತ್ತು ಶಿಕ್ಷಕರ ವಿಷಯದಲ್ಲಿಯೂ ಗೌರವ ಅನಿಸುವುದಿಲ್ಲ. ೫.೯.೨೦೨೪ ರಂದು ಶಿಕ್ಷಕರ ದಿನದ ನಿಮಿತ್ತದಲ್ಲಿ ಎಲ್ಲ ಕಡೆಗಳಲ್ಲಿ ಒಂದು ವಿಡಿಯೋ ಪ್ರಸಾರವಾಗಿತ್ತು. ಅದರಲ್ಲಿ ಇತ್ತೀಚೆಗೆ ಬಂದಿರುವ ’ಆಜ್ ಕೀ ರಾತ್…’ ಈ ಅಶ್ಲೀಲ ಹಾಡಿಗೆ ಚಿಕ್ಕ ಹುಡುಗಿಯರು ಗಿಡ್ಡ ಉಡುಪು ಧರಿಸಿ ಕುಣಿದಿದ್ದಾರೆ. ನಮ್ಮ ದೇಶದ ಪಾಲಕರು ’ತಮ್ಮ ಮಕ್ಕಳು ಯಾವ ಹಾಡಿಗೆ ಹೇಗೆ ಕುಣಿಯುತ್ತಿದ್ದಾರೆ ?’, ಎಂಬುದರ ಕಡೆಗೆ ಗಾಂಭೀರ್ಯದಿಂದ ಗಮನ ಹರಿಸಬೇಕಾಗಿದೆ. ಕೇವಲ ೧೩ ವರ್ಷದ ಒಂದು ವಿದೇಶಿ ಹುಡುಗಿಗೆ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಗೌರವವಿದೆ ಮತ್ತು ಅವಳು ಅದರಲ್ಲಿನ ಆನಂದವನ್ನು ಅನುಭವಿಸುತ್ತಿದ್ದಾಳೆ. ನಾವು ಭಾರತೀಯರು ಮಾತ್ರ ಪಾಶ್ಚಾತ್ಯ ಪದ್ಧತಿಯನ್ನು ಮೂಢನಂಬಿಕೆಯಿಂದ ಅಂಗೀಕರಿಸಿ ನಮ್ಮಲ್ಲಿರುವ ಅಮೂಲ್ಯ ಇಡುಗಂಟನ್ನು (ಭಾರತೀಯ ಕಲೆ ಗಳನ್ನು) ಕಳೆದುಕೊಳ್ಳುತ್ತಿದ್ದೇವೆ.
೪. ಭಾರತೀಯ ಕಲೆಗಳನ್ನು ಕಲಿಯುವವರ ಮುಂದೆ ಆದರ್ಶವನ್ನಿಡುವ ಕು. ಲೀ ಮುಝೀ !
ಕು. ಲೀ ಮುಝೀ ಇವಳು ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಇತ್ಯಾದಿ ಕಲೆಗಳನ್ನು ಕಲಿಯುವವರ ಮುಂದೆ ಆದರ್ಶವನ್ನಿಟ್ಟಿದ್ದಾಳೆ. ’ನಾವು ಜಗತ್ತಿನಲ್ಲಿ ಎಲ್ಲಿಗೇ ಹೋದರೂ, ಭಾರತೀಯ ಸಂಸ್ಕೃತಿಯ ಆಚರಣೆಯಿಂದ ನಮಗೆ ಆನಂದ ಸಿಗುತ್ತದೆ ಹಾಗೂ ಇದೇ ಸಂಸ್ಕೃತಿ ನಮ್ಮನ್ನು ಪರಿಪೂರ್ಣತೆಯ ಕಡೆಗೆ ಒಯ್ಯುತ್ತದೆ’, ಎಂಬುದು ಕು. ಲೀ ಮುಝೀ ಇವಳ ಉದಾಹರಣೆಯಿಂದ ಎದ್ದು ಕಾಣುತ್ತದೆ. ನಾವು ಕೂಡ ಅವಳ ಆದರ್ಶವನ್ನು ಮುಂದಿಟ್ಟುಕೊಂಡು ಭಾರತೀಯ ಕಲೆಯನ್ನು ಜೋಪಾನ ಮಾಡುವ ಹಾಗೂ ಅದನ್ನು ’ಸಾಧನೆ’ಯೆಂದು ಪ್ರಸ್ತುತಪಡಿಸುವ ಸಂಕಲ್ಪ ಮಾಡೋಣ !’
– ಕು. ಅಪಾಲಾ ಔಂಧಕರ್ (ಆಧ್ಯಾತ್ಮಿಕ ಮಟ್ಟ ಶೇ. ೬೧, ವ. ೧೭ ವರ್ಷ) ನೃತ್ಯ ಅಭ್ಯಾಸಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೧೦.೨೦೨೪)

‘ಭಾರತೀಯ ಕಲೆಗಳಲ್ಲಿ (ಹಾಡು, ವಾದನ, ನೃತ್ಯ, ನಾಟ್ಯ ಇತ್ಯಾದಿ ಗಳಲ್ಲಿ) ಮೂಲದಲ್ಲಿಯೆ ಸಾತ್ತ್ವಿಕತೆ ಹಾಗೂ ಸಕಾರಾತ್ಮಕ ಊರ್ಜೆ ಹೆಚ್ಚು ಪ್ರಮಾಣದಲ್ಲಿದೆ’, ಎಂಬುದನ್ನು ’ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ವಿವಿಧ ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ಸಿದ್ಧಪಡಿಸಿದೆ. ’ಸೂಕ್ಷ್ಮ ಸ್ತರದಲ್ಲಿ ಕಲೆಯ ಅನುಭೂತಿಯನ್ನು ಹೇಗೆ ಪಡೆಯಬಹುದು ?’, ಎಂಬ ವಿಷಯದಲ್ಲಿ ದೃಷ್ಟಿಕೋನ ವನ್ನೂ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ನೀಡುತ್ತಿದೆ.
– ಸುಶ್ರೀ (ಕು.) ತೇಜಲ್ ಪಾತ್ರಿಕರ್ (ಆಧ್ಯಾತ್ಮಿಕ ಮಟ್ಟ ಶೇ. ೬೦), ಸಂಗೀತ ವಿಶಾರದೆ, ಸಂಗೀತ ಸಮನ್ವಯಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೧೦.೨೦೨೪)*