’ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ’ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಪುರಾತನ ಕಾಲದಿಂದಲೂ ಗಾಯನ, ವಾದನ ಮತ್ತು ನೃತ್ಯಗಳ ಪ್ರಸಾರಕ್ಕಾಗಿ ಮಂದಿರ ಒಂದು ಉತ್ತಮ ಮಾಧ್ಯಮವಾಗಿದೆ. ಮಂದಿರದ ಸಾತ್ತ್ವಿಕ ವಾತಾವರಣದಿಂದ ಕಲಾವಿದರು ಮಾಡುವ ಕಲೆಯ ಪ್ರದರ್ಶನದಿಂದ ಮಂದಿರಕ್ಕೆ ಬರುವ ಭಕ್ತ ಶ್ರೋತಾರಿಗೆ ಉಚ್ಚಮಟ್ಟದ ಆಧ್ಯಾತ್ಮಿಕ ಅನುಭೂತಿ ಸಹಜವಾಗಿ ಬರುತ್ತದೆ. ಗಾಯನ, ವಾದನ ಮತ್ತು ನೃತ್ಯಗಳ ನಿರ್ಮಾಣ ಭಗವಂತನೆ ಮಾಡಿದ್ದಾನೆ. ಈ ಕಲೆಗಳು ಅವನ ಆರಾಧನೆಯ ಒಂದು ಮಾಧ್ಯಮವಾಗಿವೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ’ಮಂದಿರದಲ್ಲಿನ ಸಾತ್ತ್ವಿಕತೆಯ ಪರಿಣಾಮ ಕಲಾವಿದರ ಮೇಲೆ ಹೇಗಾಗುತ್ತದೆ ?’, ಎಂಬುದರ ಅಭ್ಯಾಸ ಮಾಡಲಾಯಿತು. ಅದಕ್ಕಾಗಿ ತಾಂಬಡೀಸುರ್ಲಾದಲ್ಲಿನ ಶಿವಮಂದಿರದಲ್ಲಿ ’ಶಿವಲಿಂಗದ (ಪಿಂಡಿಯ) ಮುಂದೆ ನೃತ್ಯ ಮಾಡಿದಾಗ ಕಲಾವಿದರ ಪ್ರಭಾವಲಯದ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎಂಬುದನ್ನು ಅಭ್ಯಾಸ ಮಾಡಲಾಯಿತು. ಅದಕ್ಕಾಗಿ ಯು.ಎ.ಎಸ್. ವೈಜ್ಞಾನಿಕ ಉಪಕರಣವನ್ನು ಉಪಯೋಗಿಸಲಾಯಿತು. ಈ ಉಪಕರಣದ ಮೂಲಕ ಪ್ರಯೋಗದಲ್ಲಿ ಪಾಲ್ಗೊಂಡಿರುವ ಘಟಕಗಳ (ವ್ಯಕ್ತಿ, ವಸ್ತು, ವೃಕ್ಷ ಇತ್ಯಾದಿ) ಸಕಾರಾತ್ಮಕ ಊರ್ಜೆಯ ಪ್ರಭಾವಲಯವನ್ನು ಅಳೆಯಬಹುದು.

೧. ತಾಂಬಡೀಸುರ್ಲಾದಲ್ಲಿನ ಶಿವಮಂದಿರದಲ್ಲಿ ನೃತ್ಯಗಳಿಗೆ ಸಂಬಂಧಿಸಿ ಮಾಡಿದ ಸಂಶೋಧನೆ !
೧ ಅ. ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಪರೀಕ್ಷಣೆ : ೪.೯.೨೦೨೨ ರಂದು ತಾಂಬಡೀಸುರ್ಲಾ ದಲ್ಲಿನ ಶಿವಮಂದಿರದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕು. ಅಪಾಲಾ ಔಂಧಕರ (ಭರತನಾಟ್ಯಮ್ ನೃತ್ಯ ಕಲಾವಿದೆ, ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೧೫ ವರ್ಷ) ಮತ್ತು ಶರ್ವರೀ ಕಾನಸ್ಕರ (ಕಥಕ್ ನೃತ್ಯ ಕಲಾವಿದೆ, ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೧೬ ವರ್ಷ) ಈ ಸಾಧಕಿಯರು ಪ್ರತಿಯೊಬ್ಬರು ೫-೭ ನಿಮಿಷದ ನೃತ್ಯ ಮಾಡಿದರು. ಈ ನೃತ್ಯದ ಪ್ರಸ್ತುತಿಯ ಮೊದಲು ಹಾಗೂ ನಂತರ ನೃತ್ಯ ಕಲಾವಿದರು ಮತ್ತು ಅವರು ನೃತ್ಯದಲ್ಲಿ ಉಪಯೋಗಿಸಿದ ಗೆಜ್ಜೆ, ವೀಕ್ಷಕರು, ಮಂದಿರದಲ್ಲಿನ ಶಿವಲಿಂಗ ಮತ್ತು ನೃತ್ಯದ ಸಮಯದಲ್ಲಿ ಆ ಸ್ಥಳದಲ್ಲಿ ಇಟ್ಟಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನ ಕ್ಕನುಸಾರ ತಯಾರಿಸಿದ ಶಿವನ ಸಾತ್ತ್ವಿಕ ಚಿತ್ರ, ಇವುಗಳ ಪ್ರಭಾವಲಯದ ಮೇಲಾದ ಪರಿಣಾಮವನ್ನು ಅಭ್ಯಾಸ ಮಾಡಲಾಯಿತು. ಉದಾಹರಣೆಗೆ ಕಥಕ್ ನೃತ್ಯ ಪ್ರಸ್ತುತ ಪಡಿಸುವ ಸಾಧಕಿ ಕು. ಶರ್ವರೀ ಕಾನಸ್ಕರ ಇವಳ ನೃತ್ಯದ ಪ್ರಸ್ತುತಿಯ ನಂತರ ಮಾಡಿದ ಪರೀಕ್ಷಣೆಯನ್ನು ಇಲ್ಲಿ ಕೊಟ್ಟಿದ್ದೇವೆ.
೧ ಆ. ಕು. ಶರ್ವರೀ ಕಾನಸ್ಕರ್ ಇವಳು ಮಾಡಿದ ಕಥಕ್ ನೃತ್ಯದಿಂದ ಕು. ಶರ್ವರೀ, ಅವಳು ಉಪಯೋಗಿಸಿದ ಗೆಜ್ಜೆ, ಶಿವನ ಸಾತ್ತ್ವಿಕ ಚಿತ್ರ, ದೇವಸ್ಥಾನದಲ್ಲಿನ ಶಿವಲಿಂಗ ಹಾಗೂ ವೀಕ್ಷಕರು ಇವರ ಮೇಲೆ ಮಾಡಿದ ’ಯು.ಎ.ಎಸ್. ಪರೀಕ್ಷಣೆ !
(ಈ ಮೇಲಿನಂತಹ ಸಕಾರಾತ್ಮಕ ಪರಿಣಾಮವನ್ನು ಉಪಸ್ಥಿತ ಇತರ ಕಲಾವಿದರಲ್ಲಿ ಮತ್ತು ವೀಕ್ಷಕರಲ್ಲಿಯೂ ಪರೀಕ್ಷಣೆ ಮಾಡ ಲಾಯಿತು; ಆದರೆ ಎಲ್ಲ ನಿರೀಕ್ಷಣೆಯನ್ನು ಕೊಡಲು ಸಾಧ್ಯವಾಗಿಲ್ಲ.) |
೧ ಇ. ನಿಷ್ಕರ್ಷ : ’ಕೇವಲ ೫-೭ ನಿಮಿಷಗಳ ನೃತ್ಯದಿಂದ ಕಲಾವಿದರ ಸಕಾರಾತ್ಮಕ ಊರ್ಜೆಯಲ್ಲೀಷ್ಟು ಹೆಚ್ಚಳವಾಗುವುದು’, ಇದು ಮಂದಿರದಲ್ಲಿನ ’ಸಾತ್ತ್ವಿಕ ವಾತಾವರಣ ಮತ್ತು ಕಲಾವಿದರ ಭಾವಪೂರ್ಣ ಪ್ರಸ್ತುತೀಕರಣ’ದ ಪರಿಣಾಮವಾಗಿದೆ. ’ಅಲ್ಪಾವಧಿಯಲ್ಲಿ ಶಿವಲಿಂಗದಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು’, ಇದರಿಂದ ’ಕಲೆಯ ಭಾವಪೂರ್ಣ ಪ್ರಸ್ತುತಿಯಿಂದ ಶಿವನ (ದೇವತೆ) ತತ್ತ್ವ ಹೆಚ್ಚು ಕಾರ್ಯನಿರತವಾಗಿದೆ’, ಎಂಬುದು ಅರಿವಾಯಿತು. ’ಪ್ರಸ್ತುತೀಕರಣ ಎಷ್ಟು ಭಾವಪೂರ್ಣವಾಗುತ್ತದೊ, ಅಷ್ಟು ಅಲ್ಲಿ ಆ ದೇವತೆಯ ಊರ್ಜೆಯೂ ಕಾರ್ಯನಿರತವಾಗಿ ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದ ಕಲೆಗೆ ದೇವತೆಯ ಆಶೀರ್ವಾದ ಸಿಗುತ್ತದೆ’, ಎಂಬುದು ಅರಿವಾಯಿತು. – ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜಿಕರ, ನೃತ್ಯ ಅಭ್ಯಾಸಕಿ
೨. ಈ ಸಂಶೋಧನೆಯ ಸಂದರ್ಭದಲ್ಲಿ ನೃತ್ಯ ಪ್ರಸ್ತುತ ಮಾಡುವ ಸಾಧಕಿಯರಿಗೆ ಬಂದಿರುವ ಅನುಭೂತಿ

೨ ಅ. ನೃತ್ಯದ ಮೊದಲು ಶಿವಲಿಂಗವನ್ನು ನೋಡುವಾಗ ಭಾವ ಜಾಗೃತಿಯಾಗಿ ’ಲಿಂಗ ಜಾಗೃತವಾಗಿದೆ’, ಎಂದು ಅರಿವಾಗುವುದು ಹಾಗೂ ನೃತ್ಯದ ನಂತರ ’ಶೀತಲ ಲಹರಿಗಳು ಬರುತ್ತಿದ್ದು ವಾತಾವರಣದ ಚೈತನ್ಯ ಹೆಚ್ಚಾಗಿದೆ’, ಎಂದು ಅರಿವಾಗುವುದು : ’ಮಂದಿರದಲ್ಲಿನ ಶಿವಲಿಂಗವನ್ನು ನೋಡಿದಾಗ ನನಗೆ ತುಂಬಾ ಭಾವಜಾಗೃತಿಯಾಯಿತು ಹಾಗೂ ನನಗೆ ಸೂಕ್ಷ್ಮದಿಂದ ಶಿವನ ಧ್ವನಿ ಕೇಳಿಸಿತು, ’ನೀನು ನಾರಾಯಣರಲ್ಲಿಂದ (ಸಚ್ಚಿದಾನಂದ ಪರಬ್ರಹ್ಮ ಡಾ, ಆಠವಲೆಯವರ ಆಶ್ರಮದಿಂದ) ಬಂದಿದ್ದಿಯಲ್ಲವೆ ?
ನಾನು ನಿನ್ನ ನೃತ್ಯ ನೋಡಲು ಉತ್ಸುಕನಾಗಿದ್ದೇನೆ.’ ಆಗ ಆ ಶಿವಲಿಂಗ ಜಾಗೃತವಾಗಿದೆ’, ಎಂದು ನನಗನಿಸಿತು. ಶಿವಲಿಂಗಕ್ಕೆ ನಮಸ್ಕಾರ ಮಾಡುವಾಗ ’ನಾನು ಶಿವಮಯವಾಗಿದ್ದೇನೆ ಎಂದು ಅನಿಸಿತು. ನೃತ್ಯ ಮಾಡುವಾಗ ನನಗೆ ಸೂಕ್ಷ್ಮದಲ್ಲಿ ಶಿವಲೋಕದ ವಾಯುಮಂಡಲ ಕಾಣಿಸಿತು ಹಾಗೂ ’ನನ್ನತ್ತ ಶೀತಲ ಲಹರಿಗಳು ಬರುತ್ತಿವೆ’, ಎಂದರಿವಾಯಿತು. ನೃತ್ಯ ಮುಗಿದ ನಂತರ ’ವಾತಾವರಣ ಸ್ತಬ್ಧವಾಗಿದ್ದು ಅಲ್ಲಿನ ಚೈತನ್ಯ ಹೆಚ್ಚಾಗಿದೆಯೆಂದು ನನಗೆ ಅರಿವಾಯಿತು.’ – ಕು. ಅಪಾಲಾ ಔಂಧಕರ್ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೧೫ ವರ್ಷ)
೨. ಆ. ನೃತ್ಯ ಮಾಡುವಾಗ ’ಮಂದಿರದ ಸುತ್ತಲೂ ಇರುವ ಶಿವಲಿಂಗದ ಪ್ರಭಾವಲಯ ಹೆಚ್ಚಾಗುತ್ತಿದೆ’, ಎಂಬುದು ಕಾಣಿಸಿ ‘ಓಂ’ನ ನಾಮಜಪ ತನ್ನಿಂತಾನೇ ಆರಂಭವಾಗುವುದು : ’ನೃತ್ಯ ಮಾಡುವಾಗ ನನಗೆ ವಾತಾವರಣ ತಂಪಾಗಿರುವುದು ಅರಿವಾಗುತ್ತಿತ್ತು. ನನಗೆ ಮಂದಿರದ ಸುತ್ತಲೂ ದೊಡ್ಡ ಪ್ರಭಾವಲಯ ಕಾಣಿಸಿತು. ಆ ಪ್ರಭಾವಲಯ ಮಂದಿರದಲ್ಲಿರುವ ಶಿವಲಿಂಗದ್ದಾಗಿದ್ದು ’ನನಗೆ ಅದು ಕ್ರಮೇಣ ಹೆಚ್ಚಾಗುತ್ತಿದೆ’, ಎಂದು ಅನಿಸಿತು. ನೃತ್ಯ ಮಾಡುವಾಗ ನನಗೆ ಶಿವಲಿಂಗದ ಚೈತನ್ಯ ಗ್ರಹಣ ಮಾಡಲು ಸಾಧ್ಯ ವಾಗುತ್ತಿತ್ತು. ನೃತ್ಯ ಮಾಡುವಾಗ ನನಗೆ ನನ್ನ ಕಣ್ಮುಂದೆ ಭಗವಾನ ಶಿವನ ಧ್ಯಾನಸ್ಥ ರೂಪ ಕಾಣಿಸಿ ನನ್ನಲ್ಲಿ ತನ್ನಿಂತಾನೇ ‘ಓಂ’ ಈ ನಾಮಜಪ ಆರಂಭವಾಯಿತು. ’ನಾನು ಈ ನೃತ್ಯ ಸೇವೆಯನ್ನು ಒಂದು ಬಿಲ್ವಪತ್ರೆಯ ರೂಪದಲ್ಲಿ ಭಗವಾನ ಶಿವನ ಚರಣಗಳಿಗೆ ಅರ್ಪಿಸುತ್ತಿದ್ದೇನೆ’, ಎಂದು ಅನಿಸಿತು.’
– ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜಿಕರ, ನೃತ್ಯ ಅಭ್ಯಾಸಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧.೨೦೨೩)
ಅಂತಾರಾಷ್ಟ್ರೀಯ ವೆಬಿನಾರ್‌ನಲ್ಲಿ ’ಸಂಗೀತ ಹಾಗೂ ನೃತ್ಯದ ಉಗಮಸ್ಥಾನ ಆಗಿರುವ ಭಾರತೀಯ ಮಂದಿರಗಳ ಮಹತ್ವ’ ಎಂಬ ವಿಷಯವನ್ನು ಪ್ರಸ್ತುತಪಡಿಸುವಿಕೆ’ಭಾರತೀಯ ವಿದ್ಯಾಭವನ (ದೆಹಲಿ)’ ಇವರು ಆಯೋಜಿಸಿದ ಅಂತಾರಾಷ್ಟ್ರೀಯ ವೆಬಿನಾರ್‌ನಲ್ಲಿ (ಟಿಪ್ಪಣಿ) ’ಸಂಗೀತ ಮತ್ತು ನೃತ್ಯದ ಉಗಮಸ್ಥಾನವಾಗಿರುವ ಭಾರತೀಯ ಮಂದಿರಗಳ ಮಹತ್ವ’, ಈ ವಿಷಯವನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನ ವಿಭಾಗದ ಸದಸ್ಯ ಶ್ರೀ. ಶಾನ್ ಕ್ಲಾರ್ಕ್ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಸೌ. ಶ್ವೇತಾ ಶಾನ್ ಕ್ಲಾರ್ಕ್ ಇವರು ಪ್ರಸ್ತುತಪಡಿಸಿದರು. ಅದರಲ್ಲಿನ ಸಂಶೋಧನೆಯ ಒಂದು ಭಾಗವನ್ನು ಇಲ್ಲಿ ಕೊಡಲಾಗಿದೆ. ಟಿಪ್ಪಣಿ – ಮಾಹಿತಿಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ನಡೆಯುವ ’ಆನ್‌ಲೈನ್’ ಸಭೆ’ – ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜಿಕರ್, ನೃತ್ಯ ಅಭ್ಯಾಸಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧.೨೦೨೩) |