ಕೆನಡಾದಲ್ಲಿ ಚರ್ಚ್ ನಡೆಸುವ ಶಾಲೆಯೊಂದರ ಆವರಣದಲ್ಲಿ ಹೂಳಿದ್ದ ೨೧೫ ಮಕ್ಕಳ ಶವಗಳು ಪತ್ತೆ !

೧೯ ನೇ ಶತಮಾನದಿಂದ ೧೯೭೦ ರವರೆಗೆ ಕ್ರೈಸ್ತರಾಗಲು ನಿರಾಕರಿಸಿದ ಸ್ಥಳೀಯ ಬುಡಕಟ್ಟು ಜನಾಂಗದ ಮಕ್ಕಳ ಮೇಲಿನ ದೌರ್ಜನ್ಯ !

ಕ್ರೈಸ್ತರ ಚರ್ಚ್‌ಗಳಲ್ಲಿ ಮಾತ್ರವಲ್ಲ, ಶಾಲೆಗಳಲ್ಲಿಯೂ ಮಕ್ಕಳ ಮೇಲೆಯೂ ಅತ್ಯಾಚಾರಗಳಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಇಂತಹ ಘಟನೆಗಳ ಬಗ್ಗೆ ಭಾರತೀಯ ಪ್ರಸಾರ ಮಾಧ್ಯಮಗಳು, ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಮೌನವಾಗಿರುತ್ತಾರೆ; ಏಕೆಂದರೆ ಅವರಿಗೆ ಇಂತಹ ಕ್ರೈಸ್ತರು ಜಾತ್ಯತೀತರೆಂದು ಅನಿಸುತ್ತದೆ !

ಕ್ಯಮೆಲೂಪ್ಸ್ (ಕೆನಡಾ) – ಇಲ್ಲಿನ ಕ್ಯಮೆಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಶಾಲಾ ಮೈದಾನದಲ್ಲಿ ೨೧೫ ಮಕ್ಕಳ ಶವಗಳನ್ನು ಹೂಳಿರುವ ಮಾಹಿತಿಯು ಬೆಳಕಿಗೆ ಬಂದಿದೆ. ನೆಲದೊಳಗಿನ ವಸ್ತುಗಳನ್ನು ಹುಡುಕುವ ರಾಡಾರ್‌ನಲ್ಲಿ ಈ ಶವಗಳು ಪತ್ತೆಯಾಗಿವೆ. ಈ ಶಾಲೆ ಒಂದು ಕಾಲದಲ್ಲಿ ಕೆನಡಾದ ಅತಿದೊಡ್ಡ ಶಾಲೆಯಾಗಿತ್ತು. ಇಲ್ಲಿ ಇನ್ನೂ ಹೆಚ್ಚಿನ ಮೃತದೇಹಗಳು ಪತ್ತೆಯಾಗಬಹುದು; ಏಕೆಂದರೆ ಶಾಲೆಯ ಅಂಗಳ ಮತ್ತು ಇತರ ಕೆಲವು ಭಾಗಗಳ ಪರಿಶೀಲನೆ ಇನ್ನೂ ಬಾಕಿ ಉಳಿದಿದೆ. ೧೯ ನೇ ಶತಮಾನದಿಂದ ೧೯೭೦ ದಶಕಗಳ ವರೆಗೆ ೧.೫ ಲಕ್ಷಕ್ಕೂ ಹೆಚ್ಚು ಮಕ್ಕಳು ಸರಕಾರಿ ಅನುದಾನದ ಕ್ರೈಸ್ತ ಶಾಲೆಗಳಿಗೆ ಶಿಕ್ಷಣ ಪಡೆಯಬೇಕಾಗುತ್ತಿತ್ತು. ಸ್ಥಳೀಯ ಬುಡಕಟ್ಟು ಜನಾಂಗದ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮಾಡಲಾಗುತ್ತಿತ್ತು. ಅವರಿಗೆ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶವಿರಲಿಲ್ಲ. ಅನೇಕ ಮಕ್ಕಳನ್ನು ಥಳಿಸುವುದು ಹಾಗೂ ನಿಂದೆಯನ್ನೂ ಮಾಡಲಾಗುತ್ತಿತ್ತು. ಈ ಅವಧಿಯಲ್ಲಿ ನಡೆದ ದೌರ್ಜನ್ಯದಿಂದ ೬೦೦೦ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜೊತೆಗೆ ೨೦೦೮ರಲ್ಲಿ ಕೆನಡಾದ ಸರಕಾರವು ಕ್ಷಮೆಯಾಚಿಸಿತು ಮತ್ತು ಶಾಲೆಗಳಲ್ಲಿ ದೈಹಿಕ ಮತ್ತು ಲೈಂಗಿಕ ಕಿರುಕುಳದ ಆರೋಪಗಳಾಗುತ್ತಿತ್ತು ಎಂಬುದನ್ನು ಸಹ ಒಪ್ಪಿಕೊಂಡಿದೆ. ಈ ಶಾಲೆಯನ್ನು ೧೯೭೮ ರಲ್ಲಿ ಮುಚ್ಚಲಾಯಿತು. ಮಕ್ಕಳ ಮೇಲಾದ ದೌರ್ಜನ್ಯಕ್ಕೆ ಚರ್ಚ್ ಕ್ಷಮೆಯಾಚಿಸಬೇಕು ಎಂದು ಸಮಾಜದಿಂದ ಒತ್ತಾಯ ಬರುತ್ತಿದೆ.