ಭಾರತ ಸಹಿತ ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕಯಾರಿಂದ ಹರಡಿದೆಯೆಂದು ಇದುವರೆಗೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೂ ಇದರ ಹಿಂದೆ ಚೀನಾ ಇದೆಯೆಂಬುದು ಜಗಜ್ಜಾಹೀರಾಗಿದೆ. ಕಳೆದ ವರ್ಷ ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಯುರೋಪ ಮತ್ತು ಅಮೇರಿಕಾದಲ್ಲಿ ಹಾಹಾಕಾರವೆದ್ದಿತ್ತು. ಆ ಸಮಯದಲ್ಲಿ ಭಾರತದ ಸ್ಥಿತಿ ಉತ್ತಮವಾಗಿತ್ತು. ಮೊದಲ ಕೆಲವು ವಾರಗಳಲ್ಲಿ ರೋಗಿಗಳ ಸಂಖ್ಯೆ ಸಂಪೂರ್ಣ ಹತೋಟಿಯಲ್ಲಿತ್ತು; ಆದರೆ ದೆಹಲಿಯ ನಿಜಾಮುದ್ದೀನ ಮರ್ಕಜನಲ್ಲಿ ತಬ್ಲಿಗಿ ಜಮಾತನ ಪ್ರಚಾರಕರ ಶಿಬಿರಗಳು ಜರುಗಿ ಅವರು ದೇಶಾದ್ಯಂತ ಮರಳಿ ಹೋದ ಬಳಿಕ ಆಕಸ್ಮಿಕವಾಗಿ ಕೊರೊನಾಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿತು. ಕೆಲವು ತಬ್ಲಿಗಿಗಳು ಕೊರೊನಾದಿಂದ ಮರಣ ಹೊಂದಿದರು. ಇದರಿಂದ ಪೊಲೀಸರಿಗೆ ಮರ್ಕಜ ಮೇಲೆ ಕ್ರಮ ಜರುಗಿಸಿ, ಅಲ್ಲಿದ್ದ ಎಲ್ಲ ಪ್ರಚಾರಕರನ್ನು ಪ್ರತ್ಯೇಕೀಕರಣಕ್ಕೆ ಕರೆದೊಯ್ಯಬೇಕಾಯಿತು. ಇದರಿಂದ ದೊಡ್ಡ ವಿವಾದವೆದ್ದಿತು. ‘ತಬ್ಲಿಗಿಗಳಿಂದ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಯಿತು, ಎಂದು ಪ್ರತಿಯೊಬ್ಬರೂ ಹೇಳತೊಡಗಿದರು. ಆಗ ಕೆಲವರು ತಮ್ಮ ತೇಜೋವಧೆಯಾಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯವು ‘ಹೀಗೆ ಹೇಳುವುದು ಸರಿಯಲ್ಲ, ಎಂದು ತೀರ್ಪು ನೀಡಿದಾಗ ಎಲ್ಲೆಡೆ ಶಾಂತವಾಯಿತು. ಇದರಿಂದ ಪ್ರಗತಿಪರರು, ಜಾತ್ಯತೀತವಾದಿಗಳು ಸಂತೋಷಪಟ್ಟರು; ಆದರೆ ಇದೇ ಪ್ರಗತಿಪರರು ಈ ವರ್ಷ ಕೊರೊನಾದ ೨ ನೆಯ ಅಲೆಯ ಸಂದರ್ಭದಲ್ಲಿ ಹರಿದ್ವಾರದ ಕುಂಭಮೇಳದಲ್ಲಿ ಕೊರೊನಾ ಸೊಂಕು ಪೀಡಿತ ಕೆಲವು ರೋಗಿಗಳು ಪತ್ತೆಯಾದಾಗ, ಲಾಠಿಯನ್ನು ಬಡಿಯುತ್ತ ‘ಹಾವು ಹಾವು ಎಂದು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು. ಗಾಳಿಯಲ್ಲಿ ಗುಂಡು ಹೊಡೆದಂತೆ ಕುಂಭಮೇಳದಿಂದ ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದೆಯೆಂದು ಆರೋಪಿಸತೊಡಗಿದರು. ತಬ್ಲಿಗಿಗಳಿಂದ ಕೊರೊನಾ ಸಂಸರ್ಗವಾಗಿರುವ ಅನೇಕ ಉದಾಹರಣೆಗಳು ಕಳೆದ ವರ್ಷ ಗಮನಕ್ಕೆ ಬಂದಿತ್ತು; ಆದರೆ ಕುಂಭಮೇಳದಿಂದ ದೇಶದಲ್ಲಿ ಕೊರೊನಾ ಸೋಂಕಿತರು ಹೆಚ್ಚಾದುದರ ಬಗ್ಗೆ ಒಂದೇ ಒಂದು ಉದಾಹರಣೆಯನ್ನು ಪುರಾವೆಗಳೊಂದಿಗೆ ಯಾರೂ ತೋರಿಸಲಿಲ್ಲ. ‘ಕುಂಭಮೇಳದಲ್ಲಿ ಕೊರೊನಾ ಸೋಂಕು ಪೀಡಿತ ರೋಗಿಗಳು ಕಂಡು ಬಂದರೂ, ಅವರಿಂದ ಕೊರೊನಾ ಹರಡಿತು ಎಂದು ಯಾರೂ ದೃಢಪಡಿಸಿಲ್ಲ. ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಗೋವಾ, ಕರ್ನಾಟಕ ರಾಜ್ಯಗಳಿಂದ ಭಾಗವಹಿಸಿದ ಭಕ್ತ ಸಂಖ್ಯೆಯು ಅಪಾರವಾಗಿರಲಿಲ್ಲ. ಆದರೂ, ಈ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕು ಹರಡಿದೆ. ಈ ವಿಷಯದಲ್ಲಿ ಮಾತ್ರ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ. ಕುಂಭಮೇಳ ಜರುಗಿದ ಉತ್ತರಾಖಂಡದಲ್ಲಿಯೂ ಸ್ಥಿತಿ ನಿಯಂತ್ರಣದಲ್ಲಿದೆ, ಎನ್ನುವುದನ್ನೂ ಇಲ್ಲಿ ಗಮನಿಸಬೇಕಾದ ಅವಶ್ಯಕತೆಯಿದೆ. ಹಿಂದೂಗಳ ಧಾರ್ಮಿಕ ಉತ್ಸವಗಳನ್ನು ಕಟುವಾಗಿ ಟೀಕಿಸುವ ಯಾವುದೇ ಅವಕಾಶವನ್ನು ಬಿಡದ ಇವರು ಈ ವಿಷಯದಲ್ಲಿ ಮಾತ್ರ ಮೌನವಹಿಸಿದ್ದಾರೆ. ಅನೇಕ ಜನ್ಮ ಹಿಂದೂಗಳು ಕುಂಭಮೇಳದ ಹೆಸರಿನಿಂದ ಬೊಬ್ಬೆ ಹೊಡೆಯ ತೊಡಗಿದರು; ಆದರೆ ಅವರು ಸೋಂಕು ಹೆಚ್ಚುತ್ತಿರುವ ಈ ಮೇಲಿನ ರಾಜ್ಯಗಳ ರೋಗಿಗಳ ವಿಷಯದಲ್ಲಿ ಏನೂ ಮಾತನಾಡುವುದಿಲ್ಲ ಎನ್ನುವುದನ್ನು ಗಮನಿಸಬೇಕು. ರಾಷ್ಟ್ರೀಯ ಮಾಧ್ಯಮಗಳೂ ಇದರ ವಸ್ತುನಿಷ್ಠ ವಿಶ್ಲೇಷಣೆಯನ್ನು ಮಾಡಲು ಪ್ರಯತ್ನಿಸಲಿಲ್ಲ. ಆದರೆ ಹಿಂದಿ ಭಾಷೆಯ ‘ಜಾಗರಣ ದಿನಪತ್ರಿಕೆಯು ಇದನ್ನು ಮಾಡಲು ಪ್ರಯತ್ನಿಸಿತು. ಇದು ಅತ್ಯಂತ ಶ್ಲಾಘನೀಯವಾಗಿದೆ. ‘ಕುಂಭಮೇಳದಿಂದ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ ವಾಗಲಿಲ್ಲ ಎನ್ನುವುದನ್ನು ‘ಜಾಗರಣವು ಅಂಕಿ-ಅಂಶಗಳ ಸಹಿತ ತೋರಿಸಿಕೊಟ್ಟಿದೆ. ‘ಜಾಗರಣ ಪತ್ರಿಕೆಯು ಸತ್ಯಶೋಧನ ಪತ್ರಿಕೋದ್ಯಮವನ್ನು ಮಾಡುತ್ತ ಕುಂಭಮೇಳದ ಕಡೆಗೆ ಬೆರಳು ತೋರಿಸುವವರನ್ನು ಬಯಲಿಗೆಳೆದಿದೆ. ‘ಜಾಗರಣ ಪತ್ರಿಕೆಯು ‘ಜಾಗರಣೆಯ ನೈಜ ಕಾರ್ಯವನ್ನು ಮಾಡಿದೆ, ಪತ್ರಿಕೋದ್ಯಮವು ಹೇಗಿರಬೇಕು ? ಎನ್ನುವ ಆದರ್ಶವನ್ನು ಅದರು ಎಲ್ಲರೆದುರಿಗೆ ಇಟ್ಟಿದೆ. ಪತ್ರಕರ್ತನು ಜಾಗೃತನಾಗಿದ್ದು, ಜನತೆಗೆ, ಸಮಾಜಕ್ಕೆ ಸರಿಯಾದ ಮಾಹಿತಿಯನ್ನು ನೀಡುವುದರೊಂದಿಗೆ ವಸ್ತುಸ್ಥಿತಿ ಯಾವುದು ? ಎಂದೂ ತೋರಿಸಿಕೊಡಬೇಕು. ಸ್ವಾತಂತ್ರ್ಯದ ನಂತರದ ಕಾಲಾವಧಿಯಲ್ಲಿ ಬೆರಳೆಣಿಕೆಯಷ್ಟು ದಿನಪತ್ರಿಕೆಗಳು ಅಥವಾ ಪತ್ರಿಕಾ ವರದಿಗಾರರು ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿರುವುದು ಕಂಡು ಬರುತ್ತದೆ. ಅದರಲ್ಲಿಯೂ ಕೆಲವು ಸಲ ರಾಜಕೀಯ ಲಾಭಕ್ಕಾಗಿ ಬಂಡವಾಳದಾರರ ದಿನಪತ್ರಿಕೆಗಳು ರಾಜಕೀಯ ಪಕ್ಷಗಳನ್ನು ಗುರಿ ಮಾಡುವ ಸಲುವಾಗಿಯೂ ಇಂತಹ ಶೋಧನಾ ಪತ್ರಿಕೋದ್ಯಮವನ್ನು ಮಾಡುತ್ತಿರುತ್ತವೆ. ಅದರಲ್ಲಿ ಅವರ ಸ್ವಾರ್ಥ ವಿರುತ್ತದೆ. ಕೆಲವೊಂದು ಸಲ ಶೋಧನಾ ಪತ್ರಿಕೋದ್ಯಮದ ಹೆಸರಿನಲ್ಲಿ ಸುಳ್ಳು ಮಾಹಿತಿಯನ್ನು ಸಹ ನೀಡಲಾಗುತ್ತದೆ. ಸದ್ಯದ ವಾರ್ತಾ ವಾಹಿನಿಗಳ ಕಾಲದಲ್ಲಿ ಪ್ರತ್ಯಕ್ಷ ಘಟನೆಯ ಸ್ಥಳದ ಮಾಹಿತಿಯನ್ನು ನೀಡಿ ಕೆಲವು ವಿಷಯಗಳನ್ನು ಬಹಿರಂಗ ಪಡಿಸಲಾಗುತ್ತದೆ; ಆದರೆ ವಿಶ್ಲೇಷಣೆ ಮಾಡಿ ಹಂಸಕ್ಷೀರನ್ಯಾಯ ಪದ್ಧತಿಯಿಂದ ಕಾರ್ಯ ನಿರ್ವಹಿಸುವ ಪ್ರಮಾಣ ಮಾತ್ರ ಅತ್ಯಲ್ಪವಾಗಿದೆ.
ರಾಜ್ಯ ಸರಕಾರಗಳ ಕಪಟತನ !
‘ಜಾಗರಣ ದಿನಪತ್ರಿಕೆಯು ಕುಂಭಮೇಳದಿಂದ ಕೊರೊನಾ ಸೋಂಕು ಹರಡಿಲ್ಲವೆಂದು ತೋರಿಸುವ ಅಂಕಿ-ಅಂಶಗಳನ್ನು ನೀಡಿದೆ. ಅದನ್ನು ಇಲ್ಲಿಯವರೆಗಂತೂ ಯಾರೂ ತಿರಸ್ಕರಿಸಿರುವ ಸುದ್ದಿ ಕಂಡು ಬಂದಿಲ್ಲ. ಕುಂಭಮೇಳಕ್ಕೆ ಬಂದಂತಹ ಭಕ್ತರು, ಸಾಧುಗಳು ತಮ್ಮ ಮನೆ, ಆಶ್ರಮ, ಮಠ ಇತ್ಯಾದಿ ಸ್ಥಳಗಳಿಗೆ ಮರಳಿದರು, ಅಲ್ಲಿ ಅವರಿಂದ ಇತರ ಜನರಿಗೆ ಸೋಂಕು ತಗುಲಿತು, ಎನ್ನುವ ಅಂಕಿ-ಅಂಶಗಳು ಯಾವುದೇ ರಾಜ್ಯಗಳು ನೀಡಿಲ್ಲ. ಈ ರಾಜ್ಯಗಳು ಈಗ ‘ಜಾಗರಣ ದಿನಪತ್ರಿಕೆಯು ಪ್ರಕಾಶಿಸಿರುವ ಅಂಕಿಅಂಶಗಳ ಸುದ್ದಿ ಸುಳ್ಳು, ಎಂದು ಸಾಕ್ಷ್ಯಾಧಾರಗಳೊಂದಿಗೆ ತೋರಿಸಿ ಕೊಡಿ ಎಂಬ ಸವಾಲನ್ನು ಸ್ವೀಕರಿಸುವರೇ ? ಯಾವ ಜನರು ಸಾಮಾಜಿಕ ಮಾಧ್ಯಮದಿಂದ ಕುಂಭಮೇಳವನ್ನು ಟೀಕಿಸುತ್ತಾ, ಅದನ್ನು ತಕ್ಷಣವೇ ನಿಲ್ಲಿಸುವಂತೆ ಕೋರಿದ್ದರೋ, ಅವರಾದರೂ ಈ ಅಂಕಿ-ಅಂಶಗಳ ಸಾಕ್ಷ್ಯಾಧಾರಗಳನ್ನು ತಿರಸ್ಕರಿಸುವರೇ ? ಭಾರತದಲ್ಲಿ ಯಾವುದೇ ಒಂದು ವಿಷಯ ಹರಡಲು ಸಮಯ ತಗಲುವುದಿಲ್ಲ. ಅವರ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿ ನೋಡುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಪತ್ರಿಕಾ ವರದಿಗಾರನಂತೂ ಯಾವುದೇ ಸುಳ್ಳು ಸುದ್ದಿಯನ್ನು ಹರಡಲೇ ಬಾರದು ಎನ್ನುವ ಅಲಿಖಿತ ನಿಯಮವಿದೆ. ‘ಜಾಗರಣ ದಿನಪತ್ರಿಕೆಯ ಶೋಧನಾ ಪತ್ರಿಕೋದ್ಯಮದಿಂದ ಉತ್ತರಾಖಂಡ ಸರಕಾರದ ಕಪಟತನವು ಬಯಲಾಗಿದೆ. ಕುಂಭಮೇಳಕ್ಕೆ ೬೫ ರಿಂದ ೭೦ ಲಕ್ಷ ಭಕ್ತರು ಉಪಸ್ಥಿತರಿದ್ದರೆಂದು ಸರಕಾರವು ಅಂಕಿ-ಅಂಶವನ್ನು ನೀಡಿತು; ಆದರೆ ಪ್ರತ್ಯಕ್ಷವಾಗಿ ೧೧ ಲಕ್ಷಕ್ಕಿಂತ ಹೆಚ್ಚು ಭಕ್ತರು ಕುಂಭಮೇಳಕ್ಕೆ ತಲುಪಲೇ ಇಲ್ಲ ಎನ್ನುವುದನ್ನು ‘ಜಾಗರಣ ದಿನಪತ್ರಿಕೆಯು ತೋರಿಸಿಕೊಟ್ಟಿದೆ. ಇದಕ್ಕೆ ಸರಕಾರವು ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ಸರಕಾರವು ಸುಳ್ಳು ಮಾಹಿತಿಯನ್ನು ನೀಡುತ್ತದೆಯೆಂದೇ ತಿಳಿಯಬೇಕಾಗುತ್ತದೆ. ಮೂಲದಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಭಾಜಪ ಸರಕಾರವಿರುವಾಗ ಈ ರೀತಿ ಸರಕಾರವು ತಪ್ಪು ಮಾಡುತ್ತಿದ್ದರೆ ಮತ್ತು ಇದರಿಂದ ಹಿಂದೂಗಳ ಧಾರ್ಮಿಕ ಉತ್ಸವಗಳ ತೇಜೋವಧೆಯಾಗುತ್ತಿದ್ದರೆ, ಅದನ್ನು ಅಕ್ಷಮ್ಯ ತಪ್ಪೆಂದೇ ತಿಳಿಯಬೇಕಾಗುತ್ತದೆ.
ಪತ್ರಕರ್ತರ ಜವಾಬ್ದಾರಿ !
‘ದೇಶದಲ್ಲಿ ಕೊರೊನಾದ ೨ ನೇ ಅಲೆಯಿರುವಾಗ ಕುಂಭಮೇಳದ ಆಯೋಜನೆಯನ್ನು ಮಾಡಬೇಕಾಗಿತ್ತೇ ?, ‘ಅದನ್ನು ಸಾಂಕೇತಿಕವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲವೇ ?, ಎಂದು ಕೆಲವು ಪ್ರಗತಿಪರ ಹಿಂದೂಗಳು ಪ್ರಶ್ನಿಸಿದ್ದರು. ‘ಕುಂಭಮೇಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮನವಿ ಮಾಡಿದ್ದರು. ಪ್ರತ್ಯಕ್ಷದಲ್ಲಿ ಹಾಗೆ ಏನೂ ಆಗಲಿಲ್ಲ. ಯಾವುದು ಸತ್ಯವಿದೆಯೋ, ಅದನ್ನು ಶೋಧಿಸಿ ಸಮಾಜದ ಎದುರಿಗೆ ಇಡಬೇಕಾಗಿದೆ. ಆಗಲೇ ಅದನ್ನು ನೈಜ ಪತ್ರಿಕೋದ್ಯಮವೆನ್ನಬಹುದು. ಪತ್ರಕರ್ತರಿಗೆ ‘ಸಂಜಯರ ಉಪಮೆಯನ್ನು ನೀಡಲಾಗುತ್ತದೆ. ಅದನ್ನು ನೋಡಿದರೆ ಪತ್ರಕರ್ತರು, ದಿನಪತ್ರಿಕೆಗಳು ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಇಂದು ದೇಶದಲ್ಲಿ ಸಾವಿರಾರು ದಿನಪತ್ರಿಕೆಗಳಿವೆ; ಆದರೆ ಅದರಲ್ಲಿ ಕೇವಲ ‘ಜಾಗರಣ ದಿನಪತ್ರಿಕೆಯೊಂದೇ ಸತ್ಯವನ್ನು ಶೋಧಿಸಲು ಪ್ರಯತ್ನಿಸಿತು. ಇದು ಭಾರತೀಯ ಪತ್ರಿಕೋದ್ಯಮಕ್ಕೆ ಖಂಡಿತವಾಗಿಯೂ ಶೋಭಿಸುವುದಿಲ್ಲ.