AP Muslim Reservation : ಆಂಧ್ರಪ್ರದೇಶದಲ್ಲಿ ಮುಸಲ್ಮಾನರಿಗೆ ಮೀಸಲಾತಿ ಮುಂದುವರಿಯುವುದು! – ತೆಲುಗು ದೇಶಂ

ಭಾಜಪ ನಿಲುವಿನೆಡೆಗೆ ಗಮನ !

ಭಾಜಪ ನೇತೃತ್ವದ ಒಕ್ಕೂಟದ ಮಹತ್ವದ ಅಂಗಪಕ್ಷವಾಗಿರುವ ತೆಲುಗು ದೇಶಂ ಪಕ್ಷದ ನಾಯಕ ರವೀಂದ್ರ ಕುಮಾರ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿ ಮುಸಲ್ಮಾನರ ಮೀಸಲಾತಿ ಮುಂದುವರಿಯಲಿದೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭಾಜಪ ನೇತೃತ್ವದ ಒಕ್ಕೂಟದ ಮಹತ್ವದ ಅಂಗಪಕ್ಷವಾಗಿರುವ ತೆಲುಗು ದೇಶಂ ಪಕ್ಷದ ನಾಯಕ ರವೀಂದ್ರ ಕುಮಾರ ಹೇಳಿದ್ದಾರೆ. ಮುಸಲ್ಮಾನರಿಗೆ ಮೀಸಲಾತಿ ನೀಡುವ ವಿರುದ್ಧ ಭಾಜಪ ನೀತಿ ಇರುವಾಗ ಈಗ ಮಿತ್ರಪಕ್ಷಗಳು ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿರುವಾಗ ಬಿಜೆಪಿ ಯಾವ ನಿಲುವನ್ನು ವಹಿಸುತ್ತದೆ? ಎನ್ನುವ ಕಡೆಗೆ ಎಲ್ಲರ ಗಮನವಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ನೀಡುವ ಅಂಶವನ್ನು ಬಿಜೆಪಿ ಪ್ರಶ್ನಿಸಿತ್ತು. ‘ಧರ್ಮದ ಆಧಾರದ ಮೇಲೆ ಮುಸಲ್ಮಾನರಿಗೆ ಮೀಸಲಾತಿ ನೀಡುವುದಿಲ್ಲ ಮತ್ತು ನಾವು ಅದನ್ನು ಎಂದಿಗೂ ನೀಡುವುದಿಲ್ಲ’, ಎನ್ನುವ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದರು. ಆಂಧ್ರಪ್ರದೇಶದ ಚುನಾವಣೆಯಲ್ಲಿ ಪರಾಭವಗೊಂಡ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತೆಲುಗು ದೇಶಂ ಪಕ್ಷದ ಬಗ್ಗೆ ಪ್ರತಿಕ್ರಿಯಿಸುವಾಗ, ‘ಟಿಡಿಪಿ ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕುವುದು’ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತ್ಯುತ್ತರ ನೀಡಿದ ತೆಲುಗು ದೇಶಂ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ಮುಸ್ಲಿಂ ಮೀಸಲಾತಿ ಮುಂದುವರಿಯುವುದು ಎಂದು ಪುನಃ ಭರವಸೆ ನೀಡಿದ್ದರು.