ಇಸ್ರೋ ಕಂಪನಿಯು ಸ್ವದೇಶಿ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ಗಳನ್ನು ಉತ್ಪಾದಿಸುವಲ್ಲಿ ಯಶಸ್ವಿ !

ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿರುವ ಇಸ್ರೋ ಕೊರೋನಾ ಸಮಯದಲ್ಲಿ ರೋಗಿಗಳಿಗೆ ಸಹಾಯ ಮಾಡಲು ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ ಉತ್ಪಾದಿಸಿರುವುದು ಶ್ಲಾಘನೀಯ !

ನವ ದೆಹಲಿ – ‘ಇಸ್ರೋ’ ಸಂಸ್ಥೆಗೆ ಸ್ವದೇಶಿ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ಅನ್ನು ಉತ್ಪಾದಿಸುವಲ್ಲಿ ಯಶಸ್ಸು ಸಿಕ್ಕಿದೆ. ‘ಆಕ್ಸಿಜನ್ ಸಪೋರ್ಟ’ ಮೇಲೆ ಅವಲಂಬಿಸಿರುವ ರೋಗಿಗಳಿಗೆ ಶೇ. ೯೫% ಕ್ಕಿಂತ ಹೆಚ್ಚು ಆಮ್ಲಜನಕವನ್ನು ಪೂರೈಸಲು ಈ ಸಲಕರಣೆಯಿಂದ ಸಾಧ್ಯವಾಗುತ್ತದೆ. ಈ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಅನ್ನು ‘ಶ್ವಾಸ’ ಎಂದು ಹೆಸರಿಡಲಾಗಿದೆ.

ಈ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ನಿಮಿಷಕ್ಕೆ ೧೦ ಲೀಟರ್ ಆಮ್ಲಜನಕವನ್ನು ಪೂರೈಸುವ ಸಾಮಥ್ರ್ಯವನ್ನು ಹೊಂದಿವೆ. ಇದರ ಮೂಲಕ ಒಂದೇ ಸಮಯದಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ೬೦೦ ವ್ಯಾಟ್ ವಿದ್ಯುತ್ ಸಾಮಥ್ರ್ಯವನ್ನು ಹೊಂದಿದೆ, ಅದೇರೀತಿ ೨೨೦ ವೋಲ್ಟ್, ೫೦ ಹರ್ಟ್ಸ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ತೂಕ ೪೪ ಕೆ.ಜಿ. ಇದೆ. ಈ ತಂತ್ರಜ್ಞಾನವನ್ನು ಇಡೀ ದೇಶಕ್ಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಇಸ್ರೋ ಸ್ಪಷ್ಟಪಡಿಸಿದೆ. ಆದ್ದರಿಂದ, ದೇಶದಲ್ಲಿ ಶೀಘ್ರದಲ್ಲೇ ಭಾರತೀಯ ತಯಾರಿಕೆಯ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿದೆ.