ಗೀತರಚನೆಕಾರ ಜಾವೇದ್ ಅಖ್ತರ್ ಅವರ ವಿಜ್ಞಾನ ಮತ್ತು ಧರ್ಮವನ್ನು ಟೀಕಿಸುವ ಹೇಳಿಕೆ
ನವ ದೆಹಲಿ – ಪ್ರಸಿದ್ಧ ಚಲನಚಿತ್ರ ಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಅವರು ವಿಜ್ಞಾನ ಮತ್ತು ಧರ್ಮದ ಕುರಿತು ಹೇಳಿಕೆ ನೀಡುವಾಗ ಅವು ಪರಸ್ಪರ ವಿರೋಧಾತ್ಮಕವಾಗಿದೆ ಎಂದು ನಿರ್ಧರಿಸಿದ್ದಾರೆ. ಅವರು ಮಾತನಾಡಿ, ಭಾರತದಲ್ಲಿ ಇಸ್ರೋದಲ್ಲಿ (ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ) ಓರ್ವ ವ್ಯಕ್ತಿಯು ಚಂದ್ರನ ಒಂದು ಪ್ರದೇಶಕ್ಕೆ ಉಪಗ್ರಹವನ್ನು ಕಳುಹಿಸುತ್ತಾರೆ, ಚಂದ್ರನ ಮೇಲೆ ಚಂದ್ರಲೋಕವಿದೆ. ಅಲ್ಲಿ ದೇವರು ವಾಸಿಸುತ್ತಾರೆ ಮತ್ತು ನೀವು ಅಲ್ಲಿಗೆ ಉಪಗ್ರಹವನ್ನು ಕಳುಹಿಸುತ್ತೀರಿ. ಉಪಗ್ರಹ ಅಲ್ಲಿಗೆ ತಲುಪಿದ ಬಳಿಕ ನೀವು ( ಇಸ್ರೋ ವಿಜ್ಞಾನಿಗಳು) ದೇವಸ್ಥಾನಕ್ಕೆ ಹೋಗುತ್ತೀರಿ, ಇದು ಒಂದು ರೀತಿ ಸ್ಕೀಝೋಫ್ರೇನಿಯಾ (ಒಂದು ಪ್ರಕಾರದ ಮನೋರೋಗ) ಆಗಿದೆ. ಮಾನವನ ಇತಿಹಾಸದಲ್ಲಿ ಈ ರೀತಿ ಮೊದಲಬಾರಿಗೆ ನಡೆಯುತ್ತಿದೆ, ನಿಮ್ಮ ಜ್ಞಾನ ಮತ್ತು ತಂತ್ರಜ್ಞಾನ ಹಾಗೂ ನಿಮ್ಮ ಧರ್ಮದ ವಿಚಾರಧಾರೆಗಳು ಒಂದೆಡೆ ಸೇರುವುದಿಲ್ಲ. ಎಂದು ಲೇಖಕ ಮತ್ತು ಗೀತರಚನೆಕಾರ ಜಾವೇದ ಅಖ್ತರ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜಾವೇದ್ ಅಖ್ತರ್ ಮಾತನಾಡಿ, ಎಲ್ಲಾ ಧರ್ಮಗಳು ಅಪವಾದತ್ಮಕವಾಗಿ ಕತ್ತಲೆಯ ಯುಗದಲ್ಲಿವೆ. ಅವುಗಳ ಮೂಲಗಳು ಕತ್ತಲೆಯ ಯುಗದೊಂದಿಗೆ ಜೋಡಿಸಲ್ಪಟ್ಟಿದೆ. ಜನರ ಹೊಕ್ಕುಳಬಳ್ಳಿಯು ಇನ್ನೂ ಕತ್ತಲೆಯ ಯುಗದೊಂದಿಗೆ ಜೋಡಿಸಲ್ಪಟ್ಟಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|