|
ಕೋಸಿಕಲಾಂ (ಉತ್ತರ ಪ್ರದೇಶ) – ಇಲ್ಲಿನ ಪಂಜಾಬಿ ಮಾರ್ಕೆಟ್ ನ ವಾಹಿದ್ ಕುರೇಶಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲಗಳ ಮೇಲೆ ‘ಪಂಜಾಬಿ ಮಾರ್ಕೆಟ್’ ಎಂದು ಬರೆಯುವ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದನು. ಇದರಿಂದ ಆಕ್ರೋಶಿತಗೊಂಡ ವ್ಯಾಪಾರಸ್ಥರು ಪೊಲೀಸರಿಗೆ ತಿಳಿಸಿದರು; ಆದರೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ಚೀಲಗಳಿಗೆ ವಿರೋಧ ವ್ಯಕ್ತಪಡಿಸಲಾಯಿತು ಆ ಬಳಿಕ ಪೊಲೀಸರ ಮೇಲೆ ಒತ್ತಡ ನಿರ್ಮಾಣವಾಯಿತು ಮತ್ತು ಅವರು ವಾಹಿದ್ ಕುರೇಶಿಯನ್ನು ಬಂಧಿಸಿದರು. ಶಾಂತಿಭಂಗ ಮಾಡಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ನಗರ ಪರಿಷತ್ತಿನ ತೆರಿಗೆ ಇಲಾಖೆಯಿಂದ ಅವನ ಅಂಗಡಿಯ ಮೇಲೆ ದಾಳಿ ನಡೆಸಿ ೨೫ ಕೆಜಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪರಿಷತ್ತಿನ ಕಾರ್ಯಕಾರಿ ಅಧಿಕಾರಿ ನಿಹಾಲ ಸಿಂಗ್ ಅವರು ಈ ಬಗ್ಗೆ ಮಾತನಾಡಿ, ಯಾವುದೇ ರಸ್ತೆಯ, ಪರಿಸರದ ಅಥವಾ ಮಾರುಕಟ್ಟೆಯ ಹೆಸರನ್ನು ಬದಲಾವಣೆ ಮಾಡುವ ಅಥವಾ ಹೆಸರಿಡುವ ಅಧಿಕಾರ ಕೇವಲ ನಗರ ಪರಿಷತ್ತಿಗೆ ಮಾತ್ರ ಇದೆ. ವಾಹಿದ್ ಕುರೇಶಿಯ ಈ ಕೃತ್ಯದಿಂದ ಇಲ್ಲಿನ ವಾತಾವರಣ ಹಾಳಾಯಿತು. ಅಂಗಡಿಯವನಿಗೆ ನೋಟಿಸ್ ನೀಡಲಾಗಿದ್ದು ೩ ದಿನದಲ್ಲಿ ಉತ್ತರ ನೀಡಲು ಸೂಚಿಸಲಾಗಿದೆ. ಆ ಬಳಿಕ ಯೋಗ್ಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಪಾದಕೀಯ ನಿಲುವು
|