ಭಾರತೀಯ ಕ್ರಾಂತಿಪರ್ವದಲ್ಲಿನ ಬಾಂಬ್‌ನ ಉದಯ ಮತ್ತು ಸ್ವಾತಂತ್ರ್ಯವೀರ ಸಾವರಕರರ ದೂರದೃಷ್ಟಿ !

ಸ್ವಾತಂತ್ರ್ಯವೀರ ಸಾವರಕರ

೧೯೦೮ ರಲ್ಲಿ ಸಶಸ್ತ್ರ ಭಾರತೀಯ ಕ್ರಾಂತಿಕಾರರ ಕೈಯಲ್ಲಿ ಒಂದು ವಿನಾಶಕಾರಿ ಅಸ್ತ್ರವು ಸಿಕ್ಕಿತು, ಆ ಅಸ್ತ್ರವೆಂದರೆ ಬಾಂಬ್. ಹೇಮಚಂದ್ರ ದಾಸರು ರಷಿಯಾದಿಂದ ಈ ಅಸ್ತ್ರವನ್ನು ತಯಾರಿಸುವ ಮಾಹಿತಿಯನ್ನು ಭಾರತದಲ್ಲಿ ತಂದರು. ಅವರು ಅದನ್ನು ಸೇನಾಪತಿ ಬಾಪಟ್‌ರಿಗೆ ಕೊಟ್ಟರು. ಇಂಗ್ಲೆಂಡ್‌ನಲ್ಲಿ ಇಂಡಿಯಾ ಹೌಸ್ನ ಕೆಳಮಾಳಿಗೆಯಲ್ಲಿ ಸಾವರಕರರೊಂದಿಗೆ ಅನೇಕ ಪ್ರಯೋಗಗಳನ್ನು ಮಾಡಿದ ನಂತರ ಬಾಂಬ್‌ನಂತಹ ಒಂದು ಅಸ್ತ್ರವು ಸಿದ್ಧವಾಯಿತು. ಸೇನಾಪತಿ ಬಾಪಟ್‌ರ ಮನಸ್ಸಿನಲ್ಲಿ ಅದರ ಪ್ರಯೋಗವನ್ನು ಅಲ್ಲಿಯೇ ಹೌಸ್ ಆಫ್ ಕಾಮನ್ಸ್ ಮೇಲೆ ಮಾಡಬೇಕೇಂದಿತ್ತು; ಆದರೆ ಸ್ವಾತಂತ್ರ್ಯವೀರ ಸಾವರಕರರು ಅವರನ್ನು ಹಾಗೆ ಮಾಡದಂತೆ ತಡೆದರು. ಹಾಗೆ ಮಾಡಿದ್ದರೆ ಬಾಂಬ್ ಹಾಕಿದವನನ್ನು ಬಂಧಿಸಿದ ಕೂಡಲೇ ಹಿಂದೂ ಆಗಿದ್ದಾನೆ, ಎಂದು ತಿಳಿಯುತ್ತಿತ್ತು ಮತ್ತು ಶಂಕಿತನೆಂದು ಯುರೋಪಿನಲ್ಲಿದ್ದ ಹಿಂದೂ ವಿದ್ಯಾರ್ಥಿಗಳನ್ನು ಪೀಡಿಸಲಾಗುತ್ತಿತ್ತು. – ಡಾ. ಸಚ್ಚಿದಾನಂದ ಶೆವಡೆ