ತಮಿಳುನಾಡಿನ ಮುಖ್ಯ ಗಣಪತಿ ದೇವಸ್ಥಾನಗಳ ಪೈಕಿ ಮೊದಲನೆಯದಾದ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನ !

ಸ್ವಯಂಭೂ ಶ್ರೀ ಕರ್ಪಗ ವಿನಾಯಗರ (ಗಣಪತಿ) ಚೈತನ್ಯಮಯ ಮೂರ್ತಿ

ದೇವಸ್ಥಾನದ ಇತಿಹಾಸ

ಪಿಳ್ಳೈಯಾರಪಟ್ಟಿ (ಪಿಳ್ಳೈಯಾರ ಅಂದರೆ ತಮಿಳು ಭಾಷೆಯಲ್ಲಿ ಶ್ರೀ ಗಜಾನನ) ಇಲ್ಲಿನ ಸ್ವಯಂಭೂ ಗಣಪತಿಯ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ. ಈ ದೇವಸ್ಥಾನವು ಒಂದು ಸಾವಿರ ವರ್ಷಗಳ ಹಿಂದೆ ಪಲ್ಲವ ರಾಜರ ಕಾಲದಲ್ಲಿ ಕಟ್ಟಲಾಗಿದೆ. ಗಣಪತಿಯ ಆಕಾರವು ಬೆಟ್ಟದಿಂದಲೇ ಉದ್ಭವಿಸಿದೆ. ದೇವಸ್ಥಾನದ ಹಿಂದೆ ಹೋದರೆ ನಮಗೆ ಈ ಬೆಟ್ಟದ ದರ್ಶನವಾಗುತ್ತದೆ. ಗಣೇಶನ ಸ್ವಯಂಭೂ ಆಕಾರದ ರಹಸ್ಯದ ಕಾಲಖಂಡವು (ಇತಿಹಾಸವು) ಯಾರಿಗೂ ಗೊತ್ತಿಲ್ಲ. ಈ ಗಣಪತಿಯ ಬಲಗೈಯಲ್ಲಿ ಶಿವಲಿಂಗವನ್ನು ಹಿಡಿದಿರುವುದನ್ನು ಕಂಡುಬರುತ್ತದೆ. ಸಾಮಾನ್ಯವಾಗಿ ಶ್ರೀ ಗಣೇಶನಿಗೆ ೪ ಕೈಗಳಿರುತ್ತವೆ. ಈ ಸ್ವಯಂಭೂ ಮೂರ್ತಿಗೆ ಮಾತ್ರ ೨ ಕೈಗಳಿವೆ. ಮೂರ್ತಿಯ ಹಿಂದೆ ಬೆಟ್ಟದಲ್ಲಿಯೇ ಒಂದು ಶಿವಲಿಂಗವೂ ತನ್ನಷ್ಟಕ್ಕೆ ಸಿದ್ಧವಾಗಿದೆ; ಆದರೆ ಈ ಶಿವಲಿಂಗದ ದರ್ಶನವನ್ನು ನಮಗೆ ಪಡೆಯಲು ಸಾಧ್ಯವಾಗುವುದಿಲ್ಲ.

ಸ್ವಯಂಭೂ ಶ್ರೀ ಗಜಾನನನ ದೇವಸ್ಥಾನ ಮತ್ತು ದೇವಸ್ಥಾನದ ಎದುರಿಗೆ ಇರುವ ಪವಿತ್ರ ಕೆರೆ