ಕುಮಾರಿ: ಇವಳ ಪೂಜೆಯಲ್ಲಿ ಹೂವು, ಹೂವಿನ ಮಾಲೆ, ಹುಲ್ಲು, ಎಲೆ, ಮರಗಳ ತೊಗಟೆ, ಹತ್ತಿಯ ನೂಲು, ಭಂಡಾರ (ಅರಿಶಿನ), ಸಿಂಧೂರ, ಕುಂಕುಮ ಇತ್ಯಾದಿಗಳಿಗೆ ಮಹತ್ವವಿರುತ್ತದೆ. ಚಿಕ್ಕಮಕ್ಕಳಿಗೆ ಇಷ್ಟವಾಗುವಂತಹ ಸಂಗತಿ ಗಳನ್ನು ಈ ದೇವಿಗೆ ಅರ್ಪಿಸುತ್ತಾರೆ.
ರೇಣುಕಾ, ಅಂಬಾಬಾಯಿ ಮತ್ತು ತುಳಜಾಭವಾನಿ : ವಿವಾಹದಂತಹ ಯಾವುದಾದರೊಂದು ವಿಧಿಯ ನಂತರ ಈ ಕುಲದೇವತೆ ಇರುವವರ ಮನೆಯಲ್ಲಿ ದೇವಿಯ ಗೊಂದಲವನ್ನು (ಒಂದು ಕುಲಾಚಾರ) ಹಾಕುತ್ತಾರೆ. ಕೆಲವರ ಮನೆಯಲ್ಲಿ ವಿವಾಹದಂತಹ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದ್ದರಿಂದ ಸತ್ಯನಾರಾಯಣನ ಪೂಜೆಯನ್ನು ಮಾಡುತ್ತಾರೆ ಅಥವಾ ಕೋಕಣಸ್ಥ ಬ್ರಾಹ್ಮಣರಲ್ಲಿ ದೇವಿಗೆ ಹಾಲು-ಮೊಸರನ್ನು ಅರ್ಪಿಸುತ್ತಾರೆ, ಇದು ಸಹ ಹಾಗೇ ಆಗಿದೆ.
ತ್ರಿಪುರಭೈರವಿ: ಇವಳು ಓರ್ವತಾಂತ್ರಿಕ ದೇವತೆಯಾಗಿದ್ದಾಳೆ. ಇವಳು ‘ಧರ್ಮ, ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳನ್ನು ಪ್ರಾಪ್ತಮಾಡಿಕೊಡುವ ದೇವತೆಯಾಗಿದ್ದಾಳೆ, ಎಂದು ಮನ್ನಿಸಲಾಗಿದೆ. ಈ ದೇವಿಯು ಶಿವಲಿಂಗವನ್ನು ಭೇದಿಸಿ ಹೊರಗೆ ಬಂದಿದ್ದಾಳೆ. ಕಾಲಿಕಾಪುರಾಣದಲ್ಲಿ ಇವಳ ವರ್ಣನೆಯನ್ನು ನೀಡಿದ್ದಾರೆ. ಎಲ್ಲಾ ರೂಪಗಳಲ್ಲಿ ಭೈರವಿಯನ್ನು ತ್ರಿಪುರಳ ಪ್ರಭಾವಿ ರೂಪವೆಂದು ಭಾವಿಸಲಾಗಿದೆ. ಅವಳ ಪೂಜೆಯನ್ನು ಎಡಗೈಯಿಂದ ಮಾಡುತ್ತಾರೆ. ಅವಳಿಗೆ ಕೆಂಪು ಬಣ್ಣದ ರಕ್ತವರ್ಣ ಮದ್ಯ, ಕೆಂಪು ಹೂವು, ಕೆಂಪು ವಸ್ತ್ರ ಮತ್ತು ಸಿಂಧೂರ ಈ ವಸ್ತುಗಳು ಅವಳಿಗೆ ಪ್ರಿಯವಾಗಿವೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶಕ್ತಿಯ ಪ್ರಾಸ್ತಾವಿಕ ವಿವೇಚನೆ)