‘ವಸಿಷ್ಠ ಶಬ್ದದ ಅರ್ಥ ಮತ್ತು ಅವರ ಕಾರ್ಯ !
ವಸಿಷ್ಠ ಎಂದರೆ ಅತ್ಯಂತ ಪ್ರಕಾಶಮಾನ, ಎಲ್ಲದರಲ್ಲಿ ಉತ್ಕೃಷ್ಟ, ಎಲ್ಲರಲ್ಲೂ ಶ್ರೇಷ್ಠ ಮತ್ತು ಮಹಿಮಾವಂತ. ಮಹರ್ಷಿ ವಸಿಷ್ಠರು ಬ್ರಹ್ಮದೇವರ ೧೦ ಜನ ಮಾನಸಪುತ್ರರಲ್ಲಿ ಒಬ್ಬರಾಗಿದ್ದಾರೆ. ಅವರು ಸಂತ ಶಿರೋಮಣಿ, ಗುರು ಶಿರೋಮಣಿ, ಜ್ಞಾನ ಶಿರೋಮಣಿ ಆಗಿದ್ದಾರೆ. ಅಧ್ಯಾತ್ಮದಲ್ಲಿರುವ ಎಲ್ಲ ಮೆಟ್ಟಿಲುಗಳು ಅಥವಾ ಪದವಿಗಳ ಶಿಖರದಲ್ಲಿ ಗುರು ವಸಿಷ್ಠರು ವಿರಾಜಮಾನರಾಗಿದ್ದಾರೆ. ಮಹರ್ಷಿ ವಸಿಷ್ಠರು ಋಷಿಗಳ ಋಷಿ ಮತ್ತು ಮಹರ್ಷಿಗಳ ಮಹರ್ಷಿ ಆಗಿದ್ದಾರೆ. ಋಷಿ ಪರಂಪರೆಯ ಸರ್ವೋಚ್ಚ ಹುದ್ದೆಯಾದ ‘ಬ್ರಹ್ಮರ್ಷಿ ರೂಪದಲ್ಲಿ ಅವರು ಪ್ರತಿಷ್ಠಿತರಾಗಿದ್ದಾರೆ.
ಪ್ರಭು ಶ್ರೀರಾಮನ ಅವತಾರ ಕಾರ್ಯದಲ್ಲಿ ಕೊಡುಗೆ !
ತ್ರೇತಾಯುಗದಲ್ಲಿ ಭೂಮಿಯ ಮೇಲೆ ಎಲ್ಲೆಡೆ ಅಧರ್ಮ ತಾಂಡವವಾಡುತ್ತಿದ್ದಾಗ, ಅವತಾರ ಧರಿಸುವ ಕಾರ್ಯದಲ್ಲಿ ಮಹರ್ಷಿ ವಸಿಷ್ಠರ ಅಮೂಲ್ಯವಾದ ಕೊಡುಗೆಯಿದೆ. ವಸಿಷ್ಠರೆಂದರೆ ಸಾಕ್ಷಾತ್ ಶ್ರೀವಿಷ್ಣುವಿನ ಅವತಾರವಾದ ಪ್ರಭು ಶ್ರೀರಾಮನ ಗುರುಗಳು ! ಪ್ರಭು ಶ್ರೀರಾಮನ ಜೀವನಚರಿತ್ರೆಯು ಮಹರ್ಷಿ ವಸಿಷ್ಠರ ಉಲ್ಲೇಖವಿಲ್ಲದೆ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ವಸಿಷ್ಠರು ಪ್ರಭು ಶ್ರೀರಾಮನ ಅವತಾರತ್ವದ ಬಗ್ಗೆ ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ಕಾಲಕಾಲಕ್ಕೆ ಶ್ರೀರಾಮಾವತಾರದ ಕೀರ್ತಿಯನ್ನು ಸಾರಿದರು. ಇದರಿಂದ ಶ್ರೀರಾಮಾವತಾರದ ಮಹಾತ್ಮೆಯು ಎಲ್ಲರಿಗೆ ತಿಳಿಯಲು ಸಾಧ್ಯವಾಯಿತು. ರಾಮಾಯಣದ ಯಾವುದೇ ಘಟನೆ ಮಹರ್ಷಿ ವಸಿಷ್ಠರಿಲ್ಲದೆ ಪೂರ್ಣ ಗೊಳ್ಳಲು ಸಾಧ್ಯವಿಲ್ಲ. ರಾಮಾಯಣದ ಪ್ರತಿಯೊಂದು ಪ್ರಸಂಗಕ್ಕೂ ಮಹರ್ಷಿ ವಸಿಷ್ಠರ ದಿವ್ಯತೆಯ ಸ್ಪರ್ಶವಾಗಿದೆ. ಅವರ ಕಾರ್ಯವೇ ಅಷ್ಟು ಶ್ರೇಷ್ಠ ಮತ್ತು ಮಹತ್ವಪೂರ್ಣವಾಗಿದೆ. ವಸಿಷ್ಠರು ತಮ್ಮ ಜ್ಞಾನ ಮತ್ತು ಪುಣ್ಯದ ಸಹಾಯದಿಂದ ರಘುವಂಶಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟರು. ಮಹರ್ಷಿ ವಸಿಷ್ಠರು ದಶರಥನಿಗೆ ಪುತ್ರಪ್ರಾಪ್ತಿಗಾಗಿ ‘ಪುತ್ರಕಾಮೇಷ್ಟಿ ಯಾಗ ಮಾಡಲು ಹೇಳಿದರು. ವನವಾಸವನ್ನು ಪೂರ್ಣಗೊಳಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಮರಳಿದಾಗ ಶ್ರೀರಾಮಪ್ರಭುವಿಗೆ ಪಟ್ಟಾಭಿಷೇಕ ಮಾಡಿದವರು ಮಹರ್ಷಿ ವಸಿಷ್ಠರೇ ಆಗಿದ್ದರು. ಗುರು ವಸಿಷ್ಠರು ಅನೇಕ ಪ್ರಸಂಗಗಳಲ್ಲಿ ಮತ್ತು ಅನೇಕ ಮಹತ್ವಪೂರ್ಣ ನಿರ್ಧಾರಗಳಲ್ಲಿ ಶ್ರೀರಾಮನಿಗೆ ಮಾರ್ಗದರ್ಶನ ಮಾಡಿದರು. ಅವರು ಶ್ರೀರಾಮನಿಂದ ವಿಶ್ವಕಲ್ಯಾಣಾರ್ಥವಾಗಿ ಅನೇಕ ಯಜ್ಞಗಳನ್ನೂ ಮಾಡಿಸಿಕೊಂಡರು. ಅನೇಕ ಬಾರಿ ಆಪತ್ಕಾಲೀನ ಪ್ರಸಂಗಗಳಲ್ಲಿ ಅವರು ಪ್ರಜೆಗಳನ್ನು ರಕ್ಷಿಸಿದರು. ಅವರ ಕೊಡುಗೆಯಿಂದಾಗಿ ರಾಮರಾಜ್ಯದ ಸ್ಥಾಪನೆ ಸಾಧ್ಯವಾಯಿತು.
(ಉಲ್ಲೇಖ: ಭಕ್ತಿಸತ್ಸಂಗ, ಸನಾತನ ಸಂಸ್ಥೆ)

ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !