ಬ್ರಹ್ಮದೇವರ ೧೦ ಮಾನಸಪುತ್ರರಲ್ಲಿ ಒಬ್ಬರೆಂದರೆ ಅತ್ರಿಋಷಿ ! ಅತ್ರಿ ಋಷಿಗಳ ಉತ್ಪತ್ತಿಯು ಬ್ರಹ್ಮದೇವರ ನೇತ್ರಗಳಿಂದಾಗಿದೆ ಎಂಬ ಪೌರಾಣಿಕ ಸಂದರ್ಭಗಳಿವೆ. ಯಾರಲ್ಲಿ ಸತ್ವ, ರಜ ಮತ್ತು ತಮ ಎಂಬ ಮೂರೂ ಗುಣಗಳಿಲ್ಲವೋ, ಅಂದರೆ ಯಾರು ಈ ತ್ರಿಗುಣಗಳನ್ನೂ ಮೀರಿದ್ದಾರೋ, ಅವರೇ ಅತ್ರಿ ! |
ಮಹರ್ಷಿ ಅತ್ರಿಯವರ ವೈದಿಕ ಕಾರ್ಯ !
ಮಹರ್ಷಿ ಅತ್ರಿಯವರು ವೈದಿಕ ಕಾಲದ ಸೂಕ್ತದ್ರಷ್ಟಾರರಾಗಿದ್ದರು. ಋಗ್ವೇದದ ಐದನೇ ಮಂಡಲದಲ್ಲಿನ ೩೭ ರಿಂದ ೪೩ ಮತ್ತು ೭೬, ೭೭ ನೇ ಸೂಕ್ತಗಳನ್ನು ಅವರು ರಚಿಸಿದರು. ಅವರು ವಾಗ್ದೇವಿ ಮತ್ತು ಪ್ರಜಾಪತಿಯ ಪುತ್ರರಾಗಿದ್ದರು. ಅವರು, ‘ವೈದಿಕ ಮಂತ್ರಗಳ ಅಧಿಕಾರಪೂರ್ವಕ ಜಪದಿಂದ ಎಲ್ಲ ರೀತಿಯ ಪಾಪ-ಕ್ಲೇಶಗಳು ನಾಶವಾಗುತ್ತವೆ ಎಂದು ಹೇಳಿದ್ದಾರೆ. ಪಠಿಸುವವನು ಪವಿತ್ರನಾಗುತ್ತಾನೆ. ಅವನಿಗೆ ಜನ್ಮಾಂತರದ ಜ್ಞಾನ ಪ್ರಾಪ್ತವಾಗುತ್ತದೆ’ ಎಂದು ಹೇಳಿದರು. ಅತ್ರಿ ಋಷಿಗಳು ಸಮಾಜಕ್ಕೆ ‘ಸದಾಚಾರ ಮತ್ತು ಧರ್ಮಾಚರಣೆಯೊಂದಿಗೆ ಉತ್ತಮ ಜೀವನಕ್ರಮ ಹೇಗಿರಬೇಕು ?’ ಎಂದು ಹೇಳಿ ಸ್ಫೂರ್ತಿ ನೀಡಿದರು. ಅವರು ’ಮಾನವನ ಜೀವನದ ಕರ್ತವ್ಯವೇನಿರಬೇಕು ?’
ಎಂಬುದರ ಕುರಿತು ಉಪದೇಶಿಸಿದರು. ಮಾನವನಿಗೆ ಮಾಡಿದ ಈ ಮಾರ್ಗದರ್ಶನದ ಸೂತ್ರಗಳನ್ನು ‘ಆತ್ರೇಯ ಧರ್ಮಶಾಸ್ತ್ರ’ ಎಂದು ಗುರುತಿಸಲಾಗುತ್ತದೆ. ಇದರಲ್ಲಿ ಅವರು ವೇದಗಳಲ್ಲಿನ ಸೂಕ್ತಗಳು ಮತ್ತು ಮಂತ್ರಗಳ ಮಹಾತ್ಮೆಯನ್ನೂ ಹೇಳಿದ್ದಾರೆ. ಮಹರ್ಷಿ ಅತ್ರಿಯವರು ಎಷ್ಟೊಂದು ಬೃಹತ್ ಕಾರ್ಯವನ್ನು ಮಾಡಿದ್ದಾರೆಂದರೆ, ಅದನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ತಪಸ್ವಿ ಮಹರ್ಷಿ ಅತ್ರಿಯವರು ಖಗೋಳ
ಶಾಸ್ತ್ರಕ್ಕೆ ಸಂಬಂಧಿಸಿದ ಶೋಧನೆಗಳನ್ನೂ ಮಾಡಿದ್ದರು. ಅವರು ಮೊದಲ ಖಗೋಳಶಾಸ್ತ್ರಜ್ಞ ರಾಗಿದ್ದರು. ಇಂದು ವಿಜ್ಞಾನವು ಅನೇಕ ಉಪಕರಣ ಗಳ ಆಧಾರದಿಂದ ಇಂತಹ ಶೋಧನೆ ಮಾಡಿದೆ; ಆದರೆ ಅತ್ರಿ ಋಷಿಗಳಿಗೆ ತಮ್ಮ ತಪಸ್ಸಿನ ಸಾಮರ್ಥ್ಯದಿಂದ ಅಂತಃಪ್ರೇರಣೆ ಪ್ರಾಪ್ತವಾಗಿ ಆ ದಿವ್ಯ ದೃಷ್ಟಿಯಿಂದ ಸೂರ್ಯಗ್ರಹಣದ ಜ್ಞಾನವು ಇಡಿ ಮನುಕುಲಕ್ಕೆ ಲಭ್ಯವಾಯಿತು.
(ಆಧಾರ: ಭಕ್ತಿಸತ್ಸಂಗ, ಸನಾತನ ಸಂಸ್ಥೆ)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !