ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ಇಂದಿನವರೆಗೆ ೧,೩೦೦ ಕ್ಕೂ ಹೆಚ್ಚು ಯಜ್ಞ ಮತ್ತು ಅನುಷ್ಠಾನಗಳನ್ನು ಮಾಡಲಾಗಿದೆ. ಇವುಗಳಲ್ಲಿನ ಅನೇಕ ಅನುಷ್ಠಾನಗಳನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸ್ವತಃ ಮಾಡಿದ್ದಾರೆ. ಈ ಎಲ್ಲಾ ಯಜ್ಞಗಳ ಮತ್ತು ಅನುಷ್ಠಾನಗಳ ಸಂಕಲ್ಪವು ‘ರಾಮರಾಜ್ಯದ ನಿರ್ಮಿತಿಗಾಗಿ ಆಗಿದೆ ! ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕಳೆದ ೧೨ ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಾದ್ಯಂತ ಪ್ರವಾಸ ಮಾಡಿ, ನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ ಧಾರ್ಮಿಕ ವಿಧಿ ಮತ್ತು ಅನುಷ್ಠಾನಗಳನ್ನು ಮಾಡುತ್ತಿದ್ದಾರೆ. ಸಮಷ್ಟಿಯ (ಸಮಾಜದ) ಕಲ್ಯಾಣಕ್ಕಾಗಿ ಅವಿರತವಾಗಿ ಪ್ರವಾಸ ಮಾಡುವ ಬಹುಶಃ ಅವರು ಭೂಮಿಯ ಮೇಲಿನ ಏಕೈಕ ಮಹಿಳಾ ಸಂತರಾಗಿರಬಹುದು. ಯಜ್ಞ ಮತ್ತು ಅನುಷ್ಠಾನಗಳ ಮಾಧ್ಯಮದಿಂದ ಪ್ರಾಪ್ತವಾಗುವ ಆಧ್ಯಾತ್ಮಿಕ ಶಕ್ತಿಯು ಖಂಡಿತವಾಗಿಯೂ ಸಾಧಕರ ಸಾಧನೆಗೆ ಹಾಗೂ ಸಜ್ಜನರ ಧರ್ಮಕಾರ್ಯಕ್ಕೆ ವೇಗವನ್ನು ನೀಡುತ್ತದೆ.

ಯಾವುದೇ ಕಾರ್ಯಕ್ಕೆ ವೇಗವನ್ನು ನೀಡಲು ಶಕ್ತಿಯ ಅವಶ್ಯಕತೆ ಇರುತ್ತದೆ. ರಾಮರಾಜ್ಯದ ನಿರ್ಮಾಣದ ಪ್ರಕ್ರಿಯೆಯು ಮುಖ್ಯವಾಗಿ ಆಧ್ಯಾತ್ಮಿಕ ಸ್ತರಕ್ಕೆ ಸಂಬಂಧಿಸಿದ್ದರಿಂದ, ರಾಮರಾಜ್ಯದ ನಿರ್ಮಾಣಕ್ಕೆ ವೇಗ ಬರಲು ಆಧ್ಯಾತ್ಮಿಕ ಶಕ್ತಿಯೇ ಆವಶ್ಯಕವಾಗಿರುತ್ತದೆ. ಸಮಷ್ಟಿ ಸಂಕಲ್ಪದಿಂದ ನಡೆಯುವ ಯಜ್ಞಯಾಗಾದಿಗಳಿಂದ ಹಾಗೂ ಭಾರತದಾದ್ಯಂತ ಇರುವ ಸಂತ-ಮಹಾತ್ಮರ ತಪಸ್ಸಿನ ಶಕ್ತಿಯಿಂದ ಈ ಆಧ್ಯಾತ್ಮಿಕ ಶಕ್ತಿಯು ಲಭಿಸುತ್ತದೆ. ಮೇ ೧೭ ರಂದು ಮುಂಬಯಿಯಲ್ಲಿ ನಡೆದ ‘ರಾಜಮಾತಂಗಿ ಮಹಾಯಜ್ಞವೂ ಸಾಧಕರ ಸಾಧನೆಗೆ ವೇಗವನ್ನು ನೀಡುವ, ಜನಕಲ್ಯಾಣವನ್ನು ಸಾಧಿಸುವ ಮತ್ತು ಈ ಭಾರತಭೂಮಿಯ ಸುತ್ತಲೂ ದೇವಿತತ್ತ್ವದ ಕವಚವನ್ನು ನಿರ್ಮಿಸುವಂತದ್ದಾಗಿದೆ.
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೫.೫.೨೦೨೬)
‘ತ್ಯಾಗದಿಂದ ಸಮೃದ್ಧಿ ಎಂಬ ಸಂದೇಶವನ್ನು ನೀಡುವ ಯಜ್ಞಸಂಸ್ಕೃತಿ !

ಯಜ್ಞ ಎಂದರೆ ಅದೊಂದು ಅಧ್ಯಾತ್ಮಶಾಸ್ತ್ರೀಯ ಪ್ರಕ್ರಿಯೆಯಾಗಿದೆ. ನಿಸರ್ಗ, ದೇವತೆಗಳು ಮತ್ತು ಸಮಾಜವನ್ನು ಒಟ್ಟಿಗೆ ಜೋಡಿಸುವ ಸೂತ್ರವೆಂದರೆ ಯಜ್ಞ !
ಇಂದು ನಾವು ಎಲ್ಲೆಡೆ ಭೋಗವೃತ್ತಿ ನೋಡುತ್ತಿದ್ದೇವೆ. ನಮ್ಮ ಧರ್ಮ, ನಮ್ಮ ಸಂಸ್ಕೃತಿಯು ಮಾತ್ರ ನಮಗೆ ತ್ಯಾಗ ಮಾಡುವುದನ್ನು ಕಲಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆಯಲ್ಲಿಯೂ ತ್ಯಾಗಕ್ಕೆ ಮಹತ್ವವಿದೆ. (ಅಷ್ಟಾಂಗ ಸಾಧನೆ – ಸ್ವಭಾವದೋಷ ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ಅಹಂ ನಿರ್ಮೂಲನೆ, ನಾಮಜಪ, ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ಸತ್ಸಂಗ, ಸತ್ಸೇವೆ, ಸತ್‌ಗಾಗಿ ತ್ಯಾಗ ಮತ್ತು ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೇಮ)) ತ್ಯಾಗದ ಫಲವು ಆನಂದ ಮತ್ತು ಕಲ್ಯಾಣವಾಗಿದೆ. ಯಜ್ಞ ಸಂಸ್ಕೃತಿಯು ‘ತ್ಯಾಗದಿಂದ ಸಮೃದ್ಧಿ ಎಂಬ ಸಂದೇಶವನ್ನು ನೀಡುತ್ತದೆ.
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೫.೫.೨೦೨೬)

ಯಜ್ಞದಲ್ಲಿ ಯಜ್ಞಕುಂಡದ ರಚನೆಗೆ ಅತ್ಯಂತ ಮಹತ್ವವಿದೆ. ‘ಶುಲ್ಬಸೂತ್ರ ಗ್ರಂಥದಲ್ಲಿ ಕುಂಡದ ವಿವಿಧ (ಚೌಕ, ವರ್ತುಲ, ತ್ರಿಕೋನ, ಅರ್ಧವರ್ತುಲ) ಆಕಾರಗಳು ಹೇಗಿರಬೇಕು ಎಂಬುದರ ಸವಿಸ್ತಾರವಾದ ವರ್ಣನೆಯಿದೆ. ಈ ಆಕಾರಗಳು ಗಣಿತ ಮತ್ತು ಭೂಮಿತಿಯ ಸುಧಾರಿತ ಜ್ಞಾನದ ಪ್ರತೀಕಗಳಾಗಿವೆ. ಯಜ್ಞದ ಪ್ರಕಾರಗಳು ಮತ್ತು ಅದರಲ್ಲಿ ನೀಡಲಾಗುವ ಆಹುತಿಗಳ ಸಂಖ್ಯೆಗೆ ಅನುಗುಣವಾಗಿ ಯಜ್ಞಕುಂಡದ ಆಕಾರ ನಿಶ್ಚಯಿಸಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾವಿರಾರು ವರ್ಷಗಳು ಕಳೆದರೂ ಈ ಪರಂಪರೆಯಲ್ಲಿನ ಮಂತ್ರಗಳು, ವಿಧಿಗಳು ಮತ್ತು ಕುಂಡಗಳ ರಚನೆಯು ಬದಲಾಗಿಲ್ಲ. ಇದು ವೇದನಾರಾಯಣನ ಶಾಶ್ವತ ಮತ್ತು ಸನಾತನ ಸ್ವರೂಪವಾಗಿದೆ.

೨. ಯಜ್ಞದ ಸಂಕಲ್ಪ
ಯಜ್ಞದಲ್ಲಿ ಮಂತ್ರಗಳು ಮಹತ್ವದ್ದಾಗಿರುತ್ತವೆ, ಅವುಗಳನ್ನು ಮಾಡುವ ಪುರೋಹಿತರು ಮಹತ್ವದ್ದಾಗಿರುತ್ತಾರೆ, ಯಜ್ಞದಲ್ಲಿ ಅರ್ಪಿಸಲಾಗುವ ಹವಿರ್ದ್ರವ್ಯಗಳು (ಯಜ್ಞದಲ್ಲಿ ಅರ್ಪಿಸಲಾಗುವ ಸಾಮಗ್ರಿಗಳು) ಮಹತ್ವದ್ದಾಗಿರುತ್ತವೆ; ಅದೇ ರೀತಿ ಯಜ್ಞದ ಸಂಕಲ್ಪವೂ ಅಷ್ಟೇ ಮಹತ್ವದ್ದಾಗಿರುತ್ತದೆ. ಹಿಂದೆ ನಮ್ಮಲ್ಲಿ ಮಾಡಲಾಗುತ್ತಿದ್ದ ಯಜ್ಞಯಾಗಾದಿಗಳ ಸಂಕಲ್ಪವು ವ್ಯಾಪಕವಾಗಿರುತ್ತಿತ್ತು ಅದು ವಿಶ್ವಕಲ್ಯಾಣದ್ದಾಗಿರುತ್ತಿತ್ತು. ಈಗಲೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ಮುಂಬಯಿಯಲ್ಲಿ ನಡೆದ ‘ರಾಜಮಾತಂಗಿ ಮಹಾಯಜ್ಞದ ಉದ್ದೇಶವು ಲೋಕಕಲ್ಯಾಣ ಮತ್ತು ಭಾರತದ ರಕ್ಷಣೆಗಾಗಿ ಇತ್ತು. ಈ ಯಜ್ಞಕ್ಕಾಗಿ ಉನ್ನತ ಮಟ್ಟದ ಸಂತರ ಸಂಕಲ್ಪ, ಅವರ ಉಪಸ್ಥಿತಿ ದೊರೆಯುವುದು ಮತ್ತು ವಿದ್ವಾಂಸ ಪುರೋಹಿತರ ಮಾಧ್ಯಮದಿಂದ ಶಾಸ್ತ್ರೋಕ್ತವಾಗಿ ಯಜ್ಞ ನಡೆಯುವುದು, ಇದು ಒಂದು ತ್ರಿವೇಣಿ ಸಂಗಮವಾಗಿದೆ.
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೫.೫.೨೦೨೬)
ಪ್ರಸ್ತುತ ಯುದ್ಧಕಾಲದಲ್ಲಿ ತಪೋ ಭೂಮಿಯಾದ ಭಾರತ ಭೂಮಿಗೆ ರಕ್ಷಣಾ ಕವಚವು ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ; ಎಂಬ ಉದ್ದೇಶ ದಿಂದ ಸನಾತನ ಸಂಸ್ಥೆಯು ‘ಶ್ರೀ ರಾಜಮಾತಂಗಿ ಮಹಾಯಜ್ಞವನ್ನು ಆಯೋಜಿಸಿತ್ತು. ಈ ಸಮಯದಲ್ಲಿ ಶ್ರೀ ರಾಜಮಾತಂಗಿ ದೇವಿಯನ್ನು ಸ್ತುತಿಸಿ, ಭಾರತದ ಸರ್ವಾಂಗೀಣ ವಿಕಾಸ ಮತ್ತು ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು ! ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಧರ್ಮಕಾರ್ಯವನ್ನು ಪ್ರಾರಂಭಿಸಿದ ಮುಂಬಾದೇವಿಯ ನಗರಿಯಲ್ಲೇ (ಮುಂಬಯಿಯಲ್ಲಿಯೇ) ಆಯೋಜಿಸಿದ್ದ ಈ ಮಹಾಯಜ್ಞವು ‘ರಾಮರಾಜ್ಯದ ನಿರ್ಮಾಣದ ದಿಕ್ಕಿನಲ್ಲಿ ಇಟ್ಟ ಒಂದು ಐತಿಹಾಸಿಕ ಹೆಜ್ಜೆಯೇ ಆಗಿದೆ !
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೫.೫.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ