ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವ) ಅವರು ವರ್ಷ ೧೯೯೮ ರಲ್ಲಿ ತಮ್ಮ ೫೬ ನೆಯ ವಯಸ್ಸಿನಲ್ಲಿ ‘ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು’, ಇದೇ ಒಂದು ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳಿಗೆ ಉಪಾಯವಾಗಿದೆ’, ಎನ್ನುವ ವಿಚಾರವನ್ನು ಅವರು ಸಾರ್ವಜನಿಕವಾಗಿ ಮಂಡಿಸಿದರು. ‘ಕೇವಲ ಭಾರತದಲ್ಲಷ್ಟೇ ಅಲ್ಲ, ಪೃಥ್ವಿಯ ಮೇಲೆ ಎಲ್ಲ ಕಡೆಗಳಲ್ಲಿ ‘ಹಿಂದೂ ರಾಷ್ಟ್ರ (ಈಶ್ವರೀ ರಾಜ್ಯ, ಸನಾತನ ಧರ್ಮ ರಾಜ್ಯ, ರಾಮರಾಜ್ಯ)’ ಸ್ಥಾಪನೆ ಮಾಡುವುದು’, ಇದು ಕೇವಲ ರಾಜಕೀಯ, ಸಾಂಸ್ಕೃತಿಕ, ವಾಂಶಿಕ ಅಥವಾ ಭೌಗೋಲಿಕ ಪ್ರಕ್ರಿಯೆ ಅಲ್ಲ ಅದು ಮುಖ್ಯವಾಗಿ ಆಧ್ಯಾತ್ಮಿಕ ಪ್ರಕ್ರಿಯೆಯಾಗಿದೆ’, ಎನ್ನುವುದನ್ನು ಅವರು ಕಾಲಕಾಲಕ್ಕೆ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಅವರು ತಮ್ಮ ೮೪ ನೇಯ ವಯಸ್ಸಿನಲ್ಲೂ ಕಾರ್ಯನಿರತರಾಗಿದ್ದಾರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಆಧ್ಯಾತ್ಮಿಕ ಸ್ತರದಲ್ಲಿ ದಿಶೆಯನ್ನು ನೀಡುವ ಏಕೈಕ ಗುರುಗಳಾಗಿದ್ದಾರೆ. ಅನೇಕ ವಿಚಾರವಂತರು ‘ಹಿಂದೂ ರಾಷ್ಟ್ರ’ ಈ ಶಬ್ದದ ವಿವರಣೆಯನ್ನು ಭೂಪ್ರದೇಶ, ಇತಿಹಾಸ, ಸಂಸ್ಕೃತಿ ಮತ್ತು ತತ್ತ್ವಜ್ಞಾನ ಇವುಗಳ ಆಧಾರದಲ್ಲಿ ಮಾಡಿದ್ದರೂ ಗುರುದೇವರು ‘ಹಿಂದೂ ರಾಷ್ಟ್ರ’ ಈ ವಿಷಯವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಮಂಡಿಸಿದ್ದಾರೆ.
ಅ. ಗುರುದೇವರು ‘ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸತ್ವಗುಣಿ ಜನರ (ಆಡಳಿತಗಾರರು ಮತ್ತು ಪ್ರಜೆಗಳು) ರಾಷ್ಟ್ರ’, ಎಂದು ‘ಹಿಂದೂ ರಾಷ್ಟ್ರ’ ಈ ಶಬ್ದದ ಆಧ್ಯಾತ್ಮಿಕ ವಿವರಣೆ ಮಾಡಿದ್ದಾರೆ. ‘ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಅಗತ್ಯವಿರುವ ಸತ್ವಗುಣಿ ಜನರು ತಯಾರಾಗಲಿ’, ಎನ್ನುವುದಕ್ಕಾಗಿ ಅವರು ಸ್ವತಃ ಪ್ರಯತ್ನಿಸುತ್ತಿದ್ದಾರೆ.
ಆ. ಕೇವಲ ಶಾರೀರಿಕ ಅಥವಾ ಮಾನಸಿಕ ಸ್ತರದಲ್ಲಿ ಪ್ರಯತ್ನ ಮಾಡುವುದರಿಂದ ‘ಹಿಂದೂ ರಾಷ್ಟ್ರದ ಸ್ಥಾಪನೆಯು ಆಗುವುದಿಲ್ಲ, ಅದಕ್ಕಾಗಿ ಆಧ್ಯಾತ್ಮಿಕ ಸ್ತರದಲ್ಲೂ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ’, ಎಂದು ಗುರುದೇವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರು ಸ್ವತಃ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯನಿರತರಾಗಿದ್ದಾರೆ.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಗುರುದೇವರ ಆಧ್ಯಾತ್ಮಿಕ ಸ್ತರದ ಕಾರ್ಯ

‘ಹಿಂದೂ ರಾಷ್ಟ್ರದ’ ಎಂದರೆ ‘ಈಶ್ವರೀ ರಾಜ್ಯದ ಸ್ಥಾಪನೆ ಆಗಬಾರದೆಂದು ಅನಿಷ್ಟ ಶಕ್ತಿಗಳು ತೀವ್ರವಾಗಿ ವಿರೋಧಿಸುತ್ತಿವೆ. ಗುರುದೇವರು ಅನಿಷ್ಟ ಶಕ್ತಿಗಳ ವಿರುದ್ಧ ಸೂಕ್ಷ್ಮದಲ್ಲಿನ ಈ ದೊಡ್ಡ ಹೋರಾಟ ನಡೆಸುತ್ತಿದ್ದಾರೆ. ಹಿಂದೂ ರಾಷ್ಟ್ರ ಸ್ಥಾಪನೆಯ ಶೇ. ೭೦ ರಷ್ಟು ಹೋರಾಟ ಸೂಕ್ಷ್ಮದ್ದಾಗಿದ್ದು ಅದಕ್ಕಾಗಿ ಆಧ್ಯಾತ್ಮಿಕ ಬಲಬೇಕು’, ಎಂದು ಹೇಳುವವರು ಮತ್ತು ಅದಕ್ಕಾಗಿ ಕೃತಿಶೀಲರಾಗಿರುವ ಗುರುದೇವರು ಏಕೈಕ ಗುರುಗಳಾಗಿದ್ದಾರೆ ! ಈ ಸೂಕ್ಷ್ಮದ ಯುದ್ಧದಲ್ಲಿ ಅನಿಷ್ಟಶಕ್ತಿಗಳನ್ನು ಪರಾಜಯಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸದ್ಗುರುಗಳು (ಶೇ. ೮೦ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಆಧ್ಯಾತ್ಮಿಕ ಸಂತರು) ಬೇಕಾಗಿದ್ದಾರೆ. ಇಂತಹ ಸಂತರಿಂದ ಗುರುದೇವರ ಕೃಪೆಯಿಂದ ಮತ್ತು ಅವರು ಸಾಧನೆಯನ್ನು ಕಲಿಸಿ ರೂಪಿಸಿದ ಕಾರಣದಿಂದ ಜನವರಿ ೨೦೨೬ ರ ವರೆಗೆ ೧೩೫ ಜನ ಸಂತರಾದರು ಮತ್ತು ೧ ಸಾವಿರದ ೩೫ ಜನರ ಸಂತತ್ವದ ಕಡೆಗೆ ಮಾರ್ಗಕ್ರಮಣ ನಡೆದಿದೆ.
ಗುರುದೇವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಕ್ಷಾತ್ರಧರ್ಮ ಸಾಧನೆ’ ಹೇಳುವುದು

‘ಕ್ಷಾತ್ರಧರ್ಮ ಸಾಧನೆ’ ಎಂದರೆ ಧರ್ಮಕ್ಕೆ ಗ್ಲಾನಿ ಬಂದ ನಂತರ ಕಾಲದ ಅವಶ್ಯಕತೆ ಎಂದು ಸತ್ವಗುಣಿ ಮಾನವರ ರಕ್ಷಣೆ ಮತ್ತು ನ್ಯಾಯಯುತ ಮಾರ್ಗದಿಂದ ದುಷ್ಪ್ರವೃತ್ತಿಗಳ ನಿರ್ಮೂಲನೆ, ಇದಕ್ಕಾಗಿ ಎಲ್ಲ ವರ್ಣದವರು ಮಾಡಬೇಕಾದ ಸಾಧನೆ ! ಗುರುದೇವರು ವರ್ಷ ೧೯೯೬ ರಿಂದ ಈ ಸಾಧನೆಯನ್ನು ಹೇಳುತ್ತಿದ್ದಾರೆ. ಈ ಸಾಧನೆಯನ್ನು ಹೇಳುವ ಗುರುದೇವರು ಇಂದಿನ ಆಧುನಿಕ ಕಾಲದ ಮೊದಲನೆಯ ಸಂತರಾಗಿದ್ದಾರೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !