ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಭಗವದ್ಗೀತೆಯಲ್ಲಿನ ಶ್ರೀಕೃಷ್ಣನ ಒಂದು ವಚನದ ಅನುಭೂತಿ ಬರುವುದರ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬರಹ ‘೨೮ ಎಪ್ರಿಲ್ ೨೦೧೩ ಈ ದಿನದಿಂದ ನನಗೂ ಈ ಮುಂದಿನಂತೆ ಅನಿಸುತ್ತಿದೆ.  ಭಗವಾನ ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆಯಲ್ಲಿ ಈ ಮುಂದಿನಂತೆ ಹೇಳಿದ್ದಾನೆ,

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಞ್ಚನ |

ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ||

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೩, ಶ್ಲೋಕ ೨೨

ಅರ್ಥ : ಹೇ ಪಾರ್ಥಾ (ಅಂದರೆ ಪೃಥಾಪುತ್ರ ಅರ್ಜುನಾ), ನನಗೆ ಈ ಮೂರೂ ಲೋಕಗಳಲ್ಲಿ ಯಾವುದೇ ಕರ್ತವ್ಯವಿಲ್ಲ ಮತ್ತು ಪಡೆಯಲು ಯೋಗ್ಯವಾದ ಯಾವುದೇ ವಸ್ತು ಸಿಕ್ಕಿಲ್ಲ ಎಂದೂ ಇಲ್ಲ. ಆದರೂ ನಾನು ಕರ್ತವ್ಯಕರ್ಮಗಳನ್ನು ಮಾಡುತ್ತಲೇ ಇರುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೨. ಮೇಲಿನ ವಿಷಯದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !

೨ ಅ. ಶ್ರೀಕೃಷ್ಣನ ವೈಶಿಷ್ಟ್ಯಗಳು : ಶ್ರೀಕೃಷ್ಣನು ಅನಾದಿಯಾಗಿರುವುದರಿಂದ ಅವನು ಜನ್ಮ-ಮೃತ್ಯುವಿನ ಆಚೆಗಿದ್ದಾನೆ. ಅವನು ಪರಿಪೂರ್ಣ, ಸರ್ವಜ್ಞ ಮತ್ತು ಸರ್ವಶಕ್ತಿವಂತನಾಗಿದ್ದಾನೆ. ಅವನಿಗೆ ಮನುಷ್ಯರಂತೆ ಯಾವುದೇ ಸಂಚಿತ ಮತ್ತು ಪ್ರಾರಬ್ಧವಿಲ್ಲ. ಶ್ರೀಕೃಷ್ಣನು ಭಕ್ತವತ್ಸಲನಾಗಿದ್ದು, ಅವನಿಗೆ ಭಕ್ತರ ಮೇಲೆ ಅಸೀಮ ಪ್ರೇಮವಿದೆ.

೨ ಆ. ಶ್ರೀಕೃಷ್ಣನು ಐಶ್ವರ್ಯವಂತನಾಗಿರುತ್ತಾನೆ : ಶ್ರೀಕೃಷ್ಣನು ಸರ್ವವ್ಯಾಪಿಯಾಗಿದ್ದು ಸಮೃದ್ಧಿ, ಸಂಪತ್ತು, ಯಶಸ್ಸು ಮತ್ತು ಭಾಗ್ಯ ಇವೆಲ್ಲವೂ ಅವನ ಅಧೀನದಲ್ಲಿವೆ. ಆದ್ದರಿಂದಲೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ‘ಪಡೆಯಲು ಯೋಗ್ಯವಾದ ಯಾವುದೇ ವಸ್ತು ನನಗೆ ಲಭಿಸಿಲ್ಲ ಎಂದಿಲ್ಲ.’

೨ ಇ. ಶ್ರೀಕೃಷ್ಣನು ಕೇವಲ ಭಕ್ತರಿಗಾಗಿ ಸೃಷ್ಟಿ-ನಿಯಮದಲ್ಲಿ ಹಸ್ತಕ್ಷೇಪ ಮಾಡುತ್ತಾನೆ : ಮಾಯೆಯಿಂದಾಗಿ ಅನೇಕ ಪೃಥ್ವಿಗಳ ಉತ್ಪತ್ತಿ, ಸ್ಥಿತಿ ಮತ್ತು ಲಯ ಆಗುತ್ತಿರುತ್ತದೆ. ಕಾಲಕ್ಕನುಸಾರ ‘ಸತ್ತ್ವ, ರಜ ಮತ್ತು ತಮ’ ಈ ಗುಣಗಳಲ್ಲಿ ಬದಲಾವಣೆ ಆಗುತ್ತಾ ಹೋಗುತ್ತದೆ, ಅದರಂತೆ ಪೃಥ್ವಿಯ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ. ಮಾಯೆಯ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯದ ಕಡೆಗೆ ಶ್ರೀಕೃಷ್ಣನು ತಟಸ್ಥವಾಗಿ ನೋಡುತ್ತಿರುತ್ತಾನೆ. ಯಾವಾಗ ಪೃಥ್ವಿಯಲ್ಲಿ ಪ್ರಾಮಾಣಿಕತನದಿಂದ ಮತ್ತು ಮನಃಪೂರ್ವಕವಾಗಿ ಸಾಧನೆ ಮಾಡುವ ಜೀವಗಳಿರುತ್ತವೆಯೋ, ಆಗ ಅವರ ದುಃಖ ಮತ್ತು ಅಡಚಣೆಗಳನ್ನು ದೂರ ಮಾಡಿ ಅವರಿಗೆ ಆಧ್ಯಾತ್ಮಿಕ ಪ್ರಗತಿಯ ಮಾರ್ಗವನ್ನು ತೋರಿಸುವುದು ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಶ್ರೀಕೃಷ್ಣನು ಮಾಯೆಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿ ಭಕ್ತರಿಗೆ ಸಹಾಯ ಮಾಡುತ್ತಾನೆ.

೨ ಈ. ಶ್ರೀಕೃಷ್ಣನು ಕೇವಲ ಭಕ್ತರಿಗಾಗಿ ಪೃಥ್ವಿಯಲ್ಲಿ ಜನ್ಮ ತಾಳುತ್ತಾನೆ : ಶ್ರೀಕೃಷ್ಣ ಇದೊಂದು ಅನಾದಿ ತತ್ತ್ವವಾಗಿದೆ. ಶ್ರೀಕೃಷ್ಣನು ಸೂಕ್ಷ್ಮರೂಪದಲ್ಲಿ ಭಕ್ತರ ಕಾಳಜಿಯನ್ನು ಸತತವಾಗಿ ತೆಗೆದುಕೊಳ್ಳುತ್ತಿರುತ್ತಾನೆ; ಆದರೆ ಅವಶ್ಯವಿದ್ದಾಗ ಅವನು ಸ್ವತಃ ಪೃಥ್ವಿಯಲ್ಲಿ ಜನ್ಮ ತಾಳಿ ಭಕ್ತರಿಗಾಗಿ ಆವಶ್ಯಕವಿರುವ ಕಾರ್ಯವನ್ನು ಮಾಡುತ್ತಾನೆ.

೨ ಉ. ಶ್ರೀಕೃಷ್ಣನು ಬಂಧನಮುಕ್ತನಾಗಿದ್ದರೂ ಅವನು ಭಕ್ತನ ಬಂಧನದಲ್ಲಿರುವನು : ಶ್ರೀಕೃಷ್ಣನು ಸರ್ವಶಕ್ತಿವಂತ ಮತ್ತು ಬಂಧನಮುಕ್ತನಾಗಿದ್ದಾನೆ; ಆದರೆ ಶ್ರೀಕೃಷ್ಣನು ಭಕ್ತವತ್ಸಲನಾಗಿರುವುದರಿಂದ ಅವನು ಭಕ್ತನ ಬಂಧನದಲ್ಲಿ ಇರುತ್ತಾನೆ. ಆದ್ದರಿಂದ ‘ಶ್ರೀಕೃಷ್ಣನಿಗೆ ಭಕ್ತಿಯ ಬಂಧನವಿದೆ’ ಎಂದು ಹೇಳಲಾಗುತ್ತದೆ.

೨ ಊ. ಶ್ರೀಕೃಷ್ಣನ ಕರ್ತವ್ಯಕರ್ಮ ಯಾವುದು ? : ‘ಭಕ್ತರ ಎಲ್ಲ ರೀತಿಯಿಂದಲೂ ಕಾಳಜಿ ವಹಿಸುವುದು’, ಇದೇ ಶ್ರೀಕೃಷ್ಣನ ಕರ್ತವ್ಯಕರ್ಮವಾಗಿದೆ.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಪೂರ್ಣತ್ವ ಪ್ರಾಪ್ತವಾಗಿರುವುದರಿಂದ ಅವರು ಶ್ರೀಕೃಷ್ಣನಂತೆ ಬಂಧನಮುಕ್ತರಾಗಿರುತ್ತಾರೆ

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈಶ್ವರಸ್ವರೂಪ ಆಗಿದ್ದು ಅವರ ಕಾರ್ಯವು ಅವತಾರಿಯಾಗಿದೆ. ಅವರಿಗೆ ಮನುಷ್ಯರಂತೆ ಜನ್ಮ-ಮೃತ್ಯು, ಸುಖ-ದುಃಖ, ಪಾಪ-ಪುಣ್ಯ, ಸಂಚಿತ-ಪ್ರಾರಬ್ಧ ಹೀಗೆ ಯಾವುದೇ ಬಂಧನವಿಲ್ಲ. ಅವರು ಶ್ರೀಕೃಷ್ಣನಂತೆ ಬಂಧನಮುಕ್ತರಾಗಿದ್ದಾರೆ.

೩ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯ

ಶ್ರೀ. ರಾಮ ಹೊನಪ

೩ ಅ ೧. ಸಾಧಕರ ರಕ್ಷಣೆ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಮಾರ್ಗದರ್ಶನದಂತೆ ರಾಷ್ಟ್ರಪ್ರೇಮಿಗಳು, ಧರ್ಮಪ್ರೇಮಿಗಳು ಮತ್ತು ಸಾಧಕರು ಕಾರ್ಯವನ್ನು ಮಾಡುತ್ತಿದ್ದಾರೆ. ಅದರಿಂದ ಸಿಟ್ಟಿಗೆದ್ದ ಸಪ್ತಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಮತ್ತು ಸಾಧಕರ ಮೇಲೆ ಸೂಕ್ಷ್ಮ ರೂಪದಲ್ಲಿ ಆಕ್ರಮಣಗಳನ್ನು ಮಾಡುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದೇಹದಿಂದ  ಪ್ರಕ್ಷೇಪಿಸಲ್ಪಡುವ ಚೈತನ್ಯದಿಂದಾಗಿ ಕೆಟ್ಟ ಶಕ್ತಿಗಳಿಂದ ಸಾಧಕರ ರಕ್ಷಣೆಯಾಗುತ್ತದೆ.

೩ ಅ ೨. ಸಾಧಕರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವುದು : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕರಿಗೆ ಮಾಡುತ್ತಿರುವ ಮಾರ್ಗದರ್ಶನವು ನಿಖರ, ಪರಿಪೂರ್ಣ ಮತ್ತು ಚೈತನ್ಯಮಯವಾಗಿದೆ. ಅದರಿಂದ ಶೀಘ್ರ ಗತಿಯಲ್ಲಿ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

೩ ಅ ೩. ಜ್ಞಾನಕಾರ್ಯ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈಶ್ವರೀ ಪ್ರೇರಣೆಗನುಸಾರ ಜ್ಞಾನದ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ಸಾಧನೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಜ್ಞಾನವನ್ನು ಗ್ರಂಥರೂಪದಲ್ಲಿ ಸಂಕಲನ ಮಾಡುತ್ತಿದ್ದಾರೆ. ಜಿಜ್ಞಾಸುಗಳಿಗೆ ಮತ್ತು ಸಾಧಕರಿಗೆ ಸಾವಿರಾರು ವರ್ಷಗಳ ಕಾಲ ಇದರ ಲಾಭವಾಗಲಿದೆ.

೩ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕರ್ತವ್ಯಕರ್ಮಗಳು ಯಾವವು ? : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಈಶ್ವರಮಯ ಅವಸ್ಥೆಯು ಪ್ರಾಪ್ತವಾಗಿರುವುದರಿಂದ ಅವರಿಗೆ ಪಡೆಯಲು ಯೋಗ್ಯವಾದುದು ಯಾವುದೂ ಉಳಿದಿಲ್ಲ, ಹಾಗೆಯೇ ಅವರಿಗೆ ಯಾವುದೇ ಕರ್ತವ್ಯವೂ ಉಳಿದಿಲ್ಲ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಶ್ರೀಕೃಷ್ಣನಂತೆ ಭಕ್ತವತ್ಸಲರಾಗಿದ್ದಾರೆ. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ‘ಸಾಧಕರ ಎಲ್ಲ ರೀತಿಯಿಂದಲೂ ಕಾಳಜಿ ವಹಿಸುವುದು’ ಕರ್ತವ್ಯಕರ್ಮವಾಗಿದ್ದು ಅದಕ್ಕನುಸಾರ ಅವರು ಕಾರ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಶ್ರೀಕೃಷ್ಣನ ಮೇಲಿನ ವಚನಕ್ಕನುಸಾರ ಅನುಭವವಾಗುತ್ತಿದೆ.

೪. ಶ್ರೀಕೃಷ್ಣ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ನಡುವಿನ ಸಾಮ್ಯತೆ

ಶ್ರೀಕೃಷ್ಣನಿಗೆ ಮನುಷ್ಯರಂತೆ ಯಾವುದೇ ಬಂಧನ ಮತ್ತು ಕರ್ತವ್ಯವಿಲ್ಲ, ಆದರೂ ಅವನು ಕರ್ತವ್ಯಕರ್ಮಗಳನ್ನು ಮಾಡುತ್ತಾನೆ. ಇದಕ್ಕೆ ಶ್ರೀಕೃಷ್ಣನ ‘ಲೀಲಾಧರ ಅವಸ್ಥೆ’ ಎನ್ನುತ್ತಾರೆ. ‘ಲೀಲಾ’ ಇದರ ಅರ್ಥ ‘ಆನಂದ’ ಮತ್ತು ‘ಧರ’ ಇದರ ಅರ್ಥ ‘ಧಾರಣೆ ಮಾಡುವವನು’. ಶ್ರೀಕೃಷ್ಣನು ಆನಂದಸ್ವರೂಪಿಯಾಗಿದ್ದು ಅವನು ಭಕ್ತರನ್ನು ರಕ್ಷಿಸಿ ಅವರ ಆಧ್ಯಾತ್ಮಿಕ ಪ್ರಗತಿ ಮಾಡಿಸುತ್ತಾನೆ. ಆದ್ದರಿಂದ ಶ್ರೀಕೃಷ್ಣನನ್ನು ‘ಲೀಲಾಧರ’ ಎನ್ನುತ್ತಾರೆ. ಅದೇ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಹ ಆನಂದಸ್ವರೂಪಿಯಾಗಿದ್ದಾರೆ. ಅವರು ಎಲ್ಲಾ ಸಾಧಕರ ಕಾಳಜಿ ವಹಿಸಿ ಅವರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಹ ‘ಲೀಲಾಧರ’ ಆಗಿದ್ದಾರೆ.

– ಶ್ರೀ. ರಾಮ ಹೊನಪ (ಸೂಕ್ಷ್ಮಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ

  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಸೂಕ್ಷ್ಮ-ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆ ಮಾಡುವವನಿಗೆ ಆಗುತ್ತದೆಯೋ, ಅದನ್ನು ‘ಸೂಕ್ಷ್ಮ-ಜಗತ್ತು’ ಎಂದು ಕರೆಯುತ್ತಾರೆ.
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.