ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !

‘ಗಾವೋ ವಿಶ್ವಸ್ಯ ಮಾತರಃ’ (ಗೋವು ವಿಶ್ವದ ಮಾತೆಯಾಗಿದ್ದಾಳೆ), ಎಂದು ನಮ್ಮ ಋಷಿಮುನಿಗಳು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ; ಆದರೆ ದುರದೃಷ್ಟವಶಾತ್ ಯಾವ ದೇಶದಲ್ಲಿ ಗೋವಿಗೆ ದೈವತ್ವ ನೀಡಲಾಗಿದೆಯೋ, ಅದೇ ದೇಶದಲ್ಲಿ ಕಳೆದ ಹಲವು ದಶಕಗಳಿಂದ ಗೋಮಾತೆಯ ರಕ್ತ ಹರಿಯುತ್ತಿದೆ. ಗೋವಿನ ದೇಹದಲ್ಲಿ ೩೩ ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬುವ ಈ ಭೂಮಿಯಲ್ಲೇ, ಕಳೆದ ೭ ದಶಕಗಳಿಂದ ‘ಸೆಕ್ಯುಲರ್’ (ಜಾತ್ಯತೀತ) ಪ್ರಜಾಪ್ರಭುತ್ವದ ಹೆಸರಿನಲ್ಲಿ ಗೋಮಾತೆಯ ರಕ್ತದ ನದಿಗಳು ಹರಿಯುತ್ತಿವೆ. ಗೋವಂಶ ಹತ್ಯೆಯನ್ನು ತಡೆಯಲು ಅನೇಕ ರಾಜ್ಯಗಳು ಕಾನೂನುಗಳನ್ನು ಮಾಡಿದವು; ಆದರೆ ಗೋವುಗಳ ಕಳ್ಳಸಾಗಾಣಿಕೆದಾರರ ಉದ್ದಟತನ ಮತ್ತು ಕಾನೂನಿನ ಓರೆಕೋರೆಗಳಿಂದಾಗಿ ಈ ಪ್ರಶ್ನೆಯು ಜಟಿಲವಾಗಿತ್ತು. ಇಂತಹ ಸ್ಥಿತಿಯಲ್ಲಿ, ಸರ್ವೋಚ್ಚ ನ್ಯಾಯಾಲಯವು ಗೋಹತ್ಯೆಯ ಪ್ರಕರಣಗಳಲ್ಲಿ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ ಹೇರುವುದನ್ನು ಬೆಂಬಲಿಸಿರುವುದು, ಧರ್ಮಾಭಿಮಾನಿ ಮತ್ತು ಗೋಭಕ್ತರಿಗೆ ದೊಡ್ಡ ಸಮಾಧಾನ ತಂದಿರುವ ನಿರ್ಧಾರವಾಗಿದೆ.

ಕಾನೂನಿನ ಭಯವಿರಲೇಬೇಕು !

ಇಂದಿನವರೆಗೂ ಗೋಕಳ್ಳಸಾಗಣಿಕೆಯನ್ನು ಕೇವಲ ಒಂದು ಸಣ್ಣ ಅಪರಾಧವೆಂದು ಪರಿಗಣಿಸಿ ಬಿಟ್ಟುಬಿಡಲಾಗುತ್ತಿತ್ತು. ಆರೋಪಿಯನ್ನು ಬಂಧಿಸಲಾಗುತ್ತಿತ್ತು ಮತ್ತು ೨೪ ಗಂಟೆಗಳಲ್ಲಿ ಜಾಮೀನು ಪಡೆದು ಅವನು ಮತ್ತೆ ಕಸಾಯಿಖಾನೆಗೆ ಗೋವುಗಳನ್ನು ಕಳ್ಳತನ ಮಾಡಲು ಮುಕ್ತನಾಗುತ್ತಿದ್ದನು; ಆದರೆ ಸರ್ವೋಚ್ಚ ನ್ಯಾಯಾಲಯವು ಈಗ ಇದನ್ನು ಒಪ್ಪಿಕೊಂಡಿದೆ – ‘ಗೋಹತ್ಯೆಯು ಸಾರ್ವಜನಿಕ ಸುವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸುವ ವಿಷಯವಾಗಿದೆ. ಒಂದು ಗೋವನ್ನು ಕೊಂದಾಗ ಕೇವಲ ಒಂದು ಪ್ರಾಣಿಯ ಜೀವ ಹೋಗುವುದಿಲ್ಲ, ಬದಲಿಗೆ ಕೋಟ್ಯಂತರ ಹಿಂದೂಗಳ ಭಾವನೆಗಳ ಸ್ಫೋಟವಾಗುತ್ತದೆ, ಇದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಸ್ಥಿತಿಯಲ್ಲಿ, ಆಡಳಿತವು ಈ ಅಪರಾಧಿಗಳ ಮೇಲೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ ಹೇರುತ್ತಿದ್ದರೆ, ಅದರಲ್ಲಿ ತಪ್ಪೇನೂ ಇಲ್ಲ.’

ಗೋವಂಶ ಹತ್ಯೆ: ಒಂದು ವ್ಯಾಪಕ ರಾಷ್ಟ್ರವಿರೋಧಿ ಸಂಚು !

ಗೋಹತ್ಯೆಯು ಹಿಂದೂ ಸಮಾಜವನ್ನು ಮಾನಸಿಕವಾಗಿ ಗುಲಾಮರನ್ನಾಗಿಸುವ ಮತ್ತು ಅವರ ಶ್ರದ್ಧೆಯನ್ನು ಅವಮಾನಿಸುವ ಒಂದು ಮಾರ್ಗವಾಗಿದೆ. ಮೊಘಲರ ಕಾಲದಿಂದ ಇಂದಿನವರೆಗೆ ಹಿಂದೂಗಳ ಮನಸ್ಸನ್ನು ಒಡೆಯಲು ಗೋಮಾತೆಯನ್ನು ಬಲಿ ನೀಡಲಾಗುತ್ತಿದೆ. ಮೊಘಲರ ಕಾಲದಲ್ಲಿ ಕೇವಲ ಮುಸಲ್ಮಾನರು ಬಹಿರಂಗವಾಗಿ ಗೋಹತ್ಯೆ ಮಾಡುತ್ತಿದ್ದರು. ಬ್ರಿಟಿಷರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ದೇಶದಲ್ಲಿ ಮೊದಲ ಬಾರಿಗೆ ಕಸಾಯಿಖಾನೆಗಳನ್ನು ಪ್ರಾರಂಭಿಸಿದರು ಮತ್ತು ಇಂದು ದೇಶದಲ್ಲಿ ಲಕ್ಷಾಂತರ ಕಸಾಯಿಖಾನೆಗಳಿವೆ ಹಾಗೂ ಪ್ರತಿದಿನ ಸಾವಿರಾರು ಗೋವಂಶಗಳನ್ನು ಕೊಲ್ಲಲಾಗುತ್ತಿದೆ. ಗೋಮಾಂಸ ರಫ್ತು ಮಾಡುವಲ್ಲಿ ಭಾರತವು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಗೋಹತ್ಯೆ ತಡೆಯಲು ಅನೇಕರು ಹೋರಾಟ ಮಾಡಿದರು; ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ಧರ್ಮಸಮ್ರಾಟ ಪ.ಪೂ. ಕರಪಾತ್ರಿಸ್ವಾಮಿಗಳು ಇಂದಿರಾ ಗಾಂಧಿಯವರ ಸರಕಾರದ ಅವಧಿಯಲ್ಲಿ ಸಾಧು-ಸಂತರೊಂದಿಗೆ ಸಂಸತ್ತಿಗೆ ಮುತ್ತಿಗೆ ಹಾಕಿ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿದ್ದರು; ಆದರೆ ಗೋಹತ್ಯೆ ನಿಷೇಧಿಸುವ ಬದಲು ಈ ಮೆರವಣಿಗೆಯ ಮೇಲೆ ಗುಂಡು ಹಾರಿಸಲಾಯಿತು ಮತ್ತು ಅನೇಕ ಸಾಧು-ಸಂತರನ್ನು ಕೊಲ್ಲಲಾಯಿತು. ಅಕ್ರಮವಾಗಿ ಗೋವಂಶವನ್ನು ಸಾಗಿಸುವ ಟ್ರಕ್ ಹಿಡಿಯುವ ಪೊಲೀಸರ ಮೇಲೆ ಟ್ರಕ್ ಹರಿಸುವುದು, ಗೋಭಕ್ತರ ಮೇಲೆ ಗುಂಡು ಹಾರಿಸುವುದು ಮತ್ತು ಗೋವುಗಳನ್ನು ಉಳಿಸಲು ಹೋದ ಯುವಕರನ್ನು ಕೊಲ್ಲುವುದು ಅವರ ನಿತ್ಯದ ಕೆಲಸವಾಗಿದೆ. ಅವರಿಗೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯಂತಹ ಕಠಿಣ ಕಾನೂನಿನ ಅವಶ್ಯಕತೆಯಿತ್ತು, ಇದರಿಂದ ಅವರಿಗೆ ಕನಿಷ್ಠ ೧ ವರ್ಷ ಜಾಮೀನು ಸಿಗುವುದಿಲ್ಲ ಮತ್ತು ಅವರ ಜಾಲವು ಧ್ವಂಸವಾಗುತ್ತದೆ. ಭಾರತವು ಕೃಷಿ ಪ್ರಧಾನ ದೇಶ ಮತ್ತು ಗೋವಂಶವು ಭಾರತೀಯ ಕೃಷಿಯ ಬೆನ್ನೆಲುಬಾಗಿದೆ. ದೇಶಿ ಗೋವಿನ ಮಹತ್ವವು ಕೇವಲ ಹಾಲಿಗೆ ಸೀಮಿತವಾಗಿಲ್ಲ, ಅದರ ಸಗಣಿ ಮತ್ತು ಗೋಮೂತ್ರವು ಭಾರತದ ನೈಸರ್ಗಿಕ ಕೃಷಿಗೆ ಹಾಗೂ ಆಹಾರ ಭದ್ರತೆಗೆ ಮೂಲವಾಗಿದೆ. ವ್ಯವಸ್ಥಿತವಾಗಿ ಗೋವಂಶವನ್ನು ನಾಶಪಡಿಸಿ ಭಾರತವನ್ನು ರಸಗೊಬ್ಬರ ಮತ್ತು ಬೀಜಗಳಿಗಾಗಿ ವಿದೇಶಿ ಕಂಪನಿಗಳಿಗೆ ಗುಲಾಮರನ್ನಾಗಿಸುವ ದೊಡ್ಡ ಸಂಚು ಇದಾಗಿದೆ. ಗೋವಂಶ ರಕ್ಷಣೆ ಎಂದರೆ ಭಾರತದ ಆರ್ಥಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವುದು ! ಅನೇಕ ತನಿಖೆಗಳಿಂದ ಗೋವುಗಳ ಕಳ್ಳಸಾಗಾಣಿಕೆಯ ಹಣವನ್ನು ಮಾದಕ ದ್ರವ್ಯ ವ್ಯಾಪಾರ, ಶಸ್ತ್ರಾಸ್ತ್ರ ಸಾಗಾಣಿಕೆ ಮತ್ತು ‘ಲವ್ ಜಿಹಾದ್’ನಂತಹ ರಾಷ್ಟ್ರವಿರೋಧಿ ಕೃತ್ಯಗಳಿಗೆ ಬಳಸಲಾಗುತ್ತಿದೆ. ಗೋವುಗಳ ಕಳ್ಳಸಾಗಾಣಿಕೆಯು ಈ ಎಲ್ಲಾ ಕಳ್ಳ (ಅಕ್ರಮ) ದಂಧೆಗಳ ಮೂಲವಾಗಿದೆ.

ಮಾನವತಾವಾದಿಗಳ ಬಣ್ಣ ಬಯಲು !

ಯಾವುದಾದರೂ ಗೋಕಳ್ಳನನ್ನು ಥಳಿಸಿದಾಗ ದೇಶದಾದ್ಯಂತ ಇರುವ ಪ್ರಗತಿ (ಅಧೋಗತಿ)ಪರ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ‘ಮಾಬ್ ಲಿಂಚಿಂಗ್’ (ಸಮೂಹ ಹಲ್ಲೆ) ಎಂದು ಬೊಬ್ಬೆ ಹೊಡೆಯುತ್ತವೆ; ಆದರೆ ಅದೇ ಗೋಕಳ್ಳರು ಪೊಲೀಸರನ್ನು ಕೊಂದಾಗ ಅಥವಾ ಜೀವಂತ ಗೋವುಗಳನ್ನು ಕ್ರೂರವಾಗಿ ಟ್ರಕ್‌ನಲ್ಲಿ ತುಂಬಿದಾಗ ಈ ಮಾನವತಾವಾದಿಗಳು ಚಕಾರವೆತ್ತುವುದಿಲ್ಲ. ಸರ್ವೋಚ್ಚ ನ್ಯಾಯಾಲಯವು ಈಗ ದಾರಿ ಮಾಡಿಕೊಟ್ಟಿದೆ; ಆದರೆ ನಿಜವಾದ ಕ್ರಮವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೈಯಲ್ಲಿದೆ. ಕೇವಲ ಕಾನೂನುಗಳನ್ನು ಮಾಡಿದರೆ ಸಾಲದು, ಪ್ರತಿಯೊಬ್ಬ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಒಂದೇ ಒಂದು ಗೋವಂಶವೂ ಕಳ್ಳತನವಾಗದಂತೆ ನೋಡಿಕೊಳ್ಳಬೇಕು.

ಗೋರಕ್ಷಕರ ಮನೋಸ್ಥೈರ್ಯ ಹೆಚ್ಚಿಸುವ ಸಮಯ !

ಇಂದಿನವರೆಗೆ ಅನೇಕ ಗೋಸೇವಕರು ತಮ್ಮ ಪ್ರಾಣದ ಹಂಗು ತೊರೆದು ಗೋವುಗಳನ್ನು ರಕ್ಷಿಸಿದ್ದಾರೆ. ಅನೇಕ ಬಾರಿ ಅವರು ಪೊಲೀಸ್ ಮತ್ತು ರಾಜಕೀಯ ವ್ಯವಸ್ಥೆಯ ಕಿರುಕುಳವನ್ನು ಅನುಭವಿಸಬೇಕಾಯಿತು. ಈಗ ಸಮಾಜವು ಹೆಚ್ಚು ಸಂಘಟಿತವಾಗಿ ಗೋಕಳ್ಳರಿಗೆ ಯಾವುದೇ ರಾಜಕೀಯ ರಕ್ಷಣೆ ಸಿಗದಂತೆ ಆಡಳಿತದ ಮೇಲೆ ಒತ್ತಡ ಹೇರಬೇಕು. ಕೊನೆಯ ಕಸಾಯಿಖಾನೆ ಮುಚ್ಚುವ ವರೆಗೆ ಮತ್ತು ಕೊನೆಯ ಗೋಕಳ್ಳರು ಜೈಲಿನಲ್ಲಿ ಕೊಳೆಯುವ ವರೆಗೆ ಈ ಹೋರಾಟ ಮುಂದುವರಿಯಬೇಕು. ಅನೇಕ ರಾಜ್ಯಗಳಲ್ಲಿ ಈಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಇಡೀ ದೇಶಕ್ಕೆ ಅಂತಹ ಕಾನೂನು ಇಲ್ಲದಿರುವುದರಿಂದ ಇಂದಿಗೂ ಈಶಾನ್ಯ ಭಾರತದಲ್ಲಿ ಗೋಹತ್ಯೆ ಮಾಡಿ ಗೋಮಾಂಸ ಭಕ್ಷಿಸಲಾಗುತ್ತದೆ. ದೇಶದ ಅಲ್ಪಸಂಖ್ಯಾತ ಕ್ರೈಸ್ತ ಮತ್ತು ಮುಸಲ್ಮಾನರಿಗಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಪ್ರತಿದಿನ ಗೋಹತ್ಯೆ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಏನೂ ಮಾಡುತ್ತಿಲ್ಲ. ಹಿಂದೂಗಳ ಸರಕಾರಗಳೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಸ್ಥಿತಿಯು ಕೇವಲ ಹಿಂದೂ ರಾಷ್ಟ್ರ ಸ್ಥಾಪನೆಯಾದಾಗ ಮಾತ್ರ ಬದಲಾಗಲು ಸಾಧ್ಯವಿರುವುದರಿಂದ, ಗೋಕಕ್ಷಕರು ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ !