‘ಕಾರ್ಪೊರೇಟ್ ಜಿಹಾದ್’ನ ವಿರುದ್ಧ ಜನಜಾಗೃತಿ ಅಭಿಯಾನ’ ಎಂಬ ವಿಷಯದ ಕುರಿತು ಮುಂಬಯಿಯಲ್ಲಿ ವಿಶೇಷ ಸಂವಾದ !

ಮುಂಬಯಿ – ಭಾರತದಲ್ಲಿ ಶರಿಯತ್ ನ ಅನುಸಾರ ಇಸ್ಲಾಮಿಕ್ ಆಡಳಿತವಿಲ್ಲದಿರುವುದರಿಂದ ಇಸ್ಲಾಮಿಕ್ ಶಕ್ತಿಗಳಿಗೆ ಇದು ‘ಕಾಫಿರರ’ ಭೂಮಿಯಾಗಿದೆ. ಅವರಿಗೆ ಭಾರತದಲ್ಲಿ ‘ದಾರ್ ಉಲ್ ಇಸ್ಲಾಂ’ (ಇಸ್ಲಾಮಿನ ಆಡಳಿತವಿರುವ ಪ್ರದೇಶ) ಅಂದರೆ ಇಸ್ಲಾಮಿನ ಆಡಳಿತವನ್ನು ತರಬೇಕಿದೆ. ಅದಕ್ಕಾಗಿ ಆರಂಭಿಸಲಾದ ಜಿಹಾದನ್ನು ‘ಗಜ್ವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ ಮಾಡುವ ಸಂಚು) ಎಂದು ಕರೆಯಲಾಗಿದ್ದು, ಭಾರತಕ್ಕೆ ‘ಖುರಾಸಾನ’ (ಈಶಾನ್ಯ ಇರಾನ, ಅಫ್ಘಾನಿಸ್ತಾನ, ಪಾಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳ ಭೂಪ್ರದೇಶ) ಎಂಬ ಹೆಸರನ್ನು ಎಂದೋ ನೀಡಲಾಗಿದೆ. ಹಿಂದೂಗಳ ವಿರುದ್ಧ ಅನೇಕ ವರ್ಷಗಳಿಂದ ಜಿಹಾದ ನಡೆಯುತ್ತಿದೆ; ಆದರೆ ನಾಸಿಕ್ ನ ಟಿ.ಸಿ.ಎಸ್.ನಲ್ಲಿ ನಡೆದ ಮತಾಂತರದ ಪ್ರಕರಣದಿಂದಾಗಿ ‘ವೃತ್ತಿಪರ ಜಿಹಾದ್’ ನಿನ್ನೆ-ಮೊನ್ನೆಯಷ್ಟೇ ಆರಂಭವಾಗಿದೆ ಎಂದು ಹಿಂದೂಗಳಿಗೆ ಅನಿಸುತ್ತಿದೆ. ವರ್ಷ 711 ರಲ್ಲಿ ಮೊಹಮ್ಮದ್ ಬಿನ್ ಕಾಸಿಮನು ಆಕ್ರಮಣ ಮಾಡಿದಾಗಿನಿಂದ ಯೋಜನಾಬದ್ಧವಾಗಿ ಜಿಹಾದಿನ ಸಂಚು ಆರಂಭವಾಯಿತು ಮತ್ತು ಅದು ಇಂದಿಗೂ ಮುಂದುವರಿಯುತ್ತಿದೆ. ಈ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಇಲ್ಲದ ಕಾರಣ ಜಿಹಾದ್ ನ ವಿರುದ್ಧ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಹೇಳಿದರು.
🚨“Awareness Campaign to Alert Hindus Against the Conspiracy of Jihad Ongoing Since 711 AD!”
– @Ramesh_hjs National Spokesperson @HinduJagrutiOrg at a special dialogue in Mumbai on “Awareness Campaign Against Corporate Jihad.”Shinde also announced the “Beti Bachao” campaign,… pic.twitter.com/GigVJJmENI
— Sanatan Prabhat (@SanatanPrabhat) April 27, 2026
ಅವರು ಮುಲುಂಡನಲ್ಲಿರುವ ಪದ್ಮಾವತಿ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏಪ್ರಿಲ್ 26 ರಂದು ‘ಕಾರ್ಪೊರೇಟ್ ಜಿಹಾದ್’ ವಿರುದ್ಧ ಜನಜಾಗೃತಿ ಅಭಿಯಾನ’ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿಂದುತ್ವನಿಷ್ಠ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ನ್ಯಾಯವಾದಿ (ಸೌ.) ಪ್ರೀತಿ ರಾವುತ ಮತ್ತು ಸನಾತನ ಸಂಸ್ಥೆಯ ಸೌ. ಧನಶ್ರೀ ಕೇಳಶೀಕರರವರೂ ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮುಂಬಯಿ, ಠಾಣೆ, ರಾಯಗಡ ಮತ್ತು ಪಾಲಘರ ಜಿಲ್ಲೆಗಳ ಹಿಂದುತ್ವನಿಷ್ಠರು ಮತ್ತು ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಪ್ರಶ್ನೋತ್ತರ ಅವಧಿ ಮತ್ತು ಪೂರ್ಣ ‘ವಂದೇ ಮಾತರಂ’ ಗೀತೆಯೊಂದಿಗೆ ಮುಕ್ತಾಯವಾಯಿತು.
ಶ್ರೀ. ರಮೇಶ ಶಿಂದೆಯವರು ಮಾತು ಮುಂದುವರೆಸುತ್ತಾ,

೧. 711 ರಲ್ಲಿ ಮೊಹಮ್ಮದ್ ಬಿನ್ ಕಾಸಿಮನು ದಾಳಿ ಮಾಡಿ ಹಿಂದೂ ರಾಜರಾದ ದಾಹಿರರ ಪುತ್ರಿಯರನ್ನು ಅಪಹರಿಸಿದಾಗಿನಿಂದ ‘ಲವ್ ಜಿಹಾದ್’ ಆರಂಭವಾಯಿತು. ಆನಂತರ ಗಜ್ನಿ, ಘೋರಿ, ಬಾಬರ, ಅಕ್ಬರ ಆಕ್ರಮಣ ಮಾಡಿದರು. ಕೇವಲ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಮಹಿಳೆಯರಿಗೆ ಗೌರವ ಮತ್ತು ಸುರಕ್ಷತೆಯನ್ನು ನೀಡಲಾಯಿತು; ಆದರೆ ನಂತರ 1947 ರಲ್ಲಿ ನಡೆದ ದೇಶದ ವಿಭಜನೆ, 1971 ರಲ್ಲಿ ಬಾಂಗ್ಲಾದೇಶದ ನಿರ್ಮಾಣ, 1990 ರಲ್ಲಿ ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧ, ಹಿಂದೂ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯಗಳು ಅಂದಿನಿಂದ ಇಂದಿನವರೆಗೂ ಮುಂದುವರಿಯುತ್ತಲೇ ಇವೆ. ಹಿಂದಿ ಚಿತ್ರರಂಗದ ಅನೇಕ ಮುಸಲ್ಮಾನ ನಟರು ಹಿಂದೂ ನಟಿಯರನ್ನು ವಿವಾಹವಾಗುವ ಮೂಲಕ ಒಂದು ರೀತಿಯಲ್ಲಿ ಜಿಹಾದ್ ಗೆ ಪ್ರೋತ್ಸಾಹ ನೀಡಿದ್ದಾರೆ. ಆದುದರಿಂದ ಜಿಹಾದ್ ಈಗಷ್ಟೇ ಬಯಲಿಗೆ ಬಂದಿದ್ದಲ್ಲ, ಅದು ಮೊದಲಿನಿಂದಲೂ ನಡೆಯುತ್ತಿದೆ ಎಂಬುದನ್ನು ಹಿಂದೂಗಳು ಗಮನಿಸಬೇಕು.
🚨 Mumbai raises alarm on “Corporate Jihad” 🚨
An impactful public awareness gathering in #Mumbai, led by the Hindu Janajagruti Samiti, witnessed an overwhelming response from youth and citizens, amplifying concerns over “corporate jihad” and “love jihad”.
⚠️ Key demands:
🛑… pic.twitter.com/V9x8V6w9lJ— HinduJagrutiOrg (@HinduJagrutiOrg) April 27, 2026
೨. ಮತಾಂತರ ನಿಷೇಧ ಕಾಯ್ದೆಯಲ್ಲಿ ಗುಜರಾತ ಸರಕಾರವು ಮಾಡಿರುವ ನಿಬಂಧನೆಯಂತೆ, ಯಾವುದಾದರೂ ಹುಡುಗಿ ಪರಧರ್ಮದ ಪುರುಷನೊಂದಿಗೆ ವಿವಾಹವಾಗಲು ಇಚ್ಛಿಸಿದರೆ, ಅವರು 90 ದಿನಗಳ ಮೊದಲೇ ಪೋಷಕರಿಗೆ ತಿಳಿಸಿ ಅವರಿಂದ ‘ನಿರಾಕ್ಷೇಪಣಾ ಪತ್ರ’ ಸಲ್ಲಿಸಬೇಕಾಗುತ್ತದೆ. ಮಹಾರಾಷ್ಟ್ರ ಸರಕಾರವೂ ಈ ನಿಟ್ಟಿನಲ್ಲಿ ಹೆಜ್ಜೆಯನ್ನು ಇಡಬೇಕು.
೩. ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಂಡಿಸಿದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ, ದೇಶಾದ್ಯಂತ 2016 ರಿಂದ 2021 ರ ಅವಧಿಯಲ್ಲಿ 4 ಲಕ್ಷದ 65 ಸಾವಿರಕ್ಕೂ ಹೆಚ್ಚು ಹುಡುಗಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ ಅತಿ ಹೆಚ್ಚು ಹುಡುಗಿಯರು ಮಹಾರಾಷ್ಟ್ರದಿಂದಲೇ ನಾಪತ್ತೆಯಾಗಿದ್ದಾರೆ. ಇಂದು ನನ್ನ ಮಗಳು ಸುರಕ್ಷಿತವಾಗಿದ್ದಾಳೆ; ಆದರೆ ಅವಳು ನಾಳೆ ಸುರಕ್ಷಿತವಾಗಿರುತ್ತಾಳೆಯೇ ಇಲ್ಲವೇ? ಎಂಬ ಬಗ್ಗೆ ಚಿಂತಿಸಬೇಕಾಗಿದೆ.
‘ಲವ್ ಜಿಹಾದ್’ ವಿರುದ್ಧ ‘ಬೇಟಿ ಬಚಾವೋ’ (ಹೆಣ್ಣು ಮಕ್ಕಳನ್ನು ಉಳಿಸಿ) ಅಭಿಯಾನ!ಕಳೆದ ಅನೇಕ ವರ್ಷಗಳಿಂದ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ. ಹಿಂದೂ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಬಾರದು ಎಂಬ ಉದ್ದೇಶದಿಂದ ನಾವು ‘ಬೇಟಿ ಬಚಾವೋ ಅಭಿಯಾನ’ವನ್ನು ಪ್ರಾರಂಭಿಸುತ್ತಿದ್ದೇವೆ. ಹಿಂದೂಗಳೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಈ ಕುರಿತು ಜಾಗೃತಿಗಾಗಿ ಆಯೋಜಿಸಲಾಗುವ ಉಪನ್ಯಾಸಗಳು ಮತ್ತು ಕಾರ್ಯಕ್ರಮಗಳಿಗೆ ನಾವು ಸಹಕರಿಸುತ್ತೇವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಕರೆ ನೀಡಿದರು. |
‘ಕಾರ್ಪೊರೇಟ್ ಜಿಹಾದ್’ ಪ್ರಕರಣದಲ್ಲಿ ಸಹಾಯ ಮಾಡುವ ವ್ಯವಸ್ಥೆ ಮತ್ತು ಜನರನ್ನು ಅಪರಾಧದ ವರ್ಗಕ್ಕೆ ಸೇರಿಸಿ ಶಿಕ್ಷಿಸಬೇಕು! – ನ್ಯಾಯವಾದಿ (ಸೌ.) ಪ್ರೀತಿ ರಾವುತ, ಹಿಂದುತ್ವನಿಷ್ಠ ಮತ್ತು ಸಾಮಾಜಿಕ ಕಾರ್ಯಕರ್ತೆ
ಇಂದು ಹಿಂದೂ ಯುವತಿಯರು ಲವ್ ಜಿಹಾದ್ ಮತ್ತು ಮತಾಂತರಕ್ಕೆ ಬಲಿಯಾಗುತ್ತಿದ್ದಾರೆ. ‘ಕಾರ್ಪೊರೇಟ್ ಜಿಹಾದ್’ ಪ್ರಕರಣದಲ್ಲಿ ಸಹಾಯ ಮಾಡುವ ವ್ಯವಸ್ಥೆ ಮತ್ತು ಜನರನ್ನು ಅಪರಾಧಗಳ ವರ್ಗಕ್ಕೆ ಸೇರಿಸಿ ಶಿಕ್ಷಿಸಬೇಕು; ಆದರೆ ‘ಹಿಂದಿನ ಮತ್ತು ಈಗಿನ ಸರಕಾರಗಳ ನಡುವೆ ಜಿಹಾದನ್ನು ತಡೆಯುವ ಬಗ್ಗೆ ಗಾಂಭೀರ್ಯತೆಯಿಲ್ಲ’ ಎಂದು ವಿಷಾದದಿಂದ ಹೇಳಬೇಕಾಗಿದೆ. ಸರಕಾರ ನಿರ್ಧರಿಸಿದರೆ ಇದರ ಬೇರುಗಳನ್ನು ನಾಶಪಡಿಸಬಹುದು; ಆದರೆ ಅದು ನಡೆಯುತ್ತಿರುವುದು ಕಂಡುಬರುತ್ತಿಲ್ಲ. ಹಿಂದೂಗಳು ಎಷ್ಟು ಸಂಘಟಿತರಾಗಬೇಕೆಂದರೆ, ಯಾವುದೇ ಸರಕಾರವಿದ್ದರೂ ಹಿಂದೂಗಳ ಮಾತನ್ನು ಕೇಳಲೇಬೇಕು. ಈ ದೇಶದಲ್ಲಿ ಹಿಂದೂಗಳು ಶೇ. 80 ರಷ್ಟಿದ್ದಾರೆ. ಉಳಿದ ಶೇ. 20 ಕ್ಕಾಗಿ ಹಿಂದೂಗಳನ್ನು ಈ ದೇಶದಲ್ಲಿ ಹತ್ತಿಕ್ಕಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಹಿಂದೂಗಳು ಏನನ್ನು ಕಳೆದುಕೊಂಡಿದ್ದಾರೋ ಅದನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು. ಹಿಂದೂ ಮಹಿಳೆಯರು ಮತ್ತು ಯುವತಿಯರನ್ನು ಗುರಿಯಾಗಿಸಲಾಗುತ್ತಿದೆ. ಹಿಂದೂ ಯುವತಿಯರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಜ್ಞಾನದ ದೃಷ್ಟಿಯಿಂದ ಸಶಕ್ತರೂ, ಸಮರ್ಥರೂ ಆಗಬೇಕು ಮತ್ತು ದೌರ್ಜನ್ಯಗಳ ವಿರುದ್ಧ ಕ್ರಿಯಾಶೀಲರಾಗಬೇಕು.
ಮುಂಬರುವ ಪೀಳಿಗೆಯನ್ನು ಉಳಿಸಬೇಕಾದರೆ, ಮಕ್ಕಳಿಗೆ ಧರ್ಮಶಿಕ್ಷಣ ನೀಡಬೇಕು! – ಸೌ. ಧನಶ್ರೀ ಕೇಳಶೀಕರ, ಸನಾತನ ಸಂಸ್ಥೆ
ಟಿ.ಸಿ.ಎಸ್. ಪ್ರಕರಣದಲ್ಲಿ ಮಾಧ್ಯಮಗಳು ‘ಅಂತಹದೇನೂ ನಡೆದಿಲ್ಲ’ ಎಂಬ ಸುದ್ದಿಗಳನ್ನು ಪ್ರಸಾರ ಮಾಡಿ ಸಮಾಜದ ಹಾದಿ ತಪ್ಪಿಸಿವೆ. ಕಾರ್ಪೊರೇಟ್ ಜಿಹಾದ್, ಲವ್ ಜಿಹಾದ್ ಮಾಡುವುದು ಮಾತ್ರ ಮತಾಂಧರ ಗುರಿಯಲ್ಲ, ಬದಲಾಗಿ 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವುದು ಅವರ ಗುರಿಯಾಗಿದೆ. ನಮ್ಮ ಮಕ್ಕಳು ಯಾರ ಜೊತೆ ಹೋಗುತ್ತಿದ್ದಾರೆ? ಎಂಬ ಬಗ್ಗೆ ಪೋಷಕರು ಜಾಗೃತರಾಗಿರುವುದು ಅಗತ್ಯವಾಗಿದೆ. ಮುಂಬರುವ ಪೀಳಿಗೆಯನ್ನು ಉಳಿಸಬೇಕಾದರೆ, ಮಕ್ಕಳಿಗೆ ಧರ್ಮಶಿಕ್ಷಣ ನೀಡಲೇಬೇಕು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ