ಸಾಧಕರೇ, ನಮ್ಮ ಶಾರೀರಿಕ ತೊಂದರೆಗಳನ್ನು ‘ಪ್ರಾರಬ್ಧಭೋಗ ಎಂದು ಸ್ವೀಕರಿಸಿದರೆ ಈಶ್ವರೀ ಸಹಾಯ ಸಿಗುವುದರಿಂದ ಆನಂದದಿಂದ ಸ್ವೀಕರಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದು ಬಂದ ಅಮೃತಬಿಂದು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಪ್ರಸ್ತುತ ನಡೆಯುತ್ತಿರುವ ವಿಶೇಷ ಭಕ್ತಿಸತ್ಸಂಗ ಸರಣಿಯ ಅಂತರ್ಗತ, ಸಾಧನೆಯ ಪಂಚಸೂತ್ರಗಳಲ್ಲಿನ ಮೂರನೇ ಸೂತ್ರವಾದ ‘ಸ್ವೀಕರಿಸುವುದು ಈ ವಿಷಯದ ಬಗ್ಗೆ ಗುರುಕೃಪೆಯಿಂದ ಸಾಧಕರಿಗೆ ಮಾರ್ಗದರ್ಶನ ಲಭಿಸುತ್ತಿದೆ. ಪಂಚಸೂತ್ರಗಳಲ್ಲಿ ‘ಸ್ವೀಕರಿಸುವುದು ಇದು ಅತ್ಯಂತ ಮಹತ್ವಪೂರ್ಣ ಸೂತ್ರವಾಗಿದೆ. ಸ್ವೀಕರಿಸುವುದು ಇದರ ಮೂರು ಮುಖ್ಯ ಪ್ರಕಾರಗಳಿವೆ. ೧. ನಮ್ಮನ್ನು ನಾವು ಸ್ವೀಕರಿಸುವುದು, ೨. ಇತರರನ್ನು ಸ್ವೀಕರಿಸುವುದು ಮತ್ತು ೩. ಪರಿಸ್ಥಿತಿಯನ್ನು ಸ್ವೀಕರಿಸುವುದು. ಈ ವಾರ ನಾವು ‘ನಮ್ಮನ್ನು ನಾವು ಸ್ವೀಕರಿಸುವುದು ಎಂಬ ಮೊದಲ ಆಯಾಮದ ಬಗೆಗಿನ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.

ಮಾನವನ ದೇಹವು ಜನ್ಮಕ್ಕೆ ಬರುವಾಗ ದೇಹದೊಂದಿಗೆ ಜನ್ಮಜನ್ಮಾಂತರಗಳ ಒಳ್ಳೆಯ-ಕೆಟ್ಟ ಕರ್ಮಗಳು ಮತ್ತು ಅವುಗಳ ಫಲವಾದ ‘ಸಂಚಿತವು ಸಹ ನಮ್ಮ ಜೊತೆಗೇ ಬರುತ್ತದೆ. ಜೀವನದಲ್ಲಿ ಬರುವ ಸುಖದ ಕ್ಷಣಗಳನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ, ಅಂದರೆ ಅವುಗಳನ್ನು ಸ್ವೀಕರಿಸುತ್ತೇವೆ; ಆದರೆ ಯಾವಾಗ ದೇಹಕ್ಕೆ ದೊಡ್ಡ ಅನಾರೋಗ್ಯ ಬರುತ್ತದೆಯೋ ಅಥವಾ ಯಾವುದಾದರೂ ರೋಗ ಅಂಟಿಕೊಳ್ಳುತ್ತದೆಯೋ, ಆಗ ಅನೇಕ ಬಾರಿ ಸಾಧಕರು ಮಾನಸಿಕವಾಗಿ ಕುಗ್ಗುತ್ತಾರೆ. ಸಾಧಕರ ಮನಸ್ಸು ಆ ಅನಾರೋಗ್ಯವನ್ನು ಅಥವಾ ರೋಗವನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಅವರು ಚಿಂತಿತರಾಗುತ್ತಾರೆ ಮತ್ತು ದುಃಖಿತರಾಗುತ್ತಾರೆ. ‘ತನ್ನ ದೈಹಿಕ ಸ್ಥಿತಿ, ಅನಾರೋಗ್ಯ ಅಥವಾ ರೋಗವನ್ನು ಸ್ವೀಕರಿಸದಿರುವುದು, ಇದು ದೇಹಬುದ್ಧಿಯ ಒಂದು ಭಾಗವಾಗಿದ್ದು ನಮ್ಮ ಆಧ್ಯಾತ್ಮಿಕ ಪ್ರಗತಿಯಲ್ಲಿ ಅಡಚಣೆಯನ್ನು ತರುತ್ತದೆ. ಈ ಮೂಳೆ-ಮಾಂಸದ ದೇಹವೆಂದರೆ ‘ನಾವು ಎಂದು ನಾವು ನಂಬುತ್ತೇವೆ; ಹಾಗಾಗಿ ದೇಹಕ್ಕೆ ಉಂಟಾಗುವ ಯಾತನೆಗಳಿಂದ, ಅಂದರೆ ದೇಹಬುದ್ಧಿಯಿಂದ ನಾವು ನಮ್ಮ ಅನಾರೋಗ್ಯವನ್ನು ಸ್ವೀಕರಿಸುವುದಿಲ್ಲ. ತನ್ನ ಈ ಸ್ಥಿತಿಯನ್ನು ಸ್ವೀಕರಿಸಲು ಬಹಳ ಕಠಿಣವಾಗುತ್ತದೆ.

೧. ಸ್ವತಃದ ದೈಹಿಕ ಸ್ಥಿತಿಯನ್ನು ಸ್ವೀಕರಿಸದಿರುವುದು – ಇದರ ಹಿಂದಿರುವ ಅಯೋಗ್ಯ ಮಾನಸಿಕತೆಯ ಉದಾಹರಣೆಗಳು

ಅನೇಕ ಬಾರಿ ದೇಹಬುದ್ಧಿಯಿಂದಾಗಿ ‘ತನ್ನ ದೇಹದ ಬಗ್ಗೆ ಬರುವ ವಿವಿಧ ವಿಚಾರಗಳು, ದೈಹಿಕ ಸಾಮರ್ಥ್ಯ, ದೈಹಿಕ ರೋಗಗಳು, ವಯಸ್ಸಿಗನುಸಾರ ಅಥವಾ ಸಣ್ಣ ವಯಸ್ಸಿನಲ್ಲಿ ಬರುವ ಅನಾರೋಗ್ಯ ಇತ್ಯಾದಿ ಎಲ್ಲವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

೧ ಅ. ತೀವ್ರ ವಿಚಾರ : ಸ್ವೀಕರಿಸಲು ಸಾಧ್ಯವಾಗದಿರುವುದರ ಹಿಂದೆ ಬೇರೆ ಬೇರೆ ವಿಚಾರಗಳು ಕಾರ್ಯನಿರತವಾಗಿರುತ್ತವೆ. ಉದಾ. ‘ನನಗೇ ಏಕೆ ಇಷ್ಟೆಲ್ಲ ದೈಹಿಕ ತೊಂದರೆಗಳಾಗಿವೆ ? ದೈಹಿಕ ಮಿತಿಯಿಂದಾಗಿ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ, ನನ್ನ ಸಾಮರ್ಥ್ಯ ಇಷ್ಟೇ ಇದೆ. ಇದಕ್ಕಿಂತ ಹೆಚ್ಚು ನಾನು ಏನನ್ನೂ ಮಾಡಲು ಸಾಧ್ಯವಿಲ್ಲ, ಇಂತಹ ತೀವ್ರ ವಿಚಾರಗಳನ್ನು ಮಾಡುವುದು.

೧ ಆ. ಭವಿಷ್ಯದ ಚಿಂತೆ : ಪ್ರಸ್ತುತ ಆಗುತ್ತಿರುವ ಸಣ್ಣಪುಟ್ಟ ತೊಂದರೆಗಳಿಂದ ‘ಮುಂದೆ ನನಗೆ ಯಾವುದಾದರೂ ದೊಡ್ಡ ಕಾಯಿಲೆ ಬರಬಹುದೇ ? ಆಪತ್ಕಾಲದಲ್ಲಿ ನನ್ನ ಸ್ಥಿತಿ ಏನಾಗಬಹುದು ? ಅಥವಾ ‘ಮುಂದೆ ವಯಸ್ಸಾದ ಮೇಲೆ ನನ್ನನ್ನು ಯಾರು ನೋಡಿಕೊಳ್ಳುವರು ?, ಹೀಗೆ ಭವಿಷ್ಯದ ಬಗ್ಗೆ ಚಿಂತೆಯು ಮನಸ್ಸನ್ನು ಹೆದರಿಸುತ್ತಾ ಇರುತ್ತದೆ.

೧ ಇ. ಸ್ವಂತ ದೇಹದಿಂದ ಅವಾಸ್ತವಿಕ ಅಪೇಕ್ಷೆಗಳು : ‘ನನಗೆ ಇತರರಂತೆ ಸೇವೆಗಳನ್ನು ಅಥವಾ ಸಾಧನೆಯನ್ನು ಮಾಡಲು ಆಗುವುದಿಲ್ಲ ಎಂದು ತುಲನೆ ಮಾಡುವುದು ಅಥವಾ ತನ್ನಲ್ಲಿರುವ ಕೊರತೆಗಳನ್ನು ಇತರರೊಂದಿಗೆ ಹೋಲಿಸುವುದು, ಹಾಗೆಯೇ ಕೀಳರಿಮೆ ಇತ್ಯಾದಿಗಳಿಂದ ಅನೇಕ ಬಾರಿ ಸಾಧಕನ ಮನಸ್ಸು ಅಸ್ವಸ್ಥಗೊಂಡು ಅವನಿಗೆ ನಿರಾಶೆ ಬರುತ್ತದೆ.

೨. ಸಾಧಕರೇ, ದುಃಖವನ್ನು ಸ್ವೀಕರಿಸುವುದು ಸೋಲಲ್ಲ, ಅದು ಆಧ್ಯಾತ್ಮಿಕ ಬಲವಾಗಿದೆ !

ದೈಹಿಕ ತೊಂದರೆಗಳಿಂದ ದುಃಖಿತರಾಗಿ ಆ ದುಃಖವನ್ನು ಸ್ವೀಕರಿಸದೇ ಅದನ್ನು ವಿರೋಧಿಸಿದರೆ, ಅದು ಹೆಚ್ಚಾಗುತ್ತದೆ. ‘ದುಃಖದಿಂದ ಓಡಿಹೋಗುವುದು ಎಂದರೆ ಕರ್ಮದ ಬಂಧನವನ್ನು ಇನ್ನಷ್ಟು ಬಿಗಿಗೊಳಿಸುವುದು ಮತ್ತು ತನ್ನ ಪ್ರಾರಬ್ಧವನ್ನು ಹೆಚ್ಚಿಸಿಕೊಳ್ಳುವುದು ! ‘ಯಾವಾಗ ಸಾಧಕರು ದುಃಖ ಅಥವಾ ದೈಹಿಕ ನೋವನ್ನು ‘ಪ್ರಾರಬ್ಧ ಎಂದು ಸ್ವೀಕರಿಸುತ್ತಾರೋ, ಆಗ ಅವರಿಗೆ ಆ ಕರ್ಮಭೋಗಗಳಿಂದ ಮುಕ್ತಿ ಸಿಗಲು ಆರಂಭ ಆಗುತ್ತದೆ ! ರೋಗವನ್ನು ‘ಶತ್ರು ಎಂದು ಭಾವಿಸದೇ ಅದನ್ನು ‘ಈಶ್ವರೇಚ್ಛೆ ಎಂದು ಸ್ವೀಕರಿಸಿದರೆ ಆಧ್ಯಾತ್ಮಿಕ ಶಕ್ತಿ ದೊರೆಯುತ್ತದೆ.

೩. ದುಃಖ ಮತ್ತು ವೇದನೆಗಳನ್ನು ಅನುಭವಿಸಿ ಸಾಧಕನು ಶುದ್ಧನಾಗಿ ಈಶ್ವರನ ಚರಣಗಳಲ್ಲಿ ಬೇಗ ಸೇರಬಲ್ಲನು !

ದುಃಖವನ್ನು ಅನುಭವಿಸುವುದು ಎಂದರೆ ಪೂರ್ವಜನ್ಮಗಳ ಸಂಚಿತ ಕರ್ಮಗಳ ಕ್ಷಯವಾಗುವುದು ! ದುಃಖ ಮತ್ತು ನೋವನ್ನು ಭೋಗಿಸಿ ಶುದ್ಧನಾಗಿ ಸಾಧಕನು ಈಶ್ವರನ ಚರಣಗಳತ್ತ ತಲುಪಬಲ್ಲನು. ದುಃಖವನ್ನು ಭೋಗಿಸುವುದು, ಅಂದರೆ ಹಿಂದಿನ ಜನ್ಮಗಳಲ್ಲಿನ ಸಂಚಿತ ಕರ್ಮ ಕಡಿಮೆ ಆಗುವುದು ದುಃಖ ಮತ್ತು ವೇದನೆಗಳನ್ನು ಭೋಗಿಸಿ ಶುದ್ಧವಾಗಿ ಸಾಧಕನು ಈಶ್ವರನ ಚರಣಗಳ ವರೆಗೆ ತಲಪುವುದು. ಈ ಭೋಗಗಳನ್ನು ಇದೇ ಜನ್ಮದಲ್ಲಿ ಭೋಗಿಸಿದರೆ, ಸಾಧಕರ ಆಧ್ಯಾತ್ಮಿಕ ಮಾರ್ಗಕ್ರಮಣದಲ್ಲಿನ ಅಡಚಣೆಗಳು ದೂರವಾಗುತ್ತವೆ. ಆದ್ದರಿಂದ ದೈಹಿಕ ತೊಂದರೆಯಾಗುತ್ತಿರುವಾಗ ‘ನನಗೇ ಏಕೆ ತೊಂದರೆಯಾಗುತ್ತಿದೆ ? ಎಂದು ಪ್ರಶ್ನಿಸದೇ ‘ದೇವರೇ, ನಿನ್ನ ಈ ಕೊಡುಗೆಯೂ ನನಗೆ ಮಾನ್ಯವಿದೆ, ಎಂದು ಹೇಳುತ್ತಾ ದುಃಖವನ್ನು ಸ್ವೀಕರಿಸಬೇಕು.

೪. ಸಾಧಕರೇ, ಜೀವನದಲ್ಲಿನ ಸಂಘರ್ಷವನ್ನು ‘ಪ್ರಾರಬ್ಧದ ಕ್ಷಯ ಎಂದು ನೋಡಿರಿ !

ಸಾಧಕನ ಜೀವನದಲ್ಲಿ ಯಾವಾಗ ಅನಾರೋಗ್ಯ ರೂಪದ ಸಂಕಟವು ಎದುರಾಗುತ್ತದೆಯೋ, ಆಗ ಈಶ್ವರನ ಮೇಲಿನ ಶ್ರದ್ಧೆಯು ದೃಢವಾಗಿದ್ದರೆ ಈಶ್ವರನು ಅವನ ಸಹಾಯಕ್ಕೆ ಬರುತ್ತಾನೆ. ವಾಸ್ತವದಲ್ಲಿ ಭಗವಂತನಿಗೆ ಯಾವುದೂ ಅಸಾಧ್ಯವಿಲ್ಲ; ಆದರೆ ಅವನು ಯಾರ ಪ್ರಾರಬ್ಧದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಮನುಷ್ಯನಿಗೆ ಪ್ರಾರಬ್ಧವನ್ನು ತಪ್ಪಿಸಲು ಸಾಧ್ಯವಿಲ್ಲ; ಆದರೆ ಶ್ರದ್ಧೆಯಿಂದ ಅವನಿಗೆ ಪ್ರಾರಬ್ಧವನ್ನು ಭೋಗಿಸುವ ಶಕ್ತಿಯಂತೂ ಖಂಡಿತವಾಗಿಯೂ ಸಿಗುತ್ತದೆ. ಸಾಧಕರು ಜೀವನದ ಸಂಘರ್ಷವನ್ನು ‘ಪ್ರಾರಬ್ಧಕ್ಷಯ ಅಂದರೆ ‘ಪ್ರಾರಬ್ಧವು ಕಡಿಮೆಯಾಗುತ್ತಿದೆ ಎಂದು ನೋಡಿದರೆ, ಅವರ ಕಲ್ಯಾಣದ ಮಾರ್ಗವು ಸುಗಮವಾಗುತ್ತದೆ.

೫. ದೈಹಿಕ ರೋಗಗಳ ಮೇಲೆ ಮನಸ್ಸಿನ ವಿಜಯವನ್ನು ಸಾಧಿಸಲು ಸಮರ್ಥ ರಾಮದಾಸ ಸ್ವಾಮಿಗಳು ನೀಡಿದ ಬೋಧನೆ

ಸಮರ್ಥ ರಾಮದಾಸ ಸ್ವಾಮಿಗಳು ‘ಮನಾಚೆ ಶ್ಲೋಕಗಳ ಮೂಲಕ ಈ ಮುಂದಿನ ಬೋಧನೆಯನ್ನು ನೀಡಿದ್ದಾರೆ:

‘ದೇಹೇದುಃಖ ತೇ ಸುಖ ಮಾನೀತ ಜಾವೇ |

ವಿವೇಕೇ ಸದಾ ಸ್ವಸ್ವರೂಪೀ ಭರಾವೇ ||

– ಮನಾಚೆ ಶ್ಲೋಕ, ೧೦

ಅರ್ಥ : ಪರಮಾರ್ಥದ ಹಾದಿಯಲ್ಲಿ ನಡೆಯುವಾಗ ದೇಹಕ್ಕೆ ಆಗುವ ತೊಂದರೆಗಳನ್ನು ಆನಂದದಿಂದ ಸಹಿಸಬೇಕು ಮತ್ತು ವಿವೇಕವನ್ನು ಬಳಸಿ ನಮ್ಮ ಚಿತ್ತವನ್ನು ಯಾವಾಗಲೂ ನಮ್ಮ ಸ್ವಸ್ವರೂಪದ (ಆತ್ಮತತ್ತ್ವ್ವದ) ಚಿಂತನೆಯಲ್ಲಿ ತೊಡಗಿಸಬೇಕು.

ಇದರಂತೆ ದೇಹಕ್ಕೆ ಎಷ್ಟೇ ಗಂಭೀರವಾದ ವ್ಯಾಧಿಗಳು ಅಂಟಿದರೂ, ಈಶ್ವರನ ಉಪಾಸನೆಯಿಂದ ಈಶ್ವರನು ಸಾಧಕರನ್ನು ದೇಹದ ಮಿತಿಗಳ ಆಚೆಗೆ ಕರೆದೊಯ್ಯುತ್ತಾನೆ. ಇದಕ್ಕಾಗಿ ಸಾಧಕರು ತಮ್ಮ ದೈಹಿಕ ಸ್ಥಿತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಬೇಕು ಮತ್ತು ಸಾಧನೆಯ ಮೂಲಕ ಮನೋಬಲವನ್ನು ಪಡೆದು ಪ್ರಾರಬ್ಧ ಹಾಗೂ ದೈಹಿಕ ವ್ಯಾಧಿಗಳ ಮೇಲೆ ವಿಜಯವನ್ನು ಸಾಧಿಸಬೇಕು.

ಸಾಧಕರೇ, ಪ್ರಾರಬ್ಧ ಭೋಗಗಳನ್ನು ತಪ್ಪಿಸಲು ಸಾಧ್ಯವಿಲ್ಲ; ಆದರೆ ಮನಸ್ಸನ್ನು ಶಾಂತ ಮತ್ತು ಸ್ಥಿರವಾಗಿಟ್ಟುಕೊಂಡು ಭೋಗಗಳನ್ನು ಸ್ವೀಕರಿಸಿದರೆ ಭಗವಂತನು ನಮ್ಮ ಹಿಂದೆ ಬರುತ್ತಾನೆ. ಇದಕ್ಕಾಗಿ ಭಗವಂತನಿಗೆ ಶರಣಾಗಿ ಅವನಲ್ಲಿ ಶಕ್ತಿಯನ್ನು ಬೇಡಿ ಮತ್ತು ‘ಅವನು ಯಾವ ಯಾವ ರೂಪಗಳಲ್ಲಿ ಬಂದು ಸಹಾಯ ಮಾಡುತ್ತಾನೆ ?

ಎಂಬುದನ್ನು ಕೃತಜ್ಞತಾಭಾವದಿಂದ ನೋಡಿ ! ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರು ದುಃಖ ನಿವಾರಕರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪೂರ್ಣ ಶ್ರದ್ಧೆಯಿಂದ ಅವರ ಮೇಲೆ ಎಲ್ಲಾ ಭಾರವನ್ನು ಹಾಕಿರಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೬.೪.೨೦೨೬)