ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ ಇವರ ೫೦ ನೆಯ ಹುಟ್ಟುಹಬ್ಬದ ಪ್ರಯುಕ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಪೂ. ರಮಾನಂದ ಗೌಡ

ನಿಜ ಜ್ಯೇಷ್ಠ ಶುಕ್ಲ ನವಮಿ (ಜೂನ್ ೨೩ ರಂದು) ಮಂಗಳೂರಿನ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ ಅವರ ೫೦ ನೆಯ ಜನ್ಮದಿನವಾಗಿದೆ. ಆ ಪ್ರಯುಕ್ತ ತೆಲಂಗಾಣದ ಸಾಧಕರಿಗೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ನೀಡಲಾಗಿದೆ.

೧. ಸೌ. ವಿನುತಾ ಶೆಟ್ಟಿ, ಭಾಗ್ಯನಗರ, ತೆಲಂಗಾಣ

೧ ಅ. ‘ಪ್ರತಿಯೊಂದು ಸೇವೆಯ ವ್ಯಾಪ್ತಿಯನ್ನು ತೆಗೆದು ಅದಕ್ಕನುಸಾರ ಸೇವೆ ಮಾಡಬೇಕು’, ಎಂಬುದು ಕಲಿಯಲು ಸಿಕ್ಕಿತು : ‘ಜನವರಿ ೨೦೨೪ ರಲ್ಲಿ ಪೂ. ರಮಾನಂದ ಗೌಡ ಅವರು ತೆಲಂಗಾಣ ರಾಜ್ಯಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ಸಮಯದಲ್ಲಿ ಆಂಧ್ರಪ್ರದೇಶದ ಕೆಲವು ಸಾಧಕರೂ ಕಲಿಯಲು ತೆಲಂಗಾಣಕ್ಕೆ ಬಂದಿದ್ದರು. ಪ್ರವಾಸದಲ್ಲಿ ಕಲಿಯಲು ಬಂದಿದ್ದ ಸಾಧಕರ ಬಳಿ ಪ್ರವಾಸದ ವಿವಿಧ ಸೇವೆಗಳಿದ್ದವು. ಜವಾಬ್ದಾರ ಸಾಧಕರು ಪ್ರವಾಸದ ಸೇವೆಗಳ ವ್ಯಾಪ್ತಿಯನ್ನು ತೆಗೆದು ಸೇವೆಯಲ್ಲಿನ ಸಾಧಕರಿಗೆ ಅದರ ಆಯೋಜನೆಯನ್ನು ಮಾಡಿಕೊಡುವುದು ಅಪೇಕ್ಷಿತವಿತ್ತು; ಆದರೆ ನಾವು ಅಂತಹ ಆಯೋಜನೆ ಮಾಡದಿದ್ದರಿಂದ ಪೂ. ರಮಾನಂದಣ್ಣನವರು ನಮಗೆ ಆ ಸೇವೆಗಳ ವ್ಯಾಪ್ತಿಯನ್ನು ತೆಗೆದು ಸೇವೆಗಳ ಯೋಜನೆಯನ್ನು ಮಾಡಿ ಕೊಡಲು ಹೇಳಿದರು. ಇದರಿಂದ ಎಲ್ಲ ಸಾಧಕರಿಗೆ ‘ಸೇವೆಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಆಯೋಜನೆ ಹೇಗೆ ಮಾಡಬೇಕು ?’, ಎಂಬುದು ಕಲಿಯಲು ಸಿಕ್ಕಿತು.

೧ ಆ. ಪ್ರತಿಯೊಂದು ಸೇವೆಯ ಕುರಿತು ಜಾಗರೂಕತೆ ಮತ್ತು ಗಾಂಭೀರ್ಯ ಇರುವುದು : ಪೂ. ರಮಾನಂದಣ್ಣನವರ ಪ್ರವಾಸದ ಸಮಯದಲ್ಲಿ ನಮ್ಮ ಬಳಿ ಬೇರೆ ಬೇರೆ ಸೇವೆಗಳಿರುತ್ತಿದ್ದವು. ಪೂ. ರಮಾನಂದಣ್ಣನವರು ಆ ಎಲ್ಲ ಸೇವೆಗಳನ್ನು ಬರೆದಿಟ್ಟುಕೊಂಡು ನಮ್ಮ ಬೆಂಬೆತ್ತುವಿಕೆ ತೆಗೆದುಕೊಳ್ಳುತ್ತಿದ್ದರು. ನಾವು ಸಾಧಕರೂ ನಮ್ಮ ನಮ್ಮ ಸೇವೆಗಳನ್ನು ಬರೆದಿಟ್ಟಿದ್ದರೂ ನಮ್ಮಿಂದ ಯಾವುದಾದರೂ ಸೇವೆ ಮಾಡುವುದು ಉಳಿಯುತ್ತಿತ್ತು; ಆದರೆ ಪೂ. ರಮಾನಂದಣ್ಣನವರಿಂದ ಒಂದು ಸೇವೆಯೂ ಉಳಿಯುತ್ತಿರಲಿಲ್ಲ. ಇದರಿಂದ ‘ಪೂ. ರಮಾನಂದಣ್ಣನವರಲ್ಲಿ ಪ್ರತಿಯೊಂದು ಸೇವೆಯ ಕುರಿತು ಎಷ್ಟು ಗಾಂಭೀರ್ಯ ಮತ್ತು ಜಾಗರೂಕತೆಯಿದೆ’, ಎಂಬುದು ನಮ್ಮ ಗಮನಕ್ಕೆ ಬಂದಿತು.

೧ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಿಮೆಯನ್ನು ಹೇಳುವಾಗ ಭಾವಾವಸ್ಥೆಗೆ ಹೋಗುವ ಪೂ. ರಮಾನಂದಣ್ಣ ! : ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಮತ್ತು ಸಾಧಕರೊಂದಿಗೆ ವೈಯಕ್ತಿಕವಾಗಿ ಮಾತನಾಡುವಾಗ ಪ್ರತಿಯೊಂದು ಬಾರಿಯೂ ಪೂ. ರಮಾನಂದಣ್ಣನವರ ಬಾಯಲ್ಲಿ ಗುರುದೇವರ ಹೆಸರಿರುತ್ತಿತ್ತು. ‘ಶ್ರೀ ಗುರುಗಳಿಲ್ಲದೆ ಈ ಜೀವನದಲ್ಲಿ ಶಾಶ್ವತವಾದದ್ದು ಏನಿದೆ ?’, ಎಂದು ಹೇಳುವಾಗ ಅವರ ಕಣ್ಣುಗಳಿಂದ ಭಾವಾಶ್ರುಗಳು ಬರುತ್ತಿದ್ದವು ಮತ್ತು ಅವರು ಭಾವಾವಸ್ಥೆಗೆ ಹೋಗುತ್ತಿದ್ದರು. ಆ ಕ್ಷಣದಲ್ಲಿ ‘ಅವರು ಗುರುದೇವರನ್ನು ಅನುಭವಿಸುತ್ತಿದ್ದಾರೆ’, ಎಂದು ನಮಗೆ ಅನಿಸುತ್ತಿತ್ತು. ಆದ್ದರಿಂದ ‘ಶ್ರೀ ಗುರುಗಳೇ ನಮ್ಮ ಸರ್ವಸ್ವವಾಗಿದ್ದಾರೆ. ನಾವು ಶ್ರೀ ಗುರುಗಳಿಗಾಗಿಯೇ ಬದುಕಬೇಕಾಗಿದೆ. ನಮ್ಮ ಜೀವನದ ಆದ್ಯತೆಯೂ ಗುರುದೇವರೇ ಆಗಿದ್ದಾರೆ’, ಎಂಬ ಅರಿವು ನಮ್ಮಲ್ಲಿ ಹೆಚ್ಚಾಯಿತು.

೧ ಈ. ಹಿಂದೂ ರಾಷ್ಟ್ರದ ಕಾರ್ಯವನ್ನು ಸಂತರೇ ಮಾಡಲು ಸಾಧ್ಯ’, ಎಂಬ ಗುರುವಾಕ್ಯವನ್ನು ಸಿದ್ಧಪಡಿಸುವ ಪೂ. ರಮಾನಂದಣ್ಣ ! : ಪೂ. ರಮಾನಂದಣ್ಣನವರ ಈ ಪ್ರವಾಸವು ಬಹಳ ಚೈತನ್ಯ ಮಯವಾಗಿತ್ತು. ಈ ಪ್ರವಾಸದಲ್ಲಿ ಅನೇಕ ಕಡೆಗಳಲ್ಲಿ ಧರ್ಮ ಶಿಕ್ಷಣವರ್ಗಗಳು ಪ್ರಾರಂಭವಾದವು. ‘ಸಂತರ ಚೈತನ್ಯದ ಪರಿಣಾಮ ಹೇಗೆ ಆಗುತ್ತದೆ ?’, ಎಂಬ ಅನುಭೂತಿಯನ್ನು ಅವರ ಪ್ರವಾಸದ ಸೇವೆಗಳಿಗೆ ಸಂಬಂಧಿಸಿದ ಎಲ್ಲ ಸಾಧಕರು ಪಡೆದರು. ಅದರಿಂದ ‘ಹಿಂದೂ ರಾಷ್ಟ್ರದ ಕಾರ್ಯವು ಸಂತರಿಂದಲೇ ಆಗಲಿದೆ’, ಎಂಬ ಪ.ಪೂ. ಗುರುದೇವರ ವಾಕ್ಯವನ್ನು ಎಲ್ಲ ಸಾಧಕರಿಗೆ ಪ್ರತ್ಯಕ್ಷವಾಗಿ ಅನುಭವಿಸಲು ಸಿಕ್ಕಿತು.’

೨. ಸೌ. ಸವಿತಾ ಕಣಸೆ, ವಿಶಾಖಾಪಟ್ಟಣಂ, ಆಂಧ್ರಪ್ರದೇಶ

೨ ಅ. ‘ಕ್ಷಮೆ ಯಾಚಿಸುವಾಗ ನಮ್ಮ ಮನಸ್ಸು ಮತ್ತು ಶರೀರ ಎರಡೂ ಬಾಗಿದರೆ ಮಾತ್ರ ಪಾಪಕ್ಷಾಲನೆಯಾಗುತ್ತದೆ’, ಎಂಬುದರ ಅರಿವನ್ನು ಸಾಧಕರಿಗೆ ಮಾಡಿಕೊಡುವುದು : ‘ಒಮ್ಮೆ ಕೆಲವು ಸಾಧಕರು ಸಮಷ್ಟಿಯಲ್ಲಿ ಕ್ಷಮೆಯಾಚಿಸುತ್ತಿದ್ದರು. ‘ಆ ಸಾಧಕರು ಮನಸ್ಸಿನಿಂದ ಕ್ಷಮಾ ಯಾಚನೆ ಮಾಡುತ್ತಿಲ್ಲ’, ಎಂಬುದು ಪೂ. ರಮಾನಂದಣ್ಣ ನವರ ಗಮನಕ್ಕೆ ಬಂದಿತು. ಅವರು ಆ ಸಾಧಕರಿಗೆ, ‘ಸುಮ್ಮನೆ ಮಾಡಬೇಕಲ್ಲ್ಲ; ಎಂದು ಕ್ಷಮೆ ಯಾಚಿಸಬೇಡಿ. ಕ್ಷಮೆ ಯಾಚಿಸುವಾಗ ನಮಗೆ ಆ ತಪ್ಪಿನ ಪಶ್ಚಾತ್ತಾಪ ಮತ್ತು ಖೇದ ಅನಿಸಬೇಕು. ಕ್ಷಮೆ ಯಾಚಿಸುವಾಗ ನಮ್ಮ ಮನಸ್ಸು ಮತ್ತು ಶರೀರ ಎರಡೂ ಬಾಗಬೇಕು. ಆಗ ಮಾತ್ರ ಆ ಕ್ಷಮೆ ಯಾಚನೆಯ ಲಾಭ ಸಾಧಕನಿಗೆ ಆಗುತ್ತದೆ. ಇಂತಹ ಮನಃಪೂರ್ವಕ ಕ್ಷಮೆ ಯಾಚನೆ ಮಾಡಿದರೆ ಮಾತ್ರ ನಮ್ಮ ಪಾಪಕ್ಷಾಲನೆಯಾಗುತ್ತದೆ ಮತ್ತು ಆ ಸ್ವಭಾವದೋಷವೂ ಕಡಿಮೆಯಾಗಲು ಸಹಾಯವಾಗುತ್ತದೆ’ ಎಂದರು.

೩. ಶ್ರೀಮತಿ ಪದ್ಮಾ ಶೆಣೈ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೬೩ ವರ್ಷ), ಭಾಗ್ಯನಗರ, ತೆಲಂಗಾಣ

೩ ಅ. ಪೂ. ರಮಾನಂದಣ್ಣನವರಲ್ಲಿನ ಚೈತನ್ಯದಿಂದ ಸಾಧಕರಲ್ಲಿ ಆಂತರಿಕ ಬದಲಾವಣೆಯಾಗಿ ಸತತವಾಗಿ ಸೇವೆಯಲ್ಲಿ ನಿರತ ರಾಗಿದ್ದರೂ ಸಾಧಕರು ಉತ್ಸಾಹಿ ಮತ್ತು ಕ್ರಿಯಾಶೀಲ ರಾಗಿರುವುದು : ‘ಪೂ. ರಮಾನಂದಣ್ಣನವರ ತೆಲಂಗಾಣದ ಪ್ರವಾಸವು ೧೦ ದಿನಗಳದ್ದಾಗಿತ್ತು. ಪ್ರವಾಸದಲ್ಲಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಪೂ. ರಮಾನಂದಣ್ಣನವರ ಮಾರ್ಗದರ್ಶನದ ಸಿದ್ಧತೆ ಮಾಡುವುದು, ಬೇರೆ ಬೇರೆ ಧರ್ಮಪ್ರೇಮಿಗಳು ಮತ್ತು ಸಾಧಕರೊಂದಿಗೆ ಪೂ. ಅಣ್ಣನವರ ಭೇಟಿ ಮಾಡಿಸುವುದು, ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ನೋಡುವುದು’, ಇಂತಹ ಅನೇಕ ಸೇವೆಗಳಿರುತ್ತಿದ್ದವು. ರಾತ್ರಿ ನಿವಾಸಕ್ಕೆ ಮರಳಿದ ನಂತರ ‘ಇಂದು ದಿನವಿಡೀ ಪ್ರಯತ್ನಗಳಲ್ಲಿ ಎಲ್ಲಿ ಕಡಿಮೆ ಆಯಿತು ?’, ಎಂಬ ವಿಷಯದಲ್ಲಿ ಸತ್ಸಂಗ ಮತ್ತು ಪೂ. ರಮಾನಂದಣ್ಣನವರ ಮಾರ್ಗದರ್ಶನವಿರುತ್ತಿತ್ತು. ಇದೆಲ್ಲವೂ ಮುಗಿದು ರಾತ್ರಿ ಮಲಗಲು ತಡವಾಗುತ್ತಿತ್ತು. ಮರುದಿನ ಬೆಳಗ್ಗೆ ೬ ಗಂಟೆಗೆ ಎದ್ದು ಆ ದಿನದ ಸಿದ್ಧತೆಯನ್ನು ಪ್ರಾರಂಭಿಸಬೇಕಾಗುತ್ತಿತ್ತು. ಪ್ರತಿದಿನ ಇಂತಹ ಯೋಜನೆಯಿದ್ದರೂ ಪ್ರವಾಸದಲ್ಲಿದ್ದ ಎಲ್ಲ ಸಾಧಕರು ಕ್ರಿಯಾಶೀಲರು ಮತ್ತು ಉತ್ಸಾಹಿಗಳಾಗಿದ್ದರು. ಈ ಪ್ರವಾಸದ ಸಮಯದಲ್ಲಿ ಪೂ. ರಮಾನಂದಣ್ಣನವರು ನಮ್ಮ ಎಲ್ಲ ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತಂದರು. ‘ಸಂತರಲ್ಲಿನ ಚೈತನ್ಯದಿಂದ ಸಾಧಕರಿಂದ ಸೇವೆಗಳು ಹೇಗೆ ಆಗುತ್ತವೆ ? ಮತ್ತು ಸಾಧಕರಲ್ಲಿ ಬದಲಾವಣೆ ಹೇಗೆ ಆಗುತ್ತದೆ ?’, ಎಂಬುದನ್ನು ನನಗೆ ಕಲಿಯಲು ಸಿಕ್ಕಿತು.’

೪. ಸೌ. ಮೀನಾ ಕದಂ (ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೪೧ ವರ್ಷ) ಮತ್ತು ಶ್ರೀ. ಅನಿಲ ಕದಂ, ವಿಶಾಖಾಪಟ್ಟಣಂ, ಆಂಧ್ರಪ್ರದೇಶ

೪ ಅ. ಸಂತರ ಚೈತನ್ಯದ ಮಹತ್ವ ! : ‘ತೆಲಂಗಾಣದಲ್ಲಿ ತೆಲುಗು ಭಾಷೆ ಮಾತನಾಡತ್ತಾರೆ. ಪೂ. ರಮಾನಂದಣ್ಣನವರು ಸಮಾಜದ ವ್ಯಕ್ತಿಗಳು ಮತ್ತು ಧರ್ಮಪ್ರೇಮಿಗಳಿಗೆ ಹಿಂದಿ ಭಾಷೆಯಲ್ಲಿ ಮಾರ್ಗದರ್ಶನ ಮಾಡಿದರು. ಆದರೂ ಎಲ್ಲರೂ ಕೊನೆಯವರೆಗೂ ಏಕಾಗ್ರತೆಯಿಂದ ಪೂರ್ಣ ಮಾರ್ಗ ದರ್ಶನವನ್ನು ಕೇಳಿದರು. ಇದರಿಂದ ಸಂತರಲ್ಲಿನ ಚೈತನ್ಯದ ಮಹತ್ವ ನನ್ನ ಗಮನಕ್ಕೆ ಬಂದಿತು. ‘ಸಂತರಲ್ಲಿನ ಚೈತನ್ಯದಿಂದ ಗುರುಕಾರ್ಯವಾಗುತ್ತದೆ ಮತ್ತು ಸಾಧಕರೂ ರೂಪುಗೊಳ್ಳುತ್ತಾರೆ’, ಎಂದು ಕಲಿಯಲು ಸಿಕ್ಕಿತು.

೪ ಆ. ಅನುಭೂತಿ : ಪೂ. ರಮಾನಂದಣ್ಣನವರ ಸ್ಥಳದಲ್ಲಿ ನನಗೆ ಪ.ಪೂ. ಗುರುದೇವರ ದರ್ಶನವಾಯಿತು.

೫. ಕೃತಜ್ಞತೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಕೃಪೆಯಿಂದ ಪೂ. ರಮಾನಂದಣ್ಣನವರ ಪ್ರವಾಸದಿಂದ ನಮ್ಮ ಎಲ್ಲ ಸಾಧಕರಿಗೆ ಕಲಿಯಲು ಸಿಕ್ಕಿತು’, ಇದಕ್ಕಾಗಿ ನಾವು ಸಾಧಕರು ಶ್ರೀ ಗುರು ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞರಾಗಿದ್ದೇವೆ.’

– ಶ್ರೀ. ಚೇತನ ಜನಾರ್ದನ ಮತ್ತು ಸೌ. ವಿನುತಾ ಶೆಟ್ಟಿ (ಇಬ್ಬರೂ ಭಾಗ್ಯನಗರ), ಸೌ. ಮೀನಾ ಕದಂ (ಆಧ್ಯಾತ್ಮಿಕ ಮಟ್ಟ ಶೇ. ೬೫), ವಿಶಾಖಾಪಟ್ಟಣಂ, ಆಂಧ್ರಪ್ರದೇಶ (೧೫.೨.೨೦೨೪)

  • ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಇಲ್ಲಿ ಪ್ರಸಿದ್ಧಪಡಿಸಲಾದ ಅನುಭೂತಿಗಳು ಕೆಲವು ಬಾರಿ ಕೆಷ್ಟ ಶಕ್ತಿಗಳಿಂದ ಅಥವಾ ‘ಭಾವವಿದ್ದಲ್ಲಿ ದೇವ’ ಎಂಬ ಉಕ್ತಿಯಂತೆ ಸಾಧಕರಿಗೆ / ಸಂತರಿಗೆ / ಧರ್ಮಪ್ರೇಮಿಗಳಿಗೆ ಬಂದಿರುವ ವೈಯಕ್ತಿಕ ಅನುಭೂತಿಗಳಾಗಿವೆ. ಅವು ಎಲ್ಲರಿಗೂ ಬರುತ್ತವೆ ಎಂದೇನಿಲ್ಲ. - ಸಂಪಾದಕರು