ಶ್ರೀರಾಮ ಮಂದಿರದ ದಾನದ ಹಣ ಕಳ್ಳತನ ಪ್ರಕರಣ: ಶಂಕರಾಚಾರ್ಯ ಸದಾನಂದ ಸರಸ್ವತಿ ಅವರ ಬೇಡಿಕೆ

ಛಿಂದ್ವಾರಾ (ಮಧ್ಯಪ್ರದೇಶ) – ಭಕ್ತರ ಕಷ್ಟದ ದುಡಿಮೆಯೊಂದಿಗೆ ಮತ್ತು ಅವರ ನಂಬಿಕೆಯೊಂದಿಗೆ ಚೆಲ್ಲಾಟವಾಡಬಾರದು. ಟ್ರಸ್ಟ್‌ಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಮಾಡಿರುವ ಈ ಆರೋಪಿತ ಭ್ರಷ್ಟಾಚಾರ ದುರದೃಷ್ಟಕರ. ಸರಕಾರಿ ಅಧಿಕಾರಿಗಳಿಗೆ ಧರ್ಮ, ನೈತಿಕತೆ ಮತ್ತು ಆಧ್ಯಾತ್ಮಿಕ ವ್ಯವಸ್ಥೆಯ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು, ಇದು ದೇವಾಲಯಗಳ ನಿರ್ವಹಣೆ ಮತ್ತು ರಕ್ಷಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರುವಂತಾಗಬೇಕು ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜ್ ಇಲ್ಲಿ ಹೇಳಿದರು.
ಶಂಕರಾಚಾರ್ಯರು ಮಾತು ಮುಂದುವರೆಸುತ್ತಾ, ಶ್ರೀರಾಮ ಮಂದಿರದಲ್ಲಿ ಭಕ್ತರು ಕಷ್ಟಪಟ್ಟು ದುಡಿದ ಹಣವನ್ನು ಶ್ರದ್ಧೆಯಿಂದ ದಾನ ಮಾಡುತ್ತಾರೆ, ಇದರಿಂದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆಯಲಿ ಎಂಬುದು ಅವರ ಆಶಯ. ಇಂತಹ ಪರಿಸ್ಥಿತಿಯಲ್ಲಿ ದಾನ ಮಾಡಿದ ಹಣದ ದುರ್ಬಳಕೆ ಅಥವಾ ಕಳ್ಳತನದಂತಹ ಘಟನೆಗಳು ಬೆಳಕಿಗೆ ಬಂದಾಗ ತುಂಬಾ ನೋವಾಗುತ್ತದೆ. ಸನಾತನ ಧರ್ಮ ಮತ್ತು ದೇವ ಕಾರ್ಯದೊಂದಿಗೆ ನಂಟು ಹೊಂದಿರುವವರೇ ಇಂತಹ ಕೃತ್ಯ ಎಸಗಿದರೆ, ಅದು ಮತ್ತಷ್ಟು ನೋವಿನ ಸಂಗತಿ.
ಮಂಡಳಿ ಅಥವಾ ಸಮಿತಿಗಳಲ್ಲಿ ತಜ್ಞರಿಗೆ ಅವಕಾಶವಿರಲಿ!
ಶಂಕರಾಚಾರ್ಯ ಸದಾನಂದ ಸರಸ್ವತಿ ಅವರು ಸಲಹೆ ನೀಡುತ್ತಾ, ದೇಶಾದ್ಯಂತ ದೇವಾಲಯಗಳ ನಿರ್ವಹಣೆ ಮತ್ತು ರಕ್ಷಣೆಗಾಗಿ ಮಂಡಳಿ ಅಥವಾ ಸಮಿತಿಗಳನ್ನು ರಚಿಸಿದರೆ, ಅದರಲ್ಲಿ ಈ ವಿಷಯದ ಜ್ಞಾನವಿರುವ ಮತ್ತು ಅನುಭವಿ ವ್ಯಕ್ತಿಗಳನ್ನು ಸೇರಿಸಿಕೊಳ್ಳಬೇಕು. ವ್ಯಕ್ತಿಯು ಯಾವ ಕೆಲಸದಲ್ಲಿ ಪರಿಣಿತನೋ ಆತನೇ ಆ ಕೆಲಸವನ್ನು ಚೆನ್ನಾಗಿ ಮಾಡಬಲ್ಲನು. ಬೇರೆ ಯಾವುದೇ ಕ್ಷೇತ್ರದಿಂದ ಬಂದ ವ್ಯಕ್ತಿಯಿಂದ ಅದೇ ಮಟ್ಟದ ಕಾರ್ಯಕ್ಷಮತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ವಿಧಿ-ವಿಧಾನ, ಪೂಜೆ ಮುಂತಾದವುಗಳ ಜ್ಞಾನವಿರುವುದಿಲ್ಲ. ಅವರಲ್ಲಿ ಧಾರ್ಮಿಕ ನೈತಿಕತೆ ಅಥವಾ ಆಧ್ಯಾತ್ಮಿಕ ತಿಳುವಳಿಕೆ ಇರುವುದಿಲ್ಲ. ಆದ್ದರಿಂದ, ಯಾವ ವಿಷಯದ ತಜ್ಞನೋ ಅವನಿಗೆ ಆ ಕೆಲಸವನ್ನು ವಹಿಸಬೇಕು.
ಮತಾಂತರವನ್ನು ತಕ್ಷಣವೇ ತಡೆಗಟ್ಟಬೇಕು!
ಮತಾಂತರದ ವಿಷಯದ ಕುರಿತು ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರು ಮಾತನಾಡಿ, ಮತಾಂತರವನ್ನು ತಕ್ಷಣವೇ ತಡೆಗಟ್ಟಬೇಕು; ಏಕೆಂದರೆ ಯಾವುದೇ ದೇಶದಲ್ಲಿ ಜನಸಂಖ್ಯೆಗೆ ವಿಶೇಷ ಮಹತ್ವವಿದೆ. ಯಾರ ಸಂಖ್ಯೆ ಹೆಚ್ಚಿರುತ್ತದೆಯೋ ಅವರೇ ದೇಶದಲ್ಲಿ ಆಳ್ವಿಕೆ ನಡೆಸುತ್ತಾರೆ. ಇದೇ ಕಾರಣಕ್ಕಾಗಿ ಸಂಚು ರೂಪಿಸಿ ಮತಾಂತರ ಮತ್ತು ಲವ್ ಜಿಹಾದ್ ನಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ. ಇವು ಆತಂಕಕಾರಿ. ಸರಕಾರ ಮತ್ತು ಸಮಾಜ ಈ ಗಂಭೀರ ವಿಷಯದತ್ತ ಗಮನ ಹರಿಸುತ್ತಿಲ್ಲ, ಆದರೆ ಮತ್ತೊಂದೆಡೆ ಸಂತರು ಮತ್ತು ಶಂಕರಾಚಾರ್ಯರು ಸತತವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರಕರಣಗಳನ್ನು ನಿಯಂತ್ರಿಸಲು ಸರಕಾರ ಕಠಿಣ ಕಾನೂನು ಜಾರಿಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಉತ್ತರ ಪ್ರದೇಶದ ಮಥುರಾದಲ್ಲಿ ‘ಹೃದಯದಲ್ಲಿ ಬಾಬರ್, ಮುಖದಲ್ಲಿ ರಾಮ’ ಎಂಬ ಫಲಕ ಅಳವಡಿಸಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕರು ಆಕ್ರೋಶ! : UP Poster Row
ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border