
ಇಂದು ನಾವು ‘ಲೇಝರ್ ಸರ್ಜರಿ’, ‘ರೋಬೋಟಿಕ್ ಶಸ್ತ್ರಚಿಕಿತ್ಸೆ’ ಮತ್ತು ಪ್ರಗತ ಅರಿವಳಿಕೆ ತಜ್ಞರ ಯುಗದಲ್ಲಿ ಬದುಕುತ್ತಿದ್ದೇವೆ; ಆದರೆ ಮಾನವನಿಗೆ ಕಬ್ಬಿಣದ ಶೋಧವಾಗದ ಕಾಲದಲ್ಲೂ ಆತ ಮೆದುಳು ಮತ್ತು ಹಲ್ಲುಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದನೆಂದು ಹೇಳಿದರೆ ಇದು ಯಾವುದೋ ವಿಜ್ಞಾನದ ಕಲ್ಪನೆಯಂತೆ ಅನಿಸಬಹುದು; ಆದರೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಪುರಾತತ್ವಶಾಸ್ತ್ರೀಯ ಪುರಾವೆಗಳು ಇದನ್ನೇ ಸಾಬೀತುಪಡಿಸುತ್ತವೆ. ಶಸ್ತ್ರಚಿಕಿತ್ಸೆ ಅಥವಾ ಆಯುರ್ವೇದವು ಯಾವುದನ್ನು ‘ಶಲ್ಯತಂತ್ರ’ ಎಂದು ಕರೆಯುತ್ತದೆಯೋ, ಅದರ ಇತಿಹಾಸವು ನಮ್ಮ ಸಾಮಾನ್ಯ ತಿಳುವಳಿಕೆಗಿಂತಲೂ ಎಷ್ಟೋ ಪುರಾತನವಾದುದಾಗಿದೆ.
೧. ತಲೆಬುರುಡೆಗೆ ರಂಧ್ರ ಕೊರೆಯುವ ಸಾಹಸ : ‘ಟ್ರೆಪನೇಷನ್’
ಫ್ರಾನ್ಸ್‌ನಲ್ಲಿ ೭ ರಿಂದ ೮ ಸಾವಿರ ವರ್ಷಗಳಷ್ಟು ಹಳೆಯ ತಲೆ ಬುರುಡೆಗಳು ಪತ್ತೆಯಾಗಿವೆ, ಅವುಗಳ ಮೇಲೆ ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಘಾತಕಾರಿ ವಿಷಯವೆಂದರೆ, ಈ ಅನೇಕ ತಲೆಬುರುಡೆಗಳ ಮೇಲೆ ಮೂಳೆಗಳು ಸ್ವಾಭಾವಿಕವಾಗಿ ಬೆಳೆದಿರುವುದು ಕಂಡುಬಂದಿದೆ. ಇದರರ್ಥ ಆ ವ್ಯಕ್ತಿಯು ಶಸ್ತ್ರಚಿಕಿತ್ಸೆಯ ನಂತರ ಬದುಕುಳಿದದ್ದು ಮಾತ್ರವಲ್ಲ, ಅನೇಕ ವರ್ಷಗಳ ಕಾಲ ಜೀವಿಸಿದ್ದನು !
ಭಾರತದ ಕಾಶ್ಮೀರದ ಬುರ್ಝಾಹೋಮ್ ಮತ್ತು ರಾಜಸ್ಥಾನದ ಕಾಲಿಬಂಗನ್‌ನಲ್ಲಿ ೫ ಸಾವಿರ ವರ್ಷ ಹಳೆಯದಾದ ಇಂತಹ ತಲೆಬುರುಡೆಗಳು ಸಿಕ್ಕಿವೆ. ಸಂಶೋಧಕರ ಪ್ರಕಾರ ಆ ಕಾಲದಲ್ಲಿ ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ರೀತಿ ಮಾಡಲಾಗುತ್ತಿರಬಹುದು. ಇಂದು ಹಲ್ಲಿನ ಆಸ್ಪತ್ರೆಗೆ ಹೋಗಲು ನಮಗೆ ಭಯವಾಗುತ್ತದೆ; ಆದರೆ ಯೋಚಿಸಿ, ೯ ಸಾವಿರ ವರ್ಷಗಳ ಹಿಂದೆಯೇ ಮೆಹರ್‌ಗಢ್‌ದ (ಇಂದಿನ ಪಾಪಸ್ತಾನ – ಪಾಕಿಸ್ತಾನ) ಜನರು ಹಲ್ಲುಗಳ ‘ಡ್ರಿಲ್ಲಿಂಗ್’ ಮಾಡಿಸಿಕೊಳ್ಳುತ್ತಿದ್ದರು.
ಪುರಾತತ್ವಶಾಸ್ತ್ರಜ್ಞರಿಗೆ ಇಂತಹ ೧೧ ವ್ಯಕ್ತಿಗಳ ಅವಶೇಷಗಳು ದೊರೆತಿವೆ, ಅವರ ದವಡೆ ಹಲ್ಲುಗಳಲ್ಲಿ ಸೂಕ್ಷ್ಮ ಉಪಕರಣಗಳಿಂದ ರಂಧ್ರಗಳನ್ನು ಮಾಡಲಾಗಿತ್ತು. ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದಾಗ, ಈ ರಂಧ್ರಗಳು ನೈಸರ್ಗಿಕವಾಗಿರದೆ, ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿವೆ ಎಂದು ತಿಳಿದುಬಂದಿದೆ. ಅಶ್ಮಯುಗದ ಈ ಮಾನವನು ‘ಹಲ್ಲುಗಳ ಹುಳುಕು ತೆಗೆಯಲು ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದ್ದನು’ ಎಂಬ ಅಂಶವನ್ನು ಕಂಡು ಆಧುನಿಕ ವಿಜ್ಞಾನವು ಸಹ ಬೆರಗಾಗಿದೆ.
೨. ‘ಅಬ್ಸಿಡಿಯನ್’ ಬ್ಲೇಡ್ : ಸ್ಟೀಲ್‌ಗಿಂತಲೂ ಹರಿತವಾದ ಶಸ್ತ್ರ
ಆ ಕಾಲದಲ್ಲಿ ಇಂದಿನಂತೆ ಸ್ಟೇನ್‌ಲೆಸ್ ಸ್ಟೀಲ್‌ನ ‘ಸ್ಕಾಲ್ಪೆಲ್’ (ಶಸ್ತ್ರಚಿಕಿತ್ಸೆಗಾಗಿ ಬಳಸಲಾಗುವ ಚಾಕು) ಇರಲಿಲ್ಲ. ಹಾಗಾದರೆ ಅವರು ಶಸ್ತ್ರಚಿಕಿತ್ಸೆಯನ್ನು ಹೇಗೆ ಮಾಡುತ್ತಿದ್ದರು ? ಪ್ರಾಚೀನ ಕಾಲದಲ್ಲಿ ಜ್ವಾಲಾಮುಖಿಯ ಗಾಜಿನಿಂದ (ಅಬ್ಸಿಡಿಯನ್) ತಯಾರಿಸಿದ ಬ್ಲೇಡ್‌ಗಳನ್ನು ಶಸ್ತ್ರಚಿಕಿತ್ಸೆಗೆ ಬಳಸಲಾಗುತ್ತಿತ್ತು ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಬ್ಲೇಡ್‌ಗಳು ಆಧುನಿಕ ಶಸ್ತ್ರಚಿಕಿತ್ಸೆಯ ಬ್ಲೇಡ್‌ಗಳಿಗಿಂತ ೫೦೦ ಪಟ್ಟು ಹೆಚ್ಚು ಹರಿತವಾಗಿವೆ. ಮೆಸೊಪೊಟೇಮಿಯಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಇಂತಹ ಪುರಾವೆಗಳು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿವೆ. ನಮಗೆ ಆಶ್ಚರ್ಯವಾಗಬಹುದು; ಆದರೆ ಆಚಾರ್ಯ ಸುಶ್ರುತರು ಶಸ್ತ್ರಚಿಕಿತ್ಸೆಯಲ್ಲಿ ಬಳಸುತ್ತಿದ್ದ ಯಂತ್ರಗಳು ಮತ್ತು ಶಸ್ತ್ರಗಳ ಬಗ್ಗೆ ವರ್ಣಿಸಿದ್ದಾರೆ. ಅದರಲ್ಲಿ ಮುಂದೆ ಸುಧಾರಣೆಗಳಾಗುತ್ತಾ ನಾವು ಇಂದಿನವರೆಗಿನ ಪ್ರಯಾಣವನ್ನು ಮಾಡಿದ್ದೇವೆ.
೩. ಸಿಂಧೂ ಸಂಸ್ಕೃತಿ : ಒಂದು ಪ್ರಗತ ಆರೋಗ್ಯವ್ಯವಸ್ಥೆ
ಸುಮಾರು ೫ ಸಾವಿರ ವರ್ಷಗಳ ಹಿಂದಿನ ಸಿಂಧೂ ಸಂಸ್ಕೃತಿಯ ಕಾಲದಲ್ಲಿ ಮಾನವನಿಗೆ ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲ, ಆರೋಗ್ಯದ ಸ್ವಚ್ಛತೆಯ (ಸ್ಯಾನಿಟೈಸೇಶನ್) ಮಹತ್ವವೂ ತಿಳಿದಿತ್ತು. ಲೋಥಲ್ ಮತ್ತು ಹರಪ್ಪಾದಲ್ಲಿ ನಡೆದ ಉತ್ಖನನಗಳಲ್ಲಿ ಕೆಲವು ಎಂತಹ ಉಪಕರಣಗಳು ಪತ್ತೆಯಾಗಿವೆ, ಎಂದರೆ ಇವುಗಳನ್ನು ಗಾಯಗಳನ್ನು ಹೊಲಿಯಲು ಅಥವಾ ಶರೀರ ರಚನೆಯನ್ನು ಪರೀಕ್ಷಿಸಲು ಬಳಸಲಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಗಮನಿಸಿ, ‘ಆಚಾರ್ಯ ಸುಶ್ರುತರು ಮತ್ತು ಅವರಿಗಿಂತ ಮುಂಚಿನಿಂದಲೂ ಅಸ್ತಿತ್ವದಲ್ಲಿದ್ದ ಸಂಪೂರ್ಣ ಶಸ್ತ್ರಚಿಕಿತ್ಸಾಶಾಸ್ತ್ರವು ಇದೇ ಉನ್ನತ ಸಂಸ್ಕೃತಿಯ ಹೆಮ್ಮೆಯಾಗಿತ್ತು.’
೪. ಇತಿಹಾಸಕ್ಕೆ ತಿರುವು !
ಪ್ರಖ್ಯಾತ ‘ನೇಚರ್’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬೊರ್ನಿಯೊ (ಇಂಡೋನೇಷ್ಯಾ)ದ ಗುಹೆಯೊಂದರಲ್ಲಿ ಒಬ್ಬ ಯುವಕನ ಅಸ್ಥಿ ಪಂಜರ ಸಿಕ್ಕಿದೆ, ಆತನ ಎಡಗಾಲನ್ನು ಮೊಣಕಾಲಿನ ಕೆಳಗೆ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಲಾಗಿತ್ತು (ಎಂಪುಟೂಶನ್). ಈ ಅವಶೇಷಗಳು ಸುಮಾರು ೩೧ ಸಾವಿರ ವರ್ಷಗಳಷ್ಟು ಹಳೆಯವು. ವಿಶೇಷವೆಂದರೆ ಶಸ್ತ್ರಚಿಕಿತ್ಸೆಯ ನಂತರ ಆ ವ್ಯಕ್ತಿ ಸಾಯದೇ ೬ ರಿಂದ ೯ ವರ್ಷಗಳ ಕಾಲ ಜೀವಿಸಿದ್ದನು. ಇದರಿಂದ ಆ ಕಾಲದ ಜನರಿಗೆ ಗಾಯವನ್ನು ಸ್ವಚ್ಛವಾಗಿಡುವುದು, ಸೋಂಕನ್ನು ತಡೆಯುವುದು ಮತ್ತು ರಕ್ತಸ್ರಾವ ನಿಲ್ಲಿಸುವುದರ ಬಗ್ಗೆ ಆಳವಾದ ಜ್ಞಾನವಿತ್ತು ಎಂಬುದು ಸ್ಪಷ್ಟವಾಗುತ್ತದೆ.
೫. ವಿಚಾರ ಮಾಡಿರಿ …
ಈ ವರೆಗೆ ಜಟಿಲ ಶಸ್ತ್ರಚಿಕಿತ್ಸೆಗಳ ಆರಂಭವು ಕೇವಲ ೧೦ ಸಾವಿರ ವರ್ಷಗಳ ಹಿಂದೆ (ಕೃಷಿಯ ಶೋಧದ ನಂತರ) ಆಯಿತೆಂದು ನಂಬಲಾಗಿತ್ತು; ಆದರೆ ಈ ಶೋಧದಿಂದ ‘೩೧ ಸಾವಿರ ವರ್ಷಗಳ ಹಿಂದೆಯೇ ಮಾನವನ ಬಳಿ ಸುಧಾರಿತ ಶಸ್ತ್ರಚಿಕಿತ್ಸೆಯ ಜ್ಞಾನವಿತ್ತು’ ಎಂಬುದು ಈ ಸಾಕ್ಷಿಯಿಂದ ದೃಢವಾಗಿದೆ. ಇದರರ್ಥ ನಾವು ಅಂದಾಜಿಸಿದ ಕಾಲಗಣನೆಯು ವಾಸ್ತವದಲ್ಲಿ ಇನ್ನೂ ಹಿಂದೆ ಹೋಗಬಹುದು. ಖಚಿತವಾಗಿ ಎಷ್ಟು ಎಂದು ಹೇಳುವುದು ಕಷ್ಟ ? ಆಚಾರ್ಯ ಸುಶ್ರುತರ ಕಾಲವನ್ನು ಈವರೆಗೆ ಕ್ರಿ.ಪೂ. ೩೦೦೦ ಎಂದು ಹೇಳಲಾಗುತ್ತಿತ್ತು. ಅಮೇರಿಕಾದ ಪ್ರಸಿದ್ಧ ಸಂಶೋಧಕ ನೀಲೇಶ ಓಕ್ ಇವರ ಅಧ್ಯಯನದ ಪ್ರಕಾರ, ಈ ಕಾಲವು ಇಂದಿನಿಂದ ಕನಿಷ್ಠ ೮ ಸಾವಿರ ವರ್ಷಗಳಷ್ಟು ಹಿಂದೆ ಹೋಗುತ್ತದೆ. ಹೊಸ ಸಂಶೋಧನೆಗಳು ಹೊರಬಂದಂತೆ ಮತ್ತು ಪುರಾವೆಗಳು ದೊರೆತಂತೆ ಭಾರತೀಯ ಸಂಸ್ಕೃತಿಯ ಕಾಲವು ಹೆಚ್ಚು ಹೆಚ್ಚು ಪ್ರಾಚೀನವಾದುದೆಂದು ಸಾಬೀತಾಗಲಿದೆ ಎಂಬ ನನ್ನ ವಿಚಾರವನ್ನು ನಾನು ಪದೇ ಪದೇ ಮಂಡಿಸಿದ್ದೇನೆ. ಈ ಪ್ರಾಚೀನ ಕಾಲವು ಎಷ್ಟು ದೃಢವಾಗುತ್ತದೆಯೋ, ಅಷ್ಟೇ ಆಯುರ್ವೇದದ ಪ್ರಾಚೀನತೆಯೂ ಸಿದ್ಧವಾಗಲಿದೆ. ಹಿಂದೆ ಪಾಶ್ಚಾತ್ಯರು ಮೂಗಿನ ಶಸ್ತ್ರಚಿಕಿತ್ಸೆಯನ್ನು ನಮ್ಮಿಂದ ಹೇಗೆ ಕಳ್ಳತನ ಮಾಡಿದರು ಎಂಬುದರಿಂದ ಹಿಡಿದು ಬ್ರಿಟಿಷ್ ಕಾಲದಲ್ಲಿ ಆಯುರ್ವೇದವನ್ನು ಹೇಗೆ ತುಳಿಯಲಾಯಿತು ? ಎಂಬವರೆಗೆ ಹಲವು ವಿಷಯಗಳನ್ನು ನಾನು ಬರೆದಿದ್ದೇನೆ. ಇದು ಇನ್ನೊಂದು ರೋಚಕ ತಿರುವು. ವೈದ್ಯಕೀಯ ಜಿಹಾದಿಗಳು ಎಂದಿನಂತೆ ಕೈಕಾಲುಗಳನ್ನು ಬಡಿದುಕೊಳ್ಳಬಹುದು, ಅದು ಬೇರೆ ಮಾತು !
– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು