ಸದ್ಯ ಜಗತ್ತಿನಾದ್ಯಂತ ವಿವಿಧ ದೇಶಗಳ ನಡುವೆ ಯುದ್ಧ ಆರಂಭವಾಗಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಮೂರನೇ ಮಹಾಯುದ್ಧ ಭುಗಿಲೇಳುವ ಸಾಧ್ಯತೆ ನಿರ್ಮಾಣವಾಗಿದೆ. ಈ ಮೂರನೇ ಮಹಾಯುದ್ಧದ ಸಂದರ್ಭದಲ್ಲಿ ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನವನ್ನು ಇಲ್ಲಿ ನೀಡುತ್ತಿದ್ದೇವೆ.
(ಭಾಗ ೧)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮುಂದೆ ಆಗಲಿರುವ ಮೂರನೇ ಮಹಾಯುದ್ಧದ ಬಗ್ಗೆ ಮಾಹಿತಿ ಬೇಕು
ಉತ್ತರ : ಶ್ರೀ. ನಿಷಾದ ದೇಶಮುಖ
೧. ಮೂರನೇ ಮಹಾಯುದ್ಧದ ಸ್ವರೂಪ
೧ ಅ. ಮೂರನೇ ಮಹಾಯುದ್ಧವು ಮೂರು ಹಂತಗಳಲ್ಲಿ ನಡೆಯಲಿದೆ : ಮೂರನೇ ಮಹಾಯುದ್ಧದ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಲು ಅದರ ಸ್ವರೂಪವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ಸಮಯದಲ್ಲಿ ಪ್ರತ್ಯಕ್ಷ ಗ್ರಹಣವು ಕೆಲವು ನಿಮಿಷಗಳ ಕಾಲ ಮಾತ್ರ ಇರುತ್ತದೆ; ಆದರೆ ಗ್ರಹಣದ ‘ವೇಧಕಾಲ’ (ಟಿಪ್ಪಣಿ) ಆರಂಭವಾದಾಗಿನಿಂದ ವಾತಾವರಣದಲ್ಲಿ ರಜ-ತಮ ಗುಣಗಳು ಹೆಚ್ಚಾಗಿರುತ್ತವೆ. ಹಿಂದೂ ಧರ್ಮದಲ್ಲಿ ಗ್ರಹಣಕ್ಕೆ ‘ಸ್ಪರ್ಶ (ಆರಂಭ), ಮಧ್ಯ (ಪ್ರತ್ಯಕ್ಷ ಗ್ರಹಣ) ಮತ್ತು ಮೋಕ್ಷ (ಸಮಾಪ್ತಿ)’ ಎಂಬ ಹಂತಗಳಿವೆ. ಹಾಗೆಯೇ ಮೂರನೇ ಮಹಾಯುದ್ಧವೂ ‘ಆರಂಭ, ಪ್ರತ್ಯಕ್ಷ ಯುದ್ಧ ಮತ್ತು ಸಮಾಪ್ತಿ’ ಎಂಬ ಮೂರು ಹಂತಗಳಲ್ಲಿ ನಡೆಯಲಿದೆ.
(ಟಿಪ್ಪಣಿ – ವೇಧಕಾಲ : ಪ್ರತ್ಯಕ್ಷ ಗ್ರಹಣವಾಗುವ ಮೊದಲು ಅಂದಾಜು ೩ ಪ್ರಹರಗಳು, ೧ ಪ್ರಹರ ಎಂದರೆ ೩ ಗಂಟೆ)
೧ ಆ. ಮೂರನೇ ಮಹಾಯುದ್ಧದ ಮೊದಲು ಮತ್ತು ನಂತರವೂ ಅದರ ಪರಿಣಾಮಗಳು ಇರಲಿವೆ : ರಾಜನಂದಗಾಂವ (ಛತ್ತೀಸಗಡ) ದಲ್ಲಿನ ಸರಕಾರಿ ದಿಗ್ವಿಜಯ ಸ್ವಾಯತ್ತ ಸ್ನಾತಕೋತ್ತರ ಮಹಾವಿದ್ಯಾಲಯದ ಗಗನ ಸಿಂಗ್ ಗುರು ಮತ್ತು ಮಾಜಿದ ಅಲಿ ಅವರ ‘ಪ್ರಾಣಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ : ಒಂದು ಪುನರಾವಲೋಕನ ((Visualization of Lunar Eclipse effect on Animal : A Review)’, ಈ ಸಂಶೋಧನ ಪ್ರಬಂಧದಲ್ಲಿ ಉಲ್ಲೇಖಿಸಲಾಗಿದೆ. ಪ್ರಾಣಿಗಳ ಮೇಲೆ ಚಂದ್ರಗ್ರಹಣದ ಪರಿಣಾಮವು ಕೇವಲ ಬೆಳಕು ಕಡಿಮೆಯಾಗುವುದರಿಂದಲೇ ಆಗುವುದಿಲ್ಲ. ‘ಬೆಳಕು ಕಡಿಮೆಯಾಗುವುದು’ ಇದು ಒಂದು ಮುಖ್ಯ ಕಾರಣವಾಗಿದೆ; ಆದರೆ ಅದರೊಂದಿಗೆ ಇತರ ಘಟಕಗಳ ಪ್ರಭಾವವೂ ಇರುತ್ತದೆ, ಉದಾ. ಚಂದ್ರನ ಗುರುತ್ವಾಕರ್ಷಣ ಶಕ್ತಿ, ತಾಪಮಾನದಲ್ಲಿನ ಬದಲಾವಣೆ, ಜೈವಿಕ ಗಡಿಯಾರದಲ್ಲಿನ ಗೊಂದಲ ಅಥವಾ ಕೆಲವು ವಿಶ್ಲೇಷಕರ ಪ್ರಕಾರ ಪೃಥ್ವಿಯ ವಿದ್ಯುತ್-ಕಾಂತೀಯ ಕ್ಷೇತ್ರದಲ್ಲಿ ಉಂಟಾಗುವ ಪರಿವರ್ತನೆ ಇವುಗಳಿಂದಾಗಿ ಚಂದ್ರಗ್ರಹಣದ ಪರಿಣಾಮವು ಅನೇಕ ವಿಷಯಗಳ ಮೇಲೆ ಆಗುತ್ತಿರುತ್ತದೆ. ಅದರಲ್ಲಿ ‘ಬೆಳಕು, ಗುರುತ್ವ, ಜೈವಿಕ ಗಡಿಯಾರ ಮತ್ತು ಪರಿಸರದಿಂದ ಲಭಿಸುವ ಸಂಕೇತಗಳು’ ಇವುಗಳ ಒಟ್ಟು ಪರಿಣಾಮವಿರಬಹುದು. ಈ ಪರಿಣಾಮವು ದೂರಗಾಮಿಯೂ ಇರುತ್ತದೆ. ಉದಾ. ಚಂದ್ರಗ್ರಹಣದಿಂದಾಗಿ ಸಮುದ್ರದಲ್ಲಿನ ಆಮೆಗಳು, ಉಭಯಚರ ಪ್ರಾಣಿಗಳು (Amphibians) ಇವುಗಳ ಮೊಟ್ಟೆಯಿಡುವ ಅಥವಾ ಪ್ರಜನನದ ಕಾಲವು ಬದಲಾಗುತ್ತದೆ. ಅದರಿಂದಾಗಿ ಅವುಗಳ ಮುಂದಿನ ಪೀಳಿಗೆಯ ಮೇಲೆಯೂ ಪರಿಣಾಮವಾಗುತ್ತದೆ. ಅದೇ ರೀತಿ ಗ್ರಹಣದ ಕಾಲದಲ್ಲಿ ಕೆಲವು ಪ್ರಾಣಿಗಳು ರಾತ್ರಿ ಆಹಾರ ಸೇವಿಸುವ ಪ್ರಕ್ರಿಯೆ, ಪ್ರವಾಸ ಮತ್ತು ಸಂವಹನ (ಸಂವಾದದ ಪದ್ಧತಿಗಳು) ಬದಲಾಯಿಸುತ್ತವೆ. ಚಂದ್ರಗ್ರಹಣದಿಂದಾಗಿ ಅವುಗಳ ನೈಸರ್ಗಿಕ ಜೈವಿಕ ಗಡಿಯಾರವು (biological clock) ಏರುಪೇರಾಗುತ್ತದೆ’.
(ಆಧಾರ : ಪೇಪರ್ಸ ಡಾಟ್ ಎಸ್.ಎಸ್.ಆರ್.ಎನ್‌ನ ಜಾಲತಾಣ)
ಕಣ್ಣಿಗೆ ಕಾಣುವ ಪ್ರತ್ಯಕ್ಷ ಗ್ರಹಣವು ಹೇಗೆ ಸ್ವಲ್ಪು ಕಾಲಾವಧಿಯದ್ದಾಗಿದ್ದರೂ; ಆದರೆ ಗ್ರಹಣದಿಂದಾಗುವ ಪರಿಣಾಮದಿಂದ ಅನೇಕ ಜೀವಗಳಿಗೆ ತೊಂದರೆಯಾಗುತ್ತದೆ, ಅದೇ ರೀತಿ ಸ್ಥೂಲದಲ್ಲಿ ನಡೆಯುವ ಯುದ್ಧವು ಕೆಲವು ತಿಂಗಳುಗಳ ಅಥವಾ ಕೆಲವು ವರ್ಷಗಳದ್ದಾಗಿದ್ದರೂ ಯುದ್ಧಕಾಲದಲ್ಲಿ ಆಗುವ ಪರಿಣಾಮಗಳಿಂದ ಸಮಷ್ಟಿಯು ಸ್ಥೂಲ ಮತ್ತು ಸೂಕ್ಷ್ಮ ಈ ಎರಡೂ ಸ್ತರಗಳ ತೊಂದರೆಗಳನ್ನು ಯುದ್ಧದ ಅನೇಕ ವರ್ಷಗಳ ಮೊದಲಿನಿಂದ ಮತ್ತು ಯುದ್ಧವು ಮುಕ್ತಾಯವಾದ ನಂತರವೂ ಸ್ವಲ್ಪ ಕಾಲ ಅನುಭವಿಸಬೇಕಾಗುತ್ತದೆ.
೧ ಇ. ಮೂರನೇ ಮಹಾಯುದ್ಧದ ಪರಿಣಾಮವು ಸಾಧನೆ ಮಾಡದವರ ಮೇಲೆ ಹೆಚ್ಚು ಮತ್ತು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತ ಮಟ್ಟದವರ ಮೇಲೆ ಕಡಿಮೆ ಇರಲಿದೆ : ಸೂರ್ಯಗ್ರಹಣ ಅಥವಾ ಚಂದ್ರಗ್ರಹಣವು ಎಲ್ಲಾ ಸ್ಥಳಗಳಲ್ಲಿಯೂ ಕಾಣಿಸುತ್ತದೆ ಎಂದೇನಿಲ್ಲ. ಯಾವ ಸ್ಥಳದಲ್ಲಿ ಗ್ರಹಣವು ಕಾಣಿಸುತ್ತದೆಯೋ, ಆ ಸ್ಥಳದಲ್ಲಿ ಗ್ರಹಣದ ಪರಿಣಾಮವು ಅಧಿಕವಾಗಿರುತ್ತದೆ ಮತ್ತು ಗ್ರಹಣವು ಎಲ್ಲಿ ಕಾಣಿಸುವುದಿಲ್ಲವೋ, ಅಲ್ಲಿ ತುಲನಾತ್ಮಕವಾಗಿ ಪರಿಣಾಮವು ಅಲ್ಪವಾಗಿರುತ್ತದೆ. ಯಾವ ರೀತಿ ಸೂರ್ಯಗ್ರಹಣದ ಪರಿಣಾಮವು ಸೂರ್ಯನ ಮೇಲೆ ಅವಲಂಬಿಸಿರುವ ಜೀವಗಳ ಮೇಲೆ, ಉದಾ. ಜೇನುನೊಣಗಳು, ಪಕ್ಷಿಗಳು ಮತ್ತು ಕೋಳಿಗಳ ಮೇಲೆ ಆಗುತ್ತದೆಯೋ, ಹಾಗೆಯೇ ಚಂದ್ರಗ್ರಹಣದ ಪರಿಣಾಮವು ಚಂದ್ರನ ಮೇಲೆ ಅವಲಂಬಿಸಿರುವ ಜೀವಗಳ ಮೇಲೆ, ಉದಾ. ಗೂಬೆ, ಕಾಗೆಗಳು, ಪೆಂಗ್ವಿನ್, ತೋಳಗಳು, ಹಿಂಸಕ ಕಾಡು ಪ್ರಾಣಿಗಳು ಮತ್ತು ಕೀಟಗಳ ಮೇಲೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ. ಅದೇ ರೀತಿ ಮೂರನೇ ಮಹಾಯುದ್ಧದ ಭೌತಿಕ ಪರಿಣಾಮವು ಸಾಧನೆ ಮಾಡದವರ ಮೇಲೆ ತೀವ್ರವಾಗಿ ಸಾಧನೆ ಮಾಡುವವರ ಮೇಲೆ ತುಲನಾತ್ಮಕವಾಗಿ ಮಧ್ಯಮ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಜೀವಗಳ ಮೇಲೆ ತುಲನಾತ್ಮಕವಾಗಿ ಅಲ್ಪ ಪ್ರಮಾಣದಲ್ಲಿ ಆಗಲಿದೆ.

೨. ಮೂರು ಹಂತಗಳಳ್ಲಿ ಆಗಲಿರುವ ಮೂರನೇ ಮಹಾಯುದ್ಧದ ವಿವಿಧ ಸ್ತರಗಳು
ಯುದ್ಧವು ಕೇವಲ ಒಂದು ಸ್ತರದಲ್ಲಿ ನಡೆಯದೆ ಅದು ವಿವಿಧ ಸ್ತರಗಳಲ್ಲಿ ಹೋರಾಡಲ್ಪಡುತ್ತದೆ. ಆದ್ದರಿಂದ ಅದರ ಸ್ವರೂಪವು ಸ್ತರ ಮತ್ತು ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ‘ಯುದ್ಧದ ವಿವಿಧ ಸ್ತರಗಳು ಹೇಗಿರುತ್ತವೆ ? ಮತ್ತು ಅದರಿಂದ ಯುದ್ಧದ ಮೇಲೆ ಯಾವ ರೀತಿಯ ಪರಿಣಾಮಗಳು ಆಗುತ್ತವೆ ?’ ಎಂಬುದನ್ನು ಮಹಾಭಾರತ ಯುದ್ಧದ ಮುಂದಿನ ಉದಾಹಣೆಗಳಿಂದ ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ.
೨ ಅ. ಸಗುಣ ಸ್ತರದಲ್ಲಿನ ಯುದ್ಧ : ಮಹಾಭಾರತದ ದೃಶ್ಯಮಾನ ಯುದ್ಧವು ಕುರುಕ್ಷೇತ್ರದಲ್ಲಿ ಸ್ಥೂಲದಲ್ಲಿ ೧೮ ದಿನಗಳ ಕಾಲ ನಡೆಯುತ್ತಿತ್ತು. ಇದು ಸಗುಣ ಸ್ತರದ (biological clock) ಲ್ಲಿನ ಯುದ್ಧವಾಗಿತ್ತು. ಈ ಸ್ತರದಲ್ಲಿನ ಯುದ್ಧದಲ್ಲಿ ಭಗವಾನ್ ಶ್ರೀಕೃಷ್ಣನ ಕೊಡುಗೆ ಶೇ. ೧೦ ರಷ್ಟು ಮಾತ್ರ ಇತ್ತು.
೨ ಆ. ಸಗುಣ-ನಿರ್ಗುಣ ಸ್ತರದಲ್ಲಿನ ಯುದ್ಧ : ಇದೇ ಕಾಲಾವಧಿಯಲ್ಲಿ ಭಗವಾನ ಶ್ರೀಕೃಷ್ಣ ಮತ್ತು ಹನುಮಂತನು ಸೂಕ್ಷ್ಮದಲ್ಲಿನ ಅನಿಷ್ಟ ಶಕ್ತಿಗಳೊಂದಿಗೆ ಒಂದು ಅದೃಶ್ಯ ಯುದ್ಧವನ್ನು ಮಾಡುತ್ತಿದ್ದರು. ಯುದ್ಧದ ಕೊನೆಯ ದಿನದಂದು ಶ್ರೀಕೃಷ್ಣನು ಅರ್ಜುನನಿಗೆ ಮೊದಲು ರಥದಿಂದ ಇಳಿಯಲು ಹೇಳಿದನು ಮತ್ತು ನಂತರ ಶ್ರೀಕೃಷ್ಣನು ರಥದಿಂದ ಇಳಿದ ಮೇಲೆ ಅರ್ಜುನನ ರಥವು ಸುಟ್ಟು ನಾಶವಾಯಿತು. ಇದು ಸಗುಣ-ನಿರ್ಗುಣ ಸ್ತರದಲ್ಲಿನ ಯುದ್ಧವಾಗಿತ್ತು. ಈ ಯುದ್ಧದಲ್ಲಿ ಭಗವಾನ ಶ್ರೀಕೃಷ್ಣ, ಹನುಮಂತ ಮತ್ತು ಅನ್ಯ ದೈವೀ ಶಕ್ತಿಗಳ ಕೊಡುಗೆ ಶೇ. ೩೫ ಇತ್ತು.
೨ ಇ. ನಿರ್ಗುಣ-ಸಗುಣ ಸ್ತರದಲ್ಲಿನ ಯುದ್ಧ : ಇದೇ ಸಮಯದಲ್ಲಿ ಕಾಲದ ಸೀಮೆಯನ್ನು ದಾಟಿ ಇನ್ನೊಂದು ಯುದ್ಧವು ನಡೆಯುತ್ತಿತ್ತು. ಅದರಲ್ಲಿ ಶ್ರೀಕೃಷ್ಣನು ಕೌರವರನ್ನು ಸೂಕ್ಷ್ಮದಿಂದ ಮೊದಲೇ ನಾಶಪಡಿಸಿದ್ದನು; ಆದರೆ ಸ್ಥೂಲದಿಂದ ಅವರನ್ನು ನಾಶಪಡಿಸುವುದು ಬಾಕಿ ಇತ್ತು. ಇದರ ಪ್ರತ್ಯಕ್ಷ ಅನುಭೂತಿಯನ್ನು ಶ್ರೀಮದ್ಭಗವದ್ಗೀತೆಯನ್ನು ಹೇಳುವಾಗ ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ್ದನು. ಇದು ನಿರ್ಗುಣ-ಸಗುಣ ಸ್ತರದಲ್ಲಿನ ಯುದ್ಧವಾಗಿತ್ತು. ಈ ಯುದ್ಧದಲ್ಲಿ ಭಗವಾನ ಶ್ರೀಕೃಷ್ಣ ಮತ್ತು ಅನ್ಯ ದೈವೀ ಶಕ್ತಿಗಳ ಕೊಡುಗೆ ಶೇ. ೫೫ ಇತ್ತು.
೨ ಈ. ಮೂರನೇ ಮಹಾಯುದ್ಧದ ಪ್ರತಿಯೊಂದು ಹಂತದಲ್ಲಿ ಒಂದೇ ಸಮಯದಲ್ಲ್ಲಿ ನಿರ್ಗುಣ-ಸಗುಣ, ಸಗುಣ-ನಿರ್ಗುಣ ಮತ್ತು ಸಗುಣ ಸ್ತರದ ಯುದ್ಧವು ನಡೆಯಲಿದೆ : ಮೂರನೇ ಮಹಾಯುದ್ಧವು ಮೂರು ಹಂತಗಳಲ್ಲಿ (ಆರಂಭ, ಪ್ರತ್ಯಕ್ಷ ಯುದ್ಧ ಮತ್ತು ಮುಕ್ತಾಯ) ನಡೆಯಲಿದೆ; ಮಹಾಭಾರತದ ಯುದ್ಧದಂತೆ ಮೂರನೇ ಮಹಾಯುದ್ಧದ ಪ್ರತಿಯೊಂದು ಹಂತದಲ್ಲಿ ಒಂದೇ ಕಾಲದಲ್ಲಿ ನಿರ್ಗುಣ-ಸಗುಣ, ಸಗುಣ-ನಿರ್ಗುಣ ಮತ್ತು ಸಗುಣ ಹೀಗೆ ೩ ಸ್ತರಗಳಲ್ಲಿ ಮೇಲಿನ ಯುದ್ಧವು ನಡೆಯಲಿದೆ. ಈ ಯುದ್ಧದಲ್ಲಿ ಸಾಧನೆ ಮಾಡುವ ಸಮಷ್ಟಿಯ ಕೊಡುಗೆಯು ವಿವಿಧ ಪ್ರಮಾಣದಲ್ಲಿ ಇರಲಿದ್ದು, ಅದೇ ಪ್ರಮಾಣದಲ್ಲಿ ಅವರ ಮೇಲೆ ಯುದ್ಧದ ಪರಿಣಾಮವಾಗಲಿದೆ.
೨ ಈ ೧. ‘ಪರಾತ್ಪರ ಗುರು’ ಸ್ತರದಲ್ಲಿನ ಸಮಷ್ಟಿ ಸಂತರು ನಿರ್ಗುಣ-ಸಗುಣ ಸ್ತರದಲ್ಲಿನ ಯುದ್ಧವನ್ನು ಮಾಡುವವರಿದ್ದಾರೆ : ಎರಡನೇ ಮಹಾಯುದ್ಧದ ಸಮಯದಲ್ಲಿ ಪಾತಾಳದಲ್ಲಿನ ದೊಡ್ಡ ಅನಿಷ್ಟ ಶಕ್ತಿಗಳು ಹಿಟ್ಲರನನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಮಾನವಕುಲವನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಲು ಪ್ರಯತ್ನಿಸುತ್ತಿದ್ದವು. ಆ ಸಮಯದಲ್ಲಿ ಹಿಟ್ಲರನನ್ನು ಮಾಧ್ಯಮವನ್ನಾಗಿ ಮಾಡಿ ಯುದ್ಧವನ್ನು ಮಾಡಿಸುತ್ತಿದ್ದ ಪಾತಾಳದಲ್ಲಿನ ದೊಡ್ಡ ಅನಿಷ್ಟ ಶಕ್ತಿಗಳೊಂದಿಗೆ ಮಹರ್ಷಿ ಅರವಿಂದರು ಹೋರಾಡುತ್ತಿದ್ದರು. ಆದ್ದರಿಂದ ಪ್ರತ್ಯಕ್ಷದಲ್ಲಿ ಸ್ಥೂಲದಲ್ಲಿ ಪ್ರಚಂಡ ಬಲಶಾಲಿಯಾಗಿದ್ದರೂ ಕೊನೆಗೆ ಹಿಟ್ಲರ್ ಮತ್ತು ಅವನ ಸೈನ್ಯವು ಸೋಲನ್ನು ಅನುಭವಿಸಿತು ಹಾಗೂ ಮಾನವಕುಲದ ಅಸ್ತಿತ್ವ ಉಳಿಯಿತು. ಅದೇ ರೀತಿ ಮೂರನೇ ಮಹಾಯುದ್ಧದ ಪ್ರತಿಯೊಂದು ಹಂತದಲ್ಲಿ ಅನೇಕ ಪ್ರಕಾರದ ಯುದ್ಧಗಳು, ಉದಾ. ಆರ್ಥಿಕ ಯುದ್ಧ, ಜೈವಿಕ ಯುದ್ಧ, ಗೃಹಯುದ್ಧ, ರಾಷ್ಟ್ರಗಳ ನಡುವಿನ ಯುದ್ಧ ಇತ್ಯಾದಿಗಳು ನಡೆಯಲಿವೆ. ಈ ಯುದ್ಧದಲ್ಲಿ ಮನುಕುಲದ ರಕ್ಷಣೆಗಾಗಿ ‘ಪರಾತ್ಪರ ಗುರು’ ಸ್ತರದಲ್ಲಿನ ಸಮಷ್ಟಿ ಸಂತರು ಈ ಯುದ್ಧವನ್ನು ಮಾಡಿಸುತ್ತಿರುವ ಪಾತಾಳದ ದೊಡ್ಡ ಅನಿಷ್ಟ ಶಕ್ತಿಗಳೊಂದಿಗೆ ನಿರ್ಗುಣ-ಸಗುಣ ಸ್ತರದ ಮೇಲಿನ ಯುದ್ಧವನ್ನು ಮಾಡುತ್ತಿದ್ದಾರೆ ಮತ್ತು ಮುಂದೆಯೂ ಮಾಡುವವರಿದ್ದಾರೆ.
೨ ಈ ೨. ‘ಗುರುಗಳು (ಸಂತರು)’ ಮತ್ತು ‘ಸದ್ಗುರು’ಗಳು ಈ ಸ್ತರದಲ್ಲಿನ ಉನ್ನತರು ಸಗುಣ-ನಿರ್ಗುಣ ಸ್ತರದಲ್ಲಿನ ಯುದ್ಧವನ್ನು ಮಾಡುವರು : ವಿವಿಧ ಪ್ರಕಾರದ ಯುದ್ಧಗಳು ನಡೆಯುತ್ತಿರುವಾಗ ಮಾನವನಿಗೆ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಹೀಗೆ ಎಲ್ಲಾ ಸ್ತರಗಳಲ್ಲಿ ತೊಂದರೆ ನೀಡಲು ಅನಿಷ್ಟ ಶಕ್ತಿಗಳು ಯುದ್ಧಕಾಲದಲ್ಲಿ ಆಧ್ಯಾತ್ಮಿಕ ತೊಂದರೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಈ ಹೆಚ್ಚಾದ ಆಧ್ಯಾತ್ಮಿಕ ತೊಂದರೆಯನ್ನು ನಾಶಪಡಿಸಿದ ನಂತರವೇ ಮನುಕುಲಕ್ಕೆ ಯುದ್ಧದಂತಹ ಸಂಕಷ್ಟ ಕಾಲವನ್ನು ಸಹಿಸಿಕೊಂಡು ಹೇಗೋ ಬದುಕುಳಿಯಲು ಸಾಧ್ಯವಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯದ ಸ್ಥಾಪನೆಗಾಗಿ ಪ್ರಯತ್ನಿಸುತ್ತಿರುವಾಗ ಸಮರ್ಥ ರಾಮದಾಸ ಸ್ವಾಮಿಗಳು ವಿವಿಧ ಸ್ಥಳಗಳಲ್ಲಿ ಮಾರುತಿಯ ದೇವಸ್ಥಾನಗಳನ್ನು ಸ್ಥಾಪಿಸಿ ಮತ್ತು ಸಮಾಜದವರಿಂದ ಮಾರುತಿಯ ಉಪಾಸನೆಯನ್ನು ಮಾಡಿಸುವ ಮಾಧ್ಯಮದಿಂದ ಸಗುಣ-ನಿರ್ಗುಣ ಸ್ತರದಲ್ಲಿ ಯುದ್ಧವನ್ನು ಹೋರಾಡಿದ್ದರು. ಅದೇ ರೀತಿ ಮೂರನೇ ಮಹಾಯುದ್ಧದ ಕಾಲದಲ್ಲಿ ಸಾಧನೆ ಮಾಡುವ ಜೀವಗಳ ರಕ್ಷಣೆಯ ಧ್ಯೇಯವನ್ನು ಸಾಧಿಸಲು ‘ಗುರುಗಳು (ಸಂತರು)’ ಮತ್ತು ‘ಸದ್ಗುರು’ಗಳು ಈ ಸ್ತರಗಳ ಉನ್ನತರು ಅನಿಷ್ಟ ಶಕ್ತಿಗಳೊಂದಿಗೆ ಸಗುಣ-ನಿರ್ಗುಣ ಸ್ತರದಲ್ಲಿ ಯುದ್ಧವನ್ನು ಮಾಡುತ್ತಿದ್ದಾರೆ ಮತ್ತು ಮುಂದೆಯೂ ಯುದ್ಧವನ್ನು ಮಾಡುವವರಿದ್ದಾರೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩) ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ, ಸಮಯ ಮತ್ತು ಒಟ್ಟು ಕಾಲಾವಧಿ : ೨೮.೯.೨೦೨೫, ರಾತ್ರಿ ೯.೦೫, ೨ ನಿಮಿಷ)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ