೧. ಅಭ್ಯಂಗಸ್ನಾನ (ಮಂಗಲ ಸ್ನಾನ)
ಯುಗಾದಿ ಪಾಡ್ಯದಂದು ಮುಂಜಾನೆ ಬೇಗನೇ ಎದ್ದು ಮೊದಲು ಅಭ್ಯಂಗ ಸ್ನಾನವನ್ನು ಮಾಡಬೇಕು. ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ಅಭ್ಯಂಗಸ್ನಾನ ಮಾಡುವಾಗ ದೇಶಕಾಲಕಥನ ಮಾಡಬೇಕು.

೨. ತೋರಣ ಕಟ್ಟುವುದು
ಸ್ನಾನವಾದ ನಂತರ ಮಾವಿನ ತೋರಣಗಳನ್ನು ತಯಾರಿಸಿ ಪ್ರತಿಯೊಂದು ದ್ವಾರದ ಮೇಲೆ ಕೆಂಪು ಹೂವುಗಳೊಂದಿಗೆ ಕಟ್ಟಬೇಕು
೩. ಸಂವತ್ಸರ ಪೂಜೆ
ಮೊದಲು ನಿತ್ಯಕರ್ಮ ದೇವರಪೂಜೆಯನ್ನು ಮಾಡಬೇಕು. ‘ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು. ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆಯನ್ನು ಮಾಡಿ ಅವನಿಗೆ ದವನವನ್ನು (ಸುವಾಸಿತ ಎಲೆಗಳನ್ನು) ಅರ್ಪಿಸಬೇಕು. ಅನಂತರ ಹೋಮ ಹವನ ಮತ್ತು ಬ್ರಾಹ್ಮಣ ಸಂತರ್ಪಣೆ. ತರುವಾಯ ಅನಂತ ರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ‘ನಮಸ್ತೆ ಬಹುರೂಪಾಯ ವಿಷ್ಣವೇ ನಮಃ |’ ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಅನಂತರ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು, ಸಾಧ್ಯವಾದರೆ ಇತಿಹಾಸ, ಪುರಾಣ ಮುಂತಾದ ಗ್ರಂಥಗಳನ್ನು ಬ್ರಾಹ್ಮಣರಿಗೆ ದಾನವೆಂದು ನೀಡಬೇಕು.
೪. ಬ್ರಹ್ಮಧ್ವಜವನ್ನು ಏರಿಸುವುದು
ಅ. ಬ್ರಹ್ಮಧ್ವಜವನ್ನು ಸೂರ್ಯೋದಯದ ನಂತರ ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ. ತಿಥಿಕ್ಷಯ) ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು.
ಆ. ಎತ್ತರವಾಗಿರುವ ಬಿದಿರಿನ ತುದಿಗೆ ಹಳದಿ ಬಣ್ಣದ ಜರತಾರಿ ಬಟ್ಟೆಯನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಕೆಲವೆಡೆ ಪರಂಪರೆಗನುಸಾರ ಬ್ರಹ್ಮಧ್ವಜಕ್ಕೆ ಕಹಿಬೇವಿನ ಎಳೆಎಲೆಗಳನ್ನು, ಮಾವಿನ ಟೊಂಗೆ ಮತ್ತು ದವನವನ್ನೂ ಕಟ್ಟುತ್ತಾರೆ. ಧ್ವಜವನ್ನು ಮುಖ್ಯದ್ವಾರದ ಎದುರಿಗೆ, ಹೊಸ್ತಿಲಿನ ಹತ್ತಿರ, ಬಲಭಾಗದಲ್ಲಿ (ಮನೆಯ ಒಳಗಿನಿಂದ ನೋಡುವಾಗ) ನೆಲದ ಮೇಲೆ ಮಣೆ ಯನ್ನಿಟ್ಟು ಅದರ ಮೇಲೆ ನಿಲ್ಲಿಸಬೇಕು. ಧ್ವಜವನ್ನು ಅತೀ ನೇರ ನಿಲ್ಲಿಸದೇ ಮುಂದಿನ ಬದಿಗೆ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ನಿಲ್ಲಿಸ ಬೇಕು. ಅದರ ಮುಂದೆ ಸುಂದರ ರಂಗೋಲಿಯನ್ನು ಹಾಕಬೇಕು.
೩. ಧ್ವಜಕ್ಕೆ ‘ಬ್ರಹ್ಮಧ್ವಜಾಯ ನಮಃ |’ ಎಂದು ಹೇಳಿ ಸಂಕಲ್ಪ ಪೂರ್ವಕ ಪೂಜೆ ಮಾಡಬೇಕು.
೪. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯ ತೋರಿಸಿ ಧ್ವಜವನ್ನು ಕೆಳಗಿಳಿಸಬೇಕು.
೫. ಪಂಚಾಂಗಶ್ರವಣ
ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು.
೬. ಬೇವಿನ ಪ್ರಸಾದ
ಬೇವಿನಲ್ಲಿ ಪ್ರಜಾಪತಿ-ಲಹರಿಗಳನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುವುದರಿಂದ ಯುಗಾದಿಯ ದಿನ ಬೇವಿನ ಪ್ರಸಾದ ಸೇವಿಸುತ್ತಾರೆ.
೭. ಭೂಮಿಯನ್ನು ಉಳುವುದು
ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ-ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ-ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆ ಕೊಡಬೇಕು.
೮. ದಾನ
ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು